Saturday, November 26, 2011

ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!














ನವ ವಧುವಿನಂತೆ ಶೃಂಗಾರ ಗೊಂಡಿರುವ ಈಗಿನ ಸೋಮನಾಥಪುರ ದೇವಾಲಯದ ಅಂದಕ್ಕೆ ಅಂದೇ ಕುವೆಂಪು ಮಾರು ಹೋಗಿದ್ದರು. ಆಗ ತುಂಬಾ ಶಿಥಿಲಾವಸ್ಥೆಯಲ್ಲ್ಲಿದ್ದರೂ ಅವರಿಗೆ ಸೌಂದರ್ಯದ ಮೇರು ಪರ್ವತವಾಗಿ ತೋರಿತ್ತು. ಸೃಷ್ಟಿಶೀಲರಿಗೆ ಕಲ್ಲು ಸಹ ಸೌಂದರ್ಯದ ಜೊತಕವಾಗಿ ಕಾಣಿಸುತ್ತದೆ.ಎಂಬುವುದಕ್ಕೆ ಈ ಕವನವೇ ಸಾಕ್ಷಿ.





ವರ್ಷದ ಹಿಂದೆ ಕುಪ್ಪಳಿಗೆ ಹೋದಾಗ ಉದಯ ಶೆಟ್ಟಿ ಕಥಕ್ ಶೈಲಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದು ಅದ್ಭುತವಾಗಿತ್ತು, ಜೊತೆಗೆ ವಿಶೇಷ ಆಥಿತ್ಯವು. ನಿಜಕ್ಕೂ ಈ ದೇವಾಲಯ ಅದ್ಭುತವಾಗಿದೆ. 


















ಬೇಲೂರು ಹಳೆಬೀಡನ್ನೂ ಮೀರಿಸುವಷ್ಟು! ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋದ ಕುವೆಂಪು ಅಲ್ಲಿನ ಶಿಲ್ಪಕಲೆಯ ಬಗ್ಗೆ ಒಂದು ಕವನ ರಚಿಸಿದ್ದಾರೆ. ಇದೋ ಈ ಕವನ ನಿಮಗಾಗಿ, ಜೊತೆಗೆ ನನ್ನ ಛಾಯಾಚಿತ್ರವೂ ಇದೆ. ಓದುವ ಖುಷಿ ನಿಮ್ಮದಾಗಲಿ.

ಸೋಮನಾಥಪುರ ದೇವಾಲಯ


ಬಾಗಿಲೊಳು ಕೈಮುಗಿದು ಒಳಗೆ ಬಾ, ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುವಗಳನಪರ್ಿಸಿಲ್ಲಿ.
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ;
ಕಪೂರದಾರತಿಯ ಜ್ಯೋತಿಯಿಲ್ಲ.
ಭಗವಂತನಾನಂದ ರೂಪುಗೊಂಡಿಹುದಿಲ್ಲಿ;
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ!
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ!
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ!
ಮೂಛರ್ೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ!

ಕುವೆಂಪು; 10-7-28

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...