ಮಲೆನಾಡಿನ ಮಗ್ಗುಲಿನಲ್ಲಿನಲ್ಲಿರುವ ಅದ್ಭುತ ಕೋಟೆ ಕವಲೇದುರ್ಗ. ತಿರ್ಥಹಳ್ಳಿಯಿಂದ ಕೇವಲ 16 ಕಿ.ಮಿ. ದೂರವಿರುವ ನೋಡುಗರ ಕಣ್ಮನ ಸೆಳೆಯುತ್ತದೆ. ನಮ್ಮ ಜನರ ಸಾಹಸ ಪ್ರವೃತ್ತಿ, ಧೈರ್ಯ, ದೂರದಶರ್ಿತ್ವ, ಸ್ವಾಭಿಮಾನದ ಪ್ರತೀಕವಾಗಿ ನಿಲ್ಲುತ್ತದೆ, ದೇಶಾಭಿಮಾನ ಮೂಡಿಸುತ್ತದೆ.
ಈ ಕೋಟೆಯ ಇತಿಹಾಸವನ್ನು ಅನೇಕರು ಬೇರೆ ಬೇರೆ ರೀತಿಯಾಗಿ ವಿರಿಸಿದ್ದಾರೆ. 9ನೇ ಶತಮಾನದಲ್ಲಿ, ಬೆಳಗುತ್ತಿ ರಾಜರಿಂದ ಸುಂದರವಾಗಿ ಕಣ ಶಿಲೆಯಿಂದ ನಿಮರ್ಿಸಲ್ಪಟ್ಟಿತು. ವೆಂಕಟಪ್ಪ ನಾಯಕನಿಂದ ಪುರ್ನನಿಮರ್ಿಸಲಾಯಿತು. ತದನಂತರ ಇದನ್ನು ಭುವನಗಿರಿ ಎಂದು ಕರೆಯಲಾಯಿತು. ಪ್ರಾರಂಭದ ದಿನಗಳಲ್ಲಿ ವಿಜಯನಗರದವರ ಅಧೀನದಲ್ಲಿದ್ದ ಕೋಟೆ ಮುಂದೆ ಕೆಳದಿಯ ಅಧೀನಕೊಳಪಟ್ಟಿತು. 1763 ರಲ್ಲಿ ಹೈದರಾಲಿಯು ಈ ಕೋಟೆಯನ್ನು ವಶಪಡಿಸಿಕೊಂಡನು. ಮುಂದೆ ಇದು ಕವಲೇದುರ್ಗವೆಂದು ಹೆಸರಾಯಿತು. . ಮೂರು ಹಂತಗಳಲ್ಲಿ ಕಾವಲು ಗೋಪುರಗಳನ್ನು ನಿಮರ್ಿಸಿ ಭದ್ರತೆಯನ್ನು ಹೆಚ್ಚಿಸಲಾಯಿತು. 1882ರವರೆಗೂ ಇದು ತಾಲೂಕು ಕೇಂದ್ರವಾಗಿತ್ತು.
ಇಲ್ಲಿ ಅರಮನೆ, ಸ್ನಾನಗೃಹ, ಕೆರೆ, ಅಸ್ತ್ರ ಒಲೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಮರ್ಿಸಿದ್ದಾರೆ. ವ್ಯವಸ್ಥಿತವಾಗಿ ಕಾವಲು ಗೋಪುರಗಳನ್ನು ನಿಮರ್ಿಸಿಲಾಗಿದೆ. ವಿಶ್ವನಾಥ ದೇವಸ್ಥಾನದ ಎದುರಿಗಿರುವ ಎರಡು ಗರುಡ ಗಂಬಗಳು ಅತಿ ವಿಶಿಷ್ಟವೂ ಅಪರೂಪದ ರಚನೆಗಳಾಗಿವೆ. ಈ ರೀತಿಯ ರಚನೆಗಳು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವುದಿಲ್ಲ. ದೇವಸ್ಥಾನದ ಶಿಲ್ಪಕಲೆಯು ಗಮನಸೆಳೆಯುತ್ತದೆ. ಶಿಖರದ ತುದಿಯಲ್ಲಿ ದೇವಸ್ಥಾನಗಳಿವೆ. ಮೇಲಿನ ತುದಿಯಲ್ಲಿ ಸಣ್ಣ ಕೊಳಗಳಿವೆ. ಈ ಕೊಳಗಳಲ್ಲಿ ವರ್ಷದ ಎಲ್ಲಾಕಾಲಗಳಲ್ಲೂ ನೀರಿರುವುದು ವಿಶೇಷ. ಈ ಕೊಳವನ್ನು ಗದಾ ತೀರ್ಥವೆಂದು ಕರೆಯಲಾಗುತ್ತದೆ. ಈ ಕೊಳವನ್ನು ಭೀಮನು ತನ್ನ ಗದೆಯಿಂದ ನಿಮರ್ಿಸಿದನೆಂಬುದು ಪ್ರತೀತಿ.
ಒಟ್ಟಾರೆಯಾಗಿ ಈ ಎಲ್ಲಾ ರಚನೆಗಳು ಅಧ್ಯಯನ ಯೋಗ್ಯವಾಗಿದೆ. ನಮ್ಮ ಪೂವರ್ಿಕರ ಬಗೆಗೆ ಹೆಮ್ಮೆ ಮೂಡುವಂತಿದೆ
ಅರಮನೆ |
ಅರಮನೆ |
ಅರಮನೆ, ಸ್ನಾನಗೃಹ |
ವಿಶ್ವನಾಥ ದೇವಸ್ಥಾನ |