Wednesday, March 12, 2014

ವಿಜ್ಞಾನ ಮೇಳ


   ಹೊಸತೇನ್ನೋ ಸಾಧಿಸಲು ಹಳೆಯ ಪ್ರತಿಮೆಯನ್ನು ದಾಟಿ ನಡೆಯಬೇಕು. ಅದರ ಅರಿವಿರಬೇಕೇ ಹೊರತು ಅದರಲ್ಲೇ ತೊಳಲಾಡಬಾರದು. ಹೇಗೆ ಚಿಟ್ಟೆಯೊಂದು ಸಣ್ಣ ಕಂಬಳಿ ಹುಳವೊಂದು ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು ಹೊಸ ಬಣ್ಣದ ಚಿಟ್ಟೆಯಾಗಿ ರೂಪುಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕ. ಅದು ತನ್ನತನವ ಕಳೆದುಕೊಳ್ಳದೆ ಹೊಸತಾಗುವುದು ಸಾಧ್ಯವಿಲ್ಲ. ಅಲ್ಲವೇ?  ನನ್ನದೊಂದು ಕವನ ಈ ವಿಷಯವಾಗಿ.

ಅಲಂಕಾರಗೊಂಡ ಶಾಲೆ. 




ಕನಸೆಂಬ ಚಿಟ್ಟೆ
ಕನಸೆಂಬ ಚಿಟ್ಟೆ
ಹಾರುವುದದು ಎಂದು
ಕಳಚಿಕೊಂಡರೆ ಅದು
ತನ್ನ ಹಳೆಯ ಬಂದು
ಹಾರುವುದದು ಅಂದು.


Add caption
ತನ್ನ ಗೂಡೊಳಗೆ ಉಳಿಯದೆ ನಿರಂತರ ಪ್ರಯತ್ನದಿಂದ ಚಿಟ್ಟೆಯಾಗಿ ಹೊರ ಹೊಮ್ಮವುದು.  ವಿಧ್ಯಾಥರ್ಿಗಳು ತಮ್ಮ ಜೀವನದಲ್ಲಿ ಎದುರಾದ ತೊಡರುಗಳನ್ನು ಲೆಕ್ಕಿಸದೇ, ಧ್ಯಾನಸ್ಥರಂತೆ ಕೂತು ನಿಷ್ಠೆಯಿಂದ ಕಲಿತರೆ ಯಶಸ್ಸು ನಿಮ್ಮದೇ.
ಸೌರವ್ಯೂಹದ ಮಾದರಿ. 

ಉದ್ಘಾಟನೆ ಮಾಡುತ್ತಿರುವ ಗಣೇಶ್ ಶೆಟ್ಟಿಗಾರ್
ನಿಮ್ಮ ಪರಿಸರದ ಯಾವುದೇ ತೊಂದರೆಗಳನ್ನು ಉಪಾಯವಾಗಿ ನಿಶ್ಚಿಂತೆಯಿಂದ ನಿಭಾಯಿಸಬೇಕು. ಕೆಲವನ್ನು ನಮ್ಮಿಂದ ಈ ಸನ್ನಿವೇಶದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಅದರ ಕುರಿತು ಯೋಚಿಸದೇ ಪುಸ್ತಕದೆಡೆಗೆ ಗಮನ ಕೊಡಿ,  ಗೆಲುವಿಗೆ ನೀವು ಅರ್ಹರು.
ಈ ದಿಶೆಯಲ್ಲಿ ನಮ್ಮ ಪ್ರಯತ್ನ ವಿಜ್ಞಾನ ಮೇಳ.... ಅದರ ಕೆಲವು ಝಲಕ್ ನಿಮಗಾಗಿ...

ಸಬ್ ಮೆರಿನ್

ಗಾಳಿಯಿಂದ ವಿದ್ಯುತ್

ಮ್ಯಾಜಿಕ್ ಕಾರಂಜಿ


ಬಸರ್ ಅಲಾರಾಮ್

ಜ್ವಾಲಾಮುಖಿ. 

ಗ್ರಹಣದ ಮಾದರಿ

ಆಯತದಿಂದ ತ್ರಿಭುಜ ಟಿ ಜೋಡಣೆ

ಸಮುದ್ರ ಜೀವಿಗಳು

ಸಮುದ್ರ ಜೀವಿಗಳು

ತಿರಿ

ಸ್ವಾಗತ ಕಮಾನು

ವಿಜ್ಞಾನ ಮೇಳ ವೀಕ್ಷಿಸುತ್ತಿರುವ ಪತ್ರಕರ್ತ ಜಯಶೇಖರ. 

Thursday, February 13, 2014

ಹೀಗೊಂದು ಪ್ರೇಮ ಪತ್ರ..

ಇಂದು ಪ್ರೇಮಗಳ ದಿನ ಅದರ ಸಲುವಾಗೊಂದು ಪ್ರೇಮ ಪತ್ರ. ಇದು ಪ್ರೇಮ ನಿವೇದನೆಯಲ್ಲ, ವಿರಹದ ನಿವೇದನೆ... ನಿಮಗಾಗಿ. ನಿಮ್ಮ ನೆನಪು ಮರಳಿದರೆ ನಾನು ಜವಾಬ್ದಾರನಲ್ಲ...

ನೆನಕೆಗಳ ಸುಳಿಯಲ್ಲಿ..
ಪ್ರಿಯ ಮಿತ್ರಾ, 








ಹೊಳೆಯ ತಟದಿಂದ ನಿನಗೊಂದು ಪಾರಿಜಾತದ ಗಂಧದ ನೆನಕೆ ಸಲ್ಲಿಸುತ್ತಿರುವೆ ನದಿಯ ಕಲರವ ಪಕ್ಷಿಗಾನವೆಲ್ಲವೂ ನಿನ್ನನ್ನೇ ಜಪಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ !. ನನ್ನ ಹುಚ್ಚುತನವು ಆಗಿರಲಿಕ್ಕು ಏನೋ ತಿಳಿಯೇ?. ಈ ಬೋರ್ಗರೆತ ನಿನ್ನ ನೆನಪನ್ನು ಅನುರಣಿಸುತ್ತಿದೆ. ಹೊಳೆಯ ತಟದಲ್ಲಿದೆ ನನ್ನೂರು. ಪ್ರಕೃತಿಯೆ ಹೊದ್ದು ಮಲಗುವ ಮಲನಾಡಿಗರು ನಾವು. ಸಾಮಾನ್ಯವಾಗಿ ಭಾವುಕರು. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆ ನಿನ್ನನೂ ಪ್ರೀತಿಸಿದೆ. ನನ್ನ ಜೀವನದ ಭಾವುಕ ಮತ್ತು ಸ್ಮರಣೀಯ ಕ್ಷಣಗಳವು. ಎಷ್ಟು ಬೇಗ ಜಾರಿದವು. ಅನಂತ ಕಾಲವನ್ನು ಹಿಡಿದಿಡುವಂತಿದ್ದರೆ. ಅಂದು ನೀ ನದಿ ತಟಕ್ಕೆ ನಿನ್ನ ಮೋಟಾರ್ ಬೈಕ್ನಲ್ಲಿ ಕರೆದೊಯ್ದ ದಿನಕ್ಕೆ ಕಾಲವನ್ನು ನಿಲ್ಲಿಸುತ್ತಿದ್ದೆ!
ನನ್ನ ನಿನ್ನ ನಡುವಿದ್ದದ್ದೂ ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲ. ನಿನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬುದ್ದಿವಂತಿಕೆಯೂ. ನಾನು ಮಾತ್ರವಲ್ಲ ಆಮೇಲೆ ತಿಳಿಯಿತು ನನ್ನಂಥವರು ಕಾಲೇಜಿನಲ್ಲಿ ಸಾಕಷ್ಟಿದ್ದರೆಂದು. ಆದರೂ ಆ ನಿನ್ನ ಚೂಪು ಗಲ್ಲ ನನ್ನನು ಇನ್ನಿಲ್ಲದಂತೆ ಆಕಷರ್ಿಸಿತು. ನಿನ್ನ ವಿಶೇಷ ಕ್ರಾಪ್ ಕೂದಲು ಸೆಳೆದ್ದದುಂಟು. ನಿನ್ನ ಗುಲಾಬ್ ಜಾಮನಂತಹ ಮಾತು. ನಿನ್ನ ಮಾತು ಕೇಳುತ್ತಿದ್ದರೆ ಗುಲಾಂ ಅಲಿ ಗಜಲ್ ಕೇಳಿದಂತೆ ನಿಧಾನ ಅತಿ ಮಧುರ. ನಡು ನಡುವೆ ತೇಲಿ ಬರುವ ಕನ್ನಡ ಪದ್ಯಗಳು, ಹಿಂದಿ ಗಜಲ್ಗಳು ನಿನ್ನ ಮಾತಿನಲ್ಲಿ ಮೀಯುತ್ತಿದ್ದವು. ಎಷ್ಟು ಜನರ ಕೊಲೆಮಾಡಿದೆಯೊ ಮಾತಿನಲ್ಲೆ ನಾ ಕಾಣೆ. ಅಂತಹ ಮಧುರ ದಿಗಳವು. ಕೆಲವೊಮ್ಮೆ ಸ್ಪೂತರ್ಿ ಕೆಲವೊಮ್ಮೆ ಅಯ್ಯೋ ಎನಿಸಿಬಿಡುವವು. ಇರಲಿ.
***

 ನನ್ನಲ್ಲಿ ನೀ ಹೇಳಿದ ಪ್ರತಿ ಮಾತು ಇಲ್ಲಿನ ನದಿಗಳಿಗೆ ತಿಳಿದಿರುವಂತಿದೆ. ನೀ ಇಚ್ಚಿಸಿದ್ದು ಧ್ಯಾನಿಸಿದ್ದು ನದಿಯನ್ನಲ್ಲವೇ ನೀ ಹೇಳಿದ ಮಾತಿನ್ನು ನೆನಪಿದೆ ಮನುಷ್ಯ ನದಿಯಂತಾಗಬೇಕು. ಸದಾ ಚಿಲಮೆಯಂತೆ ಹರಿಯಬೇಕು. ಗೆಳೆಯಾ ನೆನಪಿರಲಿ ನದಿಗಳೂ ಬತ್ತುತ್ತದೆ! ಈ ಮಲನಾಡಲ್ಲೂ ಅಲ್ಲಲ್ಲಿ ನೀರಿರುತ್ತವಷ್ಟೇ, ನಾ ನಿನಗೆ ಆ ವಿಷಯದಲ್ಲಿ ಎದುರಾಡಿದ್ದೆ. ನದಿಗಳೇನೋ ಜೀವನಾಡಿಗಳು ಎಲ್ಲೊ ಮಳೆ ಬಂದರೆ ಇನ್ನೆಲ್ಲೋ ಪ್ರವಾಹ ಉಕ್ಕುಸುವವು ಹಾಗಾಗಿ ಮನುಷ್ಯ ನದಿಯಂತಾದರೆ ಒಳಿತಲ್ಲವೆಂದಿದ್ದೆ. ನನಗಾಗ ದ್ವಂದ್ವವೂ ಕಾಡಿತ್ತು. ಇಂದಿನಂತೆ ಸ್ಪಷ್ಟತೆ ಇರಲಿಲ್ಲ. ನೀನಚಿತೂ ನದಿಯಂತಾದೆ ನನ್ನ ಪಾಲಿಗೆ, ಎಲ್ಲೋ ಮಳೆಯಾಗಿ ನನ್ನಲಿ ಪ್ರವಾಹ ಉಕ್ಕಿಸುತ್ತಿದೆ! ಇರಲಿ ಬಿಡು ಏನೋ ಆಗಿದ.ೆ ಕನಸ ಕಟ್ಟಡಗಳೆಲ್ಲವೂ ಮೇಲೇಳರವಲ್ಲಾ ಹೇಳಿದ ಪ್ರತಿಮಾತು ಪಿಸುಮಾತು ಪಿಸುಮಾತಾಗಿ ಏಕಾಂತದಲ್ಲಿ ಸಶಬ್ಧವಾಗುತ್ತಿದೆ.
***
ಅಂದು ನೀ ಹುತ್ತರಿ ಹಬ್ಬಕ್ಕೆ ನಮ್ಮ ಮನೆಗೆ ಬಂದಾಗ ಎಷ್ಟು ಮುದಗೊಂಡಿದ್ದೆ. ಪುಷ್ಪಕ ವಿಮಾನ ನೋಡಿದಷ್ಟು. ನಿನ್ನನ್ನು ಮಾತ್ರ ಕರೆಯುವ ಉದ್ದೇಶವಿದ್ದರೂ ಮನೆಯಲ್ಲಿ ಹೇಗೋ ಏನೋ ಎಂದು ಕೆಲವು ಗೆಳತಿಯರನ್ನು ಕರೆದಿದ್ದೆ ಅಮ್ಮನಿಗೆ ಹೇಳಿ ನಿನಗಿಷ್ಟದ ಕ್ಯಾರೆಟ್ ಹಲ್ವ ಮಾಡಿಸಿದ್ದೆ, ಗಡದ್ದಾಗಿ ಎರಡು ಸವಟು ತಿಂದು ಕಾಲೇಜಿನಲ್ಲಿ ಕೊಂಕು ಆಡಿದ್ದೆ. ಎಷ್ಟು ಬೇಸರವಾಗಿತ್ತು ನನಗೆ.  ಊಟದ ನಂತರ ಸೊಕ್ಕಿದ ಅಡಿಕೆ, ತನಿಗುಂಡಿ ಹೊಗೆ ಸೊಪ್ಪಿನೊಂದಿಗೆ ಬೇಡವೆಂದರೂ ತಿಂದು ತಲೆತಿರುಗಿ ನನ್ನ ಮಡಿಲಲಿ ಮಲಗಿ ನೀರು ಚಿಮುಕಿಸಿಕೊಂಡಿದ್ದು. ಎಲ್ಲರೂ ಕಾಲೇಜಿನಲ್ಲಿ ಗೊಳ್ಳೆಂದು ನಕ್ಕಿದ್ದೆವು. ಅಮ್ಮನಿಗೆ ಆಗಲೇ ನಮ್ಮ ಪ್ರೀತಿಯ ವಾಸನೆ ಬಡಿದಿತ್ತು. ನೀನು ಹೋಗುವಾಗ ಕೈಗಿತ್ತ ಗ್ರೀಟಿಂಗ್ನ ನುಡಿ ನೋಡಿ ಅಮ್ಮ ಗ್ರಹಿಸಿದ್ದಳು.  ಬದುಕೆಂದರೆ ಪ್ರೀತಿಸುವುದು, ಪ್ರೀತಿಸುವುದೆಂದರೆ ನಿನ್ನ ಜೊತೆಗಿರುವುದು ಎಂತಹ ಅಮರ ಸಾಲುಗಳಿವು ಮೋಡಿ ಮಾಡಲು. ಇವನೆಲ್ಲಾ ಎಲ್ಲಿಂದ ಹುಡುಕಿ ತರುತ್ತಿದ್ದೆಯೋ ಕಳ್ಳ ! ಗೊತ್ತಿಲ್ಲ. ಸಚಿನ್ ಹೊಡೆದ ನೇರ ಸಿಕ್ಸರ್ನಂತೆ ನಾನಂತು ಈ ಸಾಲುಗಳಿಗೆ ಮರುಳಾದೆ ! ನಿನ್ನ ಪ್ರೀತಿಯಲ್ಲಿ ಸಿಕ್ಕಿಕೊಂಡೆ. ನಮ್ಮ ಪರಿಚಯವಿರದ ಮರ, ರಸ್ತೆಗಳು ಎಲ್ಲಿಯಾದರು ಇದ್ದರೆ ಹೇಳು ಒಮ್ಮೆ ನೋಡಿ ಬರಬೇಕೆಂದಿದ್ದೆ.
ನೆನಪಿದೆಯಾ ನಿನಗೆ? 
***
ನಾನೊಮ್ಮೆ ನಿನ್ನೊಡನೆ ದ್ವೈತ ಅದ್ವೈತಗಳ ಬಗ್ಗೆ ಜಗಳಾಡಿದ್ದೆ ನೆನಪಿದೆಯಾ. ನಾನು ಅದ್ವೈತವೆನ್ನುವುದು ನೀನು ದ್ವೈತವೇ ಸರಿ ಎನ್ನುವುದು ಹೀಗೆ ಸಾಗಿತ್ತು ನಮ್ಮವಾದ ಸರಣಿ. ನೀ ಎನೋ ಸಮಜಾಯಿಸಿ ಸಹ ಕೊಟ್ಟಿದ್ದೆ. ಅವೆಲ್ಲಾ ನೆನಪಿಲ್ಲಾ. ಅನಾಸ್ತಿಕನಾದ ನಿನ್ನಲ್ಲಿ ನಾ ಬೆರೆತು ಹೋಗುವುದಾದರು ಹೇಗೆ ಅಲ್ಲವೆ?
ಇಲ್ಲೆಲ್ಲಾ ಈಗ ಮಂಜು ಕವಿದಿದೆ. ಮಂಜೆಂದರೆ ಕೊಡಗು, ಕೊಡಗೆಂದರೆ ನೀ ನೆನಪಾಗುತ್ತಿ, ಆ ಮಂಜು, ಮುಂಜಾವು, ಹೋಟೆಲ್ ಮ್ಯಾನೆಜರ್ ಮೇಡ ಫಾರ್ ಇದ್ ಅದರ್ ಎಂದಿದ್ದೂ, ನೆನಪಿದೆ. ಎಣಿಸಿಕೊಂಡರೆ ಈಗ ನಗು ಬರುತ್ತದೆ. ಕೊಡಗಿನ ಮಂಜಿನಲ್ಲಿ ಕೈಹಿಡಿದು ನಡೆದಿದ್ದು. ಕಾಣದ ಕಡಲಿಗೆ ಓಗೊಡುವ ಅಬ್ಬಿ ಜಲಪಾತವನ್ನು ನಿನ್ನ ತೋಳ ತೆಕ್ಕೆಯಲ್ಲಿ ನೋಡಿ ಧನ್ಯನಾದುದು. ಒಂದೆ ಎರಡೇ ನನ್ನ ನಿನ್ನ ನೆನಪ ಮೆರವಣಿಗೆಯ ಚಿತ್ರಗಳು. ನಿನ್ನ ಮುಂಗುರುಳಿನಲ್ಲಿ ಬೆರಳಾಡುತ್ತಾ ಮೇಣದ ಬತ್ತಿಯ ಬೆಳೆಕಿನಲಿ ಪ್ರಜ್ವಲಿಸುವ ನಿನ್ನ ನೋಟ ಆಸ್ವಾದಿಸುತ್ತಾ, ಇಡೀ ರಾತ್ರಿ ನಿನ್ನ ನಿರುಕಿಸುತ್ತಾ ಕಳೆದಿದ್ದು, ಅಬ್ಬಾ. ಅಂದು ನಿಜವಾಗಿ ನೀನು ನದಿಯಂತಿದ್ದೆ.
ಆ ನಿನ್ನ ಮೋಟಾರ್ ಬೈಕ್ನ ಸದ್ದು ನನ್ನ ಕಿವಿಯಲ್ಲಿನ್ನೂ ಗುಂಯ್ ಗುಡುತಿದೆ. ಶಿರಾಡಿಯ ಮಧ್ಯೆ ನೀನೊಮ್ಮೆ ನನ್ನ ಮುದ್ದಿಸಲು ಪ್ರಯತ್ನಿಸಿದ್ದು ನಾ ಮುನಿಸಿಕೊಂಡಿದ್ದು, ನೀ ಮಾತು ಬಿಟ್ಟಿದ್ದು. ಛೇ ಎಂತಹ ಬಾಲತನ ನಿನ್ನದು ಅನ್ನಿಸಿತ್ತಾಗ. 
***

ಅದಿರಲಿ ಗೆಳಯಾ, ಮೊನ್ನೆ ಸಂತೆ ಬೀದಿಯಲಿ ನಿನ್ನ ಕಂಡೆ ಗಡ್ಡ ಬಿಟ್ಟು ಸನ್ಯಾಸಿಯಂತಾಗಿರುವೆ. ನಿನ್ನ ಮನುಷ್ಯ ನದಿಯಂತಾಗಬೇಕೆಂಬ ಆದರ್ಶ ಏನಾಯಿತು?! ತುಂಬಾ ಸೊರಗಿದ್ದಿ ಯಾಕೆ? ನಿನ್ನ ಜೊತೆಗಿದ್ದಳಲ್ಲಾ ಯಾರಾಕೆ? ಭಾವಿ ಪತ್ನಿಯೇ? ಪ್ರಿಯತಮೆ ಯಾ ಇಂಗ್ಲೀಷ್ ಮದುವೆಯಾ, ಸಾರಿ, ಐಮೀನ್ ರಿಜಿಸ್ಟರ್ ಮದುವೆಯಾದವಳೆ? ಏನು ಲಲ್ಲಗರೆಯುತಿದ್ದಳು! ನಾನು ನಿನ್ನೊಡನೆ ಹಾಗೆ ನಡೆದುಕೊಂಡಿದ್ದರೆ ಈ ಪತ್ರ ಬರೆಯುವ ಪ್ರಸಂಗ ಬರುತ್ತಿರಲಿಲ್ಲವೇನೋ? ಈ ನದಿಯ ನಡುಗುಡ್ಡೆಯಲ್ಲಿ ಕೂತು ನಿನ್ನ ನೆನಪು ಮಾಡಿಕೊಳ್ಳಬೇಕಾಗಿ ಬರುತ್ತಿರಲಿಲ್ಲ ಇರಲಿ ಅದಕ್ಕೆ ಹಿರಿಯರಂದ್ದಿದಿರಬೇಕು, ಬ್ರಹ್ಮಚಾರಿ ಶತಮರ್ಕಟ!
***
ಕನಿಷ್ಠ ನಿನ್ನ ನೆನಪನ್ನಾದರೂ ಸಾಯಿಸಲು ನಾ ನೊಬ್ಬನ್ನು ಪ್ರೀತಿಸಬೇಕು, ಮದುವೆಯಾಗಬೇಕು. ಇಲ್ಲ ಇಲ್ಲ ಅಪ್ಪ, ಅಮ್ಮ ನೋಡಿದವರೊಡನೆ ಮದುವೆಯಾಗಬೇಕು. ಕನಿಷ್ಠ ನಿನ್ನ ಮೇಲೆ ಹೀಗಾದರೂ ನಾನು ಸೇಡು ತೀರಿಸಿಕೊಳ್ಳಬೇಕೆಂದಿರುವೆ. ಇಲ್ಲ ಹೀಗೆ ಮಾಡಲು ಈಗ ಮನಸ್ಸು ಒಪ್ಪಲ್ಲ ಇವೆಲ್ಲ ನನ್ನ ನೊಂದ ಮನದ ನುಡಿಗಳು. ಅಷ್ಟೇ. ಸುಮ್ಮನೆ ಬದುಕಲು ಇಷ್ಟೊಂದು ರಗಳೆಗಳೇಕೆ. ಕೆಸುವಿನೆಲೆಯಂತಹ ನಿನ್ನ ಮನಸ್ಸನ್ನು ಸ್ವಲ್ಪವಾದರೂ ತಾಗಲು ಪ್ರಯತ್ನಿಸಿದ ಮಳೆ ಹನಿ ನಾನು! ನಾನೆ ಮೂರ್ಖಳಿರಬೇಕು. ನಮ್ಮ ಕಲ್ಪನೆಗಳೇ ಬೇರೆ ವಾಸ್ತವದ ಬದುಕೇ ಬೇರೆ. ನಿನ್ನ ಅಪ್ಪ ಅಮ್ಮ ಜಾತಿ ಎಲ್ಲವೂ ವಾಸ್ತವ ನಾನು ನೀನು ಭೇಟಿಯಾಗಿದ್ದು ಕೇವಲ ಕಲ್ಪನೆಯಂತೆ ನನಗೆ ತೋರುತ್ತಿದೆ. ತೀರ ವಾಸ್ತವದಲ್ಲಿ ನಿನ್ನಂತೆ ಬದುಕಲು ನನಗಾಗದು. ಕಲ್ಪನೆಗಳಿಲ್ಲದ ಭಾವವಿಲ್ಲದ ಬದುಕು ಶೂನ್ಯದಂತಾಗುತ್ತದೆ. ನಿನಗೂ ಹಾಗನ್ನಿಸಿದರೆ ಉತ್ತರ ಬರೆ. ಇಲ್ಲವಾದರೆ ಉಂಟಲ್ಲ ಒಲೆ! ಕಾಯಿಸಿಕೊಂಡು ನೀನಾದರೂ ಬೆಚ್ಚಗಿರು.

***
ಇಷ್ಟೆಲ್ಲಾ ಇಂದು ನೆನಪಾಗುತ್ತಿದೆ ಏಕೆಂದು ಗೊತ್ತಿದೆಯೇ ಇಂದು ಹುತ್ತರಿ ಹಬ್ಬ. ಅಮ್ಮ ಮಾಡಿದ ಕ್ಯಾರೆಟ್ ಹಲ್ವ ತಿನ್ನದೆ ಇಲ್ಲಿ ನದಿ ಬಳಿ ಬಂದು ಕುಳಿತ್ತಿದ್ದೇನೆ.
ಯಾರೋ ಹೇಳಿದಂತೆ ಪಾರಿಜಾತ ಗಿಡಗಳು ತೋಟದ ನಡುವೆ ನೆಟ್ಟರೆ ಬದುಕಲಾರವೆಂದು. ಅವುಗಳು ಬದಿಯಲ್ಲಿ ನೆಟ್ಟರೆ ಮಾತ್ರ ಚಿಗುರಿ ಹೂ ಬಿಡುವವು. ಅಂತೆಯೇ ಆದಂತಿದೆ ನನ್ನ ಬದುಕು. ಇರಲಿ. ನಿನಗೆ ಹೇಳಿದರೆ ನೀ ನಗುತ್ತಿ. ಹೊಸ ವಿಶ್ವಾಸದೊಂದಿಗೆ ಪುಟಿಯಬೇಕು ಬದುಕು ಹೂವಾಗ ಬೇಕೆಂದು ಆಶಿಸುವವಳು ನಾನು. 

ಸಂಜೆಯಾಗುತ್ತಿದೆ ಕತ್ತಲಾವರಿಸುವ ಮುನ್ನ ಮನೆ ಸೇರಬೇಕು ಅಪ್ಪ ಕೇಳುತ್ತಾರೆ, ಅಮ್ಮ ಮೂದಲಿಸುತ್ತಾಳೆ, ಪತ್ರ ಮುಗಿಸುತ್ತೇನೆ. ನಿನ್ನ ಮೋಟಾರ್ ಬೈಕ್ ಸದ್ದಿನ ನಿರೀಕ್ಷೆಯಲ್ಲಿ !  ಈ ಪತ್ರವು ನಿನ್ನ ಬಚ್ಚಲಿನ ನೀರು ಬಿಸಿ ಮಾಡಲು ಉಪಯೋಗವಾಗದಿರಲಿ. ಇತಿ ನಿನ್ನವಳು, ಓ ಮತ್ತೆ ಸಾರಿ. ಕೇವಲ ಹಾರೈಕೆಗಳು. 
ಇತಿ ನಿನ್ನ ನೆನಪ ಕನ್ನಿಕೆ.
ಪಾರಿಜಾತ.

Thursday, December 5, 2013

ಕನಸಿನ ಸಾಕಾರ....ಸಾತೋಡ್ಡಿ

ಈ ಮಳೆಗಾಲದಲ್ಲಿ ಜಲಪಾತಗಳ ಪರ್ವ...

ಸಾತೋಡ್ಡಿ Sathoddi Falls, Uttara kannada.
Add caption
       ಹಲವು ದಿನಗಳ ಕನಸು ನನಸಾದ ಅಮೋಘಗಳಿಗೆ...ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದ ಕನಸಿನ ಸಾಕ್ಷಾತ್ಕಾರಕ್ಕಾಗಿ ಕನರ್ಾಟಕದ ನಯಾಗರವೆಂದು ಪ್ರಸಿದ್ಧವಾಗಿರುವ ಸಾತೋಡ್ಡಿಗೆ ಹೊರಟು ನಿಂತಾಗ, ಉಂಟಾದ ತೊಂದರೆಗಳು ಒಂದೆರಡಲ್ಲ. ಸಿರಸಿಗೆ ಬಂದ ದಿನವೇ ನಮಗೆ ಭಾರಿ ಮಳೆ ಭವ್ಯ ಸ್ವಾಗತ ಕೋರಿತು. ನಮ್ಮ ಹೋಟೆಲ್ ಮಾಲಿಕ, "ನಿಮಗೆ ಈ ವಾಹನದಲ್ಲಿ ಹೋಗಲು ಸಾಧ್ಯವಾಗುವುದು ಅನುಮಾನ". ಎಂದಾಗ ತಣ್ಣಿರನ್ನು ಬಕೆಟ್ಗಟ್ಟಲೆ ತಂದು ಸುರಿದ ಅನುಭವ. ನಮಗೆ ದೊರಕಿದ ಕಾರ್ ಚಾಲಕನೂ ಹಾಗೆ ಹೇಳಿದಾಗ ಉಂಟಾದ ನಿರಾಸೆ ಅನುಭವಕ್ಕೆ ನಿಲುಕದು. ಆದರೂ ಸಾವರಿಸಿಕೊಂಡು ಸ್ಥಿತಪ್ರಜ್ಞನಾಗಿರಲು ಪ್ರಯತ್ನಿಸಿದೆ. 
ಚಿಮ್ಮಿದ ಸಾತೋಡ್ಡಿ ಜಲಧಾರೆ. 
ಕೊನೆಗಂತು ಯಲ್ಲಾಪುರದಲ್ಲೊಬ್ಬ ನೀವು ಅಲ್ಲಿಗೀಗ ಹೋಗಬಹುದೆಂದಾಗ ರೋಮಾಂಚಿತನಾಗಿದ್ದೆ. ಅಂತೂ ಅಲ್ಲಿಗೆ ತಲುಪಿದೆವು.  ದಾರಿಯುದ್ದಕ್ಕೂ ನಮ್ಮ ವಾಹನ ರಸ್ತೆಯೊಂದಿಗೆ ಯುದ್ಧಕ್ಕಿಳಿದ್ದಿತ್ತು! ಕಾಡದಾರಿ ಅದ್ಭುತವಾಗಿತ್ತು. ಸುತ್ತಲಿನ ಪರಿಸರ ಉನ್ಮಾದವನ್ನುಂಟು ಮಾಡುತ್ತಿತ್ತು. ಸುಮಾರು 2-3 ಕಿ.ಮೀ. ಕಚ್ಚಾರಸ್ತೆಯಲ್ಲಿ ಸಾಗಿ ಜಲಪಾತದ ಹತ್ತಿರಕ್ಕೆ ತಲುಪಿದೆವು. ಅಲ್ಲಿಂದ 15 ನಿಮಿಷದ ಕಾಲು ಹಾದಿ. 
ಮಾಗೋಡು
ಹಾದಿಯ ರೋಮಾಂಚಕತೆಯದು ಮತ್ತೊಂದು ಕತೆ. ಕೈ ಇಟ್ಟಲ್ಲಿ ಚಿಟ್ಟೆಗಳು ಮುತ್ತಿಕೊಳ್ಳುತ್ತಿದ್ದವು. ಕಾಲು ಹಾಕಿದಲ್ಲೆಲ್ಲಾ ಹಾವು ಮತ್ತು ಹಾವಿನ ಮರಿಗಳು. ಹಿಂದಿನ ದಿನವಷ್ಟೆ ಒಬ್ಬ ಹಾವಿನ ಕಡಿತಕ್ಕೆ ಒಳಗಾಗಿದ್ದವನ್ನು ನೋಡಿ ಸ್ವಲ್ಪ ಗಾಬರಿಗೊಂಡೆವು. 
ಮಾಗೋಡು
ಹಿಂದಿನ ದಿನ ಸುರಿದ ಮಳೆಗೆ ಜಲಪಾತವಂತು ಧುಮ್ಮಿಕ್ಕಿ ಹರಿಯುತ್ತಿತ್ತು. ಜಲಪಾತದಲ್ಲಿ ಮಿಂದು ಖುಷಿಪಟ್ಟೆವು. ಮಂಗಗಳ ಹಾವಳಿಯಂತೂ ಹೇಳ ತೀರದು. ನಮ್ಮ ಪುಟ್ಟನ ಕೈಯಿಂದ ಒಂದು ಇಡ್ಲಿ ಹೊಡೆದುಕೊಂಡು ಹೋಗಿ ಮಜಾ ಮಾಡಿತ್ತು.
ಜೇನು ಕಲ್ಲು ಗುಡ್ಡ
ಜೇನು ಕಲ್ಲು ಗುಡ್ಡ
ಇಲ್ಲಿಂದು ಮಾಗೋಡು ವೀಕ್ಷಣಾ ಸ್ಥಳ, ಜೇನುಕಲ್ಲು ಗುಡ್ಡ ಮನೋಹರತೆ ನೋಡಿದೆವು. ಮುಂದೆ ಯಾಣ, ಸಹಸ್ರಲಿಂಗ ನೋಡಿ ಹಿಂದಿರುಗಿದೆವು.
ಜೇನು ಕಲ್ಲು ಗುಡ್ಡ

ಯಾಣದ ಭೈರವೇಶ್ವರ


ಗೆದ್ದ ಸಂಭ್ರಮ 

ನೀವೊಮ್ಮೆ ನೋಡಿ ಬನ್ನಿ... good luck. 













Sunday, November 17, 2013

ನೆನಪುಗಳ ಮಾತು ಮಧುರ

ನೆನಪುಗಳ ಮಾತು ಮಧುರ


"ನೆನಪು ಹಳೆಯದಾದರೂ
ಭಾವ ನವನವೀನ"


ಗೆಳೆಯರೆ ನೆನಪಿದೆಯೆ ನಿಮಗೆ ನಾವೊಂದು ಪ್ರವಾಸ ಕೈಗೊಂಡಿದ್ದು ಅದೂ ಸೆಪ್ಟೆಂಬರನ ಬಿರು ಮಳೆಯ ನಡುವೆ . ಮಾತು, ಓದಿದ ಪುಸ್ತಕ, ಅವರಿವರ ಸುದ್ದಿ, ನಗೆ, ಜೋಕ್ಸು, ಪಾಲಿಟಿಕ್ಸು, ಮೌನ, ಪ್ರಪಂಚ ಜ್ಞಾನ ಎಲ್ಲಕ್ಕೂ ವೇದಿಕೆ ಆಗುತ್ತಿದ್ದ ಪ್ರವಾಸ ಈಗೊಂದು ನೆನಪಷ್ಟೇ....!

ಮತ್ತೆ ನಿಮ್ಮ ಖುಷಿಗೊಸ್ಕರ ಈ ಪೋಟೋ! 


ನೆನಪುಗಳ ಮಾತು ಮಧುರ...
ಮೌನಗಳ ಹಾಡು ಮಧುರ...
ನೆನಪೇ ಇರಲಿ......

ನೆನಪಾಯಿತೆ  ಮತ್ತೊಮ್ಮೆ ಪ್ರವಾಸ ಹೋಗೋಣ್ವಾ......ತಯಾರಾಗಿರಿ... 


Saturday, September 28, 2013

ಕಾಡ ಝರಿಯ ಜಾಡ ಹಿಡಿದು...

ವಿಜಯ ಕನರ್ಾಟಕದಲ್ಲಿ ಇತ್ತೀಚಿಗೆ ಪ್ರಕಟವಾದ ನನ್ನ ಒಂದು ಲೇಖನ,  ಓದಿ ಪ್ರತಿಕ್ರಿಯಿಸಿ..

ನಾವೊಂದು ಐದಾರು ಸ್ನೇಹಿತರು ಕೂಡಿಕೊಂಡು ಭಾನುವಾರದಂದು ಸಣ್ಣ ಕಾಡ ಝರಿಯ ಜಾಡ ಹಿಡಿದು ಹೊರಟಾಗಿನ ನಮ್ಮ ಅನುಭವಗಳಿವು. ನಮ್ಮ ಸ್ವಾಗತಕ್ಕೆ ನಿಂತ ಗಿರಿಗಳು. ಮ್ಯಾಗಂನೀಸ್ ಅದಿರಿನ ರಾಶಿ ರಾಶಿ ಕಲ್ಲುಗಳು. ಮುಗಿಲ ಚುಂಬಿಸುವ ವೃಕ್ಷಗಳು. ಆಗಾಗ್ಗೆ ಕಾಣಸಿಗುವ ಕಾಡು ಪಕ್ಷಿ ಸಂಕುಲ. ಕಾಡುವ ಇಂಬಳಗಳ ರಾಶಿ. ಇವುಗಳ ನಡುವೆ ಯಾವುದೇ ಅಳುಕಿಲ್ಲದೆ, ನಿರಾಬರಣೆಯಾಗಿ ಹರಿಯುವ ಸಣ್ಣ ತೊರೆಯೇ ಈ ಅಕ್ಕಿನಕೊಡ್ಲು ಜಲಧಾರೆ. ಮುಂದೆ ಇದು  ಚಕ್ರಾ ನದಿಗೆ ಸೇರುತ್ತದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಿ ಧನ್ಯರಾಗುತ್ತಾ ಸಾಗುತ್ತದೆ ಈ ಜಲಧಾರೆ.

ಮೂರು ಕವಲಾಗಿ ಹರಿಯುವ ಈ ಜಲಧಾರೆಯನ್ನು ನೋಡುವುದೇ ಚಂದ. ತಲುಪುವುದೊಂದು ರೋಮಾಂಚನಕಾರಿ ಅನುಭವ. ಇಡುವ ಪ್ರತಿ ಹೆಜ್ಜೆಗೂ ಜಾರಿಕೆಯ ಅನುಭವವಾಗುತ್ತದೆ. ಕಲ್ಲುಗಳ ಇಡುಕಿನಲ್ಲಿ ಹೆಜ್ಜೆ ಇಡುತ್ತಾ ನಿಧಾನವಾಗಿ ಸಾಗಬೇಕು. ಕೆಲವೊಮ್ಮೆ ಅಕ್ಷರಶ ನುಸುಳಬೇಕು. ಜಾರುವ ಬಂಡೆಗಳನ್ನು ದಾಟುವ ಕೆಲವೊಮ್ಮೆ ಜಿಗಿಯುವ, ಕೆಲವೊಮ್ಮೆ ಹುಳುವಿನಂತೆ ತೆವಳುವ ಇಂತಹ ರೋಮಾಂಚನವನ್ನು ಒದಗಿಸುವ ಜಲಧಾರೆ ಕೊನೆ ಮುಟ್ಟಿದಾಕ್ಷಣ ತನ್ನೆಲ್ಲಾ ಸೌಂದರ್ಯದಿಂದ ಮಂತ್ರ ಮುಗ್ದಗೊಳಿಸುತ್ತದೆ. ಹೂ ಪಕಳೆಗಳಂತ ನೀರ ಹನಿಗಳ ಸಿಂಚನಗೈವ, ಮೂರು ಕವಲಾಗುವ ಈ ಜಲಧಾರೆ  ನೋಡುಗರಿಗೆ ಆನಂದಾನುಭೂತಿಯನ್ನುಂಟುಮಾಡುತ್ತದೆ. ನೀರ ಹನಿಗಳ ಕೆಳಗೆ ಕುಳಿತರಂತೂ ಅನಿರ್ವಚನೀಯವಾದ ಆನಂದವನ್ನುಂಟುಮಾಡುತ್ತದೆ. ಜಲಧಾರೆ ಜಳಕವಾಡುವಷ್ಟು ಜಾಗ ಇಲ್ಲಿರುವುದು ವಿಶೇಷ! ಜಲಪಾತ ವೀಕ್ಷಿಸಿ ವಾಪಾಸಾಗುವ ವರೆಗೂ ಇಂಬಳಗಳು ನಮ್ಮನ್ನು ಬಿಳ್ಕೊಟ್ಟವು.
ಈ ಜಲಧಾರೆಯ ಮೂಲ ತಲುಪಲು, ಜಲಧಾರೆಯ ಬದಿಯಲ್ಲಿಯೇ ಸಾಗಿ ಮುಂದೆ ಸಣ್ಣ ಬೆಟ್ಟದ ತುದಿಗೆ ತಲುಪಬೇಕು. ಅಲ್ಲಿ ಸಣ್ಣ ಜಿನುಗಾಗಿ ಪ್ರಾರಂಭವಾಗುವ ಇದು ಅನಂತರ ವಿವಿಧ ಮೂಲಗಳಿಂದ ನೀರನ್ನು ಸಂಗ್ರಹಿಸಿಕೊಂಡು ಜಲಪಾತವಾಗುತ್ತದೆ. ಹರಿವಿನ ಬದಿಯಲ್ಲಿ ಹೋಗುವ ಅವಕಾಶವಿದೆ. ಆದರೆ ಬಹಳ ಜಾರಿಕೆ ಇರುತ್ತದೆ ಅಲ್ಲಿ ಜಾಗರೂಕರಾಗಿ ಹೋಗಬೇಕು.



ತಲುಪುವುದು ಹೀಗೆ:- ಉಡುಪಿಯಿಂದ 55 ಕಿ.ಮಿ. ದೂರದ ಸಿದ್ದಾಪುರ ತಲುಪಿ ಅಲ್ಲಿಂದ ಹಳ್ಳಿಹೊಳೆ ಮಾರ್ಗವಾಗಿ ಬರಬೇಕು. ಕಮಲಶಿಲೆಯ ನಂತರ ಶೆಟ್ಟಿಪಾಲು ಎನ್ನುವ ಸಣ್ಣ ಹಳ್ಳಿಯಲ್ಲಿ ಇಳಿದು, ಎಡಗಡೆಯ ಮಣ್ಣುದಾರಿಯಲ್ಲಿ 2 ಕಿ.ಮಿ. ಸಾಗಿದಾಗ ಸಣ್ಣ ಝರಿ ಕಾಣುತ್ತದೆ. ಅದರ ಜಾಡು ಹಿಡಿದು ಬೆಟ್ಟವೇರಿದರೆ ಸಿಗುವುದೇ ಈ ಅಕ್ಕಿನಕೊಡ್ಲು ಜಲಧಾರೆ. ಅಜ್ಞಾತವಾಗಿರುವುದರಿಂದ ಸ್ಥಳಿಯರ ಸಹಾಯ ಪಡೆಯವುದು ಸೂಕ್ತ ಇಲ್ಲವಾದರೆ ದಾರಿ ತಪ್ಪುವಿರಿ ಜೋಕೆ.

ಸುತ್ತ ಮುತ್ತಲು:- ಇಲ್ಲಿಂದ ಬಿಳ್ಕಲ್ ತೀಥವೆಂಬ ಜಲಪಾತ, ಮೂಡಗಲ್ಲು ಗುಹಾಂತರ ದೇವಾಲಯ, ದೇವರ ಬಾಳು ಜಲಪಾತ ವೀಕ್ಷಿಸಿಲು ಹೋಗಬಹುದು. ಅಲ್ಲದೆ ಕಮಲಶಿಲೆಯ ದುಗರ್ಾಪರಮೇಶ್ವರಿ ದೇವಾಲಯ, ದೇವಸ್ಥಾನದ ಮೂಲ ಗುಹೆ ಪ್ರಕೃತಿ ನಿಮರ್ಿತ ಅತಿ ಸಮೀಪದ ಸುಂದರ ಸ್ಥಳಗಳು. ಅರೆಮನೆ ಕೊಡ್ಲು ಎಂಬ ಸಣ್ಣ ಜಲಧಾರೆ ಹಳ್ಳಿಹೊಳೆಯ ಸಮೀಪವಿದೆ. ಇಲ್ಲಿನ ಎಲ್ಲಾ ಜಲಧಾರೆಗಳನ್ನು ತಲುಪಲು ಸ್ಥಳಿಯರ ಸಹಾಯ ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ದಾರಿ ತಪ್ಪುವುದು ಖಂಡಿತ!

ಶ್ರೀಧರ್. ಎಸ್. ಸಿದ್ದಾಪುರ, ಕುಂದಾಪುರ ತಾಲೂಕು

ಮಕ್ಕಳ ದನಿ

ಮಕ್ಕಳ ದನಿ ಮತ್ತು ಪ್ರತಿಬಿಂಬ ಪತ್ರಿಕೆ ಬಿಡುಗಡೆ


ನಮ್ಮ ಶಾಲೆಯಲ್ಲಿ ನಡೆದ ಪತ್ರಿಕೆ ಬಿಡುಗಡೆ ಮತ್ತು  ಮಕ್ಕಳ ದನಿ ಎನ್ನುವ ಮಕ್ಕಳೇ ರೂಪಿಸಿದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. ಅದರ ಎರಡು ತುಣುಕುಗಳು. 





Tuesday, August 20, 2013

ವಿಚಾರ ಮಾಡಬೇಕಾದ ವಿಚಾರ!


ಇಂದಿನ ಸಮಾಜವು ನಮ್ಮ ಹಳೆಯ ಶಾಲೆಗಳ ಪ್ರತಿನಿಧಿ ಎನಿಸುವುದಿಲ್ಲವೇ? ಮುಂದೆಯೂ ಇದಕ್ಕಿಂತ ಉತ್ತಮ ಸಮಾಜ ನಿರೀಕ್ಷಿಸುತ್ತೇವಲ್ಲವೆ? ಈ ನಿರಿಕ್ಷೆಗೆ ನೀರೆರೆಯ ಬೇಕಾದುದು ನಮ್ಮ ಶಾಲೆಗಳು ಮತ್ತು ಸಮಾಜ. ಇನ್ನು ಮುಂದೆ ನಮ್ಮ ಎಲ್ಲಾ ಶೌಚಾಲಯಗಳ ಗೋಡೆಗಳು ಸ್ವಚ್ಚ ಸುಂದರವಾಗಿರುತ್ತವೆ! ಏಕೆಂದರೆ ಮಗುವಿಗೆ ತನ್ನ ಬಾವನೆಯನ್ನು ಹೊರ ಹಾಕಲು ಒಂದು ಸುವರ್ಣ ಅವಕಾಶವನ್ನು ಹಲವಾರು ಶಾಲೆಗಳು ಮಾಡುತ್ತಿವೆ. ಅದು ಶಾಲಾ ಗೋಡೆ ಮತ್ತು ಮಾಸಿಕ ಪತ್ರಿಕೆಗಳ ಮೂಲಕ. ಅವುಗಳಿಗೆ ಸಮುದಾಯದ ಅಭೂತಪೂರ್ವ ಬೆಂಬಲವೂ ದೊರಕಿದೆ ಎನ್ನುವುದು ಖುಷಿಯ ವಿಚಾರ. ವಿಚಾರ ಮಾಡಬೇಕಾದ ವಿಚಾರವಲ್ಲವೇ?
ನಮ್ಮ ಶಾಲಾ ಇಂತಹ ಒಂದು ಸಣ್ಣ ಪ್ರಯತ್ನವೇ 'ಪ್ರತಿಬಿಂಬ' ಪತ್ರಿಕೆ. ಊರಿನವರ ಸಮಸ್ತ ಜನರ ಸಹಕಾರ ಹಾಗು ಶಾಲಾ ಸಹಶಿಕ್ಷಕಿಯರ ಸಂಪೂರ್ಣ ಸಹಕಾರದೊಂದಿಗೆ ಎರಡನೇ ವರ್ಷದ ಶಿಶುವಾಗಿದೆ. ಮುಂದೆಯೂ ಸಹ ಇಂತಹದೇ ಪ್ರೋತ್ಸಾಹ ದೊರಯಲಿಯೆಂದು ಹಾರೈಸುತ್ತೇವೆ.
ನಾವು ಕಲಿತಂತೆ ನಮ್ಮ ಮುಂದಿನ ಜನಾಂಗ ಕಲಿಯದೇ ಹೊಸ ಹೊಸ ತಂತ್ರಜ್ಞಾನವನ್ನು ಕಲಿಯುತ್ತಾ ಮೌಲ್ಯಗಳನ್ನು ಸಹ ಕಲಿಯುತ್ತಾ ಸಾಗಬೇಕಲ್ಲವೆ? ಹಾಗಾಗಿ ಶಾಲೆಗೆ ಬೇಕಾದ ಕಂಪ್ಯೂಟರ್ ಮತ್ತು ಎಜುಸ್ಯಾಟ್ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದೇವೆ.
ಇಲ್ಲಿ ನಮ್ಮ ಶಾಲಾ ಪತ್ರಿಕೆಯ ಎರಡನೆಯ ಸಂಚಿಕೆಯಿದೆ. ಸಹೃದಯಿ ಓದುಗರು ತಮ್ಮ ಅನಿಸಿಕೆ ತಿಳುಸುವಿರಲ್ಲಾ. ವಂದನೆಗಳೊಂದಿಗೆ.






















ವಾರೆ ನೋಟ

ತುಂಬಾ ಕುಡಿದರೂ ತಲೆಗೇರದ `ತುಂಬಾ'

 ನಿಮಗೂ ಸ್ವಲ್ಪ ಮತ್ತೇರಿಸುವ ಉದ್ದೇಶದಿಂದಲೇ ಈ ಲೇಖನ ಬರೆಯುತ್ತಿದ್ದೇನೆ. ಒಮ್ಮೆಯಾದರೂ ಕಣ್ಮುಚ್ಚಿ ಕುಡಿದು ಬಿಡಿ!! ನಿಮ್ಮ ಒಳಗೂ ಹೊರಗೂ ಒಂದಾಗಿ ನೀವೇ ದೇವರಾಗಿ ಬಿಡಬಹು...