Sunday, March 25, 2012

ತಪ್ಪು ತಿದ್ದುವ ತಪ್ಪು


ತಪ್ಪು ತಿದ್ದುವ ತಪ್ಪು

ನಿಮ್ಮ ಆಲೋಚನೆ ಕ್ರಮವನ್ನು ಸಂಪೂರ್ಣ ಬದಲಿಸುವ, ನೀವು ಯೋಚಿಸುವಂತೆ ಮಾಡುವ ಉತ್ತಮ ಪುಸ್ತಕ.
ನೀವು ಉತ್ತಮ ಪೊಷಕರಾಗಲು, ಉತ್ತಮ ತಂದೆಯಾಗಲು, ಯಶಸ್ವಿಯಾಗಲು ಸಹಕಾರಿಯಾದ ತರ್ಕಕ್ಕೆ ಹಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.




ನಿಮಗಾಗಿ ಇದರಲ್ಲಿನ ಒಂದು ಅಧ್ಯಾಯವನ್ನು ಕೊಡುತ್ತಿದ್ದೇನೆ. ನೀವು ಓದಿ ಇತರರಿಗೂ ಹೇಳಿ. ಅಕ್ಷರ ಸಂಸ್ಕೃತಿ ಬೆಳೆಯಲಿ.

ಇತಿ ನಿಮ್ಮ
ಶ್ರೀಧರ್. ಎಸ್. ಸಿದ್ಧಾಪುರ












Add caption

Thursday, March 22, 2012

ದೊಡ್ಡ ಮಂಗಟ್ಟೆಯ ಸಹೋದರ

ದೊಡ್ಡ ಮಂಗಟ್ಟೆಯ ಸಹೋದರ 

ಕರಾವಳಿಯ ಕುರುಚಲು ಕಾಡು. ಹಕ್ಕಿಗಳ ಪೋಟೊ ತೆಗೆಯಲು ಅಲೆಯುತ್ತಿದ್ದಾಗ ಗೋಳಿ ಮರದ ಸಮೀಪ ವಿಚಿತ್ರವಾದ ನಗುವ ಸದ್ದು ಕೇಳಿ ಬಂತು, ಕುತೂಹಲವಾಯಿತು. ಕ್ಯಾಮರ ಲೆನ್ಸ್ನ್ನು ಪೋಕಸ್ ಮಾಡಿ ನೋಡಿದೆ. ಒಂದೆರಡು ಪೋಟೋ ಕ್ಲಿಕ್ಕಿಸಿದೆ. ಪೋಟೊ ನೋಡಿ, ಅರೆ ಇದು ದಾಂಡೇಲಿ ಅಭಯಾರಣ್ಯಗಳಲ್ಲಿ ಕಂಡುಬರುವ ಹಾರ್ನಬಿಲ್ನಂತಿದೆಯಲ್ಲ ಎನ್ನಿಸಿತು, ಕುತೂಹಲ ತಡೆಯಲಾರದೆ ಕೂಡಲೇ ಮನೆಗೆ ಹಿಂತಿರುಗಿದೆ.






ಪೂರ್ಣಚಂದ್ರರ ಕನ್ನಡನಾಡಿನ ಹಕ್ಕಿ ಪುಸ್ತಕ ನೋಡಿದಾಗ ಇದೂ ಹಾನರ್್ಬಿಲ್ ಇರಬಹುದೇ ಎನ್ನಿಸಿತು. ಕೆಲವು ಸಾದೃಶಗಳು ಕಣ್ಣಿಗೆ ಕಟ್ಟುವಂತಿತ್ತು. ಕೆಲವೇ ವ್ಯತ್ಯಾಸಗಳಿದ್ದವು. ಗೊಂದಲಕ್ಕೆ ಬಿದ್ದೆ. ಓರಗೆಯ ಮಿತ್ರರೊಂದಿಗೆ ಚಚರ್ಿಸಿದೆ. ಉತ್ತರ ಮಾತ್ರ ಸಿಗಲಿಲ್ಲ. ಕೆಲವರದಕ್ಕೆ ಮಳೆ ಕೋಗಿಲೆಯೆಂದರು. ನನ್ನ ಸಮಸ್ಯೆ ಮಾತ್ರ ಹಾಗೇ ಉಳಿಯಿತು..
ಸ್ವಲ್ಪ ದಿನಕ್ಕೆ ವಿಷಯ ಮರೆತೇ ಹೋಯಿತು, ಮೊನ್ನೆ ಮೊನ್ನೆ ಯಾವುದೋ ದಿನಪತ್ರಿಕೆಯಲ್ಲಿ ಹಾರ್ನಬಿಲ್ ವಿಷಯ ಓದಿದೆ. ಫೋಟೊ ಕೂಡ ಅಚ್ಚಾಗಿತ್ತು. ನನ್ನ ಹಳೆ ಪೋಟೊದೊಂದಿಗೆ ಹೋಲಿಸಿನೋಡಿದೆ. ಇವುಗಳಿಗೂ ಹಾರ್ನಬಿಲ್ನಂತೆ ಹಾರುವಾಗ ರೆಕ್ಕೆಯಲ್ಲಿ ಬಿಳಿ ಬಿಳಿ ಗೆರೆ ಮೂಡುತ್ತದೆ. ಗಾತ್ರವೂ ಹಾನರ್್ಬಿಲ್ನಷ್ಟೆ. ಬಣ್ಣವೂ ಹಾನರ್್ಬಿಲ್ನ ಗ್ರೇ. ಕೂಗೂವುದು ಸಹ ಹಾನರ್್ಬಿಲ್ನಂತೆ. ಹಾನರ್್ಬಿಲ್ಗಳಿಗಿರುವಂತೆ ಕೊಕ್ಕಿನ ಮೇಲ್ಗಡೆ ಟೋಪಿಯಾಕಾರದ ರಚನೆಗಳಿಲ್ಲ.

ಇವುಗಳ ಜೀವನ ವಿಧಾನವೂ ಹಾನರ್್ಬಿಲ್ಗಳಂತೆ, ಗೋಳಿ ಅತ್ತಿ ಮತ್ತಿತ್ತರ ಹಣ್ಣುಗಳನ್ನು ತಿಂದು ಬದುಕುತ್ತದೆ. ಡಿಸೆಂಬರ್ ನಲ್ಲಿ ಮರಿಮಾಡುತ್ತದೆ. ಜೋಡಿಯಲ್ಲಿ ಕಂಡುಬರುತ್ತದೆ. ಎಲ್ಲಾ ಗೊಂದಲಗಳ ನಡುವೆ ಹಾರ್ನಬಿಲ್ ನೋಡುವ ತವಕ. ಒಂದೇ ಸಮನೆ ಹಾನರ್್ಬಿಲ್ ಕನಸು ಕಾಣುತ್ತಾ ಕ್ಯಾಮರ ಹೆಗಲಿಗೇರಿಸಿಕೊಂಡು ದಾಂಡೇಲಿಗೆ ಹೊರಟಿದ್ದೇನೆೆ. ನಿಮಗೇನಾದರು ಈ ಹಕ್ಕಿ ಕಾಣಸಿಕ್ಕರೆ. ವಿವರ ತಿಳಿಸುತ್ತಿರಾ?

ಶ್ರೀಧರ. ಎಸ್. ಸಿದ್ಧಾಪುರ

Wednesday, March 7, 2012

ಮಾಯಾಲೋಕದ ಮಾಯಾವಿ 'ತೇಜಸ್ವೀ'ಪ್ರಿಯ ಕವಿಗೊಂದು ಹ್ರದಯಸ್ಪಶ್ರಿ ನುಡಿ ನಮನ


ಪ್ರಕೃತಿಯೊಂದಿಗೆ ಲೀನವಾಗಿ, ಕಾಡಿನ ಸಂತನೆನಿಸಿದ ತೇಜಸ್ವಿ ನಿಮಗಿದೊ ನುಡಿ ನಮನ. ಪ್ರಕೃತಿಯ ಸೂಕ್ಷ್ಮವನ್ನು ಅದರ ಚಿದಂಬರ ರಹಸ್ಯವನ್ನು ಬೆರಗುಗಣ್ಣಿನಿಂದ ನೋಡಿ, ಮಗುವಿನಂತೆ ಪುಳಕಗೊಳ್ಳುವ, ಇನ್ನೊಬ್ಬರಿಗೆ ಅದನು ತಿಳಿಸುವ ತವಕದ ಸಣ್ಣ ಬಾಲಕ. ಮಿಲೆನಿಯಂ ಸರಣಿ ಇದಕ್ಕೊಂದು ನಿದರ್ಶನ. ತಾನು ಬೆಳೆದು ಉಳಿದವರಿಗೆ ಪ್ರಕೃತಿ ಪ್ರೀತಿಯ ಕಲಿಸಿದ ಗುರು. ಇವರ ಸಾಹಿತ್ಯ ಓದಿದವರಿಗಂತು ಇತರೆ ಕೃತಿಗಳು ಪೇಲವವಿನಿಸಿಕೊಳ್ಳುದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿ ಎಲ್ಲರೂ ಮುಖ್ಯರೆನ್ನುತ್ತಾ, ಯಾವುದೂ ಮುಖ್ಯವಲ್ಲ ಎಂಬ ಕುವೆಂಪು ದೋರಣೆಯಂತೆ ಅನೇಕ ಪ್ರಯೋಗಶೀಲ ಕೃತಿ ರಚಿಸಿದರು. ಹಳೆಯ ಪದ್ಧತಿಗಳಿಗೆ ಅಂಟಿಕೊಳ್ಳದೇ, ನವ್ಯದ ಕಿಲುಬನ್ನು ತೆಗೆದುಹಾಕಿ, ಹೊಸ ದಿಗಂತದೆಡೆಗೆ ಸಾಗಿದ ಸಂತ. ವಿದೇಶಿ ಸಂಸ್ಕ್ರತಿಯ ಮೋಹಕ್ಕೆ ಒಳಗಾಗದೆ, ಸ್ನಿಗ್ಧ ಸ್ವಚ್ಚಂದ ಝರಿಯಂತೆ ಹರಿದ ಸಾಹಿತ್ಯ ಪ್ರತಿಭೆ.ವೈಜ್ಜಾನಿಕ ಕಾದಂಬರಿ ಕರ್ವಾರ್ಲೊ:- ಕರ್ವಾರ್ಲೊ, ವೈಜ್ಜಾನಿಕ ಕಾದಂಬರಿಯ ನೈಜ, ನೂತನ ನಿರೂಪಣೆ. ವಿಜ್ಞಾನವನ್ನೂ ಇಷ್ಟು ಸರಳವಾಗಿ, ರೋಚಕವಾಗಿ ಹೇಳಬಹುದೆಂಬುದೆ ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮ. ರೋಸಿ ಹೋದ ಹಳೆ ಪದ್ಧತಿಗಳನ್ನೆಲ್ಲ` ಮುರಿದು ಹೊಸ ಪರಂಪರೆಗೆ ದಿಗ್ರ್ಧಶನ ಮಾಡಿದುದು ಸ್ಮರಣೀಯ. ಓದಿದ್ದನ್ನೇ ಓದಿ ಬೇಸರಿಸಿಕೊಂಡ ಕನ್ನಡಿಗರಿಗೊಂದು ಅಮೃತ ಸಿಂಚನಗೈದಿತು. ಸರಿಸೃಪ ಒಂದು ಜೀವ ವಿಸ್ಮಯದ ಕೊಂಡಿಯಾಗುಳಿದು ಅದರ ಹುಡುಕಾಟವೊಂದನ್ನು ರೋಚಕವಾಗಿ ಹೇಳಿದುದು ಅದ್ಭುತ, ಅನನ್ಯ. ಅತ್ಯಂತ ತಳ ಮಟ್ಟದವರಲ್ಲಿಯೂ ಅತ್ಯಂತ ಉತ್ತಮ ಜ್ಞಾನವಿದೆ, ಮಂದಣ್ಣ ಪಾತ್ರದ ಮೂಲಕ ತೋರಿಸಿದರು, ಆ ಮೂಲಕ ಇಲ್ಲಿ ಎಲ್ಲರೂ ಮುಖ್ಯ ಎಂದು ತೋರಿಸಿದರು. ಕುವೆಂಪುರವರ ಪ್ರಭಾವಕ್ಕೊಳಗಾದುದು ತೋರುತ್ತದೆ. ಅವರೇ ಹೇಳಿಕೊಂಡಂತೆ ಕುವೆಂಪುರವರ ಕಲಾಸೃಷ್ಟಿ, ಕಾರಂತರ ಪ್ರಯೋಗಶೀಲತೆ ಅವರ ಮೇಲೆ ತೀವ್ರ ಪ್ರಭಾವ ಬೀರಿದೆ. ಅವರು ಯಾವುದೇ ಪಂಥ, ತತ್ವಕ್ಕೆ ಒಳಪಡದೆ ನಮ್ಮ ನಮ್ಮೆಲ್ಲರಂತಿರುವ ಪಾತ್ರದಾರಿಗಳನ್ನು ಸೃಷ್ಟಿಸಿದುದು ಸಹ ಒಂದು ಹೊಸ ಪ್ರಯೋಗವೇ.ಜುಗಾರಿ ಕ್ರಾಸ್:- ಯಾವ ಪಾತ್ರವನ್ನೂ ವೈಭವೀಕರಿಸದೇ, ಕಾಡು ಮೇಡು ಹೊಳೆ ಮುಂತಾದವನ್ನೂ ಬಳಸಿಕೊಂಡು, ಜಾಗತೀಕರಣದಿಂದೂಟಾದ ಸಾಂಸ್ಕ್ರತಿಕ ಪಲ್ಲಟ, ಉದ್ಯೋಗ ಪಲ್ಲಟಗಳನ್ನು ಜುಗಾರಿ ಕ್ರಾಸ್ನಲ್ಲಿ ಹೇಳುತ್ತಾರೆ. ಹೇಗೆ ವಿದೇಶದಿಂದ ಕಾಲಿಟ್ಟ ಪ್ಲಾಸ್ಟಿಕ್ ಎಂಬುದು ಒಂದು ಜನಾಂಗದ ಉದ್ಯೋಗದ ಪಲ್ಲಟದಲ್ಲಿ ತೀವ್ರ ಪ್ರಭಾವ ಬೀರಿತು. ಮೇದರ ಕಾಡು ಹೇಗೆ ಅವಸಾನಕ್ಕೊಳಗಾಯಿತು.ಪರಿಸರದ ನಿಗೂಢತೆ ಹಾಗೂ ಮಾನವರ ನಿಗೂಢತೆ ಇಲ್ಲಿ ಮೇಳೈಸಿದಂತಿದೆ. ಒಂದು ದಿನದಲ್ಲಿ ನಡೆಯುವ ಘಟನೆಯಾದರಿಸಿ ಬರೆದ ಕಾದಂಬರಿ ಜುಗಾರಿ ಕ್ರಾಸ್ ಕಾದಂಬರಿ ಲೋಕದಲ್ಲೊಂದು ಮೈಲುಗಲ್ಲು. ಥ್ರಿಲ್ಲರೊಂದನ್ನು ಹೀಗೂ ಬರೆಯಬಹುದೆಂದು, ಆಗಿನ ಕಾಲದ ನವ್ಯ ಲೇಖಕರಿಗೆ ತೋರಿಸಿಕೊಟ್ಟರು. ಈ ಕಾದಂಬರಿ ಅವರ ಕಾದಂಬರಿಗಳಲ್ಲೇ ಅತ್ಯಂತ ಯಶಸ್ವಿ. ತೀರ ಸಾದಾರಣ ಪಾತ್ರವಾದ ಸುರೇಶನು ಮುಖ್ಯ ಭೂಮಿಕೆಗೆ ಬಂದು, ತೀವ್ರ ಕುತೂಹಲ ಕೆರಳಿಸುತ್ತಾರೆ. ಅಲ್ಲದೇ ಅವರ ವಿಶ್ಲೇಷಣೆಗಳು ಓದುಗನಲ್ಲಿ ಆಸಕ್ತಿ ಮೂಡಿಸುತ್ತದೆ.
ಅವರ ಕತೆಗಳು:- ಪ್ರಕೃತಿ, ಹಕ್ಕಿಗಳ ಬಗ್ಗೆ ಏನೂ ತಿಳಿಯದವರಿಗೂ ತಿಳಿಹಾಸ್ಯದ ದಾಟಿಯಲ್ಲಿ ಆಸಕ್ತಿ ಮೂಡಿಸುವುದು ಇವರ ವಿಶೇಷತೆ. ಆ ಕತೆಗಳ ಹಿಂದಿರುವ ರೋಚಕತೆಯೂ ಅದ್ಭುತ. 'ಏರೋಪ್ಲೇನ್ ಚಿಟ್ಟೆ', 'ಚೀಂಕ್ರ ಮೇಸ್ರ್ತೀ ಮತ್ತು ಅರಿಸ್ಟಾಟಲ್' ಕತೆ ಓದಿದವರಿಗೆ ಪ್ರಕೃತಿ ಮತ್ತು ಅದರ ನಿಗೂಢತೆಯನ್ನು ಢಾಳಾಗಿ ಬಳಸಿಕೊಂಡಿದ್ದಾರೆ ಎಂಬುದು ಸ್ಪಷ್ಡವಾಗುತ್ತದೆ. ಸಣ್ಣ ಎಳೆಯನ್ನು ಸಹ ಕತೆಯಾಗಿಸುವ ಅವರ ಜಾಣ್ಮೆ, ಮಾಯಾಮೃಗ ಎಂಬ ಕತೆಯಲ್ಲಿ ಭೂತದ ಕಲ್ಪನಯನ್ನು ಹಾಸ್ಯವಾಗಿ ಪರಿವತರ್ಿಸಿದ್ದಾರೆ. ಅವರ ಹಾಸ್ಯಪ್ರಜ್ಞೆ ವಿಶೇಷವಾದುದು. ಅದಕ್ಕೆ 'ವಿಶ್ವ' ಕತೆ ಸಾಕ್ಷಿಯಾಗಿ ನಿಲ್ಲುತ್ತದೆ. ತಾವು ತಮ್ಮ ಅಜ್ಜಿ ಮನೆಯಲ್ಲಿ ಕಳೆದ ಒಂದು ಘಟನೆಯನ್ನೆ ಕತೆಯಾಗಿಸಿದ್ದಾರೆ. ಆ ಕತೆಯಲ್ಲಿ ಬರುವ ವಿವರಗಳು ಅದ್ಭುತ ಹಾಸ್ಯಪ್ರಜ್ಞೆಗೆ ಸಾಕ್ಷಿ. ಘಾಟಿ ಹೆಂಗಸಿನ ಮಾತುಗಳು , ಬಾಲಕನು ತಾನು ಸತ್ತನೆಂದು ಭಾವಿಸಿಕೊಂಡು ಆ ಹೆಂಗಸಿನೊಂದಿಗೆ ಅವನ ವ್ಯವಹಾರ, ಹಾಗೂ ಸೈಕಲ್ಗೂ ವ್ಯಕ್ತಿತ್ವವನ್ನು ಆರೋಪಿಸಿ, "ಘಾಟಿ ಹೆಂಗಸನ್ನು ನೋಡಿದ ಸೈಕಲ್ ಆ ಬದಿಗೆ ವಾಲಿತು" ಎಂದು ಬರೆಯುತ್ತಾರೆ. ಸಿದ್ಧ ಪ್ರತಿಮೆಗಳನ್ನು ಬಳಸದೇ ಹೊಸ ಮಾದರಿಗೆ ತುಡಿದುದು ಅವರ ಪ್ರಯೋಗಶೀಲತೆಗೆ ಸಾಕ್ಷಿ.ನವ್ಯ ಪಂಥವನ್ನು ದಿಕ್ಕರಿಸಿ ಆಗಲೇ ಅವರು ಹೊರ ನೆಡೆದಿದ್ದರು, ಅವರ ಅಬಚೂರಿನ ಪೋಸ್ಟಾಪೀಸು ಕೃತಿಯಿಂದ ವ್ಯಕ್ತವಾಗುತ್ತದೆ. ಬರವಣಿಗೆಯ ತಂತ್ರಗಾರಿಕೆಯ ಬದಲಾವಣೆಗಾಗಿ ಈ ಕೃತಿಯನ್ನು ರಚಿಸಿದೆ ಎಂದಿದ್ದಾರೆ. ಕತೆಯನ್ನು ಹೇಳುವುದರ ಜೊತೆಗೆ ಪ್ರಕೃತಿಗೆ ನಾವು ಮಾಡಿದ ದ್ರೋಹವನ್ನು ಸಹ ಸಣ್ಣ ಎಳೆಯಾಗಿ ಕತೆಯಲ್ಲಿ ಬಳಸಿದ್ದಾರೆ ಎನ್ನುವುದು ಪ್ರೌಢ ಓದುಗರಿಗೆ ತಿಳಿಯುತ್ತದೆ.
ಕೊನೆ ಮುನ್ನುಡಿ:- ಇದೊಂದು ಬರೆದಷ್ಟೂ ಮುಗಿಯದ ಅಕ್ಷರ ಜಾತ್ರೆ. ಹಾಗಾಗಿ ಇಲ್ಲಿಗೆ ಮುಗಿಸುತ್ತೇನೆ. ಮತ್ತೊಮ್ಮೆ ಅಕ್ಷರ ಬುತ್ತಿಯೊಂದಿಗೆ ಬರುವೆ. ನಮಸ್ಕಾರ.ಶ್ರೀಧರ. ಎಸ್. ಸಿದ್ಧಾಪುರ

ರಂಗನ ತಿಟ್ಟು ವಿನ ಜುಟ್ಟಿ

ಏ ಜುಟ್ಟಿ ನೀ ಏನು ಮಾಡ್ತಿದ್ಯೆ ?

ರಂಗನ ತಿಟ್ಟು ಅತ್ಯಂತ ಪ್ರಸಿದ್ಧ ಪಕ್ಷಿಧಾಮಗಳಲ್ಲೊಂದು. ಇಲ್ಲಿನ ಪಕ್ಷಿ ವೈವಿಧ್ಯ ಅದ್ಭುತ. ಸೈಬಿರಿಯಾದ ಮೂಲೆಯಿಂದಲೂ ಪಕ್ಷಿಗಳು ಆಗಮಿಸುತ್ತವೆ. Night heron, Painted Pelicon, Spoon Billed, Darter, Little Egrate, Pelican, Carmorant, Open Billed Stark
ಇತ್ಯಾದಿ.


































Wednesday, February 22, 2012

ಮೋಡಿಯ ಮಲ್ಯಾಡಿ



ಒಂದೆಡೆ ಸುಂದರ ಕಡಲು. ಇನ್ನೊಂದೆಡೆ ತಂಪಾದ ಕೊಳಗಳು. ಸುತ್ತಲು ಹಸಿರು. ಸೂರ್ಯ ಶಶಿಮುಖಿ. ಬೀಸುವ ತಂಗಾಳಿ ನಡುವೆ ಕಲರವಿಸುವ ಖಗಗಳ ಸಮೂಹ. ನೀರಲಿ ನೀಲಾಕಾಶದ ಬಣ್ಣ. ಅಲ್ಲಲ್ಲಿ ವೈಯಾರಗೈಯುವ ನೈದಿಲೆ, ತರು-ಲತೆಗಳು.

ಮೀನಿಗಾಗಿ ಕಾಯುವ ಋಷಿ ಬಿಳಿ ಮಿಂಚುಳ್ಳಿ, ತರೆವಾರಿ ಮುನಿಯ, ಕೊಳದ ಬಕ, ಕೊಕ್ಕರೆ, ಕೇಸರಿ ಗೀಜಗ ಇನ್ನಿತರ ಹಕ್ಕಿಗಳು. ನಡುವೆ ಬೈತಲೆ ತೆಗೆದಂತಿರುವ ರಾಷ್ಟ್ರೀಯ ಹೆದ್ದಾರಿ 66.

ಇದು ಕುಂದಾಪುರ ತಾಲೂಕಿನಮಲ್ಯಾಡಿ ಪಕ್ಷಿಧಾಮದ ನೋಟ. ಕುಂದಾಪುರದಿಂದ ತೆಕ್ಕಟ್ಟೆ ತಲುಪಿ ಪೂರ್ವದ ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿದರೆ ಸಿಗುವುದೇ ವಿಶಾಲ ನೀರಿನ ಕೊಳಗಳು. ಪ್ರಾಣಿ ಪಕ್ಷಿ ಕೀಟಗಳ ಆಶ್ರಯತಾಣ ಮಲ್ಯಾಡಿ. ವರ್ಷವಿಡಿ ಇರುವ ನೀರು ಸುತ್ತಲಿನ ಹಸಿರು ಪರಿಸರ ಪಕ್ಷಿಗಳನ್ನು ಆಕಷ್ರಿಸಿವೆ. ಕೊಳಗಳ ಸುತ್ತಲೂ ಭತ್ತದ ಗದ್ದೆಗಳಿವೆ. ಇದರಿಂದ ಪಕ್ಷಿಗಳಿಗೆ ಸಾಕಷ್ಟು ಆಹಾರ ದೊರೆಯುತ್ತದೆ. ಕೊಳಗಳ ಸುತ್ತಲೂ ಉದ್ದು, ನೆಲಗಡಲೆ, ಅಲಸಂಡೆ ಮುಂತಾದ ಬೆಳೆಗಳನ್ನು ಬೆಲೆಯಲಾಗಿದೆ. ಇಲ್ಲಿರುವ ಪಕ್ಷಿ ವೈವಿಧೈ ಅನನ್ಯ , ಬಿಳಿ ಮಿಂಚುಳ್ಳಿ ಭಾರತದಾದ್ಯಂತ ಕಂಡು ಬರುತ್ತಿತ್ತು. ಈಗ ಅಪರೂಪವಾಗಿದೆ. ಆದರೆ ಈ ಪಕ್ಷಿ ಇಲ್ಲಿ ಹಲವಿದೆ. ಕೋಳಗಳ ಸುತ್ತಲೂ ಸಂತಾನೋತ್ಪತ್ತಿ ನಡೆಸಿವೆ. ಕೊಳದ ಬಕ, ಹಾವಕ್ಕಿ, ಉದ್ದ ಕರಿ ಕತ್ತಿನ ಕೊಕ್ಕರೆ. ಕೇಸರಿ ಗೀಜಗ, ಯುರೋಪಿನ ಅತಿಥಿ ಕುಂಡೆ ಕುಸ್ಕ, ನೆಲ ಗುಬ್ಬಿ, ಟಿಟ್ಟಿಭ, ಮುನಿಯಗಳು, ನೀಲಿ ಮಿಂಚುಳ್ಳಿ, ಗೊರವ, ನವಿಲು ಗೊರವ, ಕಾಜಾಣ ಇವುಗಳ ವೈಯಾರ ನೋಡುವುದೇ ಸಂಭ್ರಮ. ಭಾನುವಾರದಂದು ಭೇಟಿ ಇತ್ತಾಗ ನವಿಲು ಗೊರವ (jakana), ತಪಸ್ವಿ ನೀಲಿ ಮಿಂಚುಳ್ಳಿ ಸ್ವಾಗತ ಕೋರಿದವು. ಬೆಳ್ಳಕ್ಕಿಗಳು, ಹಸಿರು ಗಿಣೆಗಾರಲು, ಬಿಳಿ ಕತ್ತಿನ ಕಪ್ಪು ಬೆಳ್ಳಕ್ಕಿಗಳು ಬೇಟೆಯಾಡುತ್ತಿದ್ದವು. ಅಲ್ಲಲ್ಲಿ ಇಣುಕುವ ಹಾವಕ್ಕಿಗಳು. ಕಾಳು ಹೆಕ್ಕುವಲ್ಲಿ ನಿರತವಾಗಿರುವ ಮುನಿಯಗಳು ಭತ್ತದ ಗದ್ದಯಲ್ಲಿ ಸರ್ಕಸ್ ಮಾಡುತ್ತಿದ್ದವು. ಮಡಿವಾಳ ಹಕ್ಕಿ ತನ್ನ ಇಂಪಾದ ದನಿಯಿಂದ ಹೆಣ್ಣು ಹಕ್ಕಿಯನ್ನು ಕರೆಯುತ್ತಿತ್ತು. ಅಲ್ಲಲ್ಲಿ ತೇಲುವ ತಾವರೆಗಳು ಸೂರ್ಯನೊಂದಿಗೆ ಸ್ಪರ್ದೆ ಗಿಲಿದ್ದಿದವು. ನೀಲಾಕಾಶದ ಕೊಳಗಳಲ್ಲಿನ ಪ್ರತಿಫಲನವು ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಟಿಟ್ಟಿಭವೊಂದು ಕೊಳದ ನಡುವಿನ ಜಾಗದಲ್ಲಿ ಬಿಸಿಲು ಕಾಯಿಸುತ್ತಿತ್ತು. ತಣ್ಣನೆಯ ಗಾಳಿ ನಮ್ಮನ್ನು ಹಿಂತಿರುಗಲಾರದಂತೆ ಮಂತ್ರ ಮುಗ್ದಗೊಳಿಸಿತ್ತು. ಹೊರಡುವು ಮನಸ್ಸಿಲ್ಲದ ಮನಸ್ಸಿನಿಂದ ಹೊರಟಾಗ ಬಿಳಿ ಮಿಂಚುಳ್ಳಿಗಳು ವಿದಾಯ ಹೇಳಿದವು.
ಕೊನೆ ಗರಿ:- ಪಕ್ಷಿಧಾಮಕ್ಕೆ ಸೂಕ್ತ ರಕ್ಷಣೆಯಿಲ್ಲ. ಮನುಷ್ಯ ಆಹಾರದ ಕೊರತೆಯಾದರೆ ಬೇರೆ ಕಡೆಗಳಿಂದ ತಂದು ಹಸಿವು ನೀಗಿಸಿಕೊಳ್ಳ ಬಲ್ಲ. ಸೀವಿತವಾದ ಸ್ವಚ್ಚವಾಗಿರುವ ಕೊಳಗಳನ್ನು ಆಶ್ರಯಿಸಿಕೊಂಡಿರುವ ಈ ಪಕ್ಷಗಳ ಆಹಾರ ಲಭ್ಯತೆ ಅತ್ಯಲ್ಪ. ಈ ಅತ್ಯಲ್ಪವನ್ನೂ ಮಾನವ ಕಸಿಯ ಹೊರಟಿದ್ದಾನೆ! ಮೀನುಗಾರರ ಹಲವು ತಂಡ ಇಲ್ಲಿ ಮೀನು ಆಮೆ ಹಿಡಿಯಲು ನಿರತವಾಗಿವೆ. ಅಲ್ಲದೆ ಪಕ್ಷಿಧಾಮದ ಸ್ಥಳಾಕ್ರಮಣವು ನಡೆಯುತ್ತಿದೆ. ಕೊಳದ ನೀರನ್ನು ಮನಸೋ ಇಚ್ಚೆ ಯಥೇಚ್ಚ ಬಳಸಿಕೊಳ್ಳುತ್ತಿದ್ದಾನೆ. ಸಿಮೆಂಟ ಕಾಡು ತಲೆಯೆತ್ತುತ್ತಿವೆ. ಇಲ್ಲಿನ ಪರಿಸರ ಜೀವಿ ಸಮೂಹವನ್ನು ಸರಕಾರ, ಪರಿಸರವಾದಿಗಳು ರಕ್ಷಿಸಬೇಕೆಂಬುದು ನನ್ನ ಮನವಿ.

ಶ್ರೀಧರ್ . ಎಸ. ಸಿದ್ದಾಪುರ.

Thursday, February 16, 2012

ಮಿರ್ಜಾನ ಕೋಟೆ


ಮಿರ್ಜಾನ ಕೋಟೆ
ನೀವು ಎನ್ ಎಚ್. 66 ರ ಗುಂಟ ಕುಂದಾಪುರದಿಂದ ಸಾಗಿ ಹೊನ್ನಾವರ ದಾಟಿ ಮುಂದೆ ಸಿಗುವುದೇ ಸುಂದರ ಮಿರ್ಜಾನ ಕೋಟೆ. ಕೋಟೆ, ಮಿರ್ಜಾನ ಎಂಬ ಊರಿನಿಂದ ಕೆಲವೇ ಕಿ.ಮಿ. ಹಿಂದಿದೆ. ಕಡಲ ಕಿನಾರೆಗೆ ಅತಿ ಸಮೀಪವಿರುವುದರಿಂದ, ಕಾವಲು ಕೋಟೆ, ವಸ್ತು ಸಾಗಾಣಿಕಾ ಕೋಟೆಯಾಗಿ ಬಳಕೆಯಲ್ಲಿತ್ತು. ವಿದೇಶಿ ವ್ಯವಹಾರೆಕ್ಕೆ ಬಳಸುತ್ತಿದ್ದರೆನ್ನಲಾಗುತ್ತಿದೆ. ಅತ್ಯಂತ ಕುತುಹಲಕಾರಿ ಇತಿಹಾಸ ಹೊಂದಿರುವ ಈ ಕೋಟೆಗೀಗ ಒಂದು ಸುತ್ತು ಬರೋಣ.
ಇತಿಹಾಸದ ಪುಟ ಸೇರಲು ಕಾಯುತಿರುವಂತೆ ತೋರುವ ಈ ಕೋಟೆ ಇಲಾಖಾ ನಿರ್ಲಕ್ಷಕ್ಕೆ, ಬುದ್ದಿಜೀವಿಗಳ ಲಜ್ಜೆಗೇಡಿತನಕ್ಕೆ ಸಾಕ್ಷಿ ದೊರೆಯುತ್ತದೆ. ಕೆಲವು ಸುಂದರ ರಚನೆಗಳ ಮೂಲಕ ಗಮನ ಸೆಳೆಯುತ್ತದೆ. ಮುರಾ ಕಲ್ಲಿನಿಂದ ನಿಮರ್ಿಸಿದ ನಾಜೂಕಾದ ಬುರುಜು, ವಿಶಿಷ್ಟವಾದ ಬಾವಿಗಳು, ಸಂಮೋಹಕ ಪ್ರವೇಶ ದ್ವಾರಗಳಿಂದ ಕಣ್ಮನ ಸೆಳೆಯುತ್ತದೆ. ಎಲ್ಲಾ ದಿಕ್ಕುಗಳ ಪರಿವೀಕ್ಷಣೆಗೆ ತಕ್ಕುದಾದ ಬುರುಜು. ಕೋಟೆಗೆ ಮೂರು ಪ್ರವೇಶ ದ್ವಾರಗಳಿವೆ. ಅದರ ಸುರಂಗಗಳ ಮೂಲಕ ಕಾಲುವೆಗಳಿಗೆ ಸಂಪರ್ಕ ಸಾಧಿಸಿಬಹುದೆನ್ನುವ ಬಗ್ಗೆ ಇಲಾಖೆ ಹೇಳಿದೆೆ. ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾದ ಕೋಟೆ ಎನ್ನಬಹುದು. ಕೋಟೆಯ ಸಭಾಂಗಣ ಇತರೆ ಭಾಗಗಳು ಶಿಥಿಲಾವಸ್ಥೆ ತಲುಪಿದ್ದು ಕೆಲವು ಗೋಡೆ ಕುಸಿದಿದ್ದು ಪುರ್ನನಿಮರ್ಾಣಕ್ಕೆ ಕಾಯುತ್ತಿವೆ. ಕೋಟೆಯ ಪ್ರವೇಶಕ್ಕೆ ಕಂದಕ ನಿಮರ್ಿಸಲಾಗಿದ್ದು ಕೋಟೆ ಸೇರಲು ತೊಡಕನ್ನು ಉಂಟುಮಾಡಿದೆ.
ಇತಿಹಾಸ:-
ಈ ಕೋಟೆಯ ಇತಿಹಾಸ ಅಸ್ಪಷ್ಟವಾಗಿದೆ.
ಈ ಬಾನ ಬತೂತ ಹೇಳುವಂತೆ ಇದು 1200 ರಲ್ಲಿ ನಿಮರ್ಿಸಲಾಗಿದೆ. ನವಾಯತ್ ಸುಲ್ತಾನ ಇದನ್ನು ನಿಮರ್ಿಸಿದನೆಂದು ನಂಬಲಾಗಿದೆ. ಮುಂದೆ ಇದು ವಿಜಯನಗರದವರ ಆಳ್ವಿಕೆಗೆ ಒಳಪಟ್ಟಿತೆನ್ನಲಾಗಿದೆ.
ಕೆಲವು ಇತಿಹಾಸಕಾರರ ಪ್ರಕಾರ ಈ ಕೋಟೆ 1552ರಲ್ಲಿ ಚನ್ನಬೈರದೇವಿ ನಿಮರ್ಿಸಿದಳು. ವಿಜಯನಗರ ರಾಜರ ಸಾಮಂತೆಯಾಗಿ ಸುಮಾರು 54 ವರ್ಷ ಆಳ್ವಿಕೆ ನೆಡೆಸಿದಳೆಂದು ಹೇಳಲಾಗುತ್ತದೆ. ಈ ಕೋಟೆಯ ಮೂಲಕ ಕಾಳುಮೆಣಸನ್ನು ಯುರೋಪ್ಗೆ ರಪ್ತು ಮಾಡಲಾಗುತಿತ್ತು. ಆದ್ದರಿಂದ ಇದೊಂದು ಪ್ರಮುಖವಾದ ವ್ಯಾಪಾರ ಕೇಂದ್ರವಾಗಿತ್ತು.
ಇನ್ನು ಕೆಲವು ಸಂಶೋಧಕರು ಹೇಳುವಂತೆ ಬಿಜಾಪುರ ಸುಲ್ತಾನರು ಇದನ್ನು ನಿಮರ್ಿಸಿದರೆಂದು ಹೇಳಲಾಗುತ್ತಿದೆ. ಇತಿಹಾಸ ಏನೇ ಹೇಳಲಿ ಈ ಕೋಟೆ ಒಂದು ಅತಿ ಮುಖ್ಯವಾದ ಕೋಟೆಗಳಲ್ಲೊಂದಾಗಿತ್ತು ಎನ್ನುದರಲ್ಲಿ ಎರಡು ಮಾತಿಲ್ಲ.
2000-2001 ರಲ್ಲಿ ಸವರ್ೆ ಮಾಡಿ ಹಲವು ಹೊಸ ಮಾಹಿತಿಯನ್ನು ಹೊರಗೆಡವಲಾಯಿತು. ಚಿನ್ನದ ನಾಣ್ಯಗಳು, ಗುಂಡುಗಳು, ಮೆಟಲ್ ಬಾಲ್ ಮತ್ತಿತರೆ ವಸ್ತುಗಳು ಪತ್ತೆಯಾದವು. ಅದಲ್ಲದೇ ಕೋಟೆಗೆ ನೀರಿನ ತೊಟ್ಟಿಯೊಂದಿಗೆ ಸುರಂಗ ಸಂಪರ್ಕವಿರುವುದು ಪತ್ತೆಯಾಯಿತು.
ಕೊನೆ ಸಿಡಿ:-

ಇಷ್ಟೆಲ್ಲಾ ಐತಿಹಾಸಿಕ ಮಹತ್ವವಿರುವ ಕೋಟೆಗೆ ಸರಕಾರ ಹಾಗು ಜನರು ಕೊಡುತ್ತಿರುವ ಮಹತ್ವ ಮಾತ್ರ ಶೋಚನೀಯವಾಗಿದೆ.
ಕೇವಲ ಒಬ್ಬನೇ ಕೆಲಸದಾಳು ಈ ಕೋಟೆ ನೋಡಿಕೊಳ್ಳುತ್ತಿದ್ದಾನೆ! ಕೋಟೆಯ ಪ್ರವೇಶ, ಉಸ್ತುವಾರಿ, ಪ್ರವಾಸಿಗರಿಂದ ಹಾನಿಯಾಗದಂತೆ ನೋಡಿಕೊಳ್ಳುವುದಲ್ಲದೇ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಈತನೊಬ್ಬನಿಂದ ಮಾತ್ರ ಅಸಾಧ್ಯ.

Tuesday, January 3, 2012

ಕತ್ತಲೆ ಮತ್ತು ಪ್ರೀತಿ




ನಡುಮನೆಯಲ್ಲಿ ಹಚ್ಚಿ ಹಣತೆ
ಕುಳಿತಿಹರು ಸುತ್ತ
ಕಟ್ಟಿಹರು ಮಾತಿನ ಬೆಟ್ಟ
ಸಿಕ್ಕಿತ್ತು ಎಲ್ಲರಿಗೂ ಸ್ವಲ್ಪ ಪುರುಸೊತ್ತು
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.

ಅಮ್ಮ ಓದುತಿಹಳು ಕವಿತೆ
ಮಕ್ಕಳಾಡುತಿಹರು ಹಿಡಿದು ಮಿಡತೆ
ಅಪ್ಪನೋ ಅಮ್ಮನ ಪಕ್ಕ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.

ಅಜ್ಜ ನೆನೆದನೊ ಆ ಘಳಿಗೆ
ಈಗ ಊಟವೂ ಪಾಳಿ ಪಾಳಿಗೆ
ಒಬ್ಬೊಬ್ಬರೂ ಒಂದು ಕಡೆಗೆ
ಸಾಗಿಹರು ತಮ್ಮ್ ತಮ್ಮ್ ವಿಶ್ವ ದೆಡೆಗೆ
ಈಗ ಸೇರಿಹರು ಒಟ್ಟಿಗೆ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.


ಅನುಕ್ಷಣವೂ ಹೋರಾಟ
ಏನೇನೊ ಪರದಾಟ
ಇಲ್ಲ ಮನಕೆ ಶಾಂತಿ
ತುಂಬಿಹದೋ ಬರಿ ಭ್ರಾಂತಿ
ದೀಪವಿಲ್ಲದೆ ಸಿಕ್ಕಿತ್ತು ಮನಕೆ ವಿಶ್ರಾಂತಿ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.




ಬನ್ನಿ ಎಲ್ಲಾ ಒಂದಾಗೋಣ
ಬೆಳಕ ಭ್ರಾಂತಿ ತೊರೆಯೋಣ
ಕತ್ತಲೆಯ  ಪ್ರೀತಿಸೋಣ
ವಿಷಯ ಪ್ರೀತಿ ಕಳಚೋಣ
ಮತ್ತೆ ಮನುಜರಾಗೋಣ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.
ಶ್ರೀಧರ್. ಎಸ್. ಸಿದ್ದಾಪುರ

Wednesday, December 14, 2011

ವಿಸ್ಮಯ ಜಗತ್ತು













ಈ ಜಗತ್ತಿನ ವಿಸ್ಮಯ ವಿಶಿಷ್ಟತೆ ಹೇಳುವುದು ಅತಿ ಕಠಿಣ ಸಂಗತಿ. ಜೀವ ಜಗತ್ತಿನ ಸರಪಣಿಯೂ ಅದ್ಭುತವೂ ಅನನ್ಯವಾದುದು. ಅದರಲ್ಲೂ ಮಲೆನಾಡು ಇತಂಹ ಹಲವು ಅನನ್ಯತೆಗಳ ತವರೂರು.ಬೆಳಕು ಸೂಸುವ ಅಣಬೆ, ಬಣ್ಣ ಬಣ್ಣದ ಕಪ್ಪೆಗಳು, ಹಸಿರು ಜೇಡಗಳು ಕಾಣಸಿಗುತ್ತದೆ. ಎಲ್ಲೊ ಹಾರಾಡುವ ಚಿಟ್ಟೆಗಳ ವಿಷಯ ತಿಳಿದು ಅಲ್ಲಿಗಾಗಮಿಸುವ ಸಾವಿರಾರು ಹಕ್ಕಿಗಳು.





ಯೂರೋಪಿನಿಂದ ವಲಸೆ ಬರುವ ಹಕ್ಕಿ ಎಂದರೆ ನೀವು ನಂಬುವಿರಾ
ಯುರೋಪಿನಿಂದ ಭಾರತಕ್ಕೆ ಬರುವ ಗುಬ್ಬಚ್ಚಿ ಗಾತ್ರದ, ಕುಂಡೆ ಕುಸ್ಕದಂತಹ ಹಕ್ಕಿಗಳು! ಕೇವಲ ಹಣ್ಣು ತಿನ್ನುವ ಹಕ್ಕಿಗಳು. ಜೋಡಿಯ
ಲ್ಲೇ ಇರುವ, ಬೇರಾದರೆ ಒಂಟಿಯಾಗಿ ಬದುಕುವ ಹಕ್ಕಿಗಳು, ಒಂದೆ ಎರಡೆ. ಇವಿಸ್ಟೆ ಅಲ್ಲ, ನಮ್ಮ ಅನುಭವಕ್ಕೆ ಬಾರದ ಎಷ್ಟೋ ಜೀವಿಗಳು ನಮ್ಮ ಸುತ್ತಮುತ್ತಲಿವೆ. ಇತಂಹ ಎಷ್ಟನ್ನು ನಾವು ನೋಡದೇ ಬಿಟ್ಟಿದ್ದೇವೋ ಏನೋ!


ಈ ಸಂದರ್ಭದಲ್ಲಿ ತೇಜಸ್ವಿಯವರ ಒಂದು ಮಾತು ನೆನಪಿಗೆ ಬರುತ್ತದೆ. ನೋಡುವವರಿಗಾಗೆ ಯಾವುದು ಕಾದು ಕುಳಿತಿರುವುದಿಲ್ಲ. ಅದನ್ನೆಲ್ಲಾ ನೋಡಲು ಎಲ್ಲಿಗಾಗಲೀ ಹೋಗುವ ಅಗತ್ಯವಿಲ್ಲ ನಾವು ಎಲ್ಲಿದ್ದೆವೋ ಅಲ್ಲೇ ಅತ್ತಿತ್ತ ಕಣ್ಣು ಬಿಟ್ಟು ನೋಡಿದರೆ ಸಾಕು.
ಪಶ್ಚಿಮ ಘಟ್ಟದ ತಪ್ಪಲಿನ ಒಂದು ಗ್ರಾಮಕ್ಕೆ ಹೋ
ಗಬೇಕಾಗಿ ಬಂದ ಸಂದರ್ಭದಲ್ಲಿ ಕಂಡು ಬಂದ ಹಕ್ಕಿ ಪ್ರಸಂಗವನ್ನು ನಿಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ.

ಎರೋಪ್ಲೇನ್ ಚಿಟ್ಟೆಗಳು ದೊಡ್ಡ ಗಾತ್ರದವು, ಸುಲಭವಾಗಿ ಯಾವ ಹಕ್ಕಿಗೂ ಆಹಾರವಾಗಲಾರದ ಕೀಟ. ಆದರೂ ಅತಂಹ ಕೀಟವನ್ನೂ ಹಿಡಿಯುವ ಪಕ್ಷಿಗಳಿವೆ! ತಮ್ಮ ಸಾಮಥ್ರ್ಯದ ಹಲವು ಪಟ್ಟು ದೊಡ್ಡದಾದ ಇವನ್ನು ಹಿಡಿಯಲು ಮಲೆನಾಡಿನಲ್ಲಿ ಗಿಣಿಗಾರಲು ಎಂಬ ವಿಶಿಷ್ಟ ಹಕ್ಕಿಗಳು ಕಾದು ಕುಳಿತಿರುತ್ತದೆ. ಬೇಲಿಗಳ ಮೇಲೆ, ವಿದ್ಯುತ್
ತಂತಿಗಳ ಮೇಲೆ , ಕುರುಚಲು ಕಾಡುಗಳಲ್ಲಿ, ಮಳೆಗಾಲ ಮುಗಿದ ಕೂಡಲೆ ಹುಟ್ಟುವ ಎರೋಪ್ಲೇನ್ ಚಿಟ್ಟೆಗಳುನ್ನು ಭಕ್ಷಣೆ ಮಾಡುತ್ತಿರುತ್ತದೆ. ಎರೋಪ್ಲೇನ್ ಚಿಟ್ಟೆಗಳು ಹುಟ್ಟುವ ಮೊದಲು ಅಜ್ಞಾತವಾಗಿರುವ ಹುಟ್ಟಿದ ಕೂಡಲೆ ದಿಗ್ಗನೆ ಮಲೆನಾಡಿನಾದ್ಯಂತ ಕಾಣಿಸಿಕೊಳ್ಳುತ್ತವೆ.
ಅತ್ಯಂತ ವಿಶಿಷ್ಟ ಬಣ್ಣಗಳಲ್ಲಿ ಕಂಡುಬರುವ ಅತಿ ಸುಂದರ ಹಕ್ಕಿ. ಕೆಂಪು ಕುತ್ತಿಗೆಯ ನೀಲಿ ಬಾಲದ, ನೀಲಿ ಕುತ್ತಿಗೆಯ ಹಸಿರು ಬಾಲದ ಚಿಕ್ಕ ಗಾತ್ರದ, ನೀಲಿ ಗಡ್ಡದಂತಿರುವ ಕುತ್ತಿಗೆಯ ದೊಡ್ಡ ಗಾತ್ರದ ಮೊತ್ತೊಂದು ಹಕ್ಕಿ
ಸಹ ಕಂಡುಬರುತ್ತದೆ.
ಗುಳಕಾಯಿಸಲೆಂದು ಎರೋಪ್ಲೇನ್ ಚಿಟ್ಟೆಯೊಂದನ್ನು ಗಿಣಿಗಾರಲು ಹೆಕ್ಕಿಕೊಂಡು ಬಂತು. ಸರಿ ನಿಧಾನಕ್ಕೆ ತಿನ್ನೊಣವೆಂದು ಕೊಂಬೆಯ ಮೇಲೆ ಕೂತಿತು. ಕೊಂಬೆಗೆ ಎರೋಪ್ಲೇನ್ ಚಿಟ್ಟೆಯನ್ನು ತಬಲ ಬಡಿಯುವಂತೆ ಬಡಿಯಲಾರಂಬಿಸಿತು. ಅಷ್ಟರಲ್ಲಿಯೇ ಎರೋಪ್ಲೇನ್ ಚಿಟ್ಟೆ ತಪ್ಪಿಸಿಕೊಂಡಿತು. ಆದರೂ ಚಲ ಬಿಡದೆ ಮತ್ತೊಮ್ಮೆ ಹಿಡಿಯಿತು. ಈ ಬಾರಿ ಮಾತ್ರ ಚನ್ನಾಗಿಯೇ
ತಪ್ಪಿ ಹೋಯಿತಲ್ಲೆ....

ಬಡಿದು ಸಾಯಿಸಿ ತಿಂದಿತು. ಗುಳಕಾಯಿಸುವಾಗ ಅದರ ಗಂಟಲನ್ನು ಗಮನಿಸಿ. ಅದರಷ್ಟೇ ದೊಡ್ಡದಾಗಿದೆ.

Bee eater.



ಅಂತು ತಿಂದೇ ಬಿಟ್ಟೆ.










ಶ್ರೀಧರ್. ಎಸ್. ಸಿದ್ಧಾಪುರ.

ವಾರೆ ನೋಟ

ಪ್ರವಾಸಗಳೆಂಬ ಕಿರುದಾರಿಯಲಿ

ಬೇಕಲ್‌ನ ದಾರಿಯಲ್ಲಿ ( Bekal Fort) ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದ...