ಮಹಾರಾಷ್ಟ್ರದ ಮಹಾಡ್ನಿಂದ ರಾಯಗಢಕ್ಕೆ ಬಂದಾಗ ನಡು ಮಧ್ಯಾಹ್ನ . ಮಹಿಷಾಸುರನಂತೆ ಮಲಗಿದ ಮಲೆಗಳ ನೋಡಿ ರಾಯಗಢ ಕೋಟೆ ಹತ್ತಲು ಮನಸ್ಸು ಹಿಂದೇಟು ಹಾಕಿತ್ತು. ಹೇಗೂ ರೋಪ್ ವೇ ಇದೆಯಲ್ಲಾ ಎಂದು ಹತ್ತಿ ಕುಳಿತೆವು. ಮೋಡವೊಂದು ನಮ್ಮ ನೆತ್ತಿಯ ತಾಗಿ ನಾವು ಕುಳಿತ ವಾಹನ ಮೋಡದೊಳಗೆ ಲೀನ. ತ್ರಿಶಂಕು ಸ್ವರ್ಗದಲಿ ತೇಲುತ್ತಾ ತೇಲುತ್ತಾ ನಾವು ಕುಳಿತ ಟ್ರಾಲಿ ಸೇರಿದುದು ರಾಯಗಢವೆಂಬ ರುದ್ರ ರಮಣೀಯ ಕೋಟೆಯ ನೆತ್ತಿಯ ಮೇಲೆ! ನೂರು ಎಕರೆಯಲ್ಲಿ ಹರಡಿದ ಇತಿಹಾಸದ ಚಿತ್ತಾರ! ಒಂದು ಮನೆ ಕಟ್ಟಲು ಹೆಣಗುವ ನಾವು ಎಂಟು ಹೆಂಡಿರ ಕಟ್ಟಿಕೊಂಡು ಇಷ್ಟೊಂದು ಅಗಾಧವಾದ, ವಿಶಾಲ ಕೋಟೆ ಕಟ್ಟಲು ಬೇಕಾದ ಇಚ್ಚಾಶಕ್ತಿಗೆ ಬೆರಗುಗೊಂಡು ಕೋಟೆಯ ಪ್ರತೀ ಇಂಚನ್ನು ಸವರುವ ತವಕದಲಿದ್ದೆವು.
|
ರಾಯಗಢ್ ಸನಿಹದ ಹಳ್ಳಿ. |
|
ಸ್ವರ್ಗದಲಿ ತೇಲುತಿದೆ ಟ್ರಾಲಿ .. |
|
ಮಾರಾಟಗಾರ್ತಿ ಸ್ಥಳೀಯ ಉಡುಗೆಯಲ್ಲಿ |
|
ಮಂತ್ರಿ ವಾಸದ ಕೋಣೆಗಳು. |
|
ಜಗದೀಶ್ವರ ದೇವಾಲಯ. |
|
ವಿಶಾಲ ಮಾರುಕಟ್ಟೆ. |
|
ನಾ ಕಂಡತೆ ಜಗದೀಶ್ವರ ದೇವಾಲಯ.. |
ನನಗೆ ಶಿವಾಜಿ ಉಸಿರಾಡಿದ ಉಸಿರು ಅಲ್ಲೇ ಎಲ್ಲೋ ಇತ್ತೆಂದು ಭಾಸವಾಗುತ್ತಲೇ ಇತ್ತು. ಮನದ ತುಂಬಾ ಶಿವಾಜಿ ಕಂಪನ. ಶಿವಾಜಿ ಮೆಟ್ಟಿದ ನೆಲವನ್ನು ಪೂರ್ವ ದ್ವಾರದಲ್ಲಿ ಹೊಕ್ಕರೆ ಸಾಲು ಸಾಲು ರಾಣಿ ಆವಾಸ. ಅವಕ್ಕೆ ತಾಗಿಕೊಂಡಂತೆ ಶೌಚ ವ್ಯವಸ್ಥೆ ಅದೂ ಬೆಟ್ಟದ ನೆತ್ತಿಯಲ್ಲಿ! ಅದರ ವಿರುದ್ದ ದಿಕ್ಕಿಗೆ ಮಂತ್ರಿ ಆವಾಸ ತೆರೆದು ಕೊಳ್ಳುತ್ತೆ. ಮುಂದೆ ಬಲಕ್ಕೆ ಹೊರಳಿ ನೇರ ಮುಂದೆ ಹೋದರೆ ಏಳು ಅಂತಸ್ತಿನ ವಿಜಯ ಸ್ತಂಭ. ಪ್ರತಿ ವಿಜಯವನ್ನೂ ಹೊಸ ದೀಪದೊಂದಿಗೆ ಆಚರಿಸುತ್ತಾರೆ. ದೀಪ ಉರಿಯುತ್ತಿದ್ದರೆ ಶಿವಾಜಿ ಯಾವುದೋ ಕೋಟೆ ಗೆದ್ದನೆಂದು ಅರ್ಥ. ಬಲಭಾಗಕ್ಕೆ ಶಿವಾಜಿಯ ವಿಶ್ರಾಂತಿ ಕೊಠಡಿ. ಅಲ್ಲಿಂದ ಮುಂದಕ್ಕೆ ಹೊರಳಿದರೆ ವಿಶಾಲ ದಬರ್ಾರ್ ಹಾಲ್. 1280 ಕೆ.ಜಿ. ತೂಗುವ ಚಿನ್ನದ ಸಿಂಹಾಸನವನ್ನು ಶಿವಾಜಿ 1681ರಲ್ಲಿ ಏರಿದನು. ಈ ಚಿನ್ನದ ಸಿಂಹಾಸನ ಈಗ ದರೋಡೆಕೋರ ಬ್ರಿಟಿಷ್ ಸಾಮ್ರಾಜ್ಯದಲ್ಲಿದೆ. ಇಲ್ಲಿ ಒಂದು ಚಿಟಿಕೆ ಹೊಡೆದರೆ ಶಬ್ದ ತರಂಗಗಳು ಸ್ಪಷ್ಟವಾಗಿ ನಮಗೆ ಕೇಳಿಸಿ ಆಶ್ಚರ್ಯವನ್ನುಂಟು ಮಾಡಿತು. ಯಾವುದೇ ಸ್ಪೀಕರ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಮಾತನಾಡಿದ ಪ್ರತಿ ಶಬ್ದವು ಕೇಳುವ ಹಾಗೆ ಧ್ವನಿ ವ್ಯವಸ್ಥೆಯಾಗುವಂತೆ ಮಾಡಿಕೊಂಡಿದ್ದು ಅವರ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿ. ಈ ದಬರ್ಾರ್ ಹಾಲ್ನ ಎದುರಿಗಿದ್ದ ಮುಖದ್ವಾರವನ್ನು ಹೋಲುವಂತೆ ಬ್ರಿಟಿಷರು ಇಂಡಿಯಾ ಗೇಟ್ ರಚಿಸಿದರು! ಹರದಾರಿ ಸವೆಸಿದರೆ ಹುಲಿದ್ವಾರ, ಹೋಲಿ ಮೈದಾನ ಕಾಣಸಿಗುತ್ತದೆ. ಹೋಲಿ ಮೈದಾನದಲ್ಲಿರುವ ಶಿವಾಜಿ ಪ್ರತಿಮೆಗೆ ಸತಾರದಲ್ಲಿರುವ ಶಿವಾಜಿ ವಂಶಸ್ಥರು ಪ್ರತಿದಿನವೂ ಬಂದು ಮಾಲಾರ್ಪಣೆ ಮಾಡಿ ಹೋಗುವರು! ಹಾಗೆಂದು ಬೆಟ್ಟ ಬಹಳ ಚಿಕ್ಕದೆಂದು ತಿಳಿಯಬೇಡಿ. ಸಮುದ್ರ ಮಟ್ಟದಿಂದ ಬರೋಬ್ಬರಿ 1356 ಮೀಟರ್ ಎತ್ತರದಲ್ಲಿದೆ. ಈ ಎಲ್ಲಾ ಕಟ್ಟಡಗಳಲ್ಲಿ ಬಿದ್ದ ನೀರು ಹೋಲಿ ಮೈದಾನಕ್ಕೆ ಬಂದು ಹೊರ ಹೋಗುತ್ತೆ. ಅಷ್ಟೊಂದು ಅಧ್ಬುತವಾಗಿ ಜಲ ನಿರ್ವಹಣಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಟ್ಟದ ನೆತ್ತಿಯ ಮೇಲೆ 11 ಬೃಹತ್ ಮತ್ತು 100ಕ್ಕೂ ಹೆಚ್ಚು ಚಿಕ್ಕ ಕೆರೆಗಳಿವೆ ಎಂದರೆ ನಮ್ಮವರ ನೀರಿನ ತಂತ್ರಜ್ಞಾನ ಅರಿವಿನ ಅಗಾಧತೆ ಅರಿಯುವುದು! ಅದೇ ಕಲ್ಲಿನಿಂದಲೇ ಕೋಟೆ ದ್ವಾರಗಳನ್ನು, ದೇವಾಲಯಗಳನ್ನು ನಿಮರ್ಿಸಲಾಗಿದೆ. ಹೋಲಿ ಮೈದಾನದೆದುರಿಗೆ ನಿಮರ್ಿಸಲಾದ 1400 ಅಡಿ ಉದ್ದದ ಮಾರುಕಟ್ಟೆ ನಮ್ಮನ್ನು ದಂಗುಬಡಿಸುತ್ತೆ. ಪ್ರತಿ ಅಂಗಡಿಯ ಹಿಂದೊಂದು ಮನೆ ಇದೆ.
|
ಮಂಜಿನಲಿ ಮುಳುಗಿದ ಮಾರುಕಟ್ಟೆ.. |
|
ದರ್ಬಾರ್ ಹಾಲನ ಸ್ವಾಗತ ಗೋಪುರ..ಇಂಡಿಯಾ ಗೇಟ್ ಇದನ್ನು ಹೋಲುತ್ತೆ. |
|
ಪಲ್ಲಕ್ಕಿ ದ್ವಾರ |
|
ವಿಜಯ ಸ್ತಂಭ. |
|
ತಕ್ ಮಕ್ ಟಾಕ್ ನಿಂದ ಕಾಣುವ ಸ್ವರ್ಗ ಸದ್ರಶಃ ನೋಟ. |
|
ತಕ್ ಮಕ್ ಟಾಕ್. |
ಮಾರುಕಟ್ಟೆಯಿಂದ ಹೊರ ಬರುತ್ತಿದ್ದಂತೆ ಎಡದ ದಾರಿ ನಿಮ್ಮನ್ನು ಕಮರಿಯ ಕಡೆಗೆ ಕೊಂಡೊಯ್ಯುವುದು. ಇದನ್ನು ತಕ್ ಮಕ್ ಟೊಕ್ ಎನ್ನುವರು. ನಿಲ್ಲಲೂ ಎಂಟೆದೆಯ ಧೈರ್ಯ ಬೇಡುವ ಸಹ್ಯಾದ್ರಿಯ ಬೆಡಗನ್ನೆಲ್ಲಾ ತನ್ನೊಡಲಿನಲ್ಲಿಟ್ಟ ಈ ಜಾಗ ಸ್ವರ್ಗ ಸದೃಶಃ. ಕೋಟೆಯ ವಿಹಂಗಮತೆ, ಅದರ ಪ್ರವೇಶ ದ್ವಾರ, ಒಂದೆರಡು ಸಣ್ಣ ಜಲಪಾತಗಳು ಇಲ್ಲಿಂದ ಸುಸ್ಪಷ್ಟ! ಇಲ್ಲಿಂದಲೇ ಪೇಶ್ವೆ ಕಾಲದಲ್ಲಿ ಅಪರಾಧಿಗಳನ್ನು ತಳ್ಳುತ್ತಿದ್ದರಂತೆ. ಇಲ್ಲಿ ಕತ್ತು ಬಗ್ಗಿಸಿ ಕಮರಿಗೆ ಇಣುಕಿದರೆ ಹೃದಯ ಬಾಯಿಗೆ ಬರುತ್ತೆ.
ಅಲ್ಲೇ ಬಲಕ್ಕೆ ಏಳು ತಲೆಮಾರಿನಿಂದ ಅಲ್ಲಿನ ಮಳೆ, ಬಿಸಿಲು ಕಂಡ ಈಗ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶನ ಮನೆ ಇದೆ. ದಣಿದು ಬಂದವರಿಗಾಗಿ ಅವರ ತಾಯಿ ಆದರ ಆತಿಥ್ಯ ಮಾಡುತ್ತಾರೆ. ನಾವೂ ಇಲ್ಲೇ ಬೆಳಗಿನ ಉಪಹಾರ ಅವಲಕ್ಕಿ ಮತ್ತು ಚಹಾ ಸೇವಿಸಿದೆವು. ಬಹಳ ರುಚಿಯಾಗಿತ್ತು. ಏಳು ತಲೆ ಮಾರಿನ ಇತಿಹಾಸವನ್ನು ತಿಳಿಯ ಬಯಸುವವರು ಅವರ ಮಣ್ಣಿನ ಮನೆಯಲ್ಲೇ ಉಳಿಯಬಹುದು. ಜಗದೀಶ್ವರನಿಗೆ ನಮಿಸಿ, ಶಿವಾಜಿ ಮತ್ತು ಆತನ ನಾಯಿಯ ಸಮಾಧಿಗೆ ಶರಣು ಬಂದು ಪಲ್ಲಕ್ಕಿ ದ್ವಾರದ ಮೂಲಕ ವಿಜಯ ಸ್ತಂಭ ಬಳಸಿ ಹೊರಟು ಬಂದೆವು. ಶಿವಾಜಿಯ ಮಂತ್ರಿ ಹಿರೋಜಿ ಹಿಂದೋಳ್ಕರ್ 14 ವರ್ಷಗಳ ಕಾಲ ಶ್ರಮಪಟ್ಟು ನಿಮರ್ಿಸಿದ ಈ ಕೋಟೆಯನ್ನು ಬರೀ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಅನುಭವಿಸಿ ಇದರ ಅಗಾಧತೆ ಅರಿಯಬೇಕು. ಜೊತೆಗೆ ಇಲ್ಲಿನ ವಿಶೇಷವಾದ ಮಹಾರಾಷ್ಟ್ರದ ಬಕರಿ( ಒಂದು ವಿದಧ ರೊಟ್ಟಿ) ಜವಾಣ್(ಊಟ) , ಮಿಸಳ್ ಬಾಜಿ, ಮಿಸಾಳ್ ಪಾವ್ ಸವಿಯಲು ಮರೆಯದಿರಿ.
ಇಲ್ಲಿ ವಾಸಕ್ಕೆ ಅನೇಕ ಹೋಟೆಲುಗಳಿವೆ. ಕೋಟೆಯ ಮೇಲೆಯೇ ರಾಯಗಢ್ ರೋಪ್ ವೇ ಹೋಟೆಲ್ ಇದೆ. ಇಲ್ಲಿ ಊಟಕ್ಕೂ ವ್ಯವಸ್ಥೆ ಇದೆ. ಈ ಪ್ರವಾಸಕ್ಕೆ ಕನಿಷ್ಠ ಎರಡು ದಿನ ತೆಗೆದಿಡುವುದು ಉತ್ತಮ. ಇಲ್ಲಿಂದ ಸನಿಹದಲ್ಲಿರುವ ಪ್ರತಾಪ್ ಗಢ್, ಮಾತೇರನ್ಗೂ ಹೋಗಿ ಬರಬಹುದು.
ಶ್ರೀಧರ್. ಎಸ್. ಸಿದ್ದಾಪುರ
No comments:
Post a Comment