Sunday, June 30, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...4

ಇಲ್ಲೂ ಇದೆ ನೋಡಿ ಒಂದ್ ಶಾಲೆ:- 
10,200 ಅಡಿ ಎತ್ತರ. 3,000 ಜನಸಂಖ್ಯೆಯ ಈ ಹಳ್ಳಿಯಿರುವ ಪರ್ವತದ ತುತ್ತ ತುದಿಯಲ್ಲಿ ಶಾಲೆ ಇದೆ ಎನ್ನುವುದೊಂದು ವಿಶೇಷ. ಶಾಲೆಯನ್ನು ಕಡಿದಾದ ಪರ್ವತಗಳು ಸುತ್ತುವರಿದಿದೆ. ಈ ಶಾಲೆ ಕೇವಲ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.  
ಮಕ್ಕಳ ಸಂಖ್ಯೆ 300ಕ್ಕೂ ಅಧಿಕ. ಪ್ರತಿದಿನವು ಇಬ್ಬರು ಶಿಕ್ಷಕರು 2.5 ಗಂಟೆಗಳ ಪರ್ವತಗಳ ಸೆರಗನ್ನು ಕಡಿದಾದ ಕಡೆಗಳಲ್ಲಿ ಹತ್ತಿ ಬರುತ್ತಾರೆನ್ನುವುದು ವಿಶೇಷ. ನಾವು ಕೇವಲ 1 ಕಿ.ಮಿ. ನಡಿಗೆಗೆ ಹೆದರುವಾಗ ಈ ಶಿಕ್ಷಕರು ವರ್ಷವಿಡಿ ನಾಜೂಕಾದ ಪರ್ವತ ಎರುತ್ತಾ, ಮಳೆಗಾಳಿಗೆ ಲೆಕ್ಕಿಸದೆ ಪಾಠ ಪ್ರವಚನ ಮಾಡುವುದನ್ನು ನೋಡುವುದೊಂದು ರೋಮಾಂಚನ. 
ನಾವು ಪರ್ವತವೇರುವ ಸಂದರ್ಭ ಅಲ್ಲಿನ ಶಿಕ್ಷಕರನ್ನು ನೋಡಿ ಮಾತನಾಡಿಸಿದೆವು. ಸಂಜೆಯ ವೇಳೆಗೂ ಅವರು ಲವಲವಿಕೆಯಿಂದ ಮಾತನಾಡಿಸಿ ಉಪಚರಿಸಿದರು. ಸರಳ ಕಟ್ಟಡದ ಈ ಶಾಲೆ ಮನ ಸೆಳೆಯಿತು. ಶಾಲೆ ಬಿಟ್ಟ ಕೂಡಲೆ ಕೆಲವು ಮಕ್ಕಳು ಮರದ ಮೇಲೆ ಹತ್ತಿ ನಮಗೆ ಸರ್ಕಸ್ ತೋರಿಸತೊಡಗಿದರು. ನಾವು ಅವರ ಕೆಲವು ಪೋಟೊ ತೆಗೆದುಕೊಂಡೆವು ಅವರೆಲ್ಲಾ ನಾಚಿಕೆಯಿಂದ ಮುಖ ತಪ್ಪಿಸಿಕೊಂಡರು. ನಮಗೋ ಮಲಾನ ಸಂದಶರ್ಿಸಿದ ಖುಷಿಯಲ್ಲಿ ತೇಲುತ್ತಾ ಸಾಗಿದೆವು. ಸರಿಯಾಗಿ ಪೋಟೊ ತೆಗೆಯಲಾಗಲಿಲ್ಲ. ಮಲಾನಕ್ಕೆ ನಮಗೆ ಮೊದಲು ಸ್ವಾಗತಿದ್ದೆ ಈ ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರು ಎನ್ನುವುದು ವಿಶೇಷ. ದಾರಿ ತಪ್ಪಿತೆನ್ನುವಾಗ ಸಿಕ್ಕದ ಖುಷಿಯಲ್ಲಿದ್ದೆವು.



 ಇಲ್ಲಿಂದ ಎಲ್ಲಿಗೆ:-

ಇಲ್ಲಿಂದ ಅನೇಕ ಸುಂದರವಾದ ಸ್ಥಳಗಳನ್ನು ನೋಡಬಹುದು. ಮಣಿಕರಣ್, ನಗ್ಗರ್ನ ರೋರಿಚ್ ಮ್ಯೂಸಿಯಂ, ಬಿಜಲಿ ಮಹಾದೇವ, ಮಹಾದೇವ ತೀರ್ಥ ಮುಂತಾದ ಅತಿ ಹತ್ತಿರದ ಸ್ಥಳಗಳಿವೆ. ಅಲ್ಲದೇ ಮನಾಲಿ, ಹಿಡಿಂಬಾ ದೇವಸ್ಥಾನ, ಮನು ದೇವಸ್ಥಾನ, ರೋಥಾಂಗ್ ಪಾಸ್, ಬಿಯಾಸ್ ಕುಂಡ್ ಮುಂತಾದ ಪಟ್ಟಿ ಮಾಡಲಾಗದಷ್ಟು ಅನೇಕ ಸ್ಥಳಗಳಿವೆ. ಇಲ್ಲಿಂದ ಮಲಾನ ಕಣಿವೆಯನ್ನು ನೋಡಬಹುದು. 
ಚಂದ್ರಕಣಿ ಪಾಸ್ ಎನ್ನುವ ಸುಂದರ ಸ್ಥಳ ನೋಡಲು ಇಲ್ಲಿಂದ ಕೇವಲ 4 ಗಂಟೆಯ ದಾರಿ. ಚಂದ್ರಕಣಿ ಚಾರಣವನ್ನು ಸಹ ಇಲ್ಲಿಂದಲೂ ಕೈಗೊಳ್ಳಬಹುದು. ಅದ್ಭುತವಾದ ಪಾರ್ವತಿ ಕಣಿವೆ, ಹಿಮಾಲಯದ ವಿವಿಧ ಬೆಟ್ಟಗಳ ದರ್ಶನಮಾಡಲು ಚಂದ್ರಕಣಿ ಪಾಸ್ ಚಾರಣ ಮಾಡಬಹುದು.
(ಮುಂದುವರಿಯುವುದು .... )

Thursday, June 6, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...3

ಹಾಳುಗೆಡವಿದ ಹೈಡೋ ಪ್ರಾಜೆಕ್ಟ್
ನಿನಾದದ ಮಲಾನಾ ನದಿ. 
ಮಲಾನದ ಜನರು  ತಮ್ಮಷ್ಟಕ್ಕೆ ತಾವು ಆರಾಮವಾಗಿದ್ದರು. ಅವರದ್ದೇ ಕೃಷಿ, ಹೈನುಗಾರಿಕೆ  ಮತ್ತಿತರೇ ಉದ್ಯೋಗದಲ್ಲಿ ಅವರದೇ ಆಟಗಳಲ್ಲಿ  ಮಜವಾಗಿದ್ದರು. ಆದರೆ ದಶಕದಿಂದೀಚಗೆ ಅಲ್ಲೊಂದು ಹೈಡ್ರೋಪ್ರಾಜೆಕ್ಟ್ ಕಾಲಿಟ್ಟಿತು ನೋಡಿ ಅಲ್ಲಿಂದ ಮಲಾನದ ನಕ್ಷೆಯೇ ಬದಲಾಯಿತು. ಮಲಾನ ನದಿಯಲ್ಲಿ ಕಷ್ಟ ಪಟ್ಟು ದಾಟಿ ಜನರು ಅಲ್ಲಿಗೆ ಹೋಗ ಬೇಕಾಗಿತ್ತು. ಹಾಗಾಗಿ ಜನರಿಗೆ ಹೊರಗಿನ ಸಂಪರ್ಕವೇ ಇರಲಿಲ್ಲ, ನೋಡ ಬೇಕೆಂದರೆ ಕನಿಷ್ಟ 20 ಕಿ.ಮೀ ನಡೆಯಬೇಕಿತ್ತು. ಅಲ್ಲಿನ ಜನರ ಮುಗ್ದತೆ ಹಾಗೆ ಉಳಿಯುತ್ತಿತ್ತು. ಹಿಂದೆ ಹೋದವರು ಅಲ್ಲಿನ ವರ್ಣನೆ ಕೇಳಿ ಹೋದರೆ ಬ್ರಮನಿರಸನವಾಗುದರಲ್ಲಿ ಆಶ್ಚರ್ಯವಿಲ್ಲಾ. 
     


ಹೈಡ್ರೋ ಪ್ರಾಜೆಕ್ಟ್ ಗೆ ಮಾಡಿದ ರಸ್ತೆಯ ವಿಹಂಗಮ ನೋಟ. 
ಅಂಥ ಸೌಂದರ್ಯದಿಂದ ಕೂಡಿದ ಮಲಾನ ಈಗ ಮಲೀನವೆನ್ನುವಷ್ಟು ಮಲೀನವಾಗಿದೆ. ಶುದ್ಧ ಜಲಮೂಲಗಳು ಸಹ ಹಾಳಾಗಿವೆ ಎನ್ನುವಾಗ ವಿಷಾದವಾಗುತ್ತದೆ. ಮಲಾನದಲ್ಲಿ ಈಗ ಪ್ಲಾಸ್ಟಿಕ್ಮಯ ವಾತವಾರಣ. ಅಲ್ಲಲ್ಲಿ ಲೇಸ್ ಪ್ಯಾಕೆಟ್ಟುಗಳನ್ನು, ಚಾಕಲೇಟ್, ಐಸ್ಕ್ರೀಮ್ ತಟ್ಟೆಗಳು ಕಾಣಸಿಗುತ್ತವೆ. ಐಸ್ಕ್ರೀಮ್ ಮಾರುವವರು 20-30 ಕಿ.ಮೀ. ನಿಂದಾಚೆಯಿಂದ ತಂದು ಇಲ್ಲಿ ಮಾರುತ್ತಾರೆ! ಮಾರುವವರು ಮಕ್ಕಳು ನಡೆದೇ ಬರುತ್ತಾರೆ!
ಆದಷ್ಟು ಇಲ್ಲಿನ ಪರಿಸರವನ್ನಾದರೂ ರಕ್ಷಿಸುವುದು ಅಗತ್ಯ.

ಧಮ್ ಹೊಡಿ ಬೇಕೆ?
ಇಲ್ಲಿನ ಇನ್ನೊಂದು ವಿಶೇಷತೆ, ನಮ್ಮ ಕಾನೂನುಗಳು ಇವರಿಗೆ ಲಾಗೂ ಆಗದೇ ಇರುವುದು. ಇಲ್ಲಿ ಪೋಲಿಸ್ ಹಸ್ತಕ್ಷೇಪವಾಗಲೀ, ರಾಜಕೀಯ ಹಸ್ತಕ್ಷೇಪ ಇಲ್ಲದೇ ತಮ್ಮದೇ ವಿಶೇಷವಾದ ಸರಕಾರ ಸ್ಥಾಪಿಸಿಕೊಂಡು ಆಡಳಿತ ನಡೆಸುತ್ತಾರೆ. ಎಲ್ಲದಕ್ಕೂ ಗ್ರಾಮದ 'ಮುಖ್ಯ' ನೋಡಿಕೊಳ್ಳುತ್ತಾನೆ. ಎಲ್ಲದೂ ಅವನ ಮೇಲುಸ್ಥುವಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿನ ಜನರು ಸ್ವತಂತ್ರರು. ಇವರ ಅವಶ್ಯಕತೆಗಳು ತುಂಬಾ ಕಡಿಮೆ ಹಾಗಾಗಿ ನಿತ್ಯ ಸಂತೋಷಿಗಳು. ಯಾಕೊ ಏನೋ ಸರಕಾರದ ಹಸ್ತಕ್ಷೇಪ ಇಲ್ಲಿ ಬಹಳ ಕಡಿಮೆ. ಹಾಗಾಗಿ ಇವರು ಅಮಲು ಪದಾರ್ಥ ಬೆಳೆಯುತ್ತಾರೆ. 
ಅಲ್ಲಿನ ಕುರಿ ಕಾಯುವ ಅಜ್ಜನೊಂದಿಗೆ. 



    ನಾವಿಲ್ಲಿಗೆ ಹೋದಾಗ ಅಲ್ಲಿನ ಕುರಿಕಾಯುವವ ನಿಮಗೆ ಜರಸ್ ಬೇಕೆ ಎಂದು ಕೇಳಿದ. ಅದೂ ಯಾವುದೇ ಆತಂಕವಿಲ್ಲದೇ! ನಾವಂತೂ ದಂಗು ಬಡಿದು ಕುಳಿತೆವು, ನಿರಾಕರಿಸಿದೆವು. ಇಲ್ಲಿ ಜರಸ್ ಎನ್ನುವುದು ಅತಿ ಸಾಮಾನ್ಯವಾದ ಸಂಗತಿ! ಶಾಲಾ ಮಸ್ತರರನ್ನು ಭೇಟಿಯಾದೆವು! ಇಲ್ಲಿಯೂ ಒಬ್ಬ ಶಾಲಾ ಮಾಸ್ತರರೆ ಎಂದು ಕೇಳಬೇಡಿ. ಇಲ್ಲಿಯೂ ಒಂದು ಶಾಲೆ ಇದೆ ಅದರ ಬಗ್ಗೆ ಟಿಣಜಡಿಣಟಿರ ಆದ ವಿಷಯ ಮುಂದಿನ ಬಾರಿ ತಿಳಿಸುವೆ. ಅಲ್ಲಿಯವರೆಗೆ ವಿರಾಮ...



ಮಲಾನಾದ ಹಳೆ ಕಟ್ಟಡ ಸಣ್ಣ ದೇವರ ಗುಡಿ . 

Saturday, June 1, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...2

ಚಾರಣದ ಅನುಭವ

ಚಾರಣದ ನಡುವೆ 
ಹಿಮಾಲಯವೆಂದರೆ ಮೊದಲಿಗೆ ನೆನಪಿಗೆ ಬರುವುದು ಹಿಮ ಮತ್ತು ಇಲ್ಲಿನ ಚಾರಣದ ಕ್ಲಿಷ್ಟತೆ. ಸಾದಾರಣ ದೇಹ ಸ್ಥಿತಿಯವರಿಗೆ ಅಸಾಧ್ಯವೆಂಬ ಬಾವ. ಅಂತಹ ಆತಂಕಗಳೊಂದಿಗೆ ಹಿಮಾಲಯ ತಪ್ಪಲಿನ ಮಲಾನದ ಬಳಿಯ ಪರ್ವತವೇರಲು ತೀಮರ್ಾಸಿದೆವು. ದೂರದಿಂದ ನೋಡಿದರಂತೂ ಅಸಾಧಾರಣ ಗಿರಿ ಶ್ರೇಣಿಗಳಂತೆ ಅದು ಭಾಸವಾಗುತ್ತದೆ. 








10,200 ಅಡಿಗಳ ಎತ್ತರ. ಕಡಿದಾದ ಶಿಖರಗಳು. ಆಮ್ಲಜನಕದ ಕೊರತೆ. ಪೈನ್ಮರಗಳ ಎಲೆಗಳಿಂದ ಇಚಿಂಚಿಗೂ ಜಾರುವ ಕಲ್ಲುಗಳು. ಎರಡಿಂಚೂ ವ್ಯತ್ಯಾಸವಾದರೂ ಕಣಿವೆ ಪಾಲಾಗುವ ಭೀತಿ ಎಂತಹ ಗಂಡೆದೆಯನ್ನು ನಡುಗಿಸಿ ಬಿಡುವುದು. ಅನಿರೀಕ್ಷಿತವಾಗಿ ಬೀಳುವ ಮಳೆ, ಚಾರಣಿಗರನ್ನು ಮತ್ತೂ ಹೈರಾಣ ಮಾಡಿಬಿಡುತ್ತದೆ. ಸುಂದರ ಪ್ರಕೃತಿಯೂ ಭೀಕರವಾಗಿ ಕಾಣಿಸುತ್ತದೆ.








ಬೆಟ್ಟದ ಮೇಲಿಂದ ಕಾಣುವ ಹಿಮ ಬೆಟ್ಟಗಳ ಮನ್ಮಯ ನೋಟ 
ಬುಂತರ್ ಎಂಬ ಊರಿನಿಂದ ನಾವಿಲ್ಲಿಗೆ ಕಾಲಿಟ್ಟಾಗ ಸುಮಾರು ಒಂದು ಗಂಟೆಯ ಸಮಯ. ಗಿರಿಯ ಸಮೀಪದ ವರೆಗೆ ವಾಹನ ಸೌಲಭ್ಯವಿದೆ. ಅಲ್ಲಿಂದೇನಿದ್ದರು ನಿಮ್ಮ ಕಾಲುಗಳು ನಿಮ್ಮ ಸಹಾಯಕ್ಕೆ. ನಿಧಾನಕ್ಕೆ ಮೋಡವೂ ಆವರಿಸುತ್ತಾ ಇರುವ ಸಮಯವದು. ಅಲ್ಲಿನ ಹತ್ತಿರದ ಹಳ್ಳಿಯವನೊಬ್ಬನಲ್ಲಿ ಮಲಾನಕ್ಕೆ ದಾರಿ ಕೇಳಿದೆವು. ಆತ ನಮಗೆ ಹೇಳಿದ ಪ್ರಕಾರ ನಾವಿರುವ ಸ್ಥಳದಿಂದ ಸುಮಾರು ಒಂದು ಗಂಟೆಯ ದಾರಿ. 





ಗೆಳೆಯ ನಾಗರಾಜನ ಫೋಟೋ ಸೆಶನ್ 

ಸರಿ ಕೇವಲ ಒಂದು ಗಂಟೆ ಎಂದು ಆತ ಹೇಳಿದ ದಾರಿಯಲ್ಲಿ ನಡೆಯ ತೊಡಗಿದೆವು. ನೆಡೆದು ನೆಡೆದು 3 ಗಂಟೆಯ ದಾರಿ ಸವೆಸಿದರೂ ಮಲಾನ ಹಳ್ಳಿ ಸಿಗಲಿಲ್ಲ! ಯಾವ ಒಂದು ಗಂಟೆ ಇದು ಎಂದು ಕೊಂಡೆವು. ನಾಳೆ ಮಧ್ಯಾಹ್ನ ಒಂದು ಗಂಟೆಯೆ? ಗೊಂದಲಕ್ಕೆ ಬಿದ್ದೆವು. ನಾವು ಖಂಡಿತವಾಗಿ ದಾರಿ ತಪ್ಪಿದವೆಂದು ತೀಮರ್ಾನಿಸಿದೆವು. ಏನಾದರಾಗಲಿ ಈ ಬೆಟ್ಟ ಹತ್ತಿಯೇ ನೋಡೊಣವೆಂದು ಹತ್ತ ತೊಡಗಿದೆವು. ಕಡಿದಾದ ದಾರಿ, ಆಮ್ಲಜನಕದ ಕೊರತೆಯಿಂದಾಗಿ ಅಲ್ಲಲ್ಲಿ ಕುಳಿತುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿದೆವು.

ಪರ್ವತದ ಇಳಿಜಾರಿನಲ್ಲಿ 

 ಕೇವಲ ಹತ್ತಿ ಬಟ್ಟೆ ಮತ್ತು ಬಮರ್ುಡದಲ್ಲಿ ಹತ್ತಿದ ನನಗೆ ಮಳೆ ಬಂದಿದ್ದರೆ 0 ಡಿಗ್ರಿಗೆ ಜಾರುವ ಉಷ್ಣಾಂಶವು ಪಚೀತಿಯನ್ನುಂಟುಮಾಡುತ್ತಿತ್ತು. ಅಲ್ಲದೇ ಮಳೆ ಬಂದರೆ ಮೋಡದಿಂದ ದಾರಿ ಕಾಣಿಸದೆ ದಾರಿ ತಪ್ಪುವ ಅವಕಾಶ ಬಹಳವಾಗಿತ್ತು. ದಾರಿ ತಪ್ಪಿದ ಹಿಮಾಲಯದ ಚಾರಣಿಗರು ಅಲ್ಲಿಯೇ ಲೀನವಾದ್ದದೂ ಇದೆ. ಹಾಗಾಗಿ ಜಾಗ್ರತೆಯಿಂದ ಒಟ್ಟಿಗೆ ಸಾಗಿದೆವು. ಅಂತೂ ಪರ್ವತದ ತುತ್ತ ತುದಿಯ ತನಕವೂ ಮೋಡಗಳು ಮಾತ್ರ ನಮ್ಮನ್ನು ಸ್ವಾಗತಿಸಿದವು. 





ದೂರದಲ್ಲಿನ ಕೆಲವು ಮನೆಗಳು 




ಪರ್ವತದ ತುದಿಗೇರಿದಾಗ ಹಲವು ಸಂದೇಹಗಳು ಉಂಟಾದವು. ಅಲ್ಲಿ ಯಾವುದೇ ಮನೆಗಳು ಇರದೇ ಇದ್ದದ್ದು, ದೂರದಲ್ಲಿ ಕೆಲವು ಮನೆಗಳು ಕಾಣಸಿಕ್ಕವು. ಅದೇ ಮಲಾನವಿರಬಹುದೇ ಎಂದುಕೊಂಡೆವು. ಅವು ಇರುವ ದೂರವನ್ನು ನೋಡಿದರೆ ಅಲ್ಲಿಗೆ ತಲುಪಲು ನಮಗೆ ಎನಿಲ್ಲವೆಂದರೂ ಇನ್ನರ್ಧ ದಿನ ಬೇಕಾಗಿತ್ತು. ನಿರಾಶೆಯ ಗಡಲಲ್ಲಿ ಮುಳುಗಿರುವಾಗ ಅಲ್ಲಿಗೊಬ್ಬ ಕುರಿ ಕಾಯುವವ ಕಾಣಿಸಿದ. 


ಆತನನ್ನು ಮಾತನಾಡಿಸಿದೆವು, ಮಲಾನಕ್ಕೆ ಹೋಗುವುದು ಹೇಗೆಂದು ಕೇಳಿದೆವು. ಇಲ್ಲಿಂದ ಕೇವಲ ಐದು ನಿಮಿಷದ ದಾರಿ ಎಂದ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲಿ. ಏನೋ ಸಾಧಿಸಿದ ತೃಪ್ತಿ. ಸರಿ ಎಂದು ಅವನಿಗೆ ವಂದಿಸಿ, ಸ್ವಲ್ಪ ಒಣ ದ್ರಾಕ್ಷಿಯನ್ನು ಕೊಟ್ಟೆವು. ಆತ ಸಿಗರೇಟ್ ಇಲ್ಲವೇ? ಎಂದ. ಮುಂದಿನ ಬಾರಿ ಬರುವಾಗ ನಿಮಗೆ ಖಂಡಿತಾ ಸಿಗರೇಟ್ ತರುತ್ತೇವೆಂದು ಹೇಳಿ ಮುಂದುವರಿದೆವು. ಹಿಂದಿನ ಹಳ್ಳಿಗ ಕೇವಲ ಒಂದು ಗಂಟೆಯಲ್ಲಿ ಏರಬಹುದೆಂದಿದ್ದ. ನಮಗೆ 3 ಗಂಟೆ ಹಿಡಿಯಿತು. ಇತನ 5 ನಿಮಿಷ ನಮಗೆಷ್ಟು ಹೊತ್ತೊ ಎಂದು ಮನದಲ್ಲೇ ಲೆಕ್ಕಚಾರ ಹಾಕುತ್ತಾ ಸಾಗಿದೆವು.

ಅಂತೂ ಬಂತು ಮಲಾನ
ಪರ್ವತ ಏರಿ ಸ್ವಲ್ಪವೇ ಇಳಿದಾಗ ಅಚ್ಚರಿ ಕಾದಿತ್ತು. ನಿಜವಾಗಿ ನಾವು ಮಲಾನದ ಹಾದಿಯಲ್ಲಿದ್ದೆವು ಎಂಬ ಸಂತೋಷವೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ನನ್ನ ಗೆಳೆಯ ನಾಗರಾಜನಂತು ಚಿಗರೆಯಂತೆ ಜಿಗಿಯುತ್ತಾ ಆ ವಿಶಿಷ್ಟ ಜನರನ್ನು ಭೇಟಿಯಾಗಲು ಓಡತೊಡಗಿದ! ಈ ವಿಶಿಷ್ಟಾನುಭೂತಿಯನ್ನು ಅನುಭವಿಸಲು ಕಾತರರಾಗಿ ಹಳ್ಳಿ ಕಡೆಗೆ ನಡೆದೆವು.
ಮಲಾನ ಕಣಿವೆಯ  ಒಂಟ ಮನೆ 
ಹಲವು ವಿಶಿಷ್ಟತೆಗೆ ಹೆಸರು ಮಾಡಿದ ಈ ಹಳ್ಳಿ ನನ್ನಲ್ಲಿ ಸಂಚಲನೆಯನ್ನೇ ಉಂಟುಮಾಡಿತು. ಅದನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳವೆ.

ಪರ್ವತ ಸೆರಗಿನಲ್ಲಿರುವ ಮೋಹಕ ಮಲಾನ ಹಳ್ಳಿ 

















ಮುಂದುವರಿಯುವುದು......

Tuesday, May 28, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ..

ಹಿಮಚ್ಚಾದಿತ ಬೆಟ್ಟಗಳು 
ಹೀಗೊಂದು ಸ್ಥಳವಿದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ. ಸಮುದ್ರ ಮಟ್ಟದಿಂದ 10,200 ಅಡಿಗಳಷ್ಟು ಎತ್ತರ. ಪರ್ವತದ 

ಮಲಾನ ಹಳ್ಳಿ ಎದುರು 
ಸೆರಗಿನಲ್ಲಿ,
ಇಳಿಜಾರಿನಲ್ಲಿ ಮನೆಗಳು. ಮನೆಯ ಚಾವಡಿಯಲ್ಲಿ ಕೂತು ಹಿಮಚ್ಚಾದಿತ ಪರ್ವತ ನೋಡುತ ಚಹ ಆಸ್ವಾದಿಸುವ ಅವಕಾಶ. ಕೆಳಗೆ ಬೋರ್ಗರೆಯುವ ಮಲಾನ ನದಿ. ಸುತ್ತಲೂ ಪರ್ವತಗಳ ಚಾದರ. ತಾಯಿ ತನ್ನ ಮಗುವನ್ನು ವೃಕ್ಷಸ್ಥಳದಲ್ಲಿ ಅಡಗಿಸಿಡುವಂತೆ ಮಲಾನ ಹಳ್ಳಿಯನ್ನು ಪರ್ವತಗಳು ಅಡಗಿಸಿಟ್ಟಿವೆ. 
ಬೆಟ್ಟ ಏರುವ ಕಡಿದಾದ ದಾರಿ 


ಮನೆ ಎದುರಿನ ಸುಂದರ ನೋಟಗಳು 
ಇಲ್ಲಿ ಮೌನವೇ ಹಾಸಿ ಹೊದ್ದು ಮಲಗಿದೆ. ಕಣಿವೆಗಳ ಮಹೋನ್ನತ ನೋಟ ಎಂತಹವರನ್ನು ಬೆರಗುಗೊಳಿಸುತ್ತವೆ. ಸಂಜೆ ನಾಲ್ಕಕ್ಕೇ ಬೀಸುವ ಚಳಿಗಾಳಿ. ಎಷ್ಟು ನೋಡಿದರೂ ಮತ್ತೂ ನೋಡಬೇಕೆನಿಸುವ ಗಿರಿ ಶಿಖರಗಳು. ಹಿಮದಿಂದ ತುಂಬಿ ತುಳುಕುವ ಚಂದ್ರಕಣಿಯ ನೋಟ. ಎಂತವರನ್ನು ಮಂತ್ರ ಮುಗ್ದರನ್ನಾಗಿಸುವ ತಾಣ. ಅದುವೇ ಮಲಾನ ಎನ್ನುವ ಮುಗ್ದ ಹಳ್ಳಿ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿದೆ.

ಇತಿಹಾಸ

ಬೀದಿ ಬದಿಯಿಂದ ಕಾಣುವ ದೃಶ್ಯ 
ಹಿಮಾಚಲದ ಉಳಿದ ಹಳ್ಳಿಗಿಂತ ಭಿನ್ನವಾದುದು ಏನಿದೆ ಇಲ್ಲಿ. 10,200 ಅಡಿಗಳನ್ನೇರಲು ಪ್ರೇರೆಪಣೆ ಏನು. ಎನ್ನುವುದೇ ಅತಿ ಮುಖ್ಯವಾದುದು. ಇಲ್ಲಿ ನೀವು ಎನ್ನನ್ನೂ ಮುಟ್ಟುವಂತಿಲ್ಲ. ಅಂದರೆ ಮನೆ ಮುಟ್ಟಿದರೆ 1000-2000 ಸಾವಿರ ದಂಡ. ದೇವಸ್ಥಾನ ಮುಟ್ಟಿದರೂ ದಂಡ. ದೂರದಿಂದ ನೋಡಬಹುದು. ಜೂಮ್ ಕ್ಯಾಮರದಿಂದ ಕ್ಲಿಕಿಸಬಹುದು. ಅಷ್ಟೇ. ಅವಿವಾಹಿತನೊಬ್ಬ ಸ್ತ್ರೀಯನ್ನು ಮುಟ್ಟಿದರೆ ಮದುವೆಯಾಗಬೇಕು, ಇಲ್ಲಾ ದೊಡ್ಡ ಮಟ್ಟದ ದಂಡ ತೆರಬೇಕು! ಇಲ್ಲಿನ ಹುಡುಗಿಯರು ಚೆಂದವೋ ಚೆಂದ. ಮುಟ್ಟದೇ  ಹಿಂದಿರುಗಲಾರದಷ್ಟು ! ಹಿಮಾಚಲದ ಸೇಬಿನಂತೆ. ಆದರೂ ಇಂತಹ ಸ್ಥಳಕ್ಕೇಕೆ ಜನ ಬರುತ್ತಾರೆಂದರೆ ಈ ಜನಕ್ಕಿರುವ ಇತಿಹಾಸ ಮತ್ತು ಇಲ್ಲಿನವರು ರೂಪಿಸಿಕೊಂಡ ವಿಶಿಷ್ಟ ಸಂಸ್ಕೃತಿ. ಇವರ ಸಂಸ್ಕ್ರತಿ ಅರಿಯಲು ತುಂಬಾ ಹಿಂದಕ್ಕೆ ನಾವು ಹೋಗಬೇಕು. ಗ್ರೀಕ್ರ ಕಾಲಕ್ಕೆ. 
ಆಟದಲ್ಲಿ ನಿರತರಾದ ಜನರು. 
ಮಲಾನದ ಸುಂದರ ಹುಡುಗಿಯರು 
ಗ್ರೀಕ್ ದೊರೆ ಭಾರತವನ್ನು ಗೆದ್ದು ಇದೇ ಪ್ರದೇಶದ ಮೂಲಕ ಹಾದು ಹೋದ ಸಂದರ್ಭದಲ್ಲಿ ಆತನ ಸೈನಿಕರು ಕೆಲವರು ವಾಪಾಸು ಹೋಗುವ ಸಮಯದಲ್ಲಿ ದಣಿವಿನಿಂದಾಗಿ ಇಲ್ಲೇ ತಂಗಿದರು. ಈ ಗ್ರೀಕ್ ಜನಾಂಗವೇ ಇಲ್ಲಿನ ಸ್ಥಳಿಯರೊಂದಿಗೆ ಬೆರೆತು ಹೊಸದೊಂದು ಸಂಸ್ಕೃತಿಯನ್ನು ರೂಪಿಸಿದೆ. ಹೊರ ಜಗತ್ತಿನೊಂದಿಗೆ ಈ ಎರಡು ಸಹಸ್ರಮಾನಗಳ ಕಾಲ ದೂರವಿದ್ದ ಇವರು ಈಗಷ್ಟೇ ಸಂಪರ್ಕಕ್ಕೆ ಬರುತ್ತಿದ್ದಾರೆ! ಗ್ರೀಕ್ರೊಂದಿಗೆ ಬೆರೆತ ಇಲ್ಲಿನವರ ಬಣ್ಣವೂ ಗ್ರೀಕ್ರಂತಿದೆ. ಗ್ರೀಕ್ರ ಚೂಪಾದ ಗದ್ದ ಮತ್ತು ಸೊಂಡರು ಮೂಗು ಇಲ್ಲಿನವರಲ್ಲಿ ಸಾಮಾನ್ಯ. ಇಲ್ಲಿನವರ ಕೆನ್ನೆಗಳು ಸ್ನೋ ಮೆತ್ತಿದಂತೆ, ಸೇಬಿನಂತೆ ಕೆಂಪಾಗಿದೆ. ಇಷ್ಟಾದರೂ ಜನರಲ್ಲಿ ಹೆಮ್ಮೆಯಾಗಲಿ ಹಮ್ಮು ಬಿಮ್ಮುಗಳಿಲ್ಲದಿರುವುದು ವಿಶೇಷವಾದ ಸಂಗತಿ. 
ಹೀಗೆ ಗ್ರೀಕ್ ಜನರು ಇಲ್ಲಿನವರೊಂದಿಗೆ ಕ್ರಿ. ಪೂ. ದಲ್ಲಿ ಬರೆತು ಇಂದಿಗೂ ತಮ್ಮ ತನವನ್ನು ಉಳಿಸಿಕೊಂಡು ಬಂದಿರುವುದೊಂದು ವಿಶೇಷವೇ! ಸುಮಾರು 3000 ವರ್ಷಗಳ ಹಿಂದೆ ಯಾವ ಪರಿಸರದ ಒತ್ತಡವು ಗ್ರೀಕರನ್ನು ಇಲ್ಲಿ ಉಳಿಯುವಂತೆ ಮಾಡಿತು. ಅವರು ಸಂಪಕರ್ಿಸಿದ ಭಾಷೆ ಯಾವುದ್ದಿತು? ಹೇಗೆ ಅವರೊಂದಿಗೆ ಬೆರೆತರು? ಗ್ರೀಕರ ಸಾಹಸ. ಎಂತಹ ಸಾಹಸಿಯೂ ಯುದ್ದ ದಾಹಿಯೂ ಹಿಮಾಲಯದೆದುರು ತಣ್ಣಗಾಗಲೇ ಬೇಕು. ಆದರೂ ಅವರು ಈ ಪ್ರದೇಶವನ್ನು ದಾಟಿ ಹೋದ್ದಾದರೂ ಹೇಗೆ? ಅವರು ದಾರಿ ತಪ್ಪಿ ಬಂದು ಇಲ್ಲಿ ಉಳಿದುಕೊಂಡರೆ? ಯಾವ ಆಮಿಷ ಅವರನ್ನು ಇಲ್ಲಿಯೇ ಉಳಿಸಿತು? ಇಂತಹ ಹಲವು ಜಿಜ್ಞಾಸೆಗೆ ದಾರಿ ಮಾಡಿಕೊಟ್ಟು ಮತ್ತೊಮ್ಮೆ ಈ ಸ್ಥಳಕ್ಕೆ ಹೋಗಲು ನಮ್ಮನ್ನು ಪ್ರೇರೇಪಿಸುತ್ತದೆ. 

ಜನ ಜೀವನ
 
ಜನರ ಸಾಹಸವಂತೂ ಅಸಾದಾರಣ. ತಾಳ್ಮೆ ಕಳೆದುಕೊಳ್ಳದ ಸೌಮ್ಯ ಜನರು. ಕಠಿಣ ಪರಿಶ್ರಮಿಗಳಾದ ಇವರು ಸತತವಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಸಂಜೆ ಹೊತ್ತು ಸಮಯ ಕಳೆಯಲು ಗಂಡಸರು ಕೆಲವು ಸ್ಥಳೀಯ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರ ಸ್ಥಳೀಯ ಆಟಗಳೀಗ ಕ್ರಮೇಣ ನಶಿಸುವ ಹಂತ ತಲುಪಿವೆ. ಇಲ್ಲಿಗೂ ಇಸ್ಪೀಟ್ನಂತಹ ಆಟಗಳು ಕಾಲಿಟ್ಟಿವೆ.

   ಜನರ ಮುಖ್ಯ ಆದಾಯದ ಮೂಲ ಕೃಷಿ ಮತ್ತು ಹೈನುಗಾರಿಕೆ. ಅದರ ಜೊತೆ ಜೊತೆಗೆ ಕುರಿ ಸಾಕಣೆಯನ್ನು ಕೈಗೊಳ್ಳುತ್ತಾರೆ. ಉತ್ತಮ ಜಾತಿಯ ಕುರಿಗಳು ಇಲ್ಲಿವೆ. ಅದರಿಂದ ಬಟ್ಟೆ ತಯಾರಿಸಿಕೊಳ್ಳುತ್ತಾರೆ. ಇಲ್ಲಿನ ಜನರು ಸ್ನೇಹ ಜೀವಿಗಳು. ಆಲೂಗಡ್ಡೆ, ಹೂಕೋಸು, ನವಿಲುಕೋಸು ಮುಂತಾದ ಗಡ್ಡೆಗಳನ್ನು ಗುಡ್ಡದ ಇಳಿಜಾರಿನಲ್ಲಿ ಬೆಳೆಸುತ್ತಾರೆ. ಕುರಿಗಳ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಾರೆ.
ಮಹಿಳೆಯರು, ಮುದುಕರು ಕಣಿವೆಗಳಿಂದ ಕಟ್ಟಿಗೆಯನ್ನು ಹೊತ್ತು ತರುತ್ತಾರೆ. ಕೆಲವರಂತೂ ಮಗುವನ್ನು ಸಹ ತಮ್ಮ ಜೊತೆಗೆ ಕರೆದೊಯ್ಯುತ್ತಾರೆ ಎನ್ನುವುದು ವಿಸ್ಮಯಕಾರಿ ವಿಷಯ! ನಾವೊ ಸಣ್ಣ ಸಣ್ಣ ಕೆಲಸ ಮಾಡಲು ಹೆಣಗುತ್ತೇವೆ. ಅವರಿಗದಲ್ಲಾ ಸಲೀಸು.
ವಿಭಿನ್ನವಾದ ಜನರು ಮಗುವಿನ ಜೊತೆಗೆ ಪ್ರಯಾಣ 
ಅಜ್ಜಿಯ ಆರೈಕೆಯಲ್ಲಿ ಮಗು. 
ಇಲ್ಲಿಗೆ ಭೇಟಿಕೊಟ್ಟಾಗ ಇಲ್ಲಿನ ಮಧ್ಯವಯಸ್ಸಿನ ಮಹಿಳೆಯೊಬ್ಬಳ ಪರಿಚಯವಾಯಿತು. ಆಕೆ ಅನಾಮಿಕರಾದ ನಮ್ಮ ತಂಡವನ್ನು ತಮ್ಮ ಅತಿಥಿಯಾಗಿರಬೇಕೆಂದು ಆವ್ವಾನಿಸಿದಳು! ಆಕೆಯ ಮುಗ್ದತೆಯು ನಮ್ಮನ್ನು ಬಹಳವಾಗಿ ಆಕಷರ್ಿಸಿತು.

ಮುಂದುವರಿಯುವುದು....


















Sunday, May 19, 2013

ಮನೆ ಅಂಗಳದಲ್ಲೊಂದು ಹಕ್ಕಿ ಮರಿ....



ಮೊಟ್ಟೆಗೆ ಕಾವು ಕೊಡುತ್ತಿರುವ ಗಂಡು ಪಿಕರಾಳ 


ನಮ್ಮ ಅಂಗಳದ ಪಕ್ಕದ ಮಾಡಿನಲ್ಲಿ ಹಕ್ಕಿ ಮರಿಯೊಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ. ನಾನು ನನ್ನ ಕನಸುಗಳಿಗೆ ರೆಕ್ಕೆ ಜೋಡಿಸಿ ಕಾವು ಕೊಡುತ್ತಿದ್ದೇನೆ. ಅದೇ ಹಿಮಾಚಲ ಸುತ್ತುವ  ಕನಸು. ಅಲ್ಲಿ ತಿರುಗಿ ಜನ ಜೀವನ ಪರಿಸರ ಅರಿಯುವ ಕನಸೀಗ ಮರಿಯಾಗಿದೆ ಅದನ್ನೆಲ್ಲಾ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆಂಬ ತವಕ. ನಿಧಾನವಾಗಿ ಹಂಚಿಕೊಳ್ಳವೆ.
ಈ ಪಿಕರಾಳದ ಮೊಟ್ಟೆಗಳು ಮರಿಯಾಗಿ ಮನೆಯೆಲ್ಲಾ ಚಿಲಿಪಿಲಿಯಿಂದ ತುಂಬಲಿಯೆಂದು ಹಾರೈಸುವೆ. ಮತ್ತೆ  ಭೇಟಿಯಾಗೋಣ.. 

Saturday, April 20, 2013

ಅಕ್ಕ ಮತ್ತು ಸುರಗಿ ಹೂ...


ಮತ್ತೆ ಬಂದಿದೆ ವಸಂತ..

ಹಾ ನಾಹೇಳುವ ಸುರಗಿ U. R. Ananth Moorthiಯ ಸುರಗಿ ಆತ್ಮಕತೆಯಲ್ಲ. ಅದರಲ್ಲಿ ಆತ್ಮವಿದೆಯೋ ಇಲ್ಲವೂ ಗೊತ್ತಿಲ್ಲ!
ಮೋಹಕ  ಸುರಗಿ

ಸುರಗಿ ಹೂವಿನ ಕಂಪು ವಸಂತದ ನೆನಪು. ಅಕ್ಕ ಸುರಗಿ ಗುಂಗಿಗೆ ಬಲಿಯಾದವರು ನಾನು. ಕೊಯ್ಯಲೊಬ್ಬರು ಅವಳೊಡನೆ ಹೋಗಲೇ ಬೇಕು, ಅವಳಿಗೊ ಭಯ. ಅವಳೊಡನೆ ಕಾಡು ಸುತ್ತಿ ಮರ ಹತ್ತಿ ಸುರಗಿ ಪರಿಮಳ ಹೀರಿ ಮನೆಗೆ ಬರುವಾಗ ಅಮ್ಮನ ತಿಂಡಿ ತಯಾರಾಗಿರುತ್ತಿತ್ತು. ಹಸಿವೆ ಹಿಂಗಿಸಿಕೊಂಡು ಸುರಗಿಯ ಹೂಮಾಲೆ ಮಾಡುವ ಸಂಭ್ರಮ ಅಕ್ಕನಿಗೆ. ಈಗ ಸುರಗಿಯ ವನವನ್ನು ನಾವು ಉಳಿಸಲಿಲ್ಲಾ ಅಕ್ಕನೂ ಉದ್ಯೋಗ ನಿಮಿತ್ತ ಬೆಂಗಳೂರಿನ ಸಿಮೆಂಟ್ ವನದಲ್ಲಿದ್ದಾಳೆ. ಅಲ್ಲೂ ಇಲ್ಲೂ ಸುರಗಿ ಮಾಯವಾಗಿದೆ. 
 ಅದನ್ನು ಬಳಸಿದವರಿಗೆ ಅದು ಕಾಡದಿರದು ನಿಮಗೂ ಈ ವಸಂತದಲಿ ಸುರಗಿ ನೆನಪಾಗಲಾರದೆ. U. R ನೆನಪಾದರೆ ನಾನು ಹೊಣೆಯಲ್ಲ. 
         ಸುರಗಿಯ ಜೊತೆ ಜೊತೆಗೆ ಕಾಡುವ ಹೂ ಸೀತೆ ಎಂದು ಕರೆಯು ಈ ಹೂ ಬಾಲ್ಯದ ನೆನಪಿನ ಭಾಗಗಳು. 
ಅಲ್ಲವೇ? ಹೌದಾದ್ರೆ ಕಾಮೆಂಟ್ ಮಾಡಿ. 






Thursday, April 18, 2013

ಚಿಟ್ಟೆಯೊಂದಿಗೆ ಸವಿ ಮಾತು.

ಚಿಟ್ಟೆಯೊಂದಿಗೆ ಸವಿ ಮಾತು.

"ಎರಡು ಎರಡು ಕಣ್ಣು ಮಿಟುಕಿಸಿ
ಹೊರಟ್ಟಿದ್ದೆಲ್ಲಿಗೆ?"
ಎಂದು ಕೇಳಿದೆ.
"ಪುಟ್ಟ ದೇಹಕೇಕೆ ಎರಡು ಕಣ್ಣು
ಒಂದೇ ಸಾಲದೇ?"
ಎಂದು ಕೇಳಿದೆ.
"ಎರಡು ಕಣ್ಣು ಸಾಲದೆನಗೆ
ಹೂವಿನಂದ ಸವಿಯಲು.
ಸೃಷ್ಟಿಗಿಂತ ದೃಷ್ಟಿ ಮುಖ್ಯ
ಸೊಬಗ ನೋಡಲು"
ಎಂದು ಸಾರಿತು.

Saturday, April 6, 2013

ನಮಗೂ ಬದುಕಲು ಒಂದು ಅವಕಾಶ ಕೊಡಿ.




MUR HEN

ಇಡಿ ಭಾರದಾದ್ಯಂತ ಕಂಡುಬರುತ್ತಿದ್ದ ಈ ನಾಮಗೋಳಿ ಹಕ್ಕಿ ಈಗ ಬಲು ಅಪರೂಪವಾಗುತ್ತಾ ಇದೆ. ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಕೊಜೆ ಹೊಂಡಗಳಲ್ಲಿ ಕಂಡುಬರುತ್ತಿದೆ. ಕಳೆದ ವರ್ಷ ಇಲ್ಲಿ ಈ ಹಕ್ಕಿಗಳಿರಲಿಲ್ಲ. ಈ ಹಕ್ಕಿಗಳು ಹೇಗೆ ಬಂದವೆಂಬುದು ನಿಗೂಢ! ಈ ಹಕ್ಕಿಗಳಲ್ಲಿ ಯಾವುದೋ ಒಂದು ಭಾಷಾ ಸಂಪರ್ಕವಿರಬೇಕೆಂಬುದು ನನ್ನ ಊಹೆ, ಇಲ್ಲವಾದರೆ ದೂರದ ಈ ಹೊಂಡದ ಬಗ್ಗೆ ಅವುಗಳಿಗೆ ಮಾಹಿತಿ ಲಬಿಸುವುದಾದರೆ ಹೇಗೆ? ಅಲ್ಲದೇ ಇವು ಅತ್ಯಂತ ಸಮರ್ಥವಾಗಿ ಹಾರಲಾರದ ಪಕ್ಷಿ ಸಮೂಹಕ್ಕೆ ಸೇರಿದವು.


. ಇದೇ ರೀತಿ ಪರಿಸರ ನಾಶವಾಗುತ್ತಾ ಸಾಗಿದರೆ ಮುಂದೊಂದು ದಿನ ನಾವು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಕೇವಲ ಏಕ ರೂಪದ ಪ್ರಾಣಿ ಪಕ್ಷಿ ವ್ಯವಸ್ಥೆಯಾಗಿ ರೂಪಗೊಳ್ಳವತ್ತ ನಾವು ಸಾಗುತ್ತಿದ್ದೇವೆ. ಪರಿಸರ ಅಸಮತೋಲನವು ತುಂಡರಿಸುವುದು ಖಂಡಿತ. ಯಾವುದೋ ಒಂದು ಪಕ್ಷಿಯ ನಾಶವು ನಮ್ಮ ನಾಶದ ಮುನ್ನುಡಿಯಾಗಿರಬಹುದು. ಯೋಚಿಸ ಬೇಕಾದುದು.


ಕುಂಡಿ ಅಲ್ಲಾಡಿಸುತ ಹೊರಟಿ ನಿ ಎಲ್ಲಿಗಿ!

ನಿಮ್ಮ ಸುದ್ದಿಗೆ ಬತ್ತಿಲ್ಲೆ ಮರ್ರೆ ಅಯ್ಯೋ ಬಿಟ್ಟ್ ಬಿಡಿ ನನ್ನ್ನಾ!!!



Saturday, March 9, 2013

ಅನಂತ ಶಕ್ತಿ






ಸುತ್ತ ಮುತ್ತ ಕೆಂಪ ಚಲ್ಲಿ
ಹಗಲ ಚುಕ್ಕಿ ಬಂದಿದೆ
ಹಾರಿ ಹೋದ ಪುಟ್ಟ ಹನಿಯು
ತಂಪನೆರೆಯೆ ಇಳೆಗೆ ಜಾರಿದೆ.

ಎಲ್ಲಿ ನೋಡೆ ಹಳದಿ ಬಣ್ಣ
ಗರಿಕೆ ಹುಲ್ಲ ಮೇಲೆ ನಿನ್ನ ಕಣ್ಣ
ಓ ಇದೆಂಥ ಅನಂತ ಮೋಡಿ
ಹೊನ್ನ ಬಣ್ಣವ ಚಲ್ಲಾಡಿ.

ಹನಿಗಳೆಲ್ಲಾ ಮುತ್ತ ಜೋಡಿ
ಕೊಂಬೆ ತುಂಬ ಹತ್ತು ಕೋಟಿ
ಈ ಪರಿಯ ಸೊಬಗ ನೋಡೆ
ಕವಿಯ ಹೃದಯ ಹಾಡ ಹಾಡೆ.


ಓ ಅಪೂರ್ವ ಇದೆಂಥ ಉಕ್ತಿ
"ನಾನು ನಿನ್ನ ಎದುರೆ ಎಷ್ಷು ಸಣ್ಣ'
ಓ ಅನಂತ ಅಶ್ವ ಶಕ್ತಿ
ನೀನೆ ನೋಡು ಹಗಲ ಚುಕ್ಕಿ.

ಮಿತ್ರ ರಾಘವೇಂದ್ರನ "ಹಗಲ ಚುಕ್ಕಿ' ಕವನ ಸಂಕಲ ನೋಡಿ ಪ್ರೇರಿತನಾಗಿ ಬರೆದ ಕವನ.

Wednesday, February 20, 2013

ಹಿಗೊಂದು ಪ್ರವಾಸ



ಚಾರಣ ಪ್ರವಾಸ!
ಕವಲೇ ದುರ್ಗಾ ಕೋಟೆ 
ಮಕ್ಕಳಿಗೆ ಪ್ರಕೃತಿ, ಚಾರಣ ಮತ್ತು ಇತಿಹಾಸದ ಅನುಭವ ಕೊಡಲು, ನಮ್ಮ ಪೂವರ್ಿಕರ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ಕವಲೇ ದುರ್ಗ ಎನ್ನುವ ಕೋಟೆಗೆ ಭೇಟಿಕೊಟ್ಟೆವು. ಇದೊಂದು ಅದ್ಭುತವಾದ ಐತಿಹಾಸಿಕ ತಾಣ. (ವಿವರಗಳಿಗೆ ಹಿಂದಿನ POST ನೋಡಿ)


ಐತಿಹಾಸಿಕ ತಾಣ ಹುಂಚ 
 ನಮ್ಮ ಮುಂದಿನ ತಾಣ ಕದಂಬರಿಂದ ಚಾಲುಕ್ಯರತನಕ ಆಳಲ್ಪಟ್ಟ ಹುಂಚ. ಇದೊಂದು ಪ್ರಮುಖ ಜೈನ ಕೇಂದ್ರ. ಇತಿಹಾಸದ ಅನೇಕ ಚಿತ್ರಗಳು ನಮಗಿಲ್ಲಿ ಸಿಗುತ್ತವೆ. ಜೈನ ಪರಂಪರೆಯ ಕುರುಹುಗಳು ಅಲ್ಲದೆ, ಹೇಗೆ ಅವಸಾನದತ್ತ ಹೊರಳಿಕೊಂಡಿತ್ತೆಂದು ಇತಿಹಾಸಕಾರರು ಹುಡುಕಬಹುದು. ಆಸಕ್ತಿಕರವಾದ ಲಿಪಿಗಳು ಶಾಸನಗಳು ಕಂಡುಬರುತ್ತವೆ. ನಗರ ಪ್ರದಕ್ಷಿಣೆ ಮಾಡಿಬಂದರೆ, ಇತಿಹಾಸದ ಕುರುಹು ಅಲ್ಲಲ್ಲಿ ಕಾಣಸಿಗುತ್ತದೆ. ತನ್ನ ಆಕಾರ ಸ್ವರೂಪ ಜನಜೀವನದಿಂದ ಅದಿನ್ನು ಐತಿಹಾಸಿಕ ನಗರವಾಗಿಯೇ ಉಳಿದಿದೆ ಎನ್ನಬಹುದು. ಶಿಕ್ಷಕರಿಗೆ ಅಮೂಲ್ಯ ತಾಣಗಳನ್ನು ತೋರಿಸಿದ ತೃಪ್ತಿ ಮಕ್ಕಳಿಗೆ ಚಾರಣದ ವಿಶೇಷ ಅನುಭೂತಿ ನೀಡಿ ರೋಮಾಂಚಿತರಾದರು. 
ಹುಂಚದಲ್ಲಿನ ಮಾಹಿತಿ ಫಲಕ 


ಪಾಳಿ ಲಿಪಿಯ ಶಾಸನ 

ಕುವೆಂಪುವನ್ನು ಸಕ್ಷಾತ್ಕರಿಸಿದಾಗ ಅವರ  ಮನೆ ಎದುರಿಗೆ 
ನಮ್ಮ ಹೆಮ್ಮೆಯ ಕವಿ ಕುವೆಂಪು ಮನೆಗೆ ಅಡಿಯಿಟ್ಟು ಆನಂದಿಸಿದೆವು. ಪ್ರಕೃತಿಯೊಂದಿಗೆ ಸರಸವಾಡುತ್ತಾ ಅವರ ಮನೆ, ಸಮಾಧಿ, ಬಂದಿರುವ ಪ್ರಶಸ್ತಿ, ಬಿಡುಗಡೆಗೊಳಿಸಿದ ಕೃತಿ ವೀಕ್ಷಿಸಿ ಧನ್ಯರಾದೆವು.
ನಮ್ಮ ಸೈನ್ಯ!







ವಾರೆ ನೋಟ

ತುಂಬಾ ಕುಡಿದರೂ ತಲೆಗೇರದ `ತುಂಬಾ'

 ನಿಮಗೂ ಸ್ವಲ್ಪ ಮತ್ತೇರಿಸುವ ಉದ್ದೇಶದಿಂದಲೇ ಈ ಲೇಖನ ಬರೆಯುತ್ತಿದ್ದೇನೆ. ಒಮ್ಮೆಯಾದರೂ ಕಣ್ಮುಚ್ಚಿ ಕುಡಿದು ಬಿಡಿ!! ನಿಮ್ಮ ಒಳಗೂ ಹೊರಗೂ ಒಂದಾಗಿ ನೀವೇ ದೇವರಾಗಿ ಬಿಡಬಹು...