Saturday, February 2, 2013

ಸೃಜನಾತ್ಮಕತೆ

ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಸೃಜನಾತ್ಮಕತೆ ಎಂದರೇನು? ಹೇಗೆ ಅದನ್ನು ಬೆಳೆಯುವಂತೆ ಮಾಡು ವುದು. ಹೊಸ ಹೊಸ ಸೃಷ್ಟಿ ನಮ್ಮಿಂದೇಕೆ ಸಾಧ್ಯವಿಲ್ಲ? ಹಳೆಯದು ಮಾಸಿ ಹೊಸತೊಂದನ್ನು ನೀಡಲೇಕೆ ಸಾಧ್ಯವಿಲ್ಲ!

ಕುಟುರ Green Barbet
'ತನಹಾ ದಿಲ್'' ಹಾಡಿನ ಕತರ್ೃ 'ಶಾನ್' ಮತ್ತೊಮ್ಮೆ ಅಂತಹ ಹಾಡು ರಚಿಸಲೇಕೆ ಸಾಧ್ಯವಾಗಿಲ್ಲ! ಸೃಜನಾತ್ಮಕತೆಗೆ ಮಿತಿ ಇದಯೆ? ಅಥವಾ ನಮಗೆ ನಾವೆ ಮಿತಿಯನ್ನು ಹಾಕಿಕೊಂಡಿದ್ದೇವೆಯೆ? ಹಾಕಿ ಕೊಂಡಿದ್ದರೆ ಈ ಮಿತಿಗಳಿಂದ ಹೊರ ಬರುವುದು ಹೇಗೆ? ಸಂಕೊಲೆಯಿಂದ ಬಂಧಿಸಿದ ಮರಿ ಆನೆ ದೊಡ್ಡದಾದ ಮೇಲು ಏಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರುವುದು ಅದರ ಮಿತಿ ಇರಬಹುದು. ಹಾಗೆ ನಾವು ನಮ್ಮ ಚೌಕಟ್ಟಿನಲ್ಲಿದ್ದೇವೆಯೆ? ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. 

Crimson Red Barbet 


2 comments:

  1. ಶಾಲೆಯಲ್ಲೊಂದು ಉದ್ಯಾನ ನಿರ್ಮಿಸಬೇಕೆಂಬ ಪ್ರಯತ್ನದಲ್ಲಿರುವಾಗ ಕಳೆಗಿಡಗಳನ್ನು ತೆಗೆದು ನೆಲವನ್ನು ಸಪಾಟುಮಾಡಬೇಕೆಂಬ ಯೋಚನೆಯೇ ಮೊದಲು ಬರುತ್ತದೆ? ಯಾವುದು ಕಳೆ? ಎಂತಹ ಸಪಾಟು? ನಾನು ಹಾಗೆಯೇ ಮಾಡಿದೆ.ಕಳೆಗಿಡಗಳ ಜೊತೆ ಇದ್ದ ಅತ್ತಿಯ ಗಿಡವನ್ನು ಬಿಸುಡಲು ಮನಸ್ಸಾಗಲಿಲ್ಲ.ಒಂದು ಜಾಗ ನೋಡಿ ನೆಡಲು ಮಕ್ಕಳಿಗೆ ಹೇಳಿದೆ.ಆ ಗಿಡವು ಮರವಾಗಿ,ಕೆಂಪನೆಯ ಹಣ್ಣು (?) ಗಳನ್ನು ತೂಗಿಕೊಂಡಾಗ ಆದ ಖುಷಿಯೇ ಬೇರೆ.ಆ ಮರದಿಂದ,ಬರುವ ದನಿಯೊಂದು ಕುತೂಹಲವನ್ನುಂಟುಮಾಡಿತು....ಮೊದಲ ಬಾರಿಗೆ ಅತ್ತಿಯ ಹಣ್ಣನ್ನು ತಿನ್ನಲು ಬಂದ ಗ್ರೀನ್ ಬಾರ್ಬೆಟ್ಟನ್ನು ನೋಡಿದೆ.ವಡೇರಹೋಬಳಿ ಹೈಸ್ಕೂಲಿನ ಒಂದು ಕಳೆ ಗಿಡ ಗ್ರೀನ್ ಬಾರ್ಬೆಟ್ಟನ್ನು ಪರಿಚಯಿದ ಪರಿಯಿದು!

    ReplyDelete
  2. ಜಿವಂತಿಕೆಯ ಅನುಭವಗಳ ಸರಮಾಲೆ ಈ ಬದುಕು...

    ReplyDelete

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...