Sunday, December 6, 2020
ಮಜೋಲಿ ಎಂಬ ಮಾಯಾನಗರಿ..
Saturday, November 21, 2020
ಚಿಟ್ಟೆ ಎಂಬ ಅಮಿತ ಅಚ್ಚರಿಗಳ ಮೂಟೆ!!
![]() |
| ಪ್ಯೂಪಾದಿಂದ ಹೊರಬಂದಾಗ |
![]() |
ಅಂತೂ ಬಂತು-
![]() |
| A Butterfly coming out of pupa. |
ಹುಟ್ಟಿದ ಕೂಡಲೇ ಕೂಡಿಕೆ-
Wednesday, October 21, 2020
ಹಾರೋ ಹಾತೆಗಳ ಹಿಂದೆ ಬಿದ್ದು.
Tuesday, October 13, 2020
ಸೈಕಲ್ ಸಾಹಸದ ಸುಮಧುರ ನೆನಪು....
ಮಗನಿಗೊಂದು ಸೈಕಲ್ ಕೊಳ್ಳುವಾಗ ನನ್ನ ಸೈಕಲ್ ಪುರಾಣದ ನೆನಪು ಬಿಚ್ಚಿಕೊಳ್ಳ ತೊಡಗಿತು. ಅಂದು ನಾವೊಂದು 8 ಜನ ಹರಯದ ಹುರುಪಿನಲಿ ತೇಲುತ್ತಿರುವವರು, ಹುಚ್ಚು ಕನಸು ಹತ್ತಿಸಿಕೊಂಡು, ಕಾರಿಗೆ ಕೊಡಲು ಕಾಸಿಲ್ಲದೆ, ಕಾಲನ್ನೆ ನಂಬಿ ಸೈಕಲ್ಲನಲ್ಲಿ ಸವಾರಿ ಹೊರಡಲು ತಯಾರಾದೆವು. ಸಿದ್ದಾಪುರದಿಂದ ಹೊರಟು ಮಾಸ್ತಿಕಟ್ಟೆ ತಲುಪಿ ಯಡೂರು ಮಾರ್ಗವಾಗಿ ಮಾಣಿ ಅಣೆಕಟ್ಟೆಯನ್ನು ದಾಟಿ ಮೇಲುಸುಂಕದ ದುರ್ಗಾ ಪರಮೇಶ್ವರಿ ದೇವಾಲಯವನ್ನು ಹಾದು ಹುಲಿಕಲ್ ತಲುಪಿ ವಾಪಾಸು ಸಿದ್ದಾಪುರ ತಲುಪುವುದು ನಮ್ಮ ಯೋಜನೆಯಾಗಿತ್ತು.
ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ನಮ್ಮ ಕ್ರಿಕೆಟ್ ತಂಡದ ಸದಸ್ಯರೆಲ್ಲಾ ಸೇರಿ ನಾಳೆ ದಿನ ಹೊರಡುವುದೆಂದು ತೀರ್ಮಾನ ಕೈಗೊಂಡೆವು. ಯಾರ ಕೈಲೂ ಬಿಡಿಗಾಸಿರಲಿಲ್ಲ. ಕೆಲವರ ಬಳಿ ಸೈಕಲ್ಲು ಇರಲಿಲ್ಲ. ನನ್ನ ಬಳಿ ಆಗಿನ ಕಾಲದಲ್ಲಿ ವಿಶೇಷವಾದ HERO MTB ಎಂಬ ನೀಲಿ ಬಣ್ಣದ ಸೈಕಲ್ಲಿತ್ತು. ಸೈಕಲ್ ಇರದವರು ಬಾಡಿಗೆಗೆ ಕೊಂಡರು. 1998ರ ಸುಮಾರಿಗೆ ಅತ್ಯಂತ ಪ್ರಸಿದ್ದವಾದ ತೆಂಗಿನ ಕಟ್ಟೆ ಹೋಟೆಲಿನಲ್ಲಿ ಪಲಾವು ಮಾಡಿಸಿ 8 ಜನರಿಗೆ 20 ಪ್ಯಾಕೆಟ್ಸ್ ಕಟ್ಟಿಸಿಕೊಂಡೆವು.
ಹೀಗಿದೆ ಡ್ಯಾಂ..
ದಾರಿಯುದ್ದಕ್ಕೂ ಅನೇಕರು ನಮ್ಮನ್ನು ನೋಡಿ ಅಚ್ಚರಿಗೊಂಡರು. ಅಂದಿನ ಪರಿಸರವಂತೂ ಅತ್ಯದ್ಭುತವಾಗಿತ್ತು. ಜನಸಂಖ್ಯೆಯಂತೂ ವಿರಳಾತಿ ವಿರಳ. ಮಾಸ್ತಿಕಟ್ಟೆಯಲ್ಲಿ ಶಬರಿ ಎಂಬ ಹೋಟೆಲ್ ಬಿಟ್ಟರೆ ಬೇರೆ ಗತಿ ಇರಲಿಲ್ಲ.
ಬೆಳಕಿನ ಕತೆ ಹೇಳುವ ಕತ್ತಲೆ ಮನೆಗಳು-
Sunday, October 4, 2020
ಕಾಟಿ ಮರಿಯ ಕೃಪಾಕಟಾಕ್ಷ....
![]() |

ಹೆಸರು ಹೇಮಂತ್. ಅವಧೂತನಂತಹ ಗಡ್ಡ. ಹೊಳೆವ ಜಿಂಕೆ ಕಣ್ಣು . ಛೆ ಜಿಂಕೆ ಎಂದರೆ ಮೋಸವಾದೀತು. ಕಾಡುಕೋಣದ ಕಣ್ಣು. ವದನದ ತುಂಬಾ ಹರಡಿಕೊಂಡ ಕುರುಚಲು ಗಡ್ಡ. ಎಲ್ಲೋ ನೆಟ್ಟ ನೋಟ. ಭಾವತತ್ಪರತೆ. ಬಿಗುಮಾನ. ಎತ್ತರದ ನಿಲುವು.
ಬಿಚ್ಚಲೊಲ್ಲದೆ ಬಿಗಿದ ಅವನ ತುಟಿಗಳನು ಮೆಲು ಮಳೆಯಲ್ಲಿ ಮಾತಿಗೆಳೆದಳು ಅವನಿ. ಕತೆಗಳು, ಮಲೆನಾಡು ಅವರ ನಡುವಿನ ಏಕತ್ರ ಸೂತ್ರ. ಅವನ ಸೃಜನಾತ್ಮಕ ಕೆಲಸಗಳಲ್ಲಿ ಅವಳ ಹಾಜರಿ ಇತ್ತು. ಇಂದು ಅವನ ಎರಡನೆಯ ಕತಾ ಸಂಕಲನ ಅನಾವರಣಗೊಂಡಿತ್ತು. ಪುಸ್ತಕ ಅನಾವರಣದ ಗೌಜಿ ಮುಗಿದು ಅವರಿಬ್ಬರು ಕಲಾ ಪರಿಷತ್ತಿನ ಎದುರಿನ ಕಾಫಿಬಾರ್ ನಲ್ಲಿದ್ದರು. ಕಪಚಿನೊಗೆ ಆರ್ಡರಿಸಿದ್ದರು.
ಏಯ್ ಹೇಮ್, ನೀನು ಹೇಗೆ ಪರ್ತಕರ್ತನಾದೆ? ಎಂದು ಹೇಳುತ್ತಿಯೆಂದು ಕಳೆದ ಬಾರಿಯೇ ಹೇಳಿದ್ದೆ ಎಂದು ಜೋಗುಳದಂತೆ ಅವಳು ಪಿಸುಗುಟ್ಟಿದಳು.
ಮಲೆನಾಡಿನ ನನ್ನ ನೆನಪೇ ನನಗೆ ಶ್ರೀರಕ್ಷೆ.
ಹೇಳಿದರೆ ನೀ ನಗುತ್ತಿ, ಯಾಕೆ ಈಗ ಅದೆಲ್ಲಾ ಮೆಲ್ಲಗೆ ಅವನೆಂದ.
ಕೇಳುವ ಕುತೂಹಲ ಎಂದು ಮೆಲ್ಲಗೆ ಅವನ ಬೆನ್ನಿಗೆ ಗುದ್ದಿದಳು.
ಮರಾಯ್ತಿ ನೀ ಬಿಡುವ ಹಾಗೆ ಕಾಣಿಸೊಲ್ಲ ಎಂದು ಒಂದು ನೋಟವನ್ನು ಅವಳೆಡೆಗೆ ಎಸೆದು ನಕ್ಕ.
..........................ಹಂ ಅವಳೂ ನಕ್ಕಳು.
ಅದೊಂದು ವಿಚಿತ್ರ ಕತೆ. ನಾನೊಂದು ಕಾಡುಕೋಣದ ಮರಿಯಿಂದಾಗಿ ಈ ವೃತ್ತಿಗೆ ಬಂದೆ.
ಏನು? ಅವಳು ಆಶ್ಚರ್ಯ ತಡೆಯಲಾಗದೆ ಕೇಳಿದಳು.
ಹೌದು
ಅದು ಹೇಗೋ? ಎಂದಳು.
ಅದೊಂದು ನನ್ನ ಬದುಕಿನ ಅತಿ ವಿಚಿತ್ರ ಘಟನೆ. ಎಲ್ಲರ ಬದುಕಲ್ಲೂ ಘಟಿಸೊಲ್ಲವೆಂದು ನೆನಪ ಸುರುಳಿ ಬಿಚ್ಚತೊಡಗಿದ.
***
ಮಾಘ ಮಾಸದ ಸಂಜೆಗತ್ತಲಿನ ಸಮಯ. ಹಸುಗಳು ಹಟ್ಟಿಗೆ ಮರಳುವ ಹೊತ್ತು. ಸೂರ್ಯ ತನ್ನ ಕೆಲಸ ಮುಗಿಸಿದ್ದ. ಗಾಳಿ ತಣ್ಣಗೆ ಹೊಯ್ಯುತ್ತಿತ್ತು.
ಓತಿಕ್ಯಾತನಂತಿರುವ ತನ್ನ ನೆಚ್ಚಿನ ಬಂಟ ಅಂಜು ಬುರುಕ ಮಾಚನೊಡನೆ "ಬೇಟೆಗೆ ಹೋಗುವಾ." ಎಂದೆ. ಮಾಚ ನನ್ನ ಬೇಟೆಯ ಸಂಗಾತಿ. ಮೂರು ಹೊತ್ತು ನಮ್ಮನೆಯ ಕೂಳು ತಿನ್ನದಿದ್ದರೆ ಅವನಿಗೆ ಸರಿಯಾಗಿ ನಿದ್ರೆ ಹತ್ತಲ್ಲ. ಬೇಟೆ ಹುಚ್ಚಿನ ಮನುಷ್ಯ. ತನ್ನ ಸ್ವಭಾವಕ್ಕೂ ಬೇಟೆಗೂ ವಿರುದ್ಧ ಪದದಂತಿದ್ದ.
ಮಲೆನಾಡಿನ ನಮ್ಮ ಒಂಟಿ ಮನೆಯಿಂದ ಚರೆ ಕೋವಿ ಹಿಡಿದು ಕಬ್ಬಿನಗದ್ದೆ, ಕಾಲು ತೋಡು ದಾಟಿ ಕುರುಚಲು ಕಾಡಿಗೆ ಬಂದಿದ್ದೆವು. ರಾತ್ರಿ ಪೂರಾ ತಿರುಗುವ ಉದ್ದೇಶದಿಂದ ಒಂದಿಷ್ಟು ಕಡುಬು, ಚರೆ ಕೋವಿಗೊಂದಿಷ್ಟು ಗುಂಡು ನಮ್ಮ ಜೊತೆಗಿದ್ದವು. ಕಾಟಿ, ಚಿರತೆ, ಹಂದಿಗಳು ಕಾಡ ನಡುವೆ ಹೆದ್ದಾರಿ ಕೊರೆದ ಜಾಗವದು.
ಕುರುಚಲು ಕಾಡಿನ ನಡುವೆಯೊಂದು ದೊಡ್ಡಾಲದ ಮರವಿತ್ತು. ಕುರುಚಲು ಕಾಡಿನ ನಡುವೆಯೇ ಜಿಂಕೆ, ಕಡವೆಗಳನ್ನು ಒಂದೇಟಿಗೆ ಹೊಡೆದುರುಳಿಸಿದ್ದ ನಡು ಕಾಡಲ್ಲಿ ಅವತ್ತು ಯಾವ ಬೇಟೆಯೂ ಕಾಣಸಿಗದೇ, ನಿರಾಶನಾಗಿ ಆ ಆಲದ ಮರದಡಿ ಸ್ವಲ್ಪ ಕೂರೋಣವೇ? ಎಂದೆ. ಅಯ್ಯೋ, ಸರಿ ದ್ಯಾವ್ರೆ ಎಂದ ಮಾಚ. ಥೂ ಹಲ್ಕಾ ಸುವರ್, ಎಲ್ಲದಕ್ಕೂ ಅಯ್ಯೋ ಸೇರಿಸಿ ಕನ್ನಡದ ಮಯರ್ಾದೆ ತೆಗಿಬೇಡ್ವೋ ಮರಾಯ ಎಂದು ಗದರಿದೆ. ಆಗಲೇ ಆಲದ ಮರದಡಿ ಏನೋ ಬಹೃತ್ ಪ್ರಾಣಿಯೊಂದು ನೆಗೆಯೊ ಸದ್ದಿನಿಂದ ನಮ್ಮ ಕಿವಿ ನೆಟ್ಟಗಾಯಿತು. ಚರೆ ಕೋವಿ ನಿಮಿರಿ ನಿಂತಿತು ನೋಡು.
ಸದ್ದಾಗದಂತೆ ನಾವು ಆಲದ ಮರವನ್ನು ಸಮೀಪಿಸಿದೆವು. ಎದೆ ಢವ-ಢವನೇ ಹೊಡೆದುಕೊಳ್ಳ ಹತ್ತಿತ್ತು. ಈ ರೀತಿ ಕುಣಿಯುವ ಪ್ರಾಣಿ ಯಾವುದೆಂದು ನಮಗೆ ಹೊಳೆಯಲೇ ಇಲ್ಲ. ಹಂದಿ, ಕಡವೆಯಾಗಿದ್ದರೆ ಅವುಗಳ ಸದ್ದು ಹೀಗಿರುತ್ತಿರಲಿಲ್ಲ. ನಿಧಾನಕ್ಕೆ ನಾನು ಕಳ್ಳ ಹೆಜ್ಜೆ ಇಟ್ಟು ಕುರುಚಲು ಕಾಡಿನೊಳಗೆ ಇಣುಕಿ ನೋಡಿದೆ. ಧಿಗ್ಮೂಢನಾದೆ. ಕಾಡುಕೋಣದ ಮರಿಯೊಂದು ಮರದಡಿಯಲ್ಲಿ ಖುಷಿಯಿಂದ ಕುಣಿಯುತಲಿತ್ತು. ನಾವಿಬ್ಬರೂ ಜಾಗೃತರಾದೆವು.
ಮರಿ ಇದೆ ಎಂದರೆ ಹತ್ತಿರದಲ್ಲೆಲ್ಲೋ ಅದರ ತಾಯಿ ಇರಲೇ ಬೇಕಲ್ಲ. ಸುತ್ತಲೂ ಹುಡುಕಿದರೂ. ಏನೂ ಕಾಣಲಿಲ್ಲ.
ಅಯ್ಯೋ, ಇಲ್ಲೇನೂ ಕಾಂತಿಲ್ಯಲೆ ದ್ಯಾವ್ರೇ ಎಂದ ಮಾಚ ಆಶ್ಚರ್ಯ ಸೂಚಿಸುತ್ತಾ.
ಹತ್ತಿರ ಹೋಗಿ ನೋಡೋ ಮರಾಯ, ಪಕ್ಕದಲ್ಲೇ ಮಲಗಿರಬಹುದು ಎಂದೆ. ಮರಿ ಎಮ್ಮೆ ಅಸಾಧ್ಯ ಶಬ್ದಮಾಡುತ್ತಾ ಜಾತ್ರೆಯ ಕೀಲು ಗೊಂಬೆಯಂತೆ ಕುಣಿಯುತಲಿತ್ತು.
ಎಷ್ಟು ದಿನಗಳ ಮರಿ ಇರ್ಬೊದು ಮಾಚ?
ಅಯ್ಯೋ, ಒಂದಿಪ್ಪತ್ತು ದಿನದ್ದು, ದ್ಯಾವ್ರೆ
ಹಟ್ಟಿಯ ದನಗಳೊಂದಿಗೆ ಸಾಕಿದ್ರೆ ಹೆಂಗೆ? ನಾನೆಂದೆ.
ಅಯ್ಯೋ, ಥೂ ನಿಮ್ಮ, ಅದರಮ್ಮ ಬಂದ್ರೆ ಸಿಗದ್ ಹಾಕತ್ತೆ ಅಷ್ಟೇ! 400 ಕೆ. ಜಿ ಬಬ್ಬರ್ಯದಾಂಗ್ ಇಪ್ಪೊ ಅದನ್ ಎದ್ರುಸುಕಾತ್ತೆ? ಅದ್ ನಮ್ಮನ್ ಕಂಡು ಕೊಂದ್ ಹಾಕುತ್ತೆ ದ್ಯಾವ್ರೆ. ಎಂದು ಪಿಸುಗುಟ್ಟಿದ ಮಾಚ. ನಾ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಎಷ್ಟು ಹಾಲು ಕೊಡುತದೆಂದು ನೋಡ್ಬೇಕು ಮರಾಯ?
"ನಮ್ ತಿಥಿ ಆಯ್ದಿರ್ ಸಾಕ್."
ಮಾಚ ಏನು ಹೇಳುವುದೆಂದು ತೋಚದೆ ಗರ ಬಡಿದವನಂತೆ ನಿಂತ .
ಏಯ್ ಮಾಚ, ನೀನು ಲಂಗೋಟಿ ಕಟ್ಟಿದ್ಯಾ? ಕೇಳಿದೆ.
ಅಯ್ಯೋ, ಅದು ಈ ಮರಿ ಕಟ್ಟುವಷ್ಟು ಉದ್ದವಿಲ್ಲ ದ್ಯಾವ್ರೆ
ಥೂ, ಹಲ್ಕಾ ಬಡ್ಡಿ ಮಗನೆ, ನಿನ್ನ ಲಂಗೋಟಿ ಯಾರಿಗೆ ಬೇಕೋ?
ಬೇಕಾಗಿರೋದು ನಿನ್ನ ಪಂಚೆ.
ಅಯ್ಯಯ್ಯೋ, ಬ್ಯಾಡ ದೇವ್ರೆ ಎಂದು ಕಿರುಚಲು ಬಾಯಿ ತೆರೆದ. ಅಯ್ಯೋ, ಊರ ದನಕಳ ಕಾಯ್ಲಿ ಅವಕ್ಕೂ ಬತ್ತ್ ಮರ್ರೆ, ಬ್ಯಾಡ ದ್ಯಾವ್ರೆ ಎನ್ನುವುದನ್ನು ಕಿವಿಗೆ ಹಾಕಿಕೊಳ್ಳದೇ ಹಠ ಹಿಡಿದಾಗ ಅನಿವಾರ್ಯವಾಗಿ ಮಾಚ ಸುಮ್ಮನಾದ.
***
ಕಪಚಿನೋ ಬಂದಿತ್ತು. ಅದನ್ನು ಸವಿಯುತಲಿದ್ದ ಹೇಮಂತ್ ಮತ್ತು ಅವನಿ. ಎನ್ ಧೈರ್ಯ ನಿಂದು ಎಂದು ಕಣ್ಣಲ್ಲೇ ನಕ್ಕಳು. ಅವನೂ ನಕ್ಕ. ಮತ್ತೊಂದು ಸಿಗರೇಟಿಗೆ ಕೈ ಹಚ್ಚಿದ್ದ. ಅವನಿ ಮುನಿಸಿಕೊಂಡು ಕೆಂಪಗಾದಳು. ಸಿಗರೇಟಿನ ಧೂಮದೊಂದಿಗೆ ಕತೆ ಮತ್ತೆ ಬಿಚ್ಚಿಕೊಳ್ಳ ತೊಡಗಿತು.
***
ಕುಣಿತಿದ್ದ ಕಾಟಿ ಮರಿ ಹಿಂದೆ ಹೋಗಿ ಅಡಗಿ ಸದ್ದಾಗದಂತೆ ಅದರ ಕುತ್ತಿಗೆ ಸುತ್ತ ಪಂಚೆ ಬಿಗಿದು ಆಲದ ಮರಕ್ಕೆ ಕಟ್ಟಿ ಹಾಕಿದೆವು. ಕಟ್ಟಿದ ಕೂಡಲೇ ತಟಪಟವೆಂದು ಕಾಲನ್ನು ವಿಚಿತ್ರ ರೀತಿಯಿಂದ ಬಡಿಯತೊಡಗಿತು. ಅಪಸ್ವರದ ಶಂಖದಿಂದ ಹೊಮ್ಮಿದಂತಹ ಸ್ವರವೊಂದನು ಅದು ಹೊರಡಿಸಿತು. ಕಾಡಿನ ಮರಗಿಡಗಳೆಲ್ಲಾ ಅಲ್ಲಾಡಿದವು. ಅನೇಕ ಬಾರಿ ಕಾಡೆಮ್ಮೆಯ ಸ್ವರ ಕೇಳಿದ್ದ ನಾವಿಬ್ಬರೂ ಮರಿ ಈ ವಿಚಿತ್ರ ಸ್ವರಕ್ಕೆ ವಿಚಲಿತರಾದೆವು. ಅಷ್ಟು ಕರ್ಕಶವಾಗಿತ್ತದು. ಇದು ಯಾವುದೋ ಸನಿಹದ ಮತ್ತೊಂದಕ್ಕೆ ಸಂದೇಶ ನೀಡುತ್ತಿದೆ ಎಂದು ನಮಗೆ ಖಾತ್ರಿಯಾಯಿತು. ಚರೆ ತುಂಬಿದ ಕೋವಿ ಹಿಡಿದೆವು. ಕರುವನ್ನು ಆಲದ ಉದ್ದದ ಬಿಳಲುಗಳನ್ನು ಸೇರಿಸಿ ಪಂಚೆಯಿಂದ ಕಟ್ಟಿದ್ದೆವು.
ಕುರುಚಲು ಕಾಡಿನ ಕಡೆಯಿಂದ ಏನೋ ಸದ್ದಾಯಿತು. ಮಹಾ ಧೈತ್ಯ ಕಾಟಿಯೊಂದು ಬುಸು ಬುಸು ಉಸಿರ ಬಿಡುತ್ತಾ ಬಂದಿತು. ಅದರ ಎತ್ತರದ ನಿಲುವು ಹೊಳೆಯುವ ಮೈ. ಕೆಂಗಣ್ಣು. ಕೋಪದಿಂದ ಬುಸುಗುಡುವ ಅದರ ಮೂತಿ ನೋಡಿ ನಮ್ಮ ಚಡ್ಡಿ ಒದ್ದೆಯಾಗುವುದೊಂದು ಬಾಕಿ. ತನ್ನ ಕೋಡಿನಿಂದ ತಿವಿಯುವಂತೆ ಎತ್ತುತ್ತಾ ನಾವಿರುವಲ್ಲಿಗೆ ನುಗ್ಗಿತು. ಬಿಳಲುಗಳನ್ನು ಹಿಡಿದು ನಾವಿಬ್ಬರು ಮರವೇರಿದರು. ಗಜರ್ಿಸುತ್ತಾ ಮರವನ್ನೇ ತಿವಿಯ ತೊಡಗಿತು. ಐದಾರು ಬಾರಿ ಮರ ಸುತ್ತಿ ಬಂದಿತು. ತನ್ನ ಕಂದನ ಬಿಡಿಸಿರೆಂದು ಒಮ್ಮೆ ಆರ್ತನಾದ ಮಾಡಿ ಕೂಗಿತು. ಬರಿ ಅಂಗಿಯಲ್ಲಿದ್ದ ಮಾಚನಿಗೆ ಸಂಜೆಗತ್ತಲಾವರಿಸುವುದ ನೋಡಿ ಚಿಂತೆಯಾಯಿತು. ಅಯ್ಯೋ, ಗಾಳಿಯಲ್ಲಿ ಒಂದು ಗುಂಡು ಹಾರಿಸಿ ದ್ಯಾವ್ರೆ ಎಂದ. ತಡಮಾಡದೆ ನಾನು, ಕಾಡೆಮ್ಮೆಯ ಕಿವಿಗಳ ನಡುವೆ ಗುಂಡು ಹಾರಿಸಿದೆ. ಕೋಡುಗಳ ನಡುವೆ ಗುಂಡು ಹಾರಿತು. ಒಂದೇ ನೆಗೆತಕ್ಕೆ ತನ್ನ ಮರಿಯಿಂದ ಅನತಿ ದೂರಕ್ಕೆ ಹೋಗಿ ಕಾಟಿ ನಿಂತು ಬಿಟ್ಟಿತು. ಸ್ಪೋಟಿಸಿದ ಶಬ್ದಕ್ಕೆ ಕಾಡೊಮ್ಮೆ ನಿಶ್ಯಬ್ದವಾಯಿತು. ದೂರ ಹೋಗಿ ನಿಂತ ಎಮ್ಮೆ ತನ್ನ ಮರಿಗೆ ಬರುವಂತೆ ಬುಸುಗುಟ್ಟಿ ಕರೆಯತೊಡಗಿತು. ಮತ್ತೊಂದು ಚರೆ ತುಂಬಿಸಿ ಅದರ ಕೋಡುಗಳ ನಡುವೆ ಹೊಡೆದೆ. ವಿಚಿತ್ರವಾಗಿ ಕೂಗೂತ್ತಾ ಕಾಡಿನಲ್ಲಿ ಕಣ್ಮರೆಯಾಯಿತು. ಅದರ ವಿಚಿತ್ರ ದನಿ ನನ್ನ ಕಿವಿಗಳಲ್ಲಿ ಇನ್ನೂ ರಿಂಗಿಣಿಸುತ್ತಿದೆ.
ಕಾಡಿನ ಮೌನದಲ್ಲೇ ಲೀನವಾದ ನಾವಿಬ್ಬರೂ ಕುಳಿತಲ್ಲೇ ಕುಳಿತ್ತಿದ್ದರಿಂದ ಸೊಳ್ಳೆಗಳು ಕಡಿಯ ತೊಡಗಿದವು. ನಡೆದ ಘಟನಾವಳಿಗಳಿಂದ ಸ್ವಲ್ಪ ವಿಚಲಿತನಾದೆ. ಮಾಚನಿಗೆ ತೋರಿಸಿಕೊಳ್ಳದೆ ಸುಮ್ಮನಿದ್ದೆ. ಇಳಿದು ಹೋಗಲು ಅಂಜಿಕೆ. ಮಾಚನೊಬ್ಬನನ್ನೇ ಬಿಟ್ಟು ಹೋದರೆ ಅವನಿಗೆ ಗುಂಡು ಹಾರಿಸಲೂ ಬರದು. ಕಾಡಿನ ಹಾದಿಯಲ್ಲಿ ಕೋವಿ ಇರದೇ ನಡೆದು ಹೋಗುವುದು ಅತಿ ಅಪಾಯ. ಹಾಗೇ ಸಂದಿಗ್ಧದಲ್ಲೇ ಕೆಲ ಕ್ಷಣಗಳು ಕಳೆದವು. ರಾತ್ರಿ ಎರುವ ಹೊತ್ತಲ್ಲಿ ಮಾಚನನ್ನು ಸಮಾಧಾನ ಮಾಡಿ, ಕೋವಿಗೆ ಚರೆ ತುಂಬಿಸಿ ಅಲ್ಲೇ ಬಿಟ್ಟು ಧೈರ್ಯ ಮಾಡಿ ಹೊರಟೆ.
ಬಲವಾದ ಹಗ್ಗ, ಪಂಚೆ ಒಂದಿಷ್ಟು ಹುಲ್ಲಿನೊಂದಿಗೆ ಹಿಂದಿರುಗಿದೆ.
ಅಯ್ಯೋ, ಬಂದ್ಬಿಟ್ರಾಯ್ಯಾ ದ್ಯಾವ್ರೆ
ಯಾಕೆ ಬರ ಬಾರದಿತ್ತೆ.?
ಮಾಚನಿಗೆ ಪಂಚೆ ಕೊಟ್ಟು ಬಲವಾದ ಹಗ್ಗದಿಂದ ಮರಿಯನ್ನು ಬಂದಿಸಿದೆ. ನಿಶೆಯ ಮೊದಲ ಘಳಿಗೆಯೊಳಗೆ ಮನೆ ತಲುಪಿದೆವು. ಹಟ್ಟಿಯಲ್ಲಿ ಕರುವನ್ನು ಉಳಿದ ಕರುಗಳ ಜೊತೆಗೇ ಕಟ್ಟಿ ನಿಟ್ಟುಸಿರಿಟ್ಟೆ.
***
ರಾತ್ರಿ ತನ್ನ ಮಗ್ಗಲು ಬದಲಿಸಿತ್ತು. ತೋಟ ತಿರುಗಿ ಬಂದ ತಂದೆ ಹಟ್ಟಿ ಕಡೆ ಹೋದವರಿಗೆ ಈ ಹೊಸ ಅತಿಥಿ ಗುಟುರು ಹಾಕಿತು.
ಗಾಬರಿ ಬಿದ್ದವರು, ನೇರ ಮನೆಯೊಳಗೆ ಹೋಗಿ ಎಲ್ಲಿಂದ ತಂದ್ಯೋ ಇದ್ನಾ, ಅಲ್ಲೇ ಬಿಟ್ಟು ಬಾ. ಡಿಪಾರ್ಟಮೆಂಟಿಗೆ ಗೊತ್ತಾದರೆ ಮುಗೀತು ಕತೆ.
ಹಾಗೇನೂ ಆಗಲ್ಲ. ಅದು ಕಾಡುಕೋಣದ ಮರಿಯೆಂದು ಯಾರಿಗೂ ಗೊತ್ತಾಗಲ್ಲ ಬಿಡಿ. ನೀವೇನು ತಲೆ ಬಿಸಿ ಮಾಡ್ಬೇಡಿ. ಎಂದು ಅವರ ಬಾಯಿ ಮುಚ್ಚಿಸಿದೆ.
ಒಂದು ನಾಲ್ಕು ದಿನ ಕಷ್ಟ ಕೊಟ್ಟಿತು. ನಂತರ ಅದುವೇ ಮರಿಗಳೊಂದಿಗೆ ಹೊಂದಿಕೊಂಡಿತು. ಮನೆಯ ದನ ಕರುಗಳೊಂದಿಗೆ ಒಂದಾದ ಮರಿ ದಿನಾಲೂ ಮೇಯಲು ಹೋಗಿ ಹಟ್ಟಿಗೆ ಹಿಂತಿರುಗುತಲಿತ್ತು. ಅದಕೆ ದಿನಾಲೂ ನಾಲ್ಕು ಲೀಟರ್ ಹಾಲು ಕುಡಿಸುತ್ತಿದ್ದೆ.
***
ಒಂದು ಮುಂಜಾನೆ ಧೂಳೆಬ್ಬಿಸುತ್ತಾ ಬಂದ ಕಪ್ಪು ಪೋಲಿಸ್ ಜೀಪು ನನ್ನ ಅಪ್ಪಯ್ಯನ ಎದೆ ಪಸೆ ಆರುವಂತೆ ಮಾಡಿತ್ತು.
ಏನ್ರೀ ಕಾಡುಕೋಣದ ಮರಿ ಸಾಕುತ್ತಿದ್ದೀರಿಯಂತೆ? ಎಂದು ಜಂಬದಿಂದ ಜಬರಿಸಿದ ಅರಣ್ಯಾಧಿಕಾರಿ.
ಎ...........ಲ್ಲಾ..........ದ........ರೂ......ಉಂ.....ಟೆ?. ಎಂದರು ಅಪ್ಪಯ್ಯ ನಡುಗುವ ಕಂಠದಲ್ಲಿ. ಅರಣ್ಯಾಧಿಕಾರಿ ನೇರ ಹಟ್ಟಿಗೆ ಹೋಗಿ ನೋಡಿದ. ದನಗಳು, ಕರುಗಳು, ಎಮ್ಮೆಗಳು ಇವನನ್ನು ಪಿಳಿ-ಪಿಳಿ ನೋಡಿದವು. ಅವನೂ ದಿಟ್ಟಿಸಿದ. ಯಾವನೋ ಹೊಸಬನ ನೋಡಿ ಬೆಚ್ಚಿ ಬೊಬ್ಬಿರಿದು ಕೂಗ ತೊಡಗಿದವು. 10-15 ಮರಿಗಳಲ್ಲಿ ಕಾಡುಕೋಣ ಯಾವುದೆಂದು ಅವನಿಗೆ ಗುರುತಿಸಲಾಗಲಿಲ್ಲ. ಅಧಿಕಾರಿಯೋ ಬಯಲು ಸೀಮೆಯವನು. ನಿರಾಶನಾಗಿ ಹಿಂದೆ ಬಂದು ಆ ಮರಿಗಳವುಗಳ ಪೋಟೋ ತೆಗೆದು ಕೊಳ್ಳಿ ಎಂದು ಪೋಟೊಗ್ರಾಫರ್ಗೆ ಆದೇಶಿಸಿದ. ಅಪ್ಪಯ್ಯನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಬಿಸಿತು. ಅಧಿಕಾರಿ ಅಪ್ಪಯ್ಯನೊಡನೆ ಏನೋ ಮಾತನಾಡಿಕೊಂಡು ಜೀಪು ಹತ್ತಿ ಹೊರಟ.
ಅವರು ಬಂದು ಹೋದ ಮೇಲೆ ಅಪ್ಪಯ್ಯ ಚಿಂತಾಕ್ರಾಂತರಾದರು. ನನ್ನೊಡನೆ ಮಾತು ನಿಲ್ಲಿಸಿದರು. ನೀನು ಸ್ವಲ್ಪ ದಿನಗಳಿಗೆ ಊರು ಬಿಡು. ಆ ಮರಿಯನ್ನ ಹಟ್ಟಿಯಿಂದ ಬಿಡು ಎಂದು ವರಾತ ಶುರುವಿಟ್ಟರು. ಸಣ್ಣ ಶಬ್ದಕ್ಕೂ ಎಗರಿ ಬೀಳುತ್ತಿದ್ದರು. ಅಪ್ಪಯ್ಯ ದಿನದಿಂದ ದಿನಕ್ಕೆ ಕೃಶರಾಗತೊಡಗಿದರು. ಅವರ ಅವಸ್ಥೆ ನೋಡಲಾಗದೇ ಮರಿಯನ್ನು ಕಾಡಿಗೆ ಬಿಟ್ಟು ಬಂದೆ. ಅದು ಐದಾರು ಬಾರಿ ಇವನನ್ನೇ ನೋಡಿ ಕಾಡಿನಲ್ಲಿ ಕಣ್ಮರೆಯಾಯಿತು. ಏನೇ ಮಾಡಿದರೂ ಅಪ್ಪಯ್ಯನ ದಿಗಿಲು ಕಡಿಮೆಯಾಗಲಿಲ್ಲ. ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಯಾವಾಗ ಮಗ ಅರಸ್ಟ್ ಆಗುವನೊ ಎಂಬ ಚಿಂತೆಯಲ್ಲೇ ಕಾಲ ಹಾಕತೊಡಗಿದರು.
***
"ಇದೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್" ಎಂದು ಕಪಾಚಿನೋ ಹೀರುತ್ತಾ ಹೇಳಿದ ಹೇಮಂತ್.
ಅವನಿ ಮುಂದೆ ಎನ್ನುವಂತೆ ಅವನನ್ನೆ ನೋಡತೊಡಗಿದಳು.
***
ಇದೇ ಚಿಂತೆಯಲ್ಲಿ ಅವರನ್ನು ನೋಡಲಾದೇ ನಾನು ಮನೆ ಬಿಟ್ಟೆ. ಮೊದ ಮೊದಲಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಜೊತೆ ಜೊತೆಗೆ ಓದು ಮುಂದುವರಿಸಿದೆ. ಬೆಂಗಳೂರಿಗೆ ಬಂದೆ ಬರವಣಿಗೆ ಕೈ ಹತ್ತಿತು. ನಾ ಬರೆದ 'ಕಾಟಿ ಮರಿಯ ಕೃಪಾಕಟಾಕ್ಷ' ಕತೆಗೆ ಮೊದಲ ಬಹುಮಾನ ಕೂಡ ಬಂದಿತು. ಪ್ರಜಾ ಮಿತ್ರಕ್ಕೆ ದುಡಿದೆ. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೆ ಇಲ್ಲಾ.
***
ಕಪ್ನಲ್ಲಿದ್ದ ಕಪಚಿನೋ ಕೂಡಾ ಮುಗಿದಿತ್ತು. ತುಂತುರು ಮಳೆಯೂ ಆಗಸ್ಟೇ ನಿಂತಿತು.
ಪ್ರಪಂಚದಲ್ಲಿ ಕಾಡೆಮ್ಮೆ ಮರಿಯಿಂದಾಗಿ ಪರ್ತಕರ್ತರಾದವರು ಇರಲಿಕ್ಕಿಲ್ಲ. ಎಂದು ಹೇಳಿ ನಕ್ಕ.
ಅವಳೂ ಅವನ ಜೊತೆಗೂಡಿದಳು.
***
ಶ್ರೀಧರ್. ಎಸ್. ಸಿದ್ದಾಪುರ.
x
Wednesday, September 16, 2020
ಭಿನ್ನೋಟ
ಒಂದು ಭಿನ್ನ ನೋಟದ ಚಿತ್ರ.- ಇದೊಂದು ಹೊಸ ಅಂಕಣ. ಇಷ್ಟವಾದ ಚಿತ್ರಗಳ ಷೋಕೇಸ್..
ಪೋಲ್ಟಿಸ್ ಪ್ರಭೇದದ ಈ ಜೇಡದ ಚಿತ್ರ ಯಾಕೋ ಬಹಳ ಇಷ್ಟವಾಯಿತು. ಎರಡು ಕೋಡುಗಳ ನಡುವೆ ಸುಮ್ಮನೆ ಕೂತು ಧ್ಯಾನಸ್ಥನಾಗಿದ್ದಾನೆ. ಎಲೆಗಳ ಎಡೆಯಲ್ಲಿ ನೋಡುತ್ತಿದ್ದರೆ ಯಾವುದೋ ಪರಕಾಯ ಕಾಳಿನಂತೆ ಗೋಚರಿಸುವ ಇದು ಹೇಗೋ ನನ್ನ ಕಣ್ಣಿಗೂ ಕಾಣಸಿಕ್ಕಿತು! ಸುತ್ತಲಿನ ಪರಿಸರದಲಿ ಒಂದಾಗಿ ಕಾಣದಂತೆ ಬದುಕುವುದು ಅವುಗಳ ಅನಿವಾರ್ಯತೆ . ನಮ್ಮದು ಆದಷ್ಟು ಎಲ್ಲರ ಕಣ್ಣಿಗೆ ಬೀಳುವ ಹಪಾಹಪಿ ಮನಸ್ಸು! ಮತ್ತಷ್ಟು ಚಿತ್ರಗಳೊಂದಿಗೆ ಮತ್ತೆ ಬರುವೆ. ಅಲ್ಲಿಯವರೆಗೆ ನಮಸ್ಕಾರ..
![]() |
| Poltys Spider |
Thursday, September 3, 2020
ಸೂಡಿ ಎಂಬ ಕಾಡ ಬೆರಗು...
ಅನೇಕ ಹೊಸತುಗಳ ಹೂರಣ :-
ತನಿಯಾ ಎಂಬ ಅಮಾಯಕ:-
Saturday, August 22, 2020
ಮಿಸ್ಟರ್ ಗರಗಸ...
ದಶಕಗಳ ಹಿಂದೆ ಈ ಹೆಸರಿನ ಚಲನಚಿತ್ರ ತೆರೆಕಂಡಿತ್ತು. ನೆನಪು ತಪ್ಪಿಲ್ಲದಿದ್ದರೆ ಕೋಮಲ್ ನಾಯಕ. ಆತನದು ಆ ಚಿತ್ರದಲಿ ತಡೆರಹಿತ ಕೊರೆತ. ರಿಯಲಿ ರೀಲ್ ಗರಗಸನೇ ಈತ! ನೀವೇನಂತೀರಿ?
ನಮ್ಮ ಕತೆಯ ಗರಗಸನೇ ಬೇರೆ. ಯಾವ ನಾಯಕನಿಗಿಂತಲೂ ಕಡಿಮೆ ಏನಿಲ್ಲಾ. ಪರಿಸರ ಸ್ನೇಹಿ, ಹತ್ತಾರು ಜೀವಿಗಳೊಂದಿಗೆ ಸಹ ಜೀವನ ನಡೆಸಬಲ್ಲ! ತನ್ನದಲ್ಲದ ವಸ್ತು ಕ್ಷೇತ್ರವನ್ನು ಮುಟ್ಟಲಾರ! ಕಮರ್ಶಿಯಲ್ ನಾಯಕನಿಗಿರುವ ಅರ್ಹತೆಯಲ್ಲಾ ಇವೆ. ಡ್ಯಾನ್ಸ ಒಂದನ್ನು ಬಿಟ್ಟು! ಅದನ್ನೂ ಮಾಡುತ್ತಾನೊ ಗೊತ್ತಿಲ್ಲ. ಸಂಭಾವನೆ ಮಾತ್ರ ಶೂನ್ಯ. ಕೊಟ್ಟರು ಇಸಕೊಳ್ಳದ ಪುಣ್ಯಾತ್ಮ. ನಾವೆಷ್ಟೇ ಅವನಿಗೆ ಕೃತಜ್ಞರಾಗಿದ್ದರೂ ಕಡಿಮೆಯೆ. ಸದಾ ಕ್ರಿಯಾಶೀಲ ಬಿಡುವಿಲ್ಲದ ವೇಳಾಪಟ್ಟಿ.
ಅಡಗಿ ಕೂತ ಕದೀಮರನ್ನು ಅರಸರಸಿ ಹೊಡೆವ. ಅವನಿಗೆ ಬೇಕಾದವರನ್ನು ಮಾತ್ರ!! ಇವನ ಕಷ್ಟಕ್ಕೆ ನೀವೇನೇ ಕೊಟ್ಟರು ಕಡಿಮೆಯೇ. ಯಾರೆಂದು ಕೊಂಡಿರಿ ನೀವು? ನಿಮ್ಮ ಊಹೆ ಸರಿ. ಇದೊಂದು Myrmarachne ಜೇನಸ್ ಗೆ ಸೇರಿದ ಜೇಡ. ನಮ್ಮ ಬಿದಿರ ಕಟ್ಟೆಯನ್ನು ಅನುಕರಿಸುತ್ತಾ ಸುತ್ತಾಡುತ್ತಾನೆ. ನಿಮಗೆ ಬಿದಿರ ಕಟ್ಟೆ ನೆನಪಾದೀತು. ಇಂದಿನ ಯುಗದಲ್ಲಿ ತನ್ನನ್ನು ಎಲ್ಲರೂ ಗುರುತಿಸಲಿ ಎಂದೇ ಬಯಸುವಲ್ಲಿ ಈತ ಯಾರೂ ಗುರುತಿಸದಿರಲಿ ಎಂದು ವೇಷಮರೆಸಿಕೊಂಡೇ ಇರುವವನು. ಎಲೆ ಮರೆಯ ಕಾಯಿಯಂತೆ.
ಇವನ ಬೇಟೆ ಹತ್ತಿರಕ್ಕೆ ಬಂದರೆ ಹರೋಹರ! ಒಂದೇ ಗುಕ್ಕಿಗೆ ತನ್ನ ಗರಗಸವನ್ನು ಚಾಚಿ ರಕ್ತ ಚಲ್ಲಾಡುತ್ತಾನೆ. ಇವನ ಹಿಡಿತಕ್ಕೊಮ್ಮೆ ಸಿಕ್ಕಿದರೆ ಮುಗೀತು. ಅಂತಹ ಹಿಡಿತ. ಅನೇಕ ಜೇಡಗಳು, ಬಿದಿರ ಕಟ್ಟೆಗಳು (ಕಟ್ಟೆ ಹಿಡಿದ ಚಿತ್ರಗಳು ಇನ್ನೂ ಸಿಕ್ಕಿಲ್ಲ!! ) ಇವನ ಆಹಾರ.
Sunday, July 26, 2020
ಕದ
Thursday, July 16, 2020
ಹಗಲ ಸಂನ್ಯಾಸಿ...
![]() |
| POLTYS SPIDER. |
ಯಾಕಿಂತಹ ಮಹಾ ಮೌನ? ನಮಗರ್ಥವಾಗುವುದೇ ಇಲ್ಲ. ಅವನ ಬೆನ್ನಟ್ಟಿ ಹೋದರೆ ಪುಣ್ಯಾತ್ಮ ಮಾತನಾಡುವುದೇ ಇಲ್ಲ!! ಇವನ ಮೌನಕೂ ಒಂದು ಹೊಸ ಅರ್ಥ. ತನ್ನ ದೇಹಕ್ಕಿಂತ ದೊಡ್ಡದಾದ ಕಟ್ಟಿಗೆ ತುಂಡನ್ನು ಕಟ್ಟಿಕೊಂಡದ್ದಕ್ಕೆ ದುಃಖವೇ? ಅದಕ್ಕಿಂತ ಅಪಾಯಕಾರಿಯಾದ ಹೆಂಡತಿಯರನ್ನು ಈ ಗಂಡಸರು ಕಟ್ಟಿಕೊಂಡರೂ ಎಷ್ಟು ಆಸಕ್ತಿಯಿಂದ ಖುಷಿಯಾಗೇ ಇರುತ್ತಾರೆ ಗೊತ್ತಾ? ಎಂದು ಕೇಳಬೇಕೆಂದುಕೊಂಡೆ. ಉಹುಂ ಮಾತೇ ಆಡಲಿಲ್ಲ! 'ಇಲ್ಲೇ ಇರು ಬಂದೆ.' ಎಂದು ಹೊರಟೆ.
ಇಳಿ ಸಂಜೆಗೆ ಕ್ಯಾಮಾರವನ್ನು ಹೆಗಲಿಗೇರಿಸಿಕೊಂಡು ಮಾತನಾಡಿಸೋಣವೆಂದು ಮತ್ತೆ ಹೊರಟೆ. ಅಯ್ಯೋ ಪುಣ್ಯಾತ್ಮ ಎಲ್ಲೂ ಇಲ್ಲ. ಹುಡುಕಿ ಸುಸ್ತಾಗಿ ಹೊರಡೊ ಹೊತ್ತಿಗೆ ಕಾಣಿಸಿದ. ಪಕ್ಕದ ಬಿದಿರ ಗಿಡದಲಿ ಮನೆ ಕಟ್ಟುತ್ತಿದ್ದಾನೆ (ಬಲೆ). ಎಂಟು ಕಾಲಿನ ಬಂಟ ಎಂಟರ ಹೊತ್ತಿಗೆ ಸುಂದರ ಮನೆ ಸಿದ್ದವಾಗಿತ್ತು. ಹಗಲಿಡಿ ಹಸಿವೆಯಿಂದ ನರಳಿದವನಿಗೆ ರಾತ್ರಿ ಪುಷ್ಕಳ ಭೋಜನ. ಒಂದರ ಮೇಲೊಂದು ಕೀಟಗಳು ಬಲೆಗೆ ಬಂದು ಬೀಳತೊಡಗಿದವು. ಎಲ್ಲವನ್ನೂ ಸುತ್ತಿಟ್ಟನೇ ಹೊರತು ತಿನ್ನಲೇ ಇಲ್ಲ. ಒಂಬತ್ತರ ಹೊತ್ತಿಗೆ ಮೆಲ್ಲಗೆ ಮನೆ ಕಡೆ ಹೊರಟೆ. ಈತ ಕ್ಯಾರೇ ಎನ್ನದೇ ಏನೂ ತಿನ್ನದೇ ಹಾಗೇ ಇದ್ದ.
ಪೋಲ್ಟಿಸ್ ಪ್ರಭೇದದಕ್ಕೆ ಸೇರಿದ ಜೇಡವಿದು ಅಂತ ನನ್ನ ಮೊದಲ ನೋಟಕ್ಕೆ ತಿಳಿದು ಬರುತ್ತದೆ.
ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.
Saturday, July 4, 2020
ಭಯಂಕರ ಹೆಸರಿನ ಊರುಗಳು!
ನಾನು ಇಂಗ್ಲೆಡ್ನಲ್ಲಿ ಓದುವ ಸಮಯದಲ್ಲಿ ಲಿಂಕನ್ ಷೈರ್ ಎಂಬ ಊರಿಗೆ ಹೋಗಿದ್ದೆ. ಅದು ಸುಂದರವಾದ ಊರು. ನಿಸರ್ಗದ ಸೊಬಗನ್ನೆಲ್ಲಾ ಸೂರೆ ಹೊಡೆದು ಅವತರಿಸಿದಂತಿರುವ ಊರು. ಅಲ್ಲಿಂದ ತುಸು ದೂರದಲ್ಲಿ ಒಂದು ಹಳ್ಳಿ ಇದೆ. ನಾನಲ್ಲಿ ಇಡೀ ದಿನ ಉಳಿದಿದ್ದೆ. ಅಲ್ಲಿಂದ ವಾಪಾಸು ಬಂದ ನಂತರ ಅನೇಕ ಸ್ನೇಹಿತರು 'ಎಲ್ಲಿ ಹೋಗಿದ್ದೆ?' ಎಂದು ಕೇಳಿದರೂ ಹೇಳಲು ಏನೋ ಮುಜುಗರ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಕ್ಕಪಕ್ಕದಲ್ಲಿ ಮೂರು ಊರುಗಳಿವೆ. ಆ ಮೂರು ಊರುಗಳ ಹೆಸರುಗಳನ್ನು ಒಂದೇ ಉಸುರಿಗೆ ಹೇಳಿದರೆ ಅಭಾಸವಾಗುತ್ತದೆ. ಅಂದಹಾಗೆ ಆ ಊರುಗಳ ಹೆಸರು ಬಾರೆ, ಸೀರೆ, ಕಳಚೆ'. ಕೆಲವು ಸಲ ಆ ಊರಿನ ಜನರಿಗೆ ತಮ್ಮ ಊರಿನ ಹೆಸರನ್ನು ಹೇಳಲು ಮುಜುಗರವಾಗಲೂಬಹುದು.
ಅದೇ ರೀತಿ ಇಂಗ್ಲೆಂಡ್ನ ಲಿಂಕನ್ಷೈರ್ ಸನಿಹದ ಹಳ್ಳಿ ಹೆಸರನ್ನು ಹೇಳಲು ಸಹ ಮುಜುಗರವಾಗುತ್ತದೆ. ಕಾರಣ ಅಲ್ಲಿನ ಅವಳಿ ಊರುಗಳ ಹೆಸರು ಬಿಚ್(BITCH ) ಹಾಗೂ ಬಿಚ್ಪೀಲ್ಡ್ (BITCHFEILD ) ಪ್ರಾನ್ಸ್ನಲ್ಲೂ ಇದೇ ಹೆಸರಿನ ಒಂದು ಊರಿದೆಯೆಂದು ಅಲ್ಲಿಗೆ ಹೋದಾಗ ಗೊತ್ತಾಯಿತು.
ಬೋರಿಂಗ್ ಹೆಸರಿನ ಒಂದು ಊರು ಇರಲು ಸಾಧ್ಯವಾ? ಆ ಊರಿನ ಜನ ಹೇಗಿದ್ದಿರಬಹುದು? ಅವರಿಗೆ ಆ ಹೆಸರಿನ ಬಗ್ಗೆ ಯಾವ ಅಭಿಪ್ರಾಯವಿದ್ದಿರಬಹುದು?
ಕೆಲವು ವರ್ಷಗಳ ಹಿಂದೆ ನಾನು ಸ್ಕಾಟ್ಲ್ಯಾಂಡ್ ರಾಜಧಾನಿ ಎಡಿನಬರ್ಗ್ ಗೆ ಹೋಗಿದ್ದೆ. ಅಲ್ಲಿಂದ ನಾನು ಪೋರ್ಟ್ ಮ್ಯಾನ್ ಫೀಲ್ಡ್ಗೆ ಹೋಗಬೇಕಿತ್ತು. ನನ್ನ ಜತೆಗಿದ್ದ ಸ್ನೇಹಿತ 'ಇಲ್ಲೇ ಸನಿಹದಲ್ಲಿ ಒಂದು ಊರಿದೆ. ಅದರ ಹೆಸರು ಡಲ್ ಅಂತ. ಅದರ ಪಕ್ಕ ಮತ್ತೊಂದು ಊರಿದೆ. ಅದರ ಹೆಸರು 'ಬೋರಿಂಗ್' ಎಂದ. ಕುತೂಹಲ ತಾಳಲಾರದೇ ಆ ಊರಿಗೆ ಹೋಗಿದ್ದೆ. ಬೋರಿಂಗ್ ನಿಜಕ್ಕೂ ಲವಲವಿಕೆಯ ಊರು. ಶೀತ ಜಾಸ್ತಿಯಾಗಿರುವುದರಿಂದ ವರ್ಷದ ಹೆಚ್ಚಿನ ಅವಧಿ ಚಟುವಟಿಕೆ ಕಮ್ಮಿಯಾಗಿರುತ್ತದೆ. ಆ ಕಾರಣದಿಂದ ಆ ಹೆಸರು ಬಂದಿರಬಹುದೆ ಎಂಬುದು ಅಲ್ಲಿನ ಸ್ಥಳೀಯರ ಅಭಿಪ್ರಾಯ. ಆದರೆ ಅವರ್ಯಾರಿಗೂ ತಮ್ಮ ಊರಿನ ಹೆಸರಿನ ಬಗ್ಗೆ ಬೇಸರವಾಗಲಿ ಅತೃಪ್ತಿಯಾಗಲಿ ಇದ್ದಂತಿಲ್ಲ. ಕೆಲವರಿಗಂತೂ ಆ ಹೆಸರಿನಿಂದಾಗಿಯೇ ತಮ್ಮ ಊರು ಜನಪ್ರಿಯವಾಗಿರುವುದರಿಂದ, ಆ ಬಗ್ಗೆ ಅಭಿಮಾನವಿದ್ದಂತಿತ್ತು.
ಅಮೇರಿಕದ ಮೇರಿಲ್ಯಾಂಡ್ನಲ್ಲಿ ಸಹ ಬೋರಿಂಗ್ ಹೆಸರಿನ ಊರಿದೆಯೆಂಬುದು ಸ್ಕಾಟ್ ಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಹೋದಾಗ ಗೊತ್ತಾಗಿದ್ದು. ಮೇರಿಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಆ ಊರಿನಲ್ಲಿರುವ ಪೋಸ್ಟಮನ್ ಡೆವಿಡ್ ಬೋರಿಂಗ್ ಕಾರಣ. ಅವನ ಸ್ಮರಣಾರ್ಥ ಆ ಹೆಸರನ್ನು ಆ ಊರಿಗೆ ಇಡಲಾಗಿದೆ. ಅಮೆರಿಕದ ಟೆನಿಸ್ಸಿ ರಾಜ್ಯದಲ್ಲೂ ' ಬೋರಿಂಗ್' ಎಂಬ ಊರಿದೆ ಎಂದು ಕೇಳಿದ್ದೇನೆ. ಕೆಲವು ವರ್ಷಗಳ ಹಿಂದೆ, ಇಟಲಿಯ ಸನಿಹದ ಟುರಿನ್ ಎಂಬ ನಗರಕ್ಕೆ ಹೋಗಿದ್ದೆ. ಅಲ್ಲಿಗೆ ಸುಮಾರು ಐವತ್ತು ಕಿ.ಮೀ ದೂರದಲ್ಲಿ ಪೀಡ್ಮಾಂಟ್ ಎಂಬ ಪ್ರಾಂತವಿದೆ. ಅಲ್ಲೊಂದು ತೀರಾ ಅಪರೂಪದ, ಹೇಳಲು ನಾಚಿಕೆಪಡುವ ಊರಿದೆ.
ಬ್ರಾ!
ಆ ಊರಿನ ಹೆಸರು ನಿಮಗೆ ಗೊತ್ತಿರಬಹುದು, ಫಾಸ್ಟ್ಪುಡ್ ಬದಲಿಗೆ ಸ್ಲೋಪುಡ್ ಹೋರಾಟ ಮಾಡಿದ ಕಾರ್ಲೋ ಪೆಟ್ರಿನಿ ಈ ಊರಿನಿಂದಲೇ ತನ್ನ ಅಭಿಯಾನ ಆರಂಭಿಸಿದ್ದು. ಆಗ ಕೆಲವು ಪತ್ರಿಕೆಗಳು Slow food campaign starts from bra ಎಂಬ ತಲೆಬರೆಹ ಕೊಟ್ಟಿದ್ದವು.
'ಬ್ರಾ ಊರಿಗೆ ಹೋಗ್ತೀನಿ' ಅಂದ್ರೆ ಯಾರಾದರೂ ತಪ್ಪು ಭಾವಿಸಬಹುದು. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಕೇಳಿದಾಗ 'ನಾನು ಬ್ರಾದಲ್ಲಿದ್ದೇನೆ' ಎಂದರೆ ಏನಾಗಬಹುದು?
ವಿಜಯಪುರದ ಸನಿಹದಲ್ಲಿರುವ 'ಹುಡುಗಿ' ಊರಿಗೆ ಹೋಗುವಾಗ ಬಸ್ ಕಂಡಕ್ಟರ್ ಬಳಿ ' ಒಂದು ಹುಡುಗಿ ಕೊಡಿ'( ಹುಡುಗಿಗೆ ಹೋಗಲು ಒಂದು ಟಿಕೆಟ್ ಕೊಡಿ ಎನ್ನುವ ಬದಲು) ಎಂದು ತಮಾಷೆ, ಚೋದ್ಯ ಮಾಡಲು ಹಾಗೆ ಹೇಳುವುದುಂಟು. ಅದೇ ರೀತಿ ಬ್ರಾ ಊರಿಗೆ ಹೋಗುವಾಗಲೂ 'ಒಂದು ಬ್ರಾ ಕೊಡಿ, ಎರಡು ಬ್ರಾ ಕೊಡಿ' ಎಂದು ಕಂಡಕ್ಟರ್ಗೆ ಹೆಳುವ ಪ್ರಸಂಗ ತಮಾಷೆಯಾಗಿದ್ದೀತು. ಹೆಂಡತಿಯೇನಾದರೂ ಟಿಕೆಟ್ ತೆಗೆಯುವ ಪ್ರಸಂಗ ಬಂದರೆ, ' ನನ್ನ ಗಂಡನಿಗೊಂದು ಬ್ರಾ ಕೊಡಿ' ಅಂದರೆ ಕಂಡಕ್ಟರ್ ನಗದೇ ಇರುತ್ತಾನಾ?
ಬ್ರಾ ಊರು ಚೀಸ್ಗೆ ಬಹಳ ಪ್ರಸಿದ್ಧ. ಲಕ್ಷಾಂತರ ಜನ ಸೇರಿ ಪ್ರತಿವರ್ಷ ಇಲ್ಲಿ ಚೀಸ್ ಹಬ್ಬವನ್ನು ಆಚರಿಸುತ್ತಾರೆ. Eat cheese from bra, Bra for cheese, As exotic as bra ಮುಂತಾದ ಹೋರ್ಡಿಂಗ್ ಬರಹಗಳು ಅಲ್ಲಿ ಎಲ್ಲೆಡೆ ರಾರಾಜಿಸುತ್ತವೆ. He was born in bra ಎಂದು ಹೇಳಿದರೆ ಯಾರಾದರೂ ತಪ್ಪು ಭಾವಿಸದಿರುವುದುಂಟಾ? ಹಾಗೆಯೇ ಈ ಊರನ್ನು ಬಣ್ಣಿಸುತ್ತಾ Bra is beautiful ಅಂದರೆ?!!
ಬ್ರಾ ಎಂಬ ಊರು ಇದ್ದ ಮೇಲೆ ಬ್ರೆಸ್ಟ್ ಎಂಬ ಊರು ಇರಲೇಬೇಕಲ್ಲ? ಒಂದಿದ್ದರೆ ಮೊತ್ತೊಂದು ಇರಲೇಬೇಕು ತಾನೆ? ಮೂರು ವರ್ಷಗಳ ಹಿಂದೆ ಫ್ರಾನ್ಸ್ನ ಪ್ಯಾರಿಸ್ ನಗರದಿಂದ ಮೂರು ತಾಸು ಬಸ್ ಪ್ರಯಾಣ ಮಾಡಿ ಮೌಂಟ್ಸೇಂಟ್ ಮಿಷೆಲ್ನಲ್ಲಿರುವ ಒಂದು ಅರಮನೆಗೆ ಹೋಗಿದ್ದೆ. ಈ ಊರಿಗೆ ಸನಿಹದಲ್ಲೇ ಬ್ರೆಸ್ಟ್ ಎಂಬ ಊರಿದೆ. ಸ್ಪೆಲ್ಲಿಂಗ್ ಮಾತ್ರ ಬೇರೆ ಉಚ್ಚಾರ ಒಂದೇ. ಪ್ರಕೃತಿಯ ಸೊಬಗನ್ನೆಲ್ಲ ಹೊದ್ದು ಅವತರಿಸಿದಂತಿರುವ ಈ ಊರನ್ನು ನೋಡಿದವರು ಆನಂದದಿಂದ ಏನೇ ಉದ್ಗಾರ ತೆಗೆದರೂ ಅಪಾರ್ಥಕ್ಕೆ, ಡಬಲ್ ಮೀನಿಂಗ್ಗೆ ಎಡೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ.
ನನ್ನ ಆತ್ಮೀಯ ಸ್ನೇಹಿತ ಗುರುಪಾದ ಶಾಸ್ತ್ರಿಯವರು ಎಂಟು ವರುಷಗಳಿಂದ ಅಮೆರಿಕದ ಅರ್ಕನ್ಸಾಸ್ ರಾಜ್ಯದ ಸ್ಟೋನ್ ಕೌಂಟಿ ಸನಿಹದಲ್ಲಿರುವ ಒಂದು ಪುಟ್ಟ ಊರಿನಲ್ಲಿದ್ದಾರೆ. ಆ ಊರಿನ ಜನಸಂಖ್ಯೆ ಇನ್ನೂರು. ಕಳೆದ ಹದಿನೈದು ವರುಷಗಳಲ್ಲಿ ಹನ್ನೆರಡು ಜನಸಂಖ್ಯೆ ಜಾಸ್ತಿಯಾಗಿದೆಯಂತೆ.
ಆ ಊರಿನ ಹೆಸರು ಫಿಫ್ಟಿ ಸಿಕ್ಸ್!
ಇಂಥಹದ್ದೊಂದು ಹೆಸರಿನ ಊರು ಇರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಶಾಸ್ತ್ರಿಯವರು ತಮಾಷೆ ಮಾಡುತ್ತಿದ್ದಿರಬಹುದು ಎಂದೇ ಭಾವಿಸಿದ್ದೆ. ಆದರೆ ಅವರು ತಮ್ಮ ವಿಸಿಟಿಂಗ್ ಕಾರ್ಡ್ ತೋರಿಸಿದಾಗಲೇ ನಂಬಿದ್ದು. ಅವರೇ ಹೇಳಿದ ಇನ್ನೊಂದು ಸಂಗತಿಯೇನೆಂದರೆ, 'ನಂಬರ್ ಹೆಸರಾಗಿರುವುದು ನಾನಿರುವ ಊರಿನಲ್ಲೊಂದೇ ಅಲ್ಲ, ಆಸ್ಟ್ರೇಲಿಯದಲ್ಲಿ 1770 ಎಂಬ ಹೆಸರಿನ ಊರಿದೆ.'
ಗೆಳೆಯ ಎಂ.ಕೆ. ನವೀನ ಮಡಗಾಸ್ಕರ್ ನಲ್ಲಿರುವ ಎಂಪನಿಹಿ ಎಂಬ ಪ್ರಾಂತ್ಯದಲ್ಲಿದ್ದಾರೆ. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಅವರನ್ನು ಕೇಳಿದಾಗ 'ಗೋಗೋಗೋಗೋ' ಎಂದು ಹೇಳಿದ್ದರು. ಅವರ ಮಾತನ್ನು ಕೇಳಿ ನನಗೆ ತೀರಾ ಕಸಿವಿಸಿಯಾಗಿತ್ತು. 'ಏನು ಈ ಮುಷ್ಯ ಹೋಗು ಹೋಗು ಹೋಗು ಹೋಗು ಎಂದು ಹೇಳುತ್ತಿದ್ದಾನಲ್ಲ?' ಎಂದು ಅಂದು ಕೊಂಡಿದ್ದೆ. ಕೊನೆಗೆ ಆ ಊರಿನ ಹೆಸರನ್ನು ವಿವರಿಸಿದಾಗ ಬಿದ್ದು ಬಿದ್ದು ನಕ್ಕಿದ್ದೆ.
ಅಮೆರಿಕಾದ ಕೊಲೊರಡೋದಲ್ಲಿ ಒಂದು ನಗರವಿದೆ ಅದರ ಹೆಸರು ಓಠ ಓಚಿಟಜ. ಹೆಸರಿಲ್ಲದ ಊರು! ವಿದೇಶಗಳಲ್ಲೂ ವಿಚಿತ್ರ ಊರುಗಳ ಹೆಸರುಗಳಿಗೆ ಬರವಿಲ್ಲ.
#ವಿಶ್ವೇಶ್ವರ್ ಭಟ್.
22.10.2017 ರ ವಿಶ್ವವಾಣಿಯ ಭಾನುವಾರದ ವಿಶ್ವೇಶ್ವರ ಭಟ್ ರವರ ವಿದೇಶಕಾಲ ಅಂಕಣದಿಂದ ಆರಿಸಿದ್ದು.
Sunday, June 28, 2020
ಸಿಲ್ಲರ್ ಎಂಬ ಅವಕಾಶವಾದಿ!
![]() |
| ಸತ್ತ ಇರುವೆಯನು ಹಿಡಿಯಲು ಕಾಯುತಿರುವ ಸಿಲ್ಲರ್ ಜೇಡ. |
ಹೀಗಿರುವ ವಾತಾವರಣದಲ್ಲಿ ಮತ್ತಿ ಗಿಡದಲ್ಲಿ ಒಸರುವ ಸಿಹಿಯನ್ನು ಸವಿಯಲು ದರ್ಜಿ ಇರುವೆಗಳು ಗಿಡಕ್ಕೆ ಭೇಟಿ ಕೊಡುತ್ತಿದ್ದವು. ಇಂತಹ ಒಂದು ಗಿಡದಲ್ಲಿ ಇರುವೆಗಳಿಗಾಗಿ ಕಾದು ಕುಳಿತಿದ್ದ ಸಿಲ್ಲರ್ (Siler) ಎಂಬ ಇರುವೆ ಪ್ರಿಯ ಜೇಡ. ಕಟುಕನಾದರೂ ಧೈರ್ಯಶಾಲಿಯಲ್ಲ. ಸಣ್ಣ ಪುಕ್ಕಲೊಂದು ಯಾವಾಗಲೂ ಅವನ ಎದೆಯಲ್ಲಡಗಿರುತ್ತಿತ್ತು. ಎರಡು ಮೂರು ಇರುವೆ ಬಂದರೂ ಬೇಟೆಯಾಡದೇ ಹಾಗೇ ಬಿಟ್ಟು ಬಿಟ್ಟು ಬಿಟ್ಟನಪ್ಪ. ಯಾಕೋ ಗೊತ್ತಿಲ್ಲ.
ಮತ್ತಿ ಮರದ ಚಿಗುರ ಹಿಂದೆಯೇ ಅಡಗಿ ಕುಳಿತ್ತಿತ್ತು. ಹೀಗಿರುವಾಗ ಎಲ್ಲಿಂದಲೊಂದು ಒಂದಿರುವೆ ಮತ್ತೊಂದು ಸತ್ತ ಇರುವೆಯನ್ನು ತನ್ನ ಗೂಡಿಗೆ ಒಯ್ಯುವ ಪ್ರಯತ್ನದಲ್ಲಿ ವಿಫಲವಾಗಿ ಹಾಗೇ ಎಲೆಯ ಮೇಲೆ ಬೀಳಿಸಿ ಹೋಗಿತ್ತು. ಸುಮಾರು ಹೊತ್ತು ಕಾದು ಕಾದು ಯಾವುದೇ ಅಪಾಯವಿಲ್ಲವೆಂದು ನಿರ್ಧರಿಸಿ ಇರುವೆಯ ಮೇಲೆ ಎರಗಿತು. ಸತ್ತ ಇರುವೆಯನ್ನು ಎಗರಿಸಿಕೊಂಡು ಹೋಯಿತು.
ಸತ್ತ ಇರುವೆ ಹೊತ್ತೊಯ್ಯುವ ಈ ಜೇಡ ಕೆಲವೊಮ್ಮೆ ಧೈರ್ಯ ಮಾಡಿ ಸತ್ತ ಇರುವೆಯನ್ನು ತನ್ನದೆಂದು ಕ್ಲೈಮ್ ಮಾಡುವುದೂ ಉಂಟು!
![]() |
| ಸುಮಾರು ಹೊತ್ತು ಕಾದ ಬಳಿಕ ಇರುವೆಯನು ಹೊತ್ತೊಯ್ಯುವ ಜೇಡ. |
ಎರಡು ಮೂರು ವರುಷಗಳ ಹಿಂದೆ ಹೀಗೆಯೇ ಸತ್ತ ಇರುವೆಯೊಂದನ್ನು ಈ ಜೇಡ ಅನಾಮತ್ತು ಎಗರಿಸಿಕೊಂಡು ಹೋಗಿದ್ದನ್ನು ಕಂಡಿದ್ದೆ. ಏನೇ ಹೇಳಿ ಸಿಲ್ಲರ್ ಎಂಬುದೊಂದು ಅಪ್ಪಟ 'ಇರುವೆ ಕಳ್ಳ', ಅವಕಾಶವಾದಿ.
ವಾರೆ ನೋಟ
ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!
ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...

















































