Thursday, April 5, 2012

ನೋಡಿ ಒಮ್ಮೆ ಕೊಡಗು ಎಂಥ ಇದರ ಸೊಬಗು



ಕೊಡಗೆಂದರೆ ಮಂಜು, ಮಂಜೆಂದರೆ ಕೊಡಗು. ಈ ನಾಡು ಕನ್ರಾಟಕದ ಕಾಶ್ಮೀರ. ತನ್ನಷ್ಟಕ್ಕೆ ತಾನಿರುವ ಯೋಚನೆಗೆ ಹಚ್ಚುವ ಸುಂದರ ರಮ್ಯ ತಾಣ. ಗಿರಿಗಳಿಗಾವರಿಸುವ ಮಂಜನ್ನು ನೋಡುವುದೇ ಆನಂದ. ಈ ನಾಡು ಪ್ರಕೃತಿ ಪ್ರೀಯರ ನೆಲೆಬೀಡು. ಪ್ರಕೃತಿ ಇಲ್ಲಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ.

ಗಿರಿಗಳಲ್ಲಿನ ಮೌನ ಕರಾವಳಿಯ ಮಧ್ಯಾಹ್ನದಂತೆ. ಗಿರಿ ಶಿಖರಗಳಲ್ಲಿರುವ ಧಾರೆಗಳನ್ನು ಎಣಿಸಿದವರಾರು. ಪ್ರಕೃತಿಯನ್ನೆ ಹೊದ್ದು ಮಲಗಲು ಅದ್ಭುತ ತಾಣ. ಅಲ್ಲಿನದೊಂದು ಜಲಪಾತಕ್ಕೆ ಹೋಗೊಣ ಬನ್ನಿ.
ಮೇಲೆ ಮಂಜು ಸುರಿಸುವ ಗಿರಿಗಳ ನಡುವೆ ಧಮುಕುವ ಲಲನೆಯಂತಿರುವ ಸುಂದರ ಜಲಧಾರೆ. ಅಲ್ಲಲ್ಲಿ ಬಳುಕುತ್ತಾ ನಿಧಾನವಾಗಿ ಪ್ರವಹಿಸುವ ಜಲ. ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಅಲ್ಲಲ್ಲಿ ಕಾಣಸಿಗುವ ಈ ಪ್ರದೇಶದ ಸುಂದರ ಚಿಟ್ಟೆ ಪ್ಯಾಪಿಲಾನ ಬುದ್ಧ. ಅದುವೇ ಶ್ರೀಮಂಗಲ ಕಾಡಿನ ನಡುವಿರುವ
ಲಕ್ಷ್ಮಣ ತ್ರೀಥ. ಕಾವೇರಿಯ ಉಪನದಿಯಾಗಿ ಮುಂದೆ ಹರಿಯುತ್ತದೆ. ಕೊಡಗಿನ ಇಪರ್ುವಿನಲ್ಲಿದೆ. ಜಲಪಾತ ತಲುಪುವ ಮುದವನ್ನಿತ್ತು ಮನ್ಸನ್ನು ಹಗುರಗೊಳಿಸುತ್ತದೆ. ಅಲ್ಲಲ್ಲಿ ಬೆಳೆದ ಕಾಡು ಹೂಗಳು ನಮ್ಮನ್ನು ಆಕಷ್ರಸಿದವು.
ನಾಗರಹೊಳೆ ಅಭಯಾರಣ್ಯಕ್ಕೆ ಹತ್ತಿರವಿದೆ. ಅಲ್ಲದೇ ಈ ಜಾಗದಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ತುತ್ತತುದಿಯಲ್ಲಿರುವುದರಿಂದ ತಲುಪುದು ಬಲು ಕಷ್ಟ. ಈ


ದಿನ ಇಲ್ಲಿದ್ದು ಜೀವಜಾಲದ ಅಧ್ಯಯನ ಮಾಡುತ್ತಾರೆ. ಒಟ್ಟಾರೆ ಪ್ರಕೃತಿ ಪ್ರಿಯರ ಸುಂದರ ತಾಣ.
ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು

ಒಂದಿಡಿ ದಿನ
ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುವವು. ಹಲವರು ತುಂಬಾ ದಿನ ಇಲ್ಲಿದ್ದು ಜೀವಜಾಲದ ಅಧ್ಯಯನ ಮಾಡುತ್ತಾರೆ. ಒಟ್ಟಾರೆ ಪ್ರಕೃತಿ ಪ್ರಿಯರ ಸುಂದರ ತಾಣ.



















































Tibetian camp





























ರಾಜಾ ಸೀಟನಲ್ಲಿ ಸಿಕ್ಕ ಹಕ್ಕಿ; ಹುಳಗುಳುಕ















ದುಬಾರೆ ಪ್ರಕೃತಿ ಶಿಬಿರ

















ನಿಸರ್ಗಧಾಮದ ಸುಂದರ ಹೆಬ್ಬಾಗಿಲು.

ಶ್ರೀಧರ. ಎಸ್ .

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...