Posts

ಹುಡುಕಾಟ

ಬಿಸಿಲ ಕಾಲದ ನೀರ ನೆನಪು.

Image
ಬಿಸಿ ಬಿಸಿ ಬೇಸಿಗೆಗೆ ಪ್ರಜಾವಾಣಿಯ ನೀರ ನೆನಪಿನ ಅಂಕಣದಲ್ಲಿ ಪುಟಾಣಿ ಪುಟದಲ್ಲಿ(ಕಾಮನಬಿಲ್ಲು) ನನ್ನ ಪುಟಾಣಿ ಲೇಖನವೊಂದು ಅಚ್ಚಾಗಿದೆ . ಅದರ ಪೂರ್ಣ ಪಾಠ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ..

ನೀರ ಹನಿಗಳ ಹಾಡು.....
ಹೊಳೆ ಎಂಬ ಪದವೇ ನನ್ನಲ್ಲಿ ಪುಳಕದ ಮಳೆ ಹರಿಸಿದೆ. ಎಪ್ರಿಲ್ ಬಂದಾಗ ನನಗೆ ಮೊದಲ ನೆನಪು ಹೊಳೆಯದೇ. ಹೊಳೆ ಜಳಕದ ಪುಳಕವನು ಆಡಿಬಲ್ಲವರೇ ಬಲ್ಲರು. ಬನ್ನಿ ಸ್ವಲ್ಪ ಹೊಳೆ ಧ್ಯಾನ ಮಾಡೋಣ. ಬರದ ಬಯಲಲ್ಲಿ ತಂಪಾಗೋಣ. ನೀರ ಹನಿಗಳ ನೆನಪ ಹಾಡು ಕೇಳೋಣ.
    ನನ್ನಜ್ಜನೂರು ವಾರಾಹಿ ತಟದ ಸೌಡ. ಹೊಳೆ ಊರನ್ನು ಸೀಳಿ ಹರಿಯುತ್ತಿಲ್ಲಿ. ಎಪ್ರಿಲ್ನಲ್ಲೂ ಸೊಂಟ ಮುಳುಗುವಷ್ಟು ನೀರು! ಬೇಸಿಗೆ ಬಂದರೆ ನಾವಲ್ಲಿ ಹಾಜರ್. ತಂದೆಯ ಭುಜವೇರಿ ಹೊಳೆ ದಾಟಿ ಹೋಗುತ್ತಿದ್ದೆ. ಮತ್ತೆ ಹೊಳೆಗೆ ಮರಳಿ ನೀರಲಿ ನಮ್ಮ ಸೊಕ್ಕಾಟ ಶುರು. ಕಿರಣ, ಶಶಿಧರ, ಕಲಾಧರ ವೀರೇಂದ್ರ ನನ್ನ ಸಂಗಾತಿಗಳು. ನೀರ ನಡುವಿನ ಕಲ್ಲು ಹತ್ತಿ ಹೊಳೆಗೆ ಹಾರುವುದು, ಮುಳುಗಿ ಈಜುವುದು, ಜಲಯುದ್ಧ ಮುಂತಾದ ಸಾಹಸ ಮಾಡುತ್ತಿದ್ದೆವು. ಹೊಟ್ಟೆ ಚುರುಗುಡದೇ ಮರಳುತ್ತಿರಲಿಲ್ಲ. ಒಬ್ಬೊಬ್ಬರ ಕಣ್ಣು ಗುಡ್ಡೆ ನೋಡಬೇಕು. ಕೆಂಪಾದ ಕಣ್ಣು, ಕೆಂಪು ಕೋತಿಯಂತಾದ ಕೆನ್ನೆ, ಕೂದಲು ಹಂದಿ ಮುಳ್ಳಿನಂತಾಗಿ ಥೇಟ್ ಕಾಡು ಮನುಷ್ಯರಂತಾಗಿ ವಾಸಾಗುತ್ತಿದ್ದೆವು. ಊಟಕ್ಕಂತು ಮಾವಿನ ವಿವಿಧ ಖಾಧ್ಯವಿರುತ್ತಿತ್ತು. ಮನೆ ಸನಿಹದ  ಭಟ್ಕಳ ಹಣ್ಣಿನ ಗೊಜ್ಜು, ಸೀಕರಣೆ ಇದ್ದರಂತೂ ಸೇರು ಅನ್ನಕ್ಕೆ ಕನ್ನ. ಉಂಡು, …

ಹೆಂಡತಿ ಕೈ ಕೊಟ್ಟರೆ ಹೆದರದಿರಿ.......

Image
ಬದುಕಿನ ಅರ್ಥದ ಹುಡುಕಾಟದಲ್ಲೇ ಬದುಕು ಕಳೆದು ಹೋಗುತ್ತೆ. ಮಕ್ಕಳು ಮರಿಗಳು, ಹೆಂಡತಿ, ಸೈಟು, ಚೆಂದದ ಕಾರು, ಪ್ರಮೋಷನ್ ಟೆನ್ಶನ್. ಓರಗೆಯವನಿಗೆ ಸಿಕ್ಕ ಬಡ್ತಿ ನನಗಿಲ್ಲವೆಂಬ ಪಡಿಪಾಟಲು. ಒಂದೇ ಎರಡೇ ನಮ್ಮ ಹಳವಂಡಗಳು. ಮುಗಿಯದ ರೈಲು ಬೋಗಿ, ಕಾಶ್ಮೀರದಿಂದ ಕನ್ಯಾ ಕುಮಾರಿ. ಕೆಲವರಂತೂ ಏನೋ ಕಳೆದುಕೊಂಡವರಂತೆ ಬದುಕುತ್ತಿರುತ್ತಾರೆ. ಏನು ಹುಡುಕುತ್ತಿರುತ್ತಾರೆಂದು ಯಾರಿಗೂ ತಿಳಿಯದು. ಸ್ವತಹ ಅವರಿಗೂ!
    ಬದುಕು ನಮ್ಮ ಮುಂದೊಂದು ಗಿಪ್ಟು ತಂದಿಡುತ್ತೆ. ಅದನ್ನು ತೆರೆಯಲೂ ನಮಗೆ ಪುರುಸೊತ್ತಿರುವುದಿಲ್ಲ. ಯಾರೋ ದಾರಿಹೋಕ ತೆರೆದಾಗ ನಾವು ಅಚ್ಚರಿಗೊಳ್ಳುತ್ತೇವೆ. ಅಯ್ಯೋ ನಾವು ತೆರಯಬಹುದಿತ್ತೆಂದು ಕೈ ಹಿಸುಕಿಕೊಳ್ಳುತೇವೆ. ತೆರೆದ ಮನಸ್ಸಿನಿಂದ ನೋಡುವ ಗುಣವಿದ್ದರೆ ಮಾತ್ರ ಅದನ್ನು ಆಯ್ದುಕೊಳ್ಳಬಹುದು.
    ಸಣ್ಣದೇನೋ ತಪ್ಪಿಹೋದರೆ, ಕೆಲಸವಾಗದಿದ್ದರೆ ಅವರ ಪಡಿ ಪಾಟಲು ನೋಡಬೇಕು. ಕೆಲವೊಮ್ಮೆ ನಗು, ಕೆಲವೊಮ್ಮೆ ಅನುಕಂಪ ತರಿಸುತ್ತೆ. ಆದರೆ ಇಲ್ಲೊಂದು ನೈಜ ಘಟನೆ ಇದೆ ಕೇಳಿಸಿಕೊಳ್ಳಿ..
    ತಾನು ಪ್ರೀತಿಸಿದ ಹೆಂಡತಿಯೇ ಕೈಕೊಟ್ಟರೆ ಹೇಗಾಗಬೇಡ ಆತನ ಸ್ಥಿತಿ. ಈತ ನಮ್ಮ ನಿಮ್ಮೆಲ್ಲರಿಗಿಂತ ಭಿನ್ನ. ಅವನ ನೈಜ ಕತೆಯಿದೆ. ಇಷ್ಟವಾದರೆ ಲೈಕಿಸಿ.

ಈ ಪದಗಳೇ ಹೀಗೆ......

Image
ಈ ಪದಗಳೇ ಹೀಗೆ. ನಾವು ಹೇಳದೇ ಇದ್ದ ಭಾವವೊಂದನ್ನು ಇನ್ನೊಬ್ಬರಲ್ಲಿ ಮೂಡಿಸುವವು. ಕೆಲವೊಮ್ಮೆ ಅಪಾರ್ಥಕ್ಕೂ ದಾರಿಯಾಗಿದೆ. ಕೆಲವೊಮ್ಮೆ ಅಪಾರ ಅರ್ಥಕ್ಕೂ. ಕೆಲವು ವಿಷಯಗಳನ್ನು ಹೇಳಲು ಪದಗಳೇ ಇಲ್ಲದಂತಹ ಸ್ಥಿತಿ. ದೊಡ್ಡ ದೊಡ್ಡ ವಾಕ್ಯಗಳಲ್ಲಿ ವಿವರಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಉದಾಹರಣೆಗೆ ತನ್ನ ಮೂಗಿನ ನೇರಕ್ಕೆ ಎಲ್ಲಾ ನಡೆಯಬೇಕು ಎಂದು ಬಯಸುವವನನ್ನು ಎನೆಂದು ಹೇಳುವರು? ಕೇಳಿದರೆ ಯಾವ ಪದವನ್ನು ಪಂಡಿತರು ನೀಡಬಹುದು? ಸ್ವಾಥರ್ಿ, ಉಹೂಂ ಸರಿ ಎನಿಸದು. ?.?.
    ಹೀಗಿರುವಾಗ ಹೊಸ ಅರ್ಥ ಹೊಮ್ಮಿಸುವ ಪದ ಟಂಕಿಸಿದರೆ ಹೇಗೆ? ಇಂತಹ ಪದ ಪ್ರಯೋಗ ಮಾಡಿದವರು ಜಾನ್ ಕೋಯಿಕ್. ನಾವೀಗ ಬಳಸುವ ಓ. ಕೆ. ಹೇಗೆ ಉತ್ಪತ್ತಿಯಾಯಿತೆಂದು ಅವರು ವಿವರಿಸುತ್ತಾರೆ. ಪದಗಳ ಕುರಿತೊಂದು ಸುಂದರ ಲೇಖನ ನಮ್ಮ ವಿಶ್ವವಾಣಿಯಲ್ಲಿ....ನಿಮಗಿಷ್ಟವಾಗಬಹುದು.

ನೀವೂ ಓದಿ...

Image
ತೀರ ಸಪ್ಪೆ ಎನಿಸಬಹುದಾದ ವಿಜ್ಞಾನಿ ಬದುಕಿನ  ಪದರವನ್ನು ರಸ ಪಾಕದ ಮೈಸೂರು ಪಾಕಿನಂತೆ ಹದವರಿತ ಪಾಕಜ್ಞ ನಿರ್ದೇಶಕ  ಮನೋಜ್ಞವಾಗಿ ತೆರೆಯ ಮೇಲೆ ತೋರಿಸಿದ್ದಾನೆ, ಆ ಕುರಿತು ಮಂಜು ನಾಯಕ್ ಅವರ ಬರೆಹ ವಿಶ್ವವಾಣಿಯಲ್ಲಿ.  ಓದಿ ಓದಿ ಮರುಳಾಗಿ.

ವಸಂತ ಬರೆದನು ಒಲವಿನ ಓಲೆ....

Image

ಹಕ್ಕಿ ಮರಿ..

Image
ಮೊನ್ನೆ ಪೋಟೋಗ್ರಪಿಗೆ ಹೋದಾಗ ಕುಟುರದ ಮರಿಯೊಂದು ಅಮ್ಮ ನೊಂದಿಗೆ ಕಾಣಸಿಕ್ಕಿತು. ಮುದ್ದಾದ ಮರಿ. ತರೆದ ಗೆಲ್ಲುಗಳ ಮೇಲೆ ಕುಳಿತ್ತಿತ್ತು. ಇಂದಷ್ಟೇ ಹೊರಗೆ ಬಂದ ಮರಿಗೆ ಅಮ್ಮ ಅಡಗುವುದನ್ನು, ಹಾರುವುದ ಕಲಿಸುವುದ ನೋಡುವುದು ಕಣ್ಣಿಗೆ ಹಬ್ಬ. ಮತ್ತೆ ಮತ್ತೆ ಮರಿ ನೋಡಿ ಆನಂದಿಸಿದೆ. ತನ್ನ ಮರಿಯನ್ನು ತಾಯಿ ಹುರಿದುಂಬಿಸುವುದು ಮತ್ತು ತಾಯಿ ಜೊತೆ ಏನು ಮಾತನಾಡುತ್ತಿರಬಹುದೆಂದು ಕಲ್ಪಿಸಿ ಕವನವೊಂದು ಗೀಚಿದೆ. ಓದಿ ಕುಸಿಯಾದರೆ ಇಷ್ಟಿಸಿ!


ಹಕ್ಕಿ ಮರಿ..
ಗೂಡು ಬಿಟ್ಟು ಹೊರಗೆ ನೀ ಬಂದರೆ
ಆಗದಂತೆ ನಿನಗೆ ಎಲ್ಲೂ ತೊಂದರೆ.
ಗುಬ್ಬಿ ಮರಿಯಂತೆ ನಿನ್ನ ನಾ ನೋಡಿಕೊಳ್ಳುವೆ;
ಹಾರಲು ಹಾರಾಡಲು ನಿನಗೆ ನಾ ಕಲಿಸುವೆ.
    ವಸಂತದ ಹೂವಂತೆ ಬಿರಿದೆ ನೀ
    ಹಾರಲು ನಿನಗೆ ನಾ ಕಲಿಸಲೆ.
    ಅಲ್ಲಿ ನೋಡು ಮಾವು ಚಿಗುರಿದೆ;
    ಕೊಕ್ಕಿನಲ್ಲಿ ಕಿತ್ತು ತಿನ್ನ ಬಾರದೇ?
ಚಿಗುರಿನಂತೆ ನಿನ್ನೆ ಮೊನ್ನೆ ನಾ ಚಿಗುರಿದೆ,
ವಿಶಾಲ ಪ್ರಪಂಚವ ನಾ ಇಂದೇ ನೋಡಿದೆ.
ಚಿಗುರು ಮಿಡಿಯ ಕಿತ್ತು,
ಬಾಯಿಗಿಡಬಾರದೇ ಒಂದು ತುತ್ತು?
    ಹಾರುತಿಹುದು ದೂರದಲ್ಲಿ ಹದ್ದು ಹತ್ತು
    ಬಿಟ್ಟು ಹಾರದಿರು ನನ್ನ ಇವತ್ತು.
    ತುಂಬ ಹೊಸದು ನನಗೆ ಈ ಜಗತ್ತು,
    ಹಾರಬಾರದೇ ನನ್ನ ಹೊತ್ತು?
                ಶ್ರೀಧರ್. ಎಸ್. ಸಿದ್ದಾಪುರ.

ಕಾಲದ ಓಣಿಯಲ್ಲೊಂದು ಸುಂದರ ಪಯಣ. .....ಭಾಗ-2

Image
ವಿರಾಮ ಜೀವಿಯಂತೆ ರೈಲು ಅವಸರಿಸದೇ ಚುಕುಬುಕು ನಾದ ಮಾಡಿತು. ಆಗಲೇ ಮನಸು ಇಹಕ್ಕೆ ಇಳಿದಿದ್ದು. ಉದಕ ಮಂಡಲದಿಂದ ಅದು ಹಸಿರ ಹೊದ್ದ ಹಾದಿಯಲ್ಲಿ ಏದುಸಿರು ಬಿಡುತ್ತಾ ಮದುವಣಗಿತ್ತಿಯಂತೆ ಹೊರಟಿತು ನೋಡಿ. ಇಕ್ಕೆಲಗಳ ಟೀ ಎಸ್ಟೇಟುಗಳ ನಡುವೆ ದಾರಿ ಮಾಡಿಕೊಂಡು, ತೆವಳುತ್ತಾ, ಧಾವಂತವಿಲ್ಲದ ವಿರಾಮ ಪಯಣ. ಬಸವನ ಹುಳುವಿನ ವೇಗ. ಟೀ ಎಸ್ಟೇಟುಗಳಲ್ಲಿ ಸೊಪ್ಪು ಕೊಯ್ಯುವ ಕೆಲವೇ ಕೆಲವು ಮಂದಿ ಕಾಣಸಿಕ್ಕರು. ಜನರೇ ಇಲ್ಲದ ಚಳಿ ಹೊದ್ದ ಸಣ್ಣದಾದ ಕೆಲಸದವರ ಮನೆಗಳು. ಚಹ ತೋಟದ ನಡುವೆ ಏಕಾಂಗಿಯಾಗಿ ನಿಂತಿರುವ ಸಿಲ್ವರ್ ಓಕ್ ಮರಗಳು. ಮೊಡ ಅಮರಿಕೊಂಡ ಬೆಟ್ಟ ಗುಡ್ಡಗಳು. ಉದಕ ಮಂಡಲದಿಂದ 52 ಕಿ.ಮೀ ದೂರದ ಮೆಟ್ಟುಪಾಳಯಂ ತಲುಪಲು ಅದು 5 ಗಂಟೆ ತೆಗೆದುಕೊಳ್ಳುತ್ತದೆಂದರೆ ಅದರ ವೇಗವನ್ನು ನೀವೇ ಊಹಿಸಿ. ನಮ್ಮ ಜೊತೆ ಎರಡು ನವ ದಂಪತಿಗಳು ಹೊಸ ಹಾದಿ ಮರೆತು ತಮ್ಮ ತಮ್ಮನ್ನೇ ನೋಡಿಕೊಳ್ಳುತ್ತಿದ್ದರು. ಕಡಿದಾದ ಬೆಟ್ಟಗಳ ಗರ್ಭಗಳನ್ನು ಹೊಕ್ಕು, ಬೆಟ್ಟವಿಳಿದು, ಕಣಿವೆಗಳ ದಾಟುತ್ತಾ ಸಾಗಿತ್ತು ರೈಲು. ಪ್ರತಿ ಸುರಂಗವನ್ನು ಹೊಕ್ಕು ಹೊರ ಬಂದಾಗಲೂ ವಿಭಿನ್ನ ನೋಟ. ಹೂ ಹೊತ್ತ ಗಿಡ ಮರಗಳು. 250 ಸೇತುವೆಗಳನ್ನು ಹಾದು ಬಂದಿದ್ದೆವು.

ನೂರು ವರ್ಷಗಳ ಹಿಂದೆ ಇಲ್ಲಿನ ಕಾಡು ಹೇಗಿದ್ದಿರಬಹುದೆಂದು ಮನಸ್ಸು ಹಿಂದಕ್ಕೊಡಿತು. ಭಾರತದ ವಿವಿಧ ಭಾಗಗಳಿಂದ ಕೆಲಸಕ್ಕೆಂದು ಬಂದವರು ಇಲ್ಲೇ ನೆಲೆಸಿ ಇಲ್ಲಿನವರಾಗಿದ್ದಾರೆ. ಕೆಲವು ತಲೆಮಾರುಗಳನ್ನು ಇಲ್ಲಿಯೇ ಕಳೆದಿದ್ದಾರೆ. ಅವರು ಕೊ…