Tuesday, October 18, 2011

ಶಿವಗಂಗೆಯ ಸ್ವಗತ

    ಕಾನನದ ನಡುವೆ ಏಕಾಂಗಿಯಾಗಿ ಗಿರಿ, ಕಂದರ ಮೂಲಿಕೆಗಳನ್ನು ಬಳಸಿ ಸುತ್ತಿ ಸುಳಿದು ಬಳುಕುತ್ತಾ ಜಡಿಗದ್ದೆ ಎಂಬಲ್ಲಿ ಸುಮಾರು 220 ಅಡಿ ಎತ್ತರದಿಂದ ಧುಮುಕುವ ನಾನು ಸೋಂದಾ ನದಿಯ ಸೃಷ್ಠಿ. ಹೆಸರು ಶಿವಗಂಗೆ. ಹೆಸರಿಗೆ ತಕ್ಕಂತೆ ನನ್ನ ಮಡಿಲಲ್ಲಿ ಶಿವಲಿಂಗವಿದೆ.
ನನ್ನ ನೋಡ ಬಯಸುವವರು ಶಿರಸಿಯಿಂದ ವಾನಳ್ಳಿ ರಸ್ತೆಯಲ್ಲಿ 32 ಕಿ.ಮೀ, ಪಯಣಿಸಿ ಜಡ್ಡಿಗದ್ದೆ ಎಂಬಲ್ಲಿಗೆ ಬರಬೇಕು ಅಲ್ಲಿಂದ ಮುಂದೆ ಸುಮಾರು 3 ಕಿ,ಮೀ. ಮಣ್ಣು ರಸ್ತೆಯಲ್ಲಿ ಪಯಣಿಸಿ ಎಡಕ್ಕೆ ತಿರುಗಿ ಪ್ರಪಾತಕ್ಕೆ ಇಳಿಯಬೇಕು. ಸುಮಾರು 220 ಅಡಿ ಆಳಕ್ಕೆ ಇಳಿಯದೆ ನನ್ನ ಸಂಪೂರ್ಣ ಚಲುವನ್ನು ಕಾಣಲಾರಿರಿ. ವೀಕ್ಷಣಾ ಪಕ್ಕ ಸ್ವಲ್ಪ ಮೆಟ್ಟಿಲಿದೆ. ಮುಂದಿನದು ದುರ್ಗಮವಾದ ಕಣಿವೆ ಇಳಿಯುವ ಸಾಹಸ. ಹಾದಿಯ ಪ್ರತೀ ಕಲ್ಲೂ ಜಾರುತ್ತಿರುತ್ತದೆ. ಹಾಗಾಗಿ ಯಾರೂ ನನ್ನ ನೋಡವ ಸಾಹಸ ಮಾಡುವುದಿಲ್ಲ. ನೀವೆನಾದರು ಸಾಹಸಿಗರಾಗಿದ್ದರೆ ಒಮ್ಮೆ ಈ ದಾರಿಯಾಗಿ ಬಂದು ಇಳಿಯುವ ಸಾಹಸ ಕೈಗೊಳ್ಳಿ.

ಸಮುದ್ರೊಪಾದಿಯಲ್ಲಿ ನನ್ನ ಭೋಗರ್ೆರೆತ ನೋಡಿ ನೀವು ಮಗುವಾಗುವುದು ಖಂಡಿತ. ಈ ರುದ್ರತೆಯಲ್ಲಿ ಒಂದಾಗಿ ಆನಂದಿಸಿ. ನೀರಿಗಿಳಿಯವ ಮುನ್ನ ಬಹಳ ಜಾಗರೂಕರಾಗಿರಿ, ನನ್ನ ಮಡಿಲಲ್ಲಿ ಅಲಲ್ಲಿ ಮೊಸಳೆಗಳಿವೆ. ಹಲವಾರು ವರ್ಷಗಳ ನನ್ನ ಪ್ರವಾಹದಿಂದ ಆಳವಾಗಿ ರಭಸವಾಗಿ ಹರಿಯುತ್ತಿರುವೆ. ಜಲಪಾತದ ಸುತ್ತಮುತ್ತ ಅನೇಕ ಸಣ್ಣ ಝರಿಗಳಿವೆ. ಅವನ್ನು ಕ್ಲಿಕ್ಕಿಸಲು ಮರೆಯದಿರಿ. ಮಳೆಗಾಲಕ್ಕಿಂತ ಚಳಿಗಾಲದಲ್ಲಿ ನನ್ನ ನೋಡುವುದು ಉತ್ತಮ.




























ಕೊನೆಯ ಮುತ್ತು:-

ಸುತ್ತಲೂ ಕಾನನದಿಂದ ಕೂಡಿರುವ ನಾನು ಪ್ರಕೃತಿ ಪ್ರಿಯರಿಗೆ ಸ್ವರ್ಗ ಸದೃಶನಾಗಿರುವೆ. ಅನೇಕ ಪ್ರಾಣಿ-ಪಕ್ಷಿ ಸಂಕುಲಗಳು ನನ್ನ ಮಡಿಲಿನಲ್ಲಿದೆ.



















ಒಮ್ಮೆಯಾದರೂ ಬನ್ನಿ, ಹಾಗೂ ನನ್ನ ಮಾನವನ್ನು ಪ್ಲಾಸ್ಟಿಕ್ಗಳಿಂದ ಹರಾಜು ಹಾಕಬೇಡಿ, ಮುಕ್ತವಾಗಿಡಿ.

ಶ್ರೀಧರ. ಎಸ್.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...