Saturday, April 20, 2013

ಅಕ್ಕ ಮತ್ತು ಸುರಗಿ ಹೂ...


ಮತ್ತೆ ಬಂದಿದೆ ವಸಂತ..

ಹಾ ನಾಹೇಳುವ ಸುರಗಿ U. R. Ananth Moorthiಯ ಸುರಗಿ ಆತ್ಮಕತೆಯಲ್ಲ. ಅದರಲ್ಲಿ ಆತ್ಮವಿದೆಯೋ ಇಲ್ಲವೂ ಗೊತ್ತಿಲ್ಲ!
ಮೋಹಕ  ಸುರಗಿ

ಸುರಗಿ ಹೂವಿನ ಕಂಪು ವಸಂತದ ನೆನಪು. ಅಕ್ಕ ಸುರಗಿ ಗುಂಗಿಗೆ ಬಲಿಯಾದವರು ನಾನು. ಕೊಯ್ಯಲೊಬ್ಬರು ಅವಳೊಡನೆ ಹೋಗಲೇ ಬೇಕು, ಅವಳಿಗೊ ಭಯ. ಅವಳೊಡನೆ ಕಾಡು ಸುತ್ತಿ ಮರ ಹತ್ತಿ ಸುರಗಿ ಪರಿಮಳ ಹೀರಿ ಮನೆಗೆ ಬರುವಾಗ ಅಮ್ಮನ ತಿಂಡಿ ತಯಾರಾಗಿರುತ್ತಿತ್ತು. ಹಸಿವೆ ಹಿಂಗಿಸಿಕೊಂಡು ಸುರಗಿಯ ಹೂಮಾಲೆ ಮಾಡುವ ಸಂಭ್ರಮ ಅಕ್ಕನಿಗೆ. ಈಗ ಸುರಗಿಯ ವನವನ್ನು ನಾವು ಉಳಿಸಲಿಲ್ಲಾ ಅಕ್ಕನೂ ಉದ್ಯೋಗ ನಿಮಿತ್ತ ಬೆಂಗಳೂರಿನ ಸಿಮೆಂಟ್ ವನದಲ್ಲಿದ್ದಾಳೆ. ಅಲ್ಲೂ ಇಲ್ಲೂ ಸುರಗಿ ಮಾಯವಾಗಿದೆ. 
 ಅದನ್ನು ಬಳಸಿದವರಿಗೆ ಅದು ಕಾಡದಿರದು ನಿಮಗೂ ಈ ವಸಂತದಲಿ ಸುರಗಿ ನೆನಪಾಗಲಾರದೆ. U. R ನೆನಪಾದರೆ ನಾನು ಹೊಣೆಯಲ್ಲ. 
         ಸುರಗಿಯ ಜೊತೆ ಜೊತೆಗೆ ಕಾಡುವ ಹೂ ಸೀತೆ ಎಂದು ಕರೆಯು ಈ ಹೂ ಬಾಲ್ಯದ ನೆನಪಿನ ಭಾಗಗಳು. 
ಅಲ್ಲವೇ? ಹೌದಾದ್ರೆ ಕಾಮೆಂಟ್ ಮಾಡಿ. 






Thursday, April 18, 2013

ಚಿಟ್ಟೆಯೊಂದಿಗೆ ಸವಿ ಮಾತು.

ಚಿಟ್ಟೆಯೊಂದಿಗೆ ಸವಿ ಮಾತು.

"ಎರಡು ಎರಡು ಕಣ್ಣು ಮಿಟುಕಿಸಿ
ಹೊರಟ್ಟಿದ್ದೆಲ್ಲಿಗೆ?"
ಎಂದು ಕೇಳಿದೆ.
"ಪುಟ್ಟ ದೇಹಕೇಕೆ ಎರಡು ಕಣ್ಣು
ಒಂದೇ ಸಾಲದೇ?"
ಎಂದು ಕೇಳಿದೆ.
"ಎರಡು ಕಣ್ಣು ಸಾಲದೆನಗೆ
ಹೂವಿನಂದ ಸವಿಯಲು.
ಸೃಷ್ಟಿಗಿಂತ ದೃಷ್ಟಿ ಮುಖ್ಯ
ಸೊಬಗ ನೋಡಲು"
ಎಂದು ಸಾರಿತು.

Saturday, April 6, 2013

ನಮಗೂ ಬದುಕಲು ಒಂದು ಅವಕಾಶ ಕೊಡಿ.




MUR HEN

ಇಡಿ ಭಾರದಾದ್ಯಂತ ಕಂಡುಬರುತ್ತಿದ್ದ ಈ ನಾಮಗೋಳಿ ಹಕ್ಕಿ ಈಗ ಬಲು ಅಪರೂಪವಾಗುತ್ತಾ ಇದೆ. ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಕೊಜೆ ಹೊಂಡಗಳಲ್ಲಿ ಕಂಡುಬರುತ್ತಿದೆ. ಕಳೆದ ವರ್ಷ ಇಲ್ಲಿ ಈ ಹಕ್ಕಿಗಳಿರಲಿಲ್ಲ. ಈ ಹಕ್ಕಿಗಳು ಹೇಗೆ ಬಂದವೆಂಬುದು ನಿಗೂಢ! ಈ ಹಕ್ಕಿಗಳಲ್ಲಿ ಯಾವುದೋ ಒಂದು ಭಾಷಾ ಸಂಪರ್ಕವಿರಬೇಕೆಂಬುದು ನನ್ನ ಊಹೆ, ಇಲ್ಲವಾದರೆ ದೂರದ ಈ ಹೊಂಡದ ಬಗ್ಗೆ ಅವುಗಳಿಗೆ ಮಾಹಿತಿ ಲಬಿಸುವುದಾದರೆ ಹೇಗೆ? ಅಲ್ಲದೇ ಇವು ಅತ್ಯಂತ ಸಮರ್ಥವಾಗಿ ಹಾರಲಾರದ ಪಕ್ಷಿ ಸಮೂಹಕ್ಕೆ ಸೇರಿದವು.


. ಇದೇ ರೀತಿ ಪರಿಸರ ನಾಶವಾಗುತ್ತಾ ಸಾಗಿದರೆ ಮುಂದೊಂದು ದಿನ ನಾವು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಕೇವಲ ಏಕ ರೂಪದ ಪ್ರಾಣಿ ಪಕ್ಷಿ ವ್ಯವಸ್ಥೆಯಾಗಿ ರೂಪಗೊಳ್ಳವತ್ತ ನಾವು ಸಾಗುತ್ತಿದ್ದೇವೆ. ಪರಿಸರ ಅಸಮತೋಲನವು ತುಂಡರಿಸುವುದು ಖಂಡಿತ. ಯಾವುದೋ ಒಂದು ಪಕ್ಷಿಯ ನಾಶವು ನಮ್ಮ ನಾಶದ ಮುನ್ನುಡಿಯಾಗಿರಬಹುದು. ಯೋಚಿಸ ಬೇಕಾದುದು.


ಕುಂಡಿ ಅಲ್ಲಾಡಿಸುತ ಹೊರಟಿ ನಿ ಎಲ್ಲಿಗಿ!

ನಿಮ್ಮ ಸುದ್ದಿಗೆ ಬತ್ತಿಲ್ಲೆ ಮರ್ರೆ ಅಯ್ಯೋ ಬಿಟ್ಟ್ ಬಿಡಿ ನನ್ನ್ನಾ!!!



Saturday, March 9, 2013

ಅನಂತ ಶಕ್ತಿ






ಸುತ್ತ ಮುತ್ತ ಕೆಂಪ ಚಲ್ಲಿ
ಹಗಲ ಚುಕ್ಕಿ ಬಂದಿದೆ
ಹಾರಿ ಹೋದ ಪುಟ್ಟ ಹನಿಯು
ತಂಪನೆರೆಯೆ ಇಳೆಗೆ ಜಾರಿದೆ.

ಎಲ್ಲಿ ನೋಡೆ ಹಳದಿ ಬಣ್ಣ
ಗರಿಕೆ ಹುಲ್ಲ ಮೇಲೆ ನಿನ್ನ ಕಣ್ಣ
ಓ ಇದೆಂಥ ಅನಂತ ಮೋಡಿ
ಹೊನ್ನ ಬಣ್ಣವ ಚಲ್ಲಾಡಿ.

ಹನಿಗಳೆಲ್ಲಾ ಮುತ್ತ ಜೋಡಿ
ಕೊಂಬೆ ತುಂಬ ಹತ್ತು ಕೋಟಿ
ಈ ಪರಿಯ ಸೊಬಗ ನೋಡೆ
ಕವಿಯ ಹೃದಯ ಹಾಡ ಹಾಡೆ.


ಓ ಅಪೂರ್ವ ಇದೆಂಥ ಉಕ್ತಿ
"ನಾನು ನಿನ್ನ ಎದುರೆ ಎಷ್ಷು ಸಣ್ಣ'
ಓ ಅನಂತ ಅಶ್ವ ಶಕ್ತಿ
ನೀನೆ ನೋಡು ಹಗಲ ಚುಕ್ಕಿ.

ಮಿತ್ರ ರಾಘವೇಂದ್ರನ "ಹಗಲ ಚುಕ್ಕಿ' ಕವನ ಸಂಕಲ ನೋಡಿ ಪ್ರೇರಿತನಾಗಿ ಬರೆದ ಕವನ.

Wednesday, February 20, 2013

ಹಿಗೊಂದು ಪ್ರವಾಸ



ಚಾರಣ ಪ್ರವಾಸ!
ಕವಲೇ ದುರ್ಗಾ ಕೋಟೆ 
ಮಕ್ಕಳಿಗೆ ಪ್ರಕೃತಿ, ಚಾರಣ ಮತ್ತು ಇತಿಹಾಸದ ಅನುಭವ ಕೊಡಲು, ನಮ್ಮ ಪೂವರ್ಿಕರ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ಕವಲೇ ದುರ್ಗ ಎನ್ನುವ ಕೋಟೆಗೆ ಭೇಟಿಕೊಟ್ಟೆವು. ಇದೊಂದು ಅದ್ಭುತವಾದ ಐತಿಹಾಸಿಕ ತಾಣ. (ವಿವರಗಳಿಗೆ ಹಿಂದಿನ POST ನೋಡಿ)


ಐತಿಹಾಸಿಕ ತಾಣ ಹುಂಚ 
 ನಮ್ಮ ಮುಂದಿನ ತಾಣ ಕದಂಬರಿಂದ ಚಾಲುಕ್ಯರತನಕ ಆಳಲ್ಪಟ್ಟ ಹುಂಚ. ಇದೊಂದು ಪ್ರಮುಖ ಜೈನ ಕೇಂದ್ರ. ಇತಿಹಾಸದ ಅನೇಕ ಚಿತ್ರಗಳು ನಮಗಿಲ್ಲಿ ಸಿಗುತ್ತವೆ. ಜೈನ ಪರಂಪರೆಯ ಕುರುಹುಗಳು ಅಲ್ಲದೆ, ಹೇಗೆ ಅವಸಾನದತ್ತ ಹೊರಳಿಕೊಂಡಿತ್ತೆಂದು ಇತಿಹಾಸಕಾರರು ಹುಡುಕಬಹುದು. ಆಸಕ್ತಿಕರವಾದ ಲಿಪಿಗಳು ಶಾಸನಗಳು ಕಂಡುಬರುತ್ತವೆ. ನಗರ ಪ್ರದಕ್ಷಿಣೆ ಮಾಡಿಬಂದರೆ, ಇತಿಹಾಸದ ಕುರುಹು ಅಲ್ಲಲ್ಲಿ ಕಾಣಸಿಗುತ್ತದೆ. ತನ್ನ ಆಕಾರ ಸ್ವರೂಪ ಜನಜೀವನದಿಂದ ಅದಿನ್ನು ಐತಿಹಾಸಿಕ ನಗರವಾಗಿಯೇ ಉಳಿದಿದೆ ಎನ್ನಬಹುದು. ಶಿಕ್ಷಕರಿಗೆ ಅಮೂಲ್ಯ ತಾಣಗಳನ್ನು ತೋರಿಸಿದ ತೃಪ್ತಿ ಮಕ್ಕಳಿಗೆ ಚಾರಣದ ವಿಶೇಷ ಅನುಭೂತಿ ನೀಡಿ ರೋಮಾಂಚಿತರಾದರು. 
ಹುಂಚದಲ್ಲಿನ ಮಾಹಿತಿ ಫಲಕ 


ಪಾಳಿ ಲಿಪಿಯ ಶಾಸನ 

ಕುವೆಂಪುವನ್ನು ಸಕ್ಷಾತ್ಕರಿಸಿದಾಗ ಅವರ  ಮನೆ ಎದುರಿಗೆ 
ನಮ್ಮ ಹೆಮ್ಮೆಯ ಕವಿ ಕುವೆಂಪು ಮನೆಗೆ ಅಡಿಯಿಟ್ಟು ಆನಂದಿಸಿದೆವು. ಪ್ರಕೃತಿಯೊಂದಿಗೆ ಸರಸವಾಡುತ್ತಾ ಅವರ ಮನೆ, ಸಮಾಧಿ, ಬಂದಿರುವ ಪ್ರಶಸ್ತಿ, ಬಿಡುಗಡೆಗೊಳಿಸಿದ ಕೃತಿ ವೀಕ್ಷಿಸಿ ಧನ್ಯರಾದೆವು.
ನಮ್ಮ ಸೈನ್ಯ!







Tuesday, February 19, 2013

ಒಂದು ದಿನದ ಪಿಕ್ನಿಕ್ಗೆ ಹೋಗಬೇಕೆಂದಿದ್ದರೆ....

ಜಲ ಧಾರೆಯಂತೆ ಮನಸು ಕೊಡು ಹರಿಯೆ! 


  
  ಕಾನನದ ಕುಸುಮ ಹಳ್ಳಿಹೊಳೆ ಸಮೀಪದ ಅಕ್ಕಿನಕೊಡ್ಲು ಜಲಧಾರೆ. ನೋಡಿ ಮೈಮರೆಸುವ ಜಲರಾಶಿ. ಸಾಕಷ್ಟು ಸಾಹಸ ಮಾಡಿಯೇ ಅದರ ಶಿಖರವನ್ನು ತಲುಪಿದೆವು. ನೀರ ಸೆಳೆತಕ್ಕೆ ಮತ್ತೆ ಮತ್ತೆ ಮೈಯೊಡ್ಡಬೇಕೆನಿಸುವ ನಿಜ ಪ್ರಕೃತಿಯ ನಡುವೆ ಇರುವ ಜಲಧಾರೆ. 

ಹೋಗೋದು ಹೇಗೆ:- ಸಿದ್ದಾಪುರದಿಂದ ಹಳ್ಳಿಹೊಳೆ ರಸ್ತೆಯಲ್ಲಿ ಶಟ್ಟಿಪಾಲ್ ತನಕ ಮುಖ್ಯರಸ್ತೆಯಲ್ಲಿ ಸಾಗಿ ಅಲ್ಲಿಂದ 2 ಕಿ.ಮೀ. ಕಚ್ಚಾರಸ್ತೆಯಲ್ಲಿ ಸಾಗಿ ಬಲಬದಿಗೆ ಇರುವ ಸಣ್ಣ ಗುಡ್ಡ ಏರಿದರೆ ನೀವು ಈ ಜಲಪಾತದ ತುದಿಯವರೆಗೆ ಸಾಗಬಹುದು. ಸಾಹಸಕ್ಕೆ ಮನೆಮಾಡುವಿರಾದರೆ ಮೂಲಕ್ಕೂ ತಲಪಬಹುದು! 


Saturday, February 2, 2013

ಸೃಜನಾತ್ಮಕತೆ

ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಸೃಜನಾತ್ಮಕತೆ ಎಂದರೇನು? ಹೇಗೆ ಅದನ್ನು ಬೆಳೆಯುವಂತೆ ಮಾಡು ವುದು. ಹೊಸ ಹೊಸ ಸೃಷ್ಟಿ ನಮ್ಮಿಂದೇಕೆ ಸಾಧ್ಯವಿಲ್ಲ? ಹಳೆಯದು ಮಾಸಿ ಹೊಸತೊಂದನ್ನು ನೀಡಲೇಕೆ ಸಾಧ್ಯವಿಲ್ಲ!

ಕುಟುರ Green Barbet
'ತನಹಾ ದಿಲ್'' ಹಾಡಿನ ಕತರ್ೃ 'ಶಾನ್' ಮತ್ತೊಮ್ಮೆ ಅಂತಹ ಹಾಡು ರಚಿಸಲೇಕೆ ಸಾಧ್ಯವಾಗಿಲ್ಲ! ಸೃಜನಾತ್ಮಕತೆಗೆ ಮಿತಿ ಇದಯೆ? ಅಥವಾ ನಮಗೆ ನಾವೆ ಮಿತಿಯನ್ನು ಹಾಕಿಕೊಂಡಿದ್ದೇವೆಯೆ? ಹಾಕಿ ಕೊಂಡಿದ್ದರೆ ಈ ಮಿತಿಗಳಿಂದ ಹೊರ ಬರುವುದು ಹೇಗೆ? ಸಂಕೊಲೆಯಿಂದ ಬಂಧಿಸಿದ ಮರಿ ಆನೆ ದೊಡ್ಡದಾದ ಮೇಲು ಏಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರುವುದು ಅದರ ಮಿತಿ ಇರಬಹುದು. ಹಾಗೆ ನಾವು ನಮ್ಮ ಚೌಕಟ್ಟಿನಲ್ಲಿದ್ದೇವೆಯೆ? ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. 

Crimson Red Barbet 


ಬ್ರಹ್ಮ ಕಮಲ

ಕಮಲಗಳ gÁt §æºÀä PÀªÀÄ®


ಕಮಲ ಅರಳುವುದು ಹಗಲಿನಲ್ಲಿ ಅಲ್ಲವೇ? ಆದರೆ ಈ ಕಮಲವೋ ಅರಳುವುದು ರಾತ್ರಿ! ಒಂದೇ ದಿನದ ಬದುಕು. ನಿಡುವ ಕುಷಿ ಅಪಾರ. ನೀಲಿ ಮಿಶ್ರಿತ ಅದರ ಓ೦ದೊ೦ದು ಎಸಳು ಎಂತಾ ಸೌಂದರ್ಯದ ಪ್ರತೀಕ. ನೋಡುತ್ತಾ ಇರೋಣವೆನಿಸುತ್ತದೆ. ದಿನವೂ ಹೊಸತಾಗುವ, ಹಳೆಯ ವಿಷದ ಬೇರನೆಲ್ಲ ಮರೆತು ನಲಿವ ಅದರ ಗುಣಕ್ಕೆ ತಲೆಬಾಗೋಣ.

Saturday, December 29, 2012

ಕವಲೇದುರ್ಗ

ಮಲೆನಾಡಿನ ಮಗ್ಗುಲಿನಲ್ಲಿನಲ್ಲಿರುವ ಅದ್ಭುತ ಕೋಟೆ ಕವಲೇದುರ್ಗ. ತಿರ್ಥಹಳ್ಳಿಯಿಂದ ಕೇವಲ 16 ಕಿ.ಮಿ. ದೂರವಿರುವ ನೋಡುಗರ ಕಣ್ಮನ ಸೆಳೆಯುತ್ತದೆ. ನಮ್ಮ ಜನರ ಸಾಹಸ ಪ್ರವೃತ್ತಿ, ಧೈರ್ಯ, ದೂರದಶರ್ಿತ್ವ, ಸ್ವಾಭಿಮಾನದ ಪ್ರತೀಕವಾಗಿ ನಿಲ್ಲುತ್ತದೆ, ದೇಶಾಭಿಮಾನ ಮೂಡಿಸುತ್ತದೆ.

 ಈ ಕೋಟೆಯ ಇತಿಹಾಸವನ್ನು ಅನೇಕರು ಬೇರೆ ಬೇರೆ ರೀತಿಯಾಗಿ ವಿರಿಸಿದ್ದಾರೆ. 9ನೇ ಶತಮಾನದಲ್ಲಿ, ಬೆಳಗುತ್ತಿ ರಾಜರಿಂದ ಸುಂದರವಾಗಿ ಕಣ ಶಿಲೆಯಿಂದ ನಿಮರ್ಿಸಲ್ಪಟ್ಟಿತು. ವೆಂಕಟಪ್ಪ ನಾಯಕನಿಂದ ಪುರ್ನನಿಮರ್ಿಸಲಾಯಿತು. ತದನಂತರ ಇದನ್ನು ಭುವನಗಿರಿ ಎಂದು ಕರೆಯಲಾಯಿತು. ಪ್ರಾರಂಭದ ದಿನಗಳಲ್ಲಿ ವಿಜಯನಗರದವರ ಅಧೀನದಲ್ಲಿದ್ದ ಕೋಟೆ ಮುಂದೆ ಕೆಳದಿಯ ಅಧೀನಕೊಳಪಟ್ಟಿತು. 1763 ರಲ್ಲಿ ಹೈದರಾಲಿಯು ಈ ಕೋಟೆಯನ್ನು ವಶಪಡಿಸಿಕೊಂಡನು. ಮುಂದೆ ಇದು ಕವಲೇದುರ್ಗವೆಂದು ಹೆಸರಾಯಿತು. . ಮೂರು ಹಂತಗಳಲ್ಲಿ ಕಾವಲು ಗೋಪುರಗಳನ್ನು ನಿಮರ್ಿಸಿ  ಭದ್ರತೆಯನ್ನು ಹೆಚ್ಚಿಸಲಾಯಿತು. 1882ರವರೆಗೂ ಇದು ತಾಲೂಕು ಕೇಂದ್ರವಾಗಿತ್ತು.



    
ಇಲ್ಲಿ ಅರಮನೆ, ಸ್ನಾನಗೃಹ, ಕೆರೆ, ಅಸ್ತ್ರ ಒಲೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಮರ್ಿಸಿದ್ದಾರೆ. ವ್ಯವಸ್ಥಿತವಾಗಿ ಕಾವಲು ಗೋಪುರಗಳನ್ನು ನಿಮರ್ಿಸಿಲಾಗಿದೆ. ವಿಶ್ವನಾಥ ದೇವಸ್ಥಾನದ ಎದುರಿಗಿರುವ ಎರಡು ಗರುಡ ಗಂಬಗಳು ಅತಿ ವಿಶಿಷ್ಟವೂ ಅಪರೂಪದ ರಚನೆಗಳಾಗಿವೆ. ಈ ರೀತಿಯ ರಚನೆಗಳು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವುದಿಲ್ಲ. ದೇವಸ್ಥಾನದ ಶಿಲ್ಪಕಲೆಯು ಗಮನಸೆಳೆಯುತ್ತದೆ. ಶಿಖರದ ತುದಿಯಲ್ಲಿ ದೇವಸ್ಥಾನಗಳಿವೆ. ಮೇಲಿನ ತುದಿಯಲ್ಲಿ ಸಣ್ಣ ಕೊಳಗಳಿವೆ. ಈ ಕೊಳಗಳಲ್ಲಿ ವರ್ಷದ ಎಲ್ಲಾಕಾಲಗಳಲ್ಲೂ ನೀರಿರುವುದು ವಿಶೇಷ. ಈ ಕೊಳವನ್ನು ಗದಾ ತೀರ್ಥವೆಂದು ಕರೆಯಲಾಗುತ್ತದೆ. ಈ ಕೊಳವನ್ನು ಭೀಮನು ತನ್ನ ಗದೆಯಿಂದ ನಿಮರ್ಿಸಿದನೆಂಬುದು ಪ್ರತೀತಿ. 


    ಒಟ್ಟಾರೆಯಾಗಿ ಈ ಎಲ್ಲಾ ರಚನೆಗಳು ಅಧ್ಯಯನ ಯೋಗ್ಯವಾಗಿದೆ. ನಮ್ಮ ಪೂವರ್ಿಕರ ಬಗೆಗೆ ಹೆಮ್ಮೆ ಮೂಡುವಂತಿದೆ 




ಅರಮನೆ

ಅರಮನೆ




ಅರಮನೆ, ಸ್ನಾನಗೃಹ

ವಿಶ್ವನಾಥ ದೇವಸ್ಥಾನ


Wednesday, October 10, 2012

ಸೈಂಟ್ ಮೇರಿಸ್ ದ್ವೀಪ

ಸೈಂಟ್ ಮೇರಿಸ್ ದ್ವೀಪ


ನಮ್ಮ ಊರಿನ(ಉಡುಪಿ) ಸುಂದರ ದ್ವೀಪ ಸೈಂಟ್ಮೇರಿಸ್. ಕಣ್ಮನ ಸೆಳೆಯುವ ಇದರ ಚಿತ್ರಗಳು,ವಿಚಿತ್ರವಾದ ಕಲ್ಲಿನ ರಚನೆಗಳು, ಚಿತ್ತಾಕರ್ಷಕ ಸಮುದ್ರ ಜೀವಿಗಳು. ಕಡಲಿಗೆ ಮುತ್ತಿಕ್ಕುವ ತೆಂಗಿನ ಮರಗಳು. ಕಂಡಷ್ಟೂ ಮತ್ತೆ ಮತ್ತೆ ಕಾಣ ಬೇಕೆನಿಸುವ ಅಲೆಗಳು. ದ್ವೀಪದ ಕಲ್ಲಿಗೆ ಬಡಿದಾಗ ಅಲೆಗಳು ತಾಕಿದಾಗ ಉಂಟಾಗುವ ನಿನಾದ ಸವಿ ಅನುಭವಿಸಿಯೇ ತೀರಬೇಕು. ಈ ಅತಿಸುಂದರ ಮೋಹಕ ತಾಣ ಥೈಲೆಂಡ್, ಬಮರ್ಾವನ್ನೆಲ್ಲಾ ಮೀರಿಸುವಂತಿದೆ.
















Friday, September 21, 2012

BLUE ROCKET ಮಿಂಚುಳ್ಳಿಯ ಬೆನ್ನತ್ತಿ



        ಹಲವು ವರ್ಷಗಳಿಂದ ಕಾಡಿದ BLUE ROCKET ಮಿಂಚುಳ್ಳಿ. ಸಾಮಾನ್ಯ ಮಿಂಚುಳ್ಳಿಗಿಂತ ತೀರ ಚಿಕ್ಕದಾದ ಈ ಹಕ್ಕಿ ಅದ್ಭುತ ವೇಗದಿಂದ  ಹಾರಬಲ್ಲದು. ಸಾಮಾನ್ಯವಾಗಿ ಗುರುತಿಸಲಾಗದಷ್ಟು ವೇಗವಾಗಿ ಹಾರುವುದು ಇದರ ವಿಶೇಷತೆ. ಮೈ ಮೇಲೆ ಮಖ್ಮಲ್  ಬಟ್ಟೆ ತೊಟ್ಟಂತೆ ಹೊಳಪಿನ ನೀಲಿ, ಬಿಳಿ ಮತ್ತು ಕಪ್ಪು ಬಣ್ಣಗಳು. ಅತಿ ಚುರುಕಾದ ಸೂಕ್ಷ್ಮಗ್ರಾಹಿ ಕಣ್ಣು, ಸಣ್ಣ ಅಲುಗಾಟವನ್ನೂ ಗ್ರಹಿಸುತ್ತದೆ.
ಕಳೆದೊಂದು ವರ್ಷದಿಂದ ಈ ಹಕ್ಕಿಯು ಮೀನು ಹಿಡಿದಿರುವುದನ್ನು ಸೆರೆಹಿಡಿಯಬೇಕೆಂದು ಕೆರೆ, ಹೊಳೆ ದಡದಲ್ಲಿ ಗಂಟೆ ಗಟ್ಟಲೆ ಹೊಂಚು ಹಾಕಿದ್ದೆ. ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿತ್ತು. ಒಮ್ಮೆಯಂತು ಮೀನು ಹಿಡಿದು ನನ್ನ ವಿರುದ್ಧ ದಿಕ್ಕಿಗೆ ಮುಖಮಾಡಿ ತಿಂದು ಹಾರಿಹೋಗಿತ್ತು.
         ಕಳೆದ ಬುಧವಾರ ನಮ್ಮ ತಂಡ ಮಿಂಚುಳ್ಳಿ ಸೆರೆಗೆಂದು ಬೆಳಿಗ್ಗೆ 9.00ಕ್ಕೆ ಹೊರಟಿತು. ಈ ಬಾರಿಯೂ ನಮ್ಮ ಸಣ್ಣ ಅಲುಗಾಟವೊ, ದೂರದಲ್ಲಿ ನಾವಾಗಮಿಸುವುದು ತಿಳಿದಂತೆ ಧ್ಯಾನಕ್ಕೆ ಭಂಗ ಬಂದ ಋಷಿಯಂತೆ ಪರಾರಿ. ಛಲಬಿಡದೆ ಅದು ಹೋದ ಕಡೆ ಹಿಂಬಾಲಿಸಿದೆವು. ಮೂರು ಬಾರಿ ಪರಾರಿಯಾಗಿ ನಿರಾಸೆ ಮೂಡಿಸಿತ್ತು. ಇದನ್ನು ಸೆರೆಹಿಡಿಯುವುದು ಅಸಾಧ್ಯವೆಂದು ತೀಮರ್ಾನಿಸಿದ್ದೆವು. ಹೊರಡುವ ತಯಾರಿ ನಡೆದಿತ್ತು. ಕೊನೆಯ ಒಂದೆರಡು ಸುತ್ತಲಿನ ಪೋಟೊ ತೆಗೆಯುವ ಸಲುವಾಗಿ ನಾಗರಾಜ ವೀಕ್ಷಿಸುತ್ತಿದ್ದರು. ಅದೇ ಸಮಯಕ್ಕೆ ಪರಾರಿಯಾದ ಹಕ್ಕಿ ಪ್ರತ್ಯಕ್ಷ ಅದೂ ಮೀನಿನೊಂದಿಗೆ. ಅದೇ ಜಾಗದಿಂದ ಅದು ಆಗಷ್ಟೆ ಪರಾರಿಯಾಗಿ ರೇಗಿಸಿಹೋಗಿತ್ತು. ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು. ನಿಮ್ಮೊಂದಿಗೆ ಹಂಚಿಕೊಂಡು ಮನಸ್ಸು ಹಗುರಾಗಿದೆ, ಬಹು ದಿನದ ಕನಸು ನನಸಾಗಿದೆ.
ಆದರೆ ಈ ಬಾರಿ ಮಾತ್ರ RED HAND ಆಗಿ ಕೆಮರಾ ಕಣ್ಣಿಗೆ ಸಿಕ್ಕಿಬಿದ್ದು ಕ್ಲಿಕ್ಕಾಗಿಸಿದೆ. ನಿಮಗೂ ಇಷ್ಟವಾಗಬಹುದು, ಪ್ರತಿಕ್ರಿಯಿಸಿ....
ಕ್ಯಾಮಾರ ನೀಡಿ ಸಹಕರಿಸಿದ ಗೆಳೆಯ ನಾಗರಾಜ್ ಮತ್ತು ನನ್ನ ಮನೆ ಮಂದಿಗೆ ಧನ್ಯವಾದಗಳು......


Small Kingfisher with the prey for its kid!



Friday, August 24, 2012

ಗೋಕರ್ಣದಲ್ಲಿ ಮಳೆ.




 ಮಳೆಯಲ್ಲೇ ಒಡಾಡುವ ಜನರು. 
ಓಂ ಬೀಚ್ 


ಕುಡ್ಲ ಬೀಚ್ 
ಅಲೆಗೆ ಮೈಯೊಡ್ಡಿರುವ ಯುವತಿ.


ಮಳೆಗಾಲದಲ್ಲಿ ಮೈತುಂಬಿಕೊಂಡಿರುವ ಗೋಕರ್ಣ. 





Monday, August 13, 2012

ಹನಿ ಮುತ್ತಿನ ಹಾರ

ವರ್ಷ ವೈಭವ


ಸಿದ್ಧಾಪುರ ಬಳಿಯ ಬಾಳೆಬರೆಯಲ್ಲಿನ ಸುಂದರ ಅನೂಹ್ಯ ಜಲಧಾರೆ. ವರ್ಷವಿಡಿ ಧುಮುಕುತ್ತಿರುತ್ತದೆ. ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಜಲ್ಲನೆ. 
ನೀರ ಹನಿಗಳೆಲ್ಲ ಮುತ್ತಿನ ಧಾರೆಗಳಂತೆ ಹಾರವಾಗಲು ಪೈಪೋಟಿಗಿಳಿದು ಜಿಗಿಜಿಗಿದು ಬರುತ್ತಿವೆ.  

Tuesday, August 7, 2012

ವಿಸ್ಮಯ ಕೀಟ ಜಗತ್ತು

ಹಾರಲು ನಾನು ತಯಾರಿದ್ದ್ದೇನೆ. ಹಿಂದೆ ಈ  ಕೀಟ  75 ಸೆಂಟಿ ಮೀಟರ್ ಬೆಳೆಯುತ್ತಿತ್ತು! ಎಂದರೆ  ನಮಗೆ ಆಶ್ಚರ್ಯವಾಗದಿರುತ್ತೆಯೇ?

Sunday, August 5, 2012

ವಿಚಿತ್ರ ಕೀಟ..

MAN INSECT


ಮನುಷ್ಯರ ಮುಖದ ರಚನೆ  ಹೊಂದಿರುವ ವಿಚಿತ್ರ ಕೀಟ..


ವಾರೆ ನೋಟ

ಪ್ರವಾಸಗಳೆಂಬ ಕಿರುದಾರಿಯಲಿ

ಬೇಕಲ್‌ನ ದಾರಿಯಲ್ಲಿ ( Bekal Fort) ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದ...