Tuesday, February 28, 2017

ಎರಡು ವಿಭಿನ್ನ ಕಾರ್ಯಾಗಾರಗಳು...


    ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ಆಯೋಜಿಸಲಾದ ಪರಿಸರ ಪ್ರೀತಿ ಬೆಳೆಸುವ ಎರಡು ಕಾರ್ಯಾಗಾರಗಳು.

ಮಕ್ಕಳೊಂದಿಗೆ ಚರ್ಚೆಯಲ್ಲಿ.
ಆಯರ್ುವೇದ ವೈದ್ಯರಾದ ಶ್ರೀ ರಾಜಗೋಪಾಲ್ ನಂಬಿಯಾರ್ ಮಕ್ಕಳಿಗೆ 30 ವಿಧದ ಔಷಧೀಯ ಸಸ್ಯಗಳನ್ನು ಪರಿಚಯಿಸಿದರು. ಅದರ ಔಷಧಿ ಗುಣಗಳನ್ನು ಮತ್ತು ತಯಾರಿಸ ಬಹುದಾದ ವಿವಿಧ ಔಷಧಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ವಿವರಿಸಿದರು.


ಶಾಲೆಯಿಂದ ನೆನಪಿನ ಕಾಣಿಕೆ 'ಜಾನಕಿ ಕಾಲಂ' ಪುಸ್ತಕ.
ಮಕ್ಕಳೇ ತಂದ ವಿವಿಧ  50 ಔಷಧಿ ಗಿಡಗಳನ್ನು ಪ್ರದಶರ್ಿಸಿದರು. ಮಕ್ಕಳೇ ತಮ್ಮ ಮನೆಯಿಂದ ತಂದ ವಿವಿಧ ಗಿಡಗಳ ಮಾಹಿತಿ ನೀಡಿದರು. ದೃಷ್ಠಿ ಎಲೆ, ಪಾಷಾಣ ಬೇಧ, ಕೆಪ್ಪಟನ ಎಲೆ ಗಮನ ಸೆಳೆಯಿತು. ಮಕ್ಕಳು ಶಿಕ್ಷರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ತಮ್ಮ ಅನುಭವನ್ನು ಹಂಚಿಕೊಂಡರು. ಈ ಸಂಬಂಧ ಕತೆಗಳು ಉಪಕತೆಗಳನ್ನೂ ಹೇಳಿದರು. ಕಾರ್ಯಾಗಾರದಲ್ಲಿ ಸುರೇಶ್ ಹೆಬ್ಬಾರ್, ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಭಾಗವಹಿಸಿದರು.

Wednesday, February 22, 2017

ಮಾರ್ಚ್ ಎಂಬ ಮಾಯೆ!


ಮಾರ್ಚ ಬಂತೆಂದರೆ ವಿಭಿನ್ನ ಭಾವವೊಂದು ತೇಲಿಬರುತ್ತೆ. ಗಿರಗಿಟ್ಟಲೆ ಹೂ ಉದುರಿಸೊ ಭೋಗಿ ಮರಗಳು, ಸುರಗಿ ಹೂವಿನ ನರುಗಂಪು. ಚಳಿ ತನ್ನ ಕಂಬಳಿ ಬಿಟ್ಟು ಹೋಗುವ ಕಾಲ. ಪ್ರಕೃತಿಯೇ ಕೆಂಧೂಳಿನಲ್ಲಿ ಮಿಂದೇಳುವ ಕಾಲ.

ಕಾಲೇಜು ವಿಧ್ಯಾಥರ್ಿಗಳಿಗೆ ಹೊಸ ಕೆಲಸಗಳ ಕನಸು. ಮುರಿದ ಪ್ರೇಮಗಳ, ಅಗಲುವಿಕೆಯ ಪರ್ವ ಕಾಲ. 
                     ಆದರೆ ನನಗೆ ಮಾಚರ್್ ಬಂತೆಂದರೆ ಬಿಡದೇ ನೆನಪಾಗೋದು ಸೂರಿ, ಚೀಪೆ, ಮುರುಗಲ, ಗೋಳಿ, ಗರಚ ಮುಂತಾದ ಕಾಡ ಹಣ್ಣುಗಳು. ರಕ್ಕಸರಿಗೆ ಸುರಪಾನದ ನಶೆ ಏರಿಸುವ ಚಿಂತೆಯಾದರೆ ನಮಗೆ ಹಣ್ಣಿನ ತಪಸ್ಸು.  ಕಾಡು ಹಣ್ಣು ಎಲ್ಲೇ ಆಗಲಿ ಕೇವಲ ಅದರ ವಾಸನೆಯಿಂದ ಪತ್ತೆ ಹಚ್ಚುತ್ತಿದ್ದೆವು.  ಎಣಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುವುದು. ಅವುಗಳಿಗಾಗಿಯೇ ಕಾಡು ಮೇಡೆಲ್ಲಾ ಸುತ್ತಿ ಬಳಸಿ ಶಾಲೆಗೆ ಹೋಗಿ ಬಯ್ಯಿಸಿಕೊಳ್ಳುತ್ತಿದ್ದೆವು. ನಮ್ಮ ದಾಳಿಗೆ ನಲುಗದ ಗಿಡವೇ ಇಲ್ಲ! ಯಾವ ಮರದಲ್ಲಿ ಯಾವ ಹಣ್ಣು ಯಾವಾಗ ಬಿಡುವುದೆಂಬುದು ನಮ್ಮ ನಾಲಗೆ ತುದಿಯಲ್ಲಿ. ಹೊಸ ಹೊಸ ಜಾತಿಯ ಹಣ್ಣುಗಳನ್ನು ಪತ್ತೆ ಹಚ್ಚುವುದರಲ್ಲಿ ನಾನು ನಿಸ್ಸೀಮ. ಒಮ್ಮೆಯೊಂದು ಬೆಕ್ಕಿನ ಹಣ್ಣಿನಂತಿರುವ ಹಣ್ಣನ್ನು ಪತ್ತೆ ಹಚ್ಚಿ ತಿಂದು ಬಿಟ್ಟಿದ್ದೆವು. ನಂತರ ನಾವು ಸಾಯುತ್ತೇವೆಂದು ಗೆಳೆಯ ಹೆದರಿಸಿದಾಗ ತುಂಬಾ ಹೆದರಿಕೆಯಾಗಿತ್ತು. ಸಂಜೆಯಾದರೂ ಸಾಯದಿದ್ದಾಗ ಹೇಳ ತೀರದಷ್ಟು ಸಂತೋಷವಾಗಿತ್ತು! ಒಮ್ಮೆಯಂತೂ ಚಾರ್ ಎಂಬ ಚಾರ್ ಹಣ್ಣು ತಿಂದು ಮುಖವನ್ನು ಹನುಮನಂತೆ ಊದಿಸಿಕೊಂಡು ಮಾಚರ್್ನ ಪರೀಕ್ಷೆ ತಪ್ಪಿಸಿಕೊಂಡದ್ದು ಇನ್ನೂ ನೆನಪಿದೆ. ಅದನ್ನೆಣಿಸಿ ಅಮ್ಮ ಈಗಲೂ ಕಾಲೆಯುತ್ತಾಳೆ. ಹೀಗೆ ಕಾಡು ಹಣ್ಣುಗಳ ಚಟಕ್ಕೆ ಬಿದ್ದು ಪಟ್ಟ ಗೋಳು ಒಂದೆರಡೇ. ಅದಕ್ಕೆ ನನಗೆ ಮಾಚರ್್ ಬಂದರೆ ಹಣ್ಣುಗಳೇ ನೆನಪಾಗೋದು.


ಚೀಪಿ ಹಣ್ಣು ಕೊಯ್ಯಲು ಹೋಗಿ ಕಣಜದಿಂದ ಕಟುಕಿಸಿಕೊಂಡದ್ದು ನನ್ನ ಇನ್ನೊಂದು ಸಾಹಸಗಾಥೆ, ಮನೆಯವರಿಗೆ ಮಾತ್ರ ಭಾದೆ. ಹೊಸ ಜಾತಿ ಕೆಂಪು ಹಲಸಿನ ತೆವಲಿಗೆ ಬಿದ್ದು ಮರ ಹತ್ತಿ ಇಳಿಯಲಾಗದೆ ಪೇಚಾಡಿಕೊಂಡಿದ್ದು ಕೊನೆಗ್ಯಾರೋ ದಾರಿ ಹೋಕರು ಬಂದು ನನ್ನನ್ನು ಇಳಿಸಿ ಹೋದ ನೆನಪು. ಮಾಚರ್್ ಬಂತೆಂದರೆ ಹಣ್ಣುಗಳ ನೆನಪ ಮೆರವಣಿಗೆ. ಪರೀಕ್ಷೆಗಳ ಪರ್ವಗಾಲದಲ್ಲಿ ನಮ್ಮದು ಫಲ ಪರ್ವ. ಕೆಲವೊಂದು ಹಣ್ಣುಗಳು ಹೇಳ ಹೆಸರಿಲ್ಲದೇ ನಮ್ಮೂರಿಂದ ಕಾಲ್ಕಿತ್ತಿದೆ. ನನಗೆ ಹಣ್ಣುಗಳ ಸೆಳೆತವಾದರೆ ಅಕ್ಕನಿಗೆ ಸುರಗಿಗಂಪಿನ ಸೆಳೆತ. ಸುರಗಿಗೂ ಅವಳಿಗೂ ಬಿಡಿಸಲಾಗದ ನಂಟು. ಸುರಗಿ ಹೂವಾಯಿತೆಂದರೆ ಮಾರ್ಚ ಬಂತೆಂದೇ ಅರ್ಥ. ಸೂರ್ಯ ಹುಟ್ಟುವ ಮುಂಚೆ ಅಮ್ಮ ಕೊಟ್ಟ ಕಾಫಿ ಹೀರಿ ಸುರಗಿ ಗಿಡಕ್ಕೆ ನಮ್ಮ ದಾಳಿ. ಮರ ಹತ್ತಲು ಬಾರದ ಅಕ್ಕ ನನ್ನ ಪೀಡಿಸಿ ಮರ ಹತ್ತಿಸುತ್ತಿದ್ದಳು. ಸುರಗಿ ಚಿಕ್ಕ ಮರವಾದುದರಿಂದ ಪರವಾಗಿಲ್ಲ. ತೃಪ್ತಿಯಾಗುವಷ್ಟು ಕೊಯ್ದು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದೆವು. ಕೊಯ್ದ ಹೂವನ್ನು ಮಾಲೆ ಮಾಡದೇ ಅವಳಿಗೆ ಸಮಾಧಾನವಿಲ್ಲ. ಹೂ ಕಟ್ಟದೇ ಶಾಲೆಗೆ ಹೋಗುತ್ತಿರಲಿಲ್ಲ. ಮಾರ್ಚ್ ಬಂದರೆ ಸುರಗಿ, ಅಕ್ಕ ಮತ್ತು ನನ್ನ ಪ್ರೀತಿಯ ಹಣ್ಣುಗಳು ನೆನಪಾಗುತ್ತವೆ!

ಶ್ರೀಧರ್. ಎಸ್. ಸಿದ್ದಾಪುರ.

Friday, February 10, 2017

ಸಂತೆಯೊಳಗೊಬ್ಬ ಸಂತ



ಸಂತೆ ತಿರುಗುವಾಗ ಸಿಕ್ಕನಿವನು
ಸಂತೆನಂತೆ ತೋರುತಿಹನು
ಬದುಕ  ವ್ಯಾಪಾರದಲಿ ವ್ಯಸ್ತನು.

          ಚೂಪು ನೋಡಿ ಕಣ್ಣ ನೋಟ
          ಮಾತು ಇಲ್ಲ ಮಾಟವಿಲ್ಲ
          ಏನೋ ದುಗುಡ ಹೊತ್ತನಲ್ಲ.
***
ಕಪ್ಪು back groundನ textureನಲ್ಲಿ ಆತನ ಮುಖದ ಭಾವವನ್ನು ಎದ್ದು ಕಾಣುವಂತೆ ಮಾಡಿವೆ. ರುಮಾಲಿನ ಬಲ ತುದಿಯ ಕಂಬದಂತಿರುವ texture ಚಿತ್ರಕ್ಕೊಂದು ವಿಶೇಷ ಆಯಾಮವನ್ನು ಕೊಟ್ಟಿದೆ ಅನಿಸುತ್ತಿದೆ. ಕೆನ್ನೆಯ ಬಲಭಾಗದ cross texture ಚಿತ್ರದಿಂದ ಸಂಪೂರ್ಣ ಬೇರ್ಪಡುವಂತೆ ಮಾಡಿ ಚಿತ್ರಕ್ಕೊಂದು ವಿಶೇಷ ಮೆರಗನ್ನು ನೀಡಿವೆ. ಕಪ್ಪು ಬಿಳುಪು ಆತನ ಮುಖದ ಭಾವನೆಯನ್ನು ಬಿಂಬಿಸುವಂತೆ ಮಾಡಿವೆ. ಹಣೆಯ ನಡುವಿನ ಗೆರೆಗಳು ಆತನ ಚಿಂತೆಯನ್ನು ಹೆಚ್ಚಿಸಿವೆ ಎನಿಸುತ್ತಿದೆ. ಕೊನೆಯದಾಗಿ ಸಂತೆಯ ಸಂತನಿಗೆ ಧನ್ಯವಾದಳು.

ಬಾಲ್ಯ ಮುಡಿದ ಹೂಗಳು......


ಸುತ್ತಲೂ ಸುಡುವ ಬೆಳದಿಂಗಳು
ನಡುವೆಲ್ಲೊ ತೇಲುವ ನೆನಪ ಹಾಯಿ
ವರ್ತಮಾನದ ಸಖ್ಯ ಸಾಕಾಗಿದೆ
ನೆನಪ ಅಂಗಳಕೆ ಮನ ಜೀಕುತಿದೆ!


ನಮ್ಮದು ಹೆಬ್ಬಾಗಿಲ ಮನೆ. ಸುನಂದ, ಸುಶೀಲ, ಸುಮಂಗಲ, ಸರಸ್ವತಿಯ ಜೊತೆ ನಾನು, ಸಾವಿತ್ರಿ, ಆ ಮನೆಯಲ್ಲಿ ಅಪ್ಪ, ಅಮ್ಮ ಮತ್ತು ತಮ್ಮಂದಿರ ಜೊತೆ ವಾಸವಾಗಿದ್ದೆ. ಹತ್ತಿರವಿರುವ ಮನೆಗಳ ಹೆಸರೂ ವಿಶಿಷ್ಟ ಸುಂಕದ ಗೋಳಿ. ಕೆಪ್ಪ್ನಹಿತ್ತಲು. ಮನೆಯಲ್ಲಿ ಎದುರಿಗೆ ಮುಟ್ಟಾದವರಿಗಾಗಿ ಹುಲ್ಲಿನ ಪುಟ್ಟ ಮನೆ. ಮನೆ ಸುತ್ತ ಮುತ್ತ ತೋಟ. ತೆಂಗು ಹಲಸು ಯಥೇಚ್ಛವಾಗಿ ಬೆಳೆಯುತ್ತಿತ್ತು. ಅಪ್ಪ ತುಂಬಾ ಉದಾರಿ. ಊರಿನಲ್ಲೆಲ್ಲಾ ದಾನ ಶೂರನೆಂದು ಪ್ರಸಿದ್ಧ. ಹಲಸಿನ ಮರ ಹತ್ತುವುದು ನನಗಾಗ ಸಲೀಸು. ಹತ್ತಾರು ದನ ಕರುಗಳು. ಹಾಲು ಕರೆಯಲು ಅಮ್ಮ ಕರೆಯುತ್ತಿದ್ದಳು. ಅಮ್ಮನಿಗೆ ಸಹಾಯ ಮಾಡುವುದೆಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು.
ಚಿಕ್ಕಂದಿನಿಂದಲೂ ನಾನು ತುಂಬಾ ತುಂಟಿ. ಸಣ್ಣದಾಗಿರುವಾಗಲೇ ಸಂಜೆ ಮಲ್ಲಿಗೆ ಬೀಜ ಮೂಗಿಗೆ ಹಾಕ್ಕೊಂಡು ಒದ್ದಾಡಿ, ವೈದ್ಯರಲ್ಲಿಗೆ ಹೋಗಿ ಅಪ್ಪ ತೆಗೆಸಿದ್ದು, ಒಮ್ಮೆ ಯಾಕೊ ಧರೆ ಹತ್ತಿ ಹಾರಿ ಸಣ್ಣ ಮರದ ಕೊಂಬೆಗೆ ಸಿಕ್ಕಿ ಬಿದ್ದು ಒದ್ದಾಡಿ, ಅಂಗಿ ತುಂಡಾಗಿಯೇ ಕೆಳಗೆ ಬಿದ್ದ ನೆನಪು. ಸಿಕ್ಕ ಸಿಕ್ಕ ನೀರ ತೋಡಿಗೆ ಕಾಲು ಹಾಕಿ ಹಾವು ಹಲ್ಲಿಗಳಿಂದೆಲ್ಲಾ ಕಚ್ಚಿಸಿಕೊಂಡಿದ್ದು. ಪೊಳಾರ್ ಬಿದ್ದ ಹಲಸಿನ ಮರ ಹತ್ತುತ್ತಿದ್ದದ್ದು. ಅಮ್ಮನ ಜೋಡಿ ಹೋಗಿ ಅವಡೆ, ಹೆಸರು ಕೊಡಿ ಕೊಯ್ಯುದು ಪಲ್ಯಮಾಡಿ ತಿನ್ನುತ್ತಿದ್ದೆವು. ಬೆಳಿಗ್ಗೆ ಬೇಗನೆದ್ದು ಸುರಗಿ ಕೊಯ್ದು ಮಾರಾಟ ಮಾಡುತ್ತಿದ್ದೆ. ಒಂದು ಸರಕ್ಕೆ ಒಂದಾಣೆ ಸಂಪಾದನೆಯಷ್ಟೆ. ಒಂದಾಣೆ ಆಸೆಗೊ ಲಂಗ ಕೊಳ್ಳುವ ಆಸೆಗೊ ಸುರಗಿ ಮರಕ್ಕೆ ಸುತ್ತುವುದು ಬಿಡುತ್ತಿರಲಿಲ್ಲ. ಅದ ಮಾರಿ ಬಂದ ಹಣದಿಂದ ಊರ ಹಬ್ಬಕ್ಕೆ ಲಂಗ ಕೊಂಡು: ಹಾಕಿ ಸಂಭ್ರಮಿಸುತ್ತಿದ್ದೆವು. ಬಾಯಮ್ಮ ಎಂಬುವವರ ಅಂಗಡಿಗದನ್ನು ಬೆಳಿಗ್ಗೆಯೇ ಮಾಲೆ ತಯಾರಿಸಿ ಮಾರಟ ಮಾಡಿ ಬರುತ್ತಿದ್ದೆ! ಹತ್ತನೇ ತರಗತಿಯವರೆಗೂ ಇದು ನಡೆದಿತ್ತು. ಸುರಗಿ ಕಾಲವೆಂದರೆ ನಮಗೆ ಸುಗ್ಗಿ ಕಾಲ. ಕೊಲ್ಲೂರಿಗೆ ಹೊಗೊರು ಇದನ್ನು ಕೊಳ್ಳುತ್ತಿದ್ದರೆಂದು ನೆನಪು. ಬಾಯಮ್ಮನ ಅಂಗಡಿಯಲ್ಲಿ ಒಂದಾಣಿಗೆ ಸಿಗುತ್ತಿದ್ದ ಎರಡು ಕೊಕ್ಕೊ ಮಿಟಾಯಿಯ ರುಚಿಯೋ ರುಚಿ. ಹೇಗೆ ಮರೆಯಲಿ ಆ ರುಚಿಯ? ಅಮ್ಮ ಹಾಲು ಮಾರಿ ಒಟ್ಟಾಕಿದ ಹಣವನ್ನೊಮ್ಮೆ ಅಪ್ಪಯ್ಯ ಅವಳಿಗೆ ಗೊತ್ತಾಗದಂತೆ ತೆಗೆಯ ಹತ್ತಿದರು. ನಾ ಕೂಗಿಕೊಂಡೆ, ಅಮ್ಮಾ, ಅಪ್ಪಯ್ಯ ನಿನ್ನ ದುಡ್ಡ್ ತೆಗಿತಿದ್ರ್.  ಎಂದು. ಅಪ್ಪಯ್ಯ ಬಂದು ನನ್ನ ಕಿವಿ ತಿಪ್ಪಿ ಆದ ನೋವಿನನುಭವ ಇನ್ನೂ ನೆನಪಿದೆ. ಜೋಕಾಲಿ ಬೀಸುವ ಆಟವಂತು ನನ್ನ ಕಾಲದ ಹುಡುಗಿಯರದ ಪರಮ ಪ್ರಿಯ ಆಟ.ಚಂಚಮಿ ಹೂ ಕೊಯ್ದು ಮಾಲೆ ಮಾಡುವುದು. ಗೋಳಿ ಹರಿವೆ ಸಪ್ಪಿನ್ನು ಕೊಯ್ಯುವುದು, ಹಲಸಿನ ಕಾಯಿ ಕೊಯ್ಯುವುದು ನಮ್ಮ ದಿನಚರಿಯ ಸಾಹಸಗಳಲ್ಲಿ ಒಂದು. ಪಕ್ಕದ ಮನೆಯ ಶ್ರೀಧರ ಮತ್ತು ಗೋಕುಲರೊಡನೆ ಕಚ್ಚೆ ಕಟ್ಟಿ ಕಬಡ್ಡಿ ಆಡುತ್ತಿದ್ದುದು. ಮಲರ್ಿ, ಸುಬ್ಬಿ, ಮಾಚ ಎಂಬ ವಿಚಿತ್ರ ಹೆಸರಿನ ಕೆಲಸಗಾರರು ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು. ಅವರೊಡನಾಡಿದ ನನ್ನ ನೆನಪು ಹಾಲು ಚಲ್ಲಿದ ಬೆಳದಿಂಗಳಿನಂತಿದೆ.
ನನಗಾಗ ನಾಲ್ಕು ಐದರ ಪ್ರಾಯ. ಮುಂಜಾವು ನಮ್ಮ ಹಂಚಿನ ಮನೆಯನ್ನು ತಬ್ಬಿಕೊಂಡಿತ್ತು. ಅಮ್ಮ ಬೇಗನೆದ್ದು ಅಂಗಳಕ್ಕೆ ನೀರು ಹಾಕಿ, ಒಲೆಯನ್ನು ಸಗಣಿ ಹಾಕಿ ಸಾರಿಸಿ ಶುದ್ಧಗೊಳಿಸಿ ಬೆಳಗಿನ ಕೆಲಸಕ್ಕೆ ಅಣಿ ಮಾಡುತ್ತಿದ್ದಳು. ನಾನು ಸಹ ಅಮ್ಮ ನೊಂದಿಗೆ ಎದ್ದು ಬಿಟ್ಟಿದ್ದೆ. ಅಂಗಳದಲ್ಲೇನೊ ಆಡಿಕೊಳ್ಳುತ್ತಿದ್ದೆ. ಅಂಗಳದಿಂದ ಐವತ್ತು ಅಡಿ ದೂರದಲ್ಲಿ ಮನೆಯ ಹಟ್ಟಿಯಿತ್ತು. ಒಳಗಿನ ಕೆಲಸ ಮುಗಿಸಿ ಅಮ್ಮ ಹಟ್ಟಿ ಕೆಲಸಕ್ಕೆ ಬಂದಿದ್ದಳು. ಹತ್ತೊ ಹನ್ನೆರೆಡೋ ದನ ಕರುಗಳಿದ್ದ ಹಟ್ಟಿ ನಮ್ಮದು. ಅಮ್ಮ ಮತ್ತು ಅಕ್ಕಂದಿರು ಸೇರಿ ಕರೆಯುತ್ತಿದ್ದರು. ಹಟ್ಟಿಯ ಪಕ್ಕವೇ ಸ್ನಾನ ಗೃಹ. ಅದರ ಪಕ್ಕದಲ್ಲೇ ಹುಲ್ಲಿಡುವ ಜಾಗ. ಅದನ್ನು ನಾವು ಹುಲ್ಲೇಣಿ ಎನ್ನುತ್ತಿದ್ದೆವು. ದನಗಳಿಗೆ ಮೊದಲು ಹುಲ್ಲು ಹಾಕಿಕೊಳ್ಳೋಣವೆಂದು ಅಮ್ಮ ಹುಲ್ಲೇಣೆಗೆ ಹತ್ತಿದಳು ಅಷ್ಟೇ. ಅವಳ ಬೊಬ್ಬೆ ಮಾತ್ರ ಕೇಳಿಸುತ್ತಿತ್ತು. ಯಾವುದೋ ವಿಷಕಾರಿ ಜೀವಿ ಅವಳಿಗೆ ಕಚ್ಚಿತೆಂದು ಮನೆಯವರೆಲ್ಲಾ ಭಾವಿಸಿದರು. ನಾನು ಮಾತ್ರ ನಿಶ್ಚಿಂತೆಯಿಂದ ಆಡುತ್ತಿದ್ದೆ.  ಅವಳೇನು ಹೇಳುತ್ತಿದ್ದಾಳೆಂದು ನನಗರ್ಥವಾಗಲಿಲ್ಲ. ಒಂದೆರಡೇ ಕ್ಷಣದಲ್ಲಿ ಮಾತ್ರದಲ್ಲಿ ಚಿರತೆಯೊಂದು ಆಡುತ್ತಿದ್ದ ನನ್ನನ್ನು ಸವರಿಕೊಂಡೇ ಓಡಿ ಹೋಯಿತು. ನಾನಿದೇನೆಂದು ನೋಡುವಷ್ಟರಲ್ಲೇ ಅದು ಪಕ್ಕದ ಸುಂಕದಗೋಳಿ ಬಟ್ಟರ ಮನೆಯ ನೆಲ್ಲಿ ಮರವನ್ನೇರಿ ಕುಳಿತುಕೊಂಡಿತು. ಅದಕ್ಕೂ ಭಯವಾಗಿದ್ದಿರ ಬೇಕು. ಅಮ್ಮ ಭಯದಿಂದ ನನಗೇನಾಯಿತೆಂದು ನೋಡಲು ಓಡೋಡಿ ಬಂದಳು.
ಎಷ್ಟು ಹೊತ್ತಿನಿಂದ ಅದು ಅಲ್ಲೇ ವಾಸ ಮಾಡುತ್ತಿರಬಹುದು? ಯಾಕಲ್ಲಿಗೆ ಬಂತದು? ಮುಂತಾದ ಅನೇಕ ಪ್ರಶ್ನೆಗಳ ಸರಮಾಲೆಯನ್ನೇ ಉಳಿಸಿ ಓಡಿತ್ತದು. ಬಹುಶಃ ಅದರ ಓಟ ಇನ್ನೂ ನಿತ್ತಿಲ್ಲ. ಅವುಗಳ ವಾಸ ಸ್ಥಾನಗಳ ನಿರಂತರ ನಾಶದಿಂದ ಆಹಾರದ ಕೊರತೆಯಿಂದ ಅದು ನಮ್ಮ ಹಟ್ಟಿಗೆ ಬಂದಿರಬೇಕು ಎಂಬುದು ನನ್ನ ಈಗಿನ ಊಹೆಯಷ್ಟೇ. ಬೆಳಗಾಯಿತೆಂದು ಅದಲ್ಲೇ ಕುಳಿತಿರಬೇಕು. ಈಗಲೂ ಬಚ್ಚಲು ಮನೆಗೆ ಹೋಗುವಾಗೆಲ್ಲಾ ಈ ಘಟನೆ ನೆನಪಿಗೆ ಬರುತ್ತದೆ. ಜೊತೆಗೆ ನನ್ನ  ಬಾಲ್ಯದ ಮಧುರ ಚಿತ್ರಕ ನೆನುಪು ಸಂತೆಯಂತೆ ಬಂದು ನೆರೆಯುತ್ತೆ. ಇಂತಹ ಅಮರ ಬಾಲ್ಯವನ್ನು ಕೊಟ್ಟ ನನ್ನೂರು ಉಡುಪಿ ಜಿಲ್ಲೆಯ ಉತ್ತರ ತುದಿಯ ಬೈಂದೂರು.

ಎಮ್. ಸಾವಿತ್ರಿ ಸಿದ್ದಾಪುರ.
ನಿರೂಪಣೆ:-ಶ್ರೀಧರ್ ಎಸ್. ಸಿದ್ದಾಪುರ.
photo-inter net.
Main title- Amaresh.

Saturday, February 4, 2017

ಏಕಾಂತದ ಆಗುಂಬೆ ಮತ್ತು ಮಲಬಾರ್ ಟ್ರೋಗನ್ ( Malabar Trogon)

A Beauty Of Nature A Unique water fall Of Agumbe.
    ಜಗತ್ತಿನ 38 ಜೀವವೈವಿದ್ಯತಾ ತಾಣಗಳಲ್ಲಿ ಆಗುಂಬೆಯೂ ಒಂದು. World heritage ಮಾನ್ಯತೆಯೂ ಇದಕ್ಕಿದೆ. ಲಂಗೂರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮಹೋರಗದಲ್ಲೊಂದಾದ ಕಾಳಿಂಗ ಸರ್ಪ ಸಾಮಾನ್ಯ. ಸೂರ್ಯನಿಗಿಲ್ಲಿ ಯಾವತ್ತೂ ರಜೆ. ಹತ್ತಿ ಮರದ ಅಜ್ಜನ ಗಡ್ಡ ಹಾರಿದಂತೆ ಮುಖಕೆ ಮಂಜಿನ ಸಿಂಚನ. ಮೌನವೇ ಹಾಸು ಹೊದ್ದ ರಸ್ತೆಗಳು. ಮಳೆಗಾಲದ ಅನುದಿನವೂ ಹೂಪಕಳೆಗಳುದುರಿದಂತೆ ಮಳೆ ಸಿಂಚನ. ಗಿರಿ ಶಿಖರವನ್ನೆಲ್ಲಾ ತೊಯಿಸಿ ಇಲ್ಲಿ ಹುಟ್ಟುವ ಜೀವ ನದಿಗಳು ಅನೇಕ. ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ನೀರವ ರಸ್ತೆಗಳು. ಇಲ್ಲಿನ ಮೌನ ಬಹಳ ಇಷ್ಟವಾಗುತ್ತದೆ. ಅನೇಕ ಪ್ರವಾಸಿ ಸ್ಥಳಗಳು ಹತ್ತಿರದಲ್ಲೇ ಇವೆ ಎಂಬುದು ಇಲ್ಲಿನ ಮತ್ತೊಂದು ಆಕರ್ಷಣೆ. ಹೊಂಬುಜ, ಕವಲೇ ದುರ್ಗ, ನಗರ ಕೋಟೆ, ಸಿರಿಮನೆ, ಕಿಗ್ಗ ದೇವಾಲಯ ಇತ್ಯಾದಿ.

Malabar Trogon Male.


      ಕಪ್ಪೆಗಳು, ವಿವಿಧ ಜಾತಿಯ ಹಾವುಗಳು, ಹಾರುವ ಓತಿ ನೋಡಬೇಕೆಂದರೆ ಆಗುಂಬೆ ಒಂದು ಪ್ರಶಸ್ತ ಸ್ಥಳ. ಇಲ್ಲಿನ ಹಕ್ಕಿಗಳಿಗಾಗಿ ವಿದೇಶಿಯರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಟ್ರೋಗನ್ ಇಲ್ಲಿನ ಒಂದು ವಿಶೇಷ ಹಕ್ಕಿ. ಕೆಂಬಣ್ಣ ತುಂಬಿದ ಡಬ್ಬಿಗೆ ಬಿದ್ದು ಬಂದಂತಹ ಬಣ್ಣ. ಅದರ ಮೋಹಕ್ಕೆ ಸೋಲದವರಾರು. ಅನೇಕ ಬಾರಿ ಇಲ್ಲಿ ಲಂಗರು ಹೊಡೆದರೂ ಕ್ಯಾಮರಕ್ಕೆ ಈ ಹಕ್ಕಿ ದರ್ಶನ ಕೊಟ್ಟಿರಲಿಲ್ಲ. ಅನೇಕ ಬಾರಿ ಹೆಬ್ರಿ ಮೂಲಕ ಹಿಂತಿರುಗುವಾಗ ಕಂಡು ಕಾಣದಂತೆ ಹೆಣ್ಣು ಹಕ್ಕಿಯೊಂದು ಹಾರಿ ಹೋಯಿತು. ಗೆಳೆಯ ರಾಘು ಜೊತೆ ಆಗುಂಬೆಯ ಸುತ್ತ ಸುತ್ತು ಹಾಕಿ ಬಂದೆ. ಇಲ್ಲ. ಒಂದೆರಡು ಹೆಣ್ಣು ಹಕ್ಕಿಯ ದರ್ಶನ ಬಿಟ್ಟರೆ ಗಂಡು ಹಕ್ಕಿಯ ದರ್ಶನ ಭಾಗ್ಯ ಸಿಕ್ಕಿರಲಿಲ್ಲ.


lion tailed Macaque
    ಜನವರಿಯ ಚಳಿಯ ದಿನಗಳಲ್ಲಿ ಮನೆ ಎದುರಿನ ಚಿಕ್ಕ ಕುರುಚಲು ಕಾಡಿನಲ್ಲಿ ತಿರುಗುತ್ತಿದ್ದೆ. ಸುಮಾರು 7.20 ರ ಸಮಯ. ಇಡಿ ಪ್ರಕೃತಿಯೇ ಚಳಿಯಲ್ಲಿ ಮಿಂದೇಳುತ್ತಿತ್ತು. ಅಚಾನಕ್ ಆಗಿ ಗಂಡು ಹಕ್ಕಿಯೊಂದು ಸಣ್ಣ ಕೊಂಬೆಯ ಮೇಲೆ ಬಂದು ಚಳಿ ಕಾಯಿಸುತ್ತಾ ಕುಳಿತ್ತಿತ್ತು. ಸುಮಾರು 05 ನಿಮಿಷ ಅಲ್ಲೇ ಕುಳಿತು ಅನೇಕ ಚಿತ್ರ ತೆಗೆಯಲು ಅನುವು ಮಾಡಿತು. ಮುಂಜಾವಿನ ಬೆಳಕಿನ ಕೊರತೆಯಿಂದ ಕೆಲವು ಚಿತ್ರ ಮಬ್ಬಾದವು. ಒಂದೆರಡು ಚನ್ನಾಗಿ ಮೂಡಿ ಬಂದವು. ಮತ್ತೆರಡು ದಿನವೂ ಅದೇ ರೆಂಬೆಯ ಮೇಲೆ ಬಂದು ಕುಳಿತು ಹಾರಿ ಹೋದದ್ದು ವಿಶೇಷ. 


ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...