Sunday, June 30, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...4

ಇಲ್ಲೂ ಇದೆ ನೋಡಿ ಒಂದ್ ಶಾಲೆ:- 
10,200 ಅಡಿ ಎತ್ತರ. 3,000 ಜನಸಂಖ್ಯೆಯ ಈ ಹಳ್ಳಿಯಿರುವ ಪರ್ವತದ ತುತ್ತ ತುದಿಯಲ್ಲಿ ಶಾಲೆ ಇದೆ ಎನ್ನುವುದೊಂದು ವಿಶೇಷ. ಶಾಲೆಯನ್ನು ಕಡಿದಾದ ಪರ್ವತಗಳು ಸುತ್ತುವರಿದಿದೆ. ಈ ಶಾಲೆ ಕೇವಲ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.  
ಮಕ್ಕಳ ಸಂಖ್ಯೆ 300ಕ್ಕೂ ಅಧಿಕ. ಪ್ರತಿದಿನವು ಇಬ್ಬರು ಶಿಕ್ಷಕರು 2.5 ಗಂಟೆಗಳ ಪರ್ವತಗಳ ಸೆರಗನ್ನು ಕಡಿದಾದ ಕಡೆಗಳಲ್ಲಿ ಹತ್ತಿ ಬರುತ್ತಾರೆನ್ನುವುದು ವಿಶೇಷ. ನಾವು ಕೇವಲ 1 ಕಿ.ಮಿ. ನಡಿಗೆಗೆ ಹೆದರುವಾಗ ಈ ಶಿಕ್ಷಕರು ವರ್ಷವಿಡಿ ನಾಜೂಕಾದ ಪರ್ವತ ಎರುತ್ತಾ, ಮಳೆಗಾಳಿಗೆ ಲೆಕ್ಕಿಸದೆ ಪಾಠ ಪ್ರವಚನ ಮಾಡುವುದನ್ನು ನೋಡುವುದೊಂದು ರೋಮಾಂಚನ. 
ನಾವು ಪರ್ವತವೇರುವ ಸಂದರ್ಭ ಅಲ್ಲಿನ ಶಿಕ್ಷಕರನ್ನು ನೋಡಿ ಮಾತನಾಡಿಸಿದೆವು. ಸಂಜೆಯ ವೇಳೆಗೂ ಅವರು ಲವಲವಿಕೆಯಿಂದ ಮಾತನಾಡಿಸಿ ಉಪಚರಿಸಿದರು. ಸರಳ ಕಟ್ಟಡದ ಈ ಶಾಲೆ ಮನ ಸೆಳೆಯಿತು. ಶಾಲೆ ಬಿಟ್ಟ ಕೂಡಲೆ ಕೆಲವು ಮಕ್ಕಳು ಮರದ ಮೇಲೆ ಹತ್ತಿ ನಮಗೆ ಸರ್ಕಸ್ ತೋರಿಸತೊಡಗಿದರು. ನಾವು ಅವರ ಕೆಲವು ಪೋಟೊ ತೆಗೆದುಕೊಂಡೆವು ಅವರೆಲ್ಲಾ ನಾಚಿಕೆಯಿಂದ ಮುಖ ತಪ್ಪಿಸಿಕೊಂಡರು. ನಮಗೋ ಮಲಾನ ಸಂದಶರ್ಿಸಿದ ಖುಷಿಯಲ್ಲಿ ತೇಲುತ್ತಾ ಸಾಗಿದೆವು. ಸರಿಯಾಗಿ ಪೋಟೊ ತೆಗೆಯಲಾಗಲಿಲ್ಲ. ಮಲಾನಕ್ಕೆ ನಮಗೆ ಮೊದಲು ಸ್ವಾಗತಿದ್ದೆ ಈ ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರು ಎನ್ನುವುದು ವಿಶೇಷ. ದಾರಿ ತಪ್ಪಿತೆನ್ನುವಾಗ ಸಿಕ್ಕದ ಖುಷಿಯಲ್ಲಿದ್ದೆವು.



 ಇಲ್ಲಿಂದ ಎಲ್ಲಿಗೆ:-

ಇಲ್ಲಿಂದ ಅನೇಕ ಸುಂದರವಾದ ಸ್ಥಳಗಳನ್ನು ನೋಡಬಹುದು. ಮಣಿಕರಣ್, ನಗ್ಗರ್ನ ರೋರಿಚ್ ಮ್ಯೂಸಿಯಂ, ಬಿಜಲಿ ಮಹಾದೇವ, ಮಹಾದೇವ ತೀರ್ಥ ಮುಂತಾದ ಅತಿ ಹತ್ತಿರದ ಸ್ಥಳಗಳಿವೆ. ಅಲ್ಲದೇ ಮನಾಲಿ, ಹಿಡಿಂಬಾ ದೇವಸ್ಥಾನ, ಮನು ದೇವಸ್ಥಾನ, ರೋಥಾಂಗ್ ಪಾಸ್, ಬಿಯಾಸ್ ಕುಂಡ್ ಮುಂತಾದ ಪಟ್ಟಿ ಮಾಡಲಾಗದಷ್ಟು ಅನೇಕ ಸ್ಥಳಗಳಿವೆ. ಇಲ್ಲಿಂದ ಮಲಾನ ಕಣಿವೆಯನ್ನು ನೋಡಬಹುದು. 
ಚಂದ್ರಕಣಿ ಪಾಸ್ ಎನ್ನುವ ಸುಂದರ ಸ್ಥಳ ನೋಡಲು ಇಲ್ಲಿಂದ ಕೇವಲ 4 ಗಂಟೆಯ ದಾರಿ. ಚಂದ್ರಕಣಿ ಚಾರಣವನ್ನು ಸಹ ಇಲ್ಲಿಂದಲೂ ಕೈಗೊಳ್ಳಬಹುದು. ಅದ್ಭುತವಾದ ಪಾರ್ವತಿ ಕಣಿವೆ, ಹಿಮಾಲಯದ ವಿವಿಧ ಬೆಟ್ಟಗಳ ದರ್ಶನಮಾಡಲು ಚಂದ್ರಕಣಿ ಪಾಸ್ ಚಾರಣ ಮಾಡಬಹುದು.
(ಮುಂದುವರಿಯುವುದು .... )

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...