Saturday, March 31, 2018

ಎರಡು ವಿಭಿನ್ನ ಕತೆ ಮತ್ತು ಒಂದು ಕತಾ ಸಂಕಲನ.


ಒಂದು ವಿಭಿನ್ನ ಕತಾ ಸಂಕಲನ ಮತ್ತು ನನ್ನನ್ನು ಪ್ರಭಾವಿಸಿದ ಎರಡು ಕತೆ ಬಗ್ಗೆ ನಿಮಗೆ ಹೇಳ್ಬೇಕು ಅಂತಾ ಅನಿಸಿದೆ. ನುಡಿಸಿರಿಯಲ್ಲಿ ಕೊಂಡ ಪುಸ್ತಕ ಮೊನ್ನೆ ಓದಿ ಮುಗಿಸಿದೆ. ಸಾಮಾನ್ಯವಾಗಿ ಸಾಮಾನ್ಯ ಲೇಖಕರು ಬರೆಯುವ ಕತಾ ಸಂಕಲನ ಓದುವವರು ಕಡಿಮೆ. ಹಾಗಾಗಿ ಈ ಪರಿಚಯ ಲೇಖನ. ಮುಖಪುಟದಿಂದಲೇ ನನ್ನನ್ನು ಆಕಷರ್ಿಸಿದ ಈ ಸಂಕಲನ ಕೆಲವು ಪ್ರಶಸ್ತಿಗಳನ್ನು ಗಳಿಸಿದೆ ಕೂಡ! ಲೇಖಕರ ವಿಶಿಷ್ಟ ಶೈಲಿ ಓದಿಸಿಕೊಂಡು ಹೋಗುತ್ತೆ. ಸಾಕೆನಿಸುತ್ತೆ ಅಲ್ವಾ. ಕತೆಗೆ ಬರೋಣ.
ಉತ್ಸರ್ಗ ಎಂಬ ವಿಭಿನ್ನ ಕತೆ:-
ಪಾತ್ರವೊಂದು ವಾಸ್ತವಕ್ಕೂ ಕತೆಗೂ ಏಕಕಾಲಕ್ಕೆ ಬಂದು ಹೋಗುವ ಉತ್ಸರ್ಗವೆಂಬ ಕತೆ. ಕತೆಗಾರ ಓದುಗನಿಗೆ ನೀಡುವ ವಿಶಿಷ್ಟ ಸೂಚನೆಗಳಿಂದ ಈ ಕತೆ ನಮ್ಮನ್ನು ಆಕಷರ್ಿಸುತ್ತೆ. ಕಾಯಿಲೆಯಿಂದ ಬಳಲುವ ಕತಾ ನಾಯಕನಿಗೆ ಆತನ ಮೂತ್ರ ಕುಡಿಸುವ ಪ್ರಯತ್ನದ ಮೂಲಕ ಕತೆ ಪ್ರಾರಂಭವಾಗುತ್ತದೆ! 'ಅಗ್ಗದ ಆಕರ್ಷಣೆಗಾಗಿ ಈ ರೀತಿ ನಾ ಹೇಳುತ್ತಿಲ್ಲ' ಎಂದು ಕತೆಗಾರ ಎಚ್ಚರಿಸುತ್ತಾನೆ. ಕತೆಗಾರ ಆಗಾಗ ಕತೆಯಿಂದ ಹೊರ ಬರುತ್ತಾನೆ. ಮೂರು ಮಜಲುಗಳಲ್ಲಿ ನಡೆಯುತ್ತಾ ಸಾಗಿ ಮುಕ್ತ ಅಂತ್ಯ ಕಾಣುತ್ತೆ.
'ವದ್ಧಾ' ವೆಂಬ ವಿಚಿತ್ರ ಹೆಸರಿನ ಕತೆ:-
'ಮೋ' ಎಂಬ ವಿಚಿತ್ರ ಹೆಸರಿನ ಮತ್ತು ಕತೆಗಾರನ ನಡುವೆ ನಡೆಯುವ ವಿಶಿಷ್ಟ ಕತೆ ವದ್ಧಾ. ಎರಡು ವಿಭಿನ್ನ ಪರಿಸರದ ಇಬ್ಬರು ವ್ಯಕ್ತಿಗಳು ಎದುರಾಗಿ ಎದುರಿಸುವ ಸಂಘರ್ಷ, ತಾತ್ವಿಕ ಭಿನ್ನಾಭಿಪ್ರಾಯಗಳ ಸರಮಾಲೆಯನ್ನು ಬಿಚ್ಚಿಡುತ್ತಾ ಸಾಗುತ್ತೆ ಕತೆ. ಕತೆಗಾರನ ಆಂತರ್ಯದಲ್ಲಿನ ತೊಳಲಾಟಗಳ ದರ್ಶನ ಮಾಡಿಸುತ್ತಾ ಆ ತೊಳಲಾಟಗಳೂ ನಮ್ಮವೂ ಆಗುತ್ತಾ ಸಾಗುತ್ತೆ. ಮಧ್ಯಮ ವರ್ಗದ ಸಾಮಾನ್ಯರ ತೊಳಲಾಟಗಳು, ಪೊಳ್ಳು ಹೆಚ್ಚುಗಾರಿಕೆಯನ್ನು ಬಿಚ್ಚುತ್ತಾ ಹೋಗುವುದು. ಸುಡೊ ದೊಡ್ಡಸ್ತನಗಳ ಅನಾವರಣ ಮಾಡಿಸುತ್ತೆ. ಅದಕ್ಕಾಗಿ ಕತಾ ನಾಯಕ ಪಡುವ ಪಾಡು ಅಯ್ಯೋ ಅನಿಸುತ್ತೆ.
ಮುಕ್ತ ಅಂತ್ಯದೊಂದಿಗೆ ಓದುಗರನ್ನು ಚಿಂತನೆಗೆ ಹಚ್ಚುತ್ತೆ! ಮುಗಿಯಲೇ ಬೇಕೆನ್ನುವವರಿಗೆ ಹಿಡಿಸದೇ ಹೊಗಬಹುದಾದ ಹಲವು ಕತೆಗಳನ್ನು ಈ ಒಳಗೊಂಡು ನೈಜತೆಗೆ ಅತಿ ಸಮೀಪವೂ ಇದೆ ಎನ್ನಬಹುದು. ತಡ ಮಾಡದೇ ಕೊಂಡು ಓದಿ.

Thursday, March 22, 2018

ಸ್ನೇಹಿತನನ್ನು ಕಳಕೊಂಡಾಗ........

 ಅಂದು ಜೋರು ಮಳೆ ಬಂದಿತ್ತು. ಬೆಳಿಗ್ಗೆ ಮನೆಯ ಆಸು ಪಾಸು ಕ್ಯಾಮರಾ ಹಿಡಿದು ತಿರುಗುತ್ತಿದೆ. ಎದುರಿಗೊಂದು ಹಕ್ಕಿ ಇತ್ತು. ಮನೆಯ ಆಸು ಪಾಸಿನ ಹುಳು ಹುಪ್ಪಟೆ ತಿನ್ನಲು ಅದು ದಿನವು ಬರುತ್ತಿತ್ತು. ಅಂದು ತಕತಕವೆಂದು ಕುಣಿಯುತಲಿತ್ತು. ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರಿತು. ಒಂಥರಾ ಹುಚ್ಚು ಹಿಡಿದಂತೆ! ಅರೆ ಇದೆನಾಯಿತು ಎಂದು ಅದನ್ನೇ ನೋಡುತ್ತಾ ಕುಳಿತೆ. ಸೂಕ್ಷ್ಮವಾಗಿ ಗಮನಿಸಿದೆ. ಅದರ ಕಾಲಿಗೇನೋ ಅಂಟಿಕೊಂಡಿತ್ತು. ಕಷ್ಟ ಪಟ್ಟು ಅದನ್ನು ಬಿಡಿಸಿಕೊಳ್ಳಲು ನೋಡಿತು. ಅಲ್ಲಿ ಇಲ್ಲಿ ಕಾಲನ್ನು ಉಜ್ಜಿತು. ಅಂಟಿದ ತೆಳು ವಸ್ತು ತೆಗೆಯಲು ಪರದಾಡಿತು. ಅದಕ್ಕೆ ಏನನ್ನಿಸಿತೋ ಹತ್ತಿರದಲ್ಲಿದ್ದ ರಸ್ತೆಗೆ ಹಾರಿತು! ಅರೆ ಇದೇಕೆ ರಸ್ತೆಗೆ ಹಾರಿತೆಂದು ತಿಳಿಯಲಿಲ್ಲ. ಮನಸು ಚುರುಗುಟ್ಟಿತು. ಅಪಶಕುನವನ್ನೆಣಿಸಿತು ಮನ. ಸ್ವಲ್ಪ ಕಾಲನ್ನು ನೆಲಕ್ಕೆ ಉಜ್ಜಿತು. ಕಾಲಿಗಂಟಿದ ವಸ್ತು ಸ್ವಲ್ಪ ದೂರ ಹೋಗಿ ಬಿತ್ತು.! ಸರಿ ಇನ್ನು ಹಾರಬೇಕೆನ್ನುವಷ್ಟರಲ್ಲಿ ಎದುರಿನದೊಂದು ಸಣ್ಣ ವ್ಯಾನ ಬರುತಲಿತ್ತು. ಹಕ್ಕಿ ಅದಕೆ ಅಡ್ಡ ಹಾಯ್ದು ವಾಹನದ ಮೂತಿ ತಗುಲಿ ಎದುರಿಗೆ ಬಿತ್ತು. ಅದರ ದೇಹಕ್ಕೆ ಕೊಂಚ ಪೆಟ್ಟಾಯಿತು. ಉರುಳಿ ದಾರಿ ಹೋಕರು ತಿರುಗುವ ಪಾದಚಾರಿ ಮಾರ್ಗದಲ್ಲಿ ಬಿತ್ತು. ಕೈಗೆತ್ತಿಕೊಂಡೆ. ನೀರು ಕೊಟ್ಟೆ. ಕಣ್ಣನ್ನೊಮ್ಮೆ ಮಿಟುಕಿಸಿತು. ಒಂದು ಹನಿ ನೀರು ಕುಡಿದು ಪ್ರಾಣ ಬಿಟ್ಟಿತು. ತೀರಾ ಬೇಸರವಾಯಿತು ವಾಹನ ಚಾಲಕನ ಮೇಲೆ. ಕಣ್ಣ ಹನಿಯೊಂದು ಗೊತ್ತಿಲ್ಲದಂತೆ ಜಾರಿತು. ನೋಡಿಯೂ ಕೈ ಸನ್ನೆ ಮಾಡಿಯೂ ಆತ ನಿಧಾನಗೊಳಿಸದೇ ಮುಂದೆ ಸಾಗಿದ್ದ. ಸುಮಾರು ಹೊತ್ತು ಏನು ಮಾಡುವುದೆಂದು ತೋಚದೇ ಸ್ವಲ್ಪ ಹೊತ್ತು ಅದನ್ನು ಹಿಡಿದೇ ನಿಂತಿದ್ದೆ. ಅದರ ಕಾಲಿಗಂಟಿದ ವಸ್ತು ಏನೆಂದು ನೋಡೋಣವೆಂದು ಹೋದೆ. ಆಶ್ವರ್ಯ ಕಾದಿತ್ತು. ಅದು ನಮ್ಮಂಥವರು ಜಗಿದು ಹಾಕಿದ ಚಿಂಗಮ್ ಆಗಿತ್ತು. ಅದು ಹೇಗೋ ಹಕ್ಕಿ ಕಾಲಿಗೆ ಅಂಟಿಕೊಂಡಿತು. ಚಿಂಗಮ್ ನಿಂದಾಗಿ ಅದು ಪ್ರಾಣ ಕಳೆದುಕೊಳ್ಳಬೇಕಾಯಿತು. ನಮ್ಮ ತಪ್ಪಿಗೆ ಹಕ್ಕಿಗೆ ಶಿಕ್ಷೆಕೊಟ್ಟಂತಾಗಿತ್ತು. 
 ನಮ್ಮ ತಪ್ಪಿನಿಂದ ಅದು ಶಿಕ್ಷೆ ಅನುಭವಿಸುವಂತಾಗಿತ್ತು. ಕಾಡು ರಸ್ತೆಯಲ್ಲಾದರೂ ವಾಹನವನ್ನು ನಿಧಾನಕ್ಕೆ ಓಡಿಸೋಣವಲ್ಲವೇ?

Monday, March 12, 2018

ಶಾಂತಲೆಯ ಸ್ವರ್ಗಾರೋಹಣದ ಜಾಗದಿಂದ...1

ಬಂಡೆಗಳ ನಡುವೆ ಚಿತ್ರ ಕಾವ್ಯ..
ಶಾಂತಲೆಯ ಸ್ವರ್ಗಾರೋಹಣದ ಜಾಗದಲ್ಲಿದ್ದೆವು! ಈ ಜಾಗಕ್ಕೆ ಬಂದು ನಿಂತರೆ ಇತಿಹಾಸದ ಕಗ್ಗಂಟೊದು ನಮ್ಮ ಮುಂದೆ ದುತ್ತೆಂದು ಬಂದು ನಿಲ್ಲುವುದು. ಸಾವಿಗೂ ಇಂತಹ ಸುಂದರ ಸ್ಥಳವೊಂದನ್ನು ಆಯ್ಕೆ ಮಾಡಿ ಕೊಂಡ ಇನ್ನೊಬ್ಬರು ನನಗೆ ತಿಳಿದಿಲ್ಲ. ಈ ಮಾತನ್ನು ವ್ಯಂಗ್ಯದಿಂದ ಹೇಳುತ್ತಿಲ್ಲ. ಆದರೂ ಅವಳ ಸಾವು ನಮ್ಮನ್ನು ಬಹುವಾಗಿಯೇ ಕಾಡುವುದು. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಇಲ್ಲಿನ ಸೌಂದರ್ಯ ನೋಡಿಯೂ ಪರವಶಳಾಗದೆ ಅದು ಹೇಗೆ ಪ್ರಾಣ ಬಿಟ್ಟಳೆಂದು ಯೋಚಿಸಿದರೂ ಕಾಡುವ ಪ್ರಶ್ನೆ. ಬೇಲೂರು, ಹಳೆಬೀಡು ನಿಮರ್ಾಣದಲ್ಲಿ ಭಾಗವಹಿಸಿದ ಜೀವವೊಂದು ಹೀಗೆ ಅಂತ್ಯವಾದುದು ಇನ್ನೂ ಜೀಣರ್ಿಸಿಕೊಳ್ಳಲೂ ಸಾಧ್ಯವಾಗಿಲ್ಲ! ರಾಣಿಯೊಬ್ಬಳಿಗೆ ಇಷ್ಟು ಎತ್ತರದಿಂದ ನೆಗೆದು ಜೀವಕಳೆದುಕೊಳ್ಳಬೇಕಾಗಿ ಬಂದುದಾದರು ಏಕೆ? ಕೊನೆಗಾಲದಲ್ಲಿ ಖಿನ್ನತೆ ಕಾಡಿತೆ? ಇತಿಹಾಸದ ಮಗ್ಗುಲನ್ನು ಕೆದಕಬೇಕೆಂಬ ಹೆಬ್ಬಯಕೆ ಚಿಗುರೊಡೆಯಿತು. ಇಂತಹ ಹಲವು ಪ್ರಶ್ನೆಗಳ ಪಟ್ಟಿ ಬದಿಗೊತ್ತಿ ಶಿವಗಂಗೆ ಎಂಬ ವಿಸ್ಮಯಕಾರಿ ಬೆಟ್ಟವನ್ನು ಸುತ್ತು ಹಾಕಿ ಬರೋಣವೇ.
ಶಾಂತಲಾ ಸ್ತಂಭ-ಶಿವಗಂಗೆ
ಅನತಿ ದೂರದಿಂದ ನೋಡುವವರಿಗೆ ಒಂದು ಸಾಧಾರಣ ಊರಂತೆ ತೋರಿದರೂ ರಸಿಕರಿಗೆ ಉಣ ಬಡಿಸುವ ವಿಶೇಷತೆ, ವಿಶಿಷ್ಟತೆ, ವಿಸ್ಮಯಗಳು, ವಿಸ್ಮಯ ಕಾರಿ ಲಿಂಗ, ಗುಹಾಂತರ ದೇವಾಲಯಗಳು ಒಂದೆರಡಲ್ಲ. ಅನೇಕ ತೀರ್ಥಗಳು, ಬಸವ ಮಂಟಪಗಳು ಅನೇಕ ಕತೆ ಹೇಳುತ್ತವೆ. ಅಲ್ಲಲ್ಲಿ ಯಾರೋ ತಂದು ನಿಲ್ಲಿಸಿದಂತೆ ಕಾಣುವ ಅನೇಕ ಕಲ್ಲುಗಳು. ಅಡಿಗಡಿಗೂ ಬಂಡೆಗಳ ಚಿತ್ರ ಕಾವ್ಯದಂತೆ ಕಾಣುವುದು. ಚಿತ್ರಗಳು ಕ್ಯಾಮರದೊಂದಿಗೇ ಸ್ಪಧರ್ೆಗಿಳಿಯುವವು.
 ನಾವು ಹತ್ತಲೂ ಹೆದರುವ ಜಾಗಗಳಲ್ಲಿ ಮಂಟಪ, ನಂದಿಗಳನ್ನು ಕೆತ್ತಿಟ್ಟಿದ್ದಾರೆಂದರೆ ಭಾರತದ ಸಾಹಸಿಗರ ಬಗೆಗೆ ಆಶ್ಚರ್ಯ ಪಡುವಿರಿ. ಇಲ್ಲಿರುವ ವಿಸ್ಮಯಗಳು ನೂರಾರಿವೆ. ಒಂದಕ್ಕಿಂತ ಒಂದು ಭಿನ್ನ. ನಮ್ಮ ಇತಿಹಾಸದ ಮಗ್ಗಲುಗಳ ವಿಸ್ಮಯಗಳು ನೂರಾರು. ಒಂದೊಂದಾಗಿ ತಿಳಿಯೋಣ ನಿಧಾನಕ್ಕೆ...




ಮಾತಿಗೆ ನಿಂತಂತೆ ಕಾಣುವ ಬಂಡೆಗಳು

ಬಂಡೆಗಳ ನಡುವಿನ ಮಂಟಪ

ಬೆಟ್ಟದ    ಏರು ದಾರಿ.






Friday, March 2, 2018

ಮಾತೇ ಆಡದೆ ಬುದ್ಧಿ ಕಲಿಸುವ ಒಬ್ಬ ಹಳೇ ಗೆಳೆಯ....

 ಇತನ ಬಗ್ಗೆ ಹೇಳಿ ಮುಗಿಸಲಾರೆ. ಜಗಳವೇ ಆಡದ ನನ್ನ ಗೆಳೆಯ. ಅನೇಕ ಯುವಕರ ಪ್ರೇರಣಾ ಶಕ್ತಿ. ನನ್ನಂಥವರು ಸಾಹಿತ್ಯದೆಡೆಗೆ ಆಕಷರ್ಿಸುವಂತೆ ಮಾಡಿದ ಪುಣ್ಯಾತ್ಮ ಹೇಳುತ್ತಾ ಹೋದರೆ ಮುಗಿಯದ ಪದ ಬಂಡಿಯಾದೀತು. ನಿಮ್ಮ ಊಹೆ ಸರಿ. ಯಂ                            ಡ                   ಮೂ                       ರಿ                 ವೀ                           ರೇಂ                       ದ್ರ                            ನಾ                        ಥ್.
Yandamuri Veerendranath, me and Ashok
ಯಂಡಮೂರಿ ಎಂದರೆ ಎನೋ ಒಂದು ಹುಚ್ಚು, ಪುಳಕ. ಅವರ ಪುಸ್ತಕಗಳನ್ನೇ ಪಾರಾಯಣ ಮಾಡಿದ ಕಾಲವೊಂದಿತ್ತು. ನಮ್ಮ ಮೇಲೆ ಅಪಾರ ಪ್ರಭಾವ ಬೀರಿದ ಒಬ್ಬ ಲೇಖಕ. ಸಾಹಿತ್ಯದೆಡೆಗೆ ಸಾಮಾನ್ಯರನ್ನು ಸೆಳೆದ ಅಪ್ರತಿಮ ಮಾಂತ್ರಿಕ! ಪಿಯು ಕಲಿಯುವ ದಿನಗಳಲಿ ಪುಸ್ತಕ ಓದಿಗಿಂತ ಕಾದಂಬರಿ ಓದಿ, ಕ್ರಿಕೆಟ್ ಆಡಿದ್ದೆ ಹೆಚ್ಚು! ಆದರೂ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದೆ. ಕೆಲಸವೂ ಸಿಕ್ಕಿತ್ತು. ಜೆ. ಸಿ ಯವರು ಅವರನ್ನು ಒಮ್ಮೆ ಕುಂದಾಪುರಕ್ಕೆ ಕರೆದು ಕಾರ್ಯಗಾರ ಮಾಡಿಸಿದ್ದರು. ಅವರೊಂದಿಗೆ ಒಂದಿಡಿ ದಿನ ಕಳೆಯುವ ಭಾಗ್ಯ ಒದಗಿ ಬಂದಿತ್ತು. ಅಂದು ಜೊತೆಗೆ ಗೆಳೆಯ ಅಶೋಕನಿದ್ದ. ಆಟ, ಮಾತು-ಕತೆ, ಸಂವಾದ ಹೀಗೆ ಹತ್ತು ವಿವಿಧ ಕೆಲಸದಿಂದ ಒಂದಿಡಿ ದಿನ ನಮ್ಮನ್ನು ಹಿಡಿದಿಟ್ಟಿದ್ದರು. 'ಉತ್ತರ ಹೇಳಿ ಬಹುಮಾನ ಗೆಲ್ಲಿ' ಆಟದಲ್ಲಿ ಮೊದಲು ಉತ್ತರ ಹೇಳಿ ಬಹುಮಾನ ಪಡೆದ ಪುಳಕ ಮರೆಯಲುಂಟೇ. ಸಂವಾದದಲ್ಲಿ ಅವರ ಪುಸ್ತಕದ ಮೇಲೊಂದು ಪ್ರಶ್ನೆ ಕೇಳಿದ್ದೆ. ಅದೇನೆಂದರೆ 45 ನಿಮಿಷದಲ್ಲೇ ಅಡುಗೆ ಮಾಡಬಹುದೇ? ಎಂದು. ನನ್ನ ಮನೆಗೆ ಬನ್ನಿ ಮಾಡಿ ತೋರಿಸುವೆ ಎಂದು ಪೋನ್ ಸಂಖ್ಯೆ ನೀಡಿ ಆಹ್ವಾನಿಸಿದ್ದರು! ಸಮಯದ ಸದುಪಯೋಗಕ್ಕೆ ಅದ್ಭುತ ಉದಾಹರಣೆ ಎಂದರೆ ಯಂಡಮೂರಿ! ಊಟದ ಸಮಯವನ್ನು ವ್ಯರ್ಥವಾಗಲೂ ಬಿಡದೇ, ಊಟ ಪ್ಯಾಕ್ ಮಾಡಿ ಮರವಂತೆ ಬೀಚ್ಗೆ ಹೋಗಿ, ದಾರಿಯಲ್ಲೇ ಊಟಮಾಡಿಕೊಂಡು, ಮರವಂತೆ ಬೀಚ್ ಸವಿದು ಬಂದು ಸಮಯ ಉಳಿಸಿಕೊಂಡಿದ್ದು ಇನ್ನೂ ನೆನಪಿದೆ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...