Friday, November 3, 2017

ಎರಡೆರಡು ಮಹಾಪ್ರಾಣ ಬರುವುದಿಲ್ಲ ಒಟ್ಟಿಗೆ.........ಒಂದು ಪದ್ಯ

ಕನ್ನಡ ಮರೆಗೆ ಸರಿಯುತಿರುವ ಈ ದಿನ ಮಾನಸದಲ್ಲಿ ಕನ್ನಡ ಬರವಣಿಗೆಗೆ ಸಹಾಯಕವಾದ ಈ ಪದ್ಯವಿದ್ದರೆ ಸುಲಭ. ಕನರ್ಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನಿಮ್ಮ ಓದಿಗಾಗಿ ಈ ಪದ್ಯ. ಚೆನ್ನಾಗಿದ್ದರೆ ತಿಳಿಸಿ.
ಎಷ್ಟು ಸಲ ತಿಳಕೊಂಡರೂ ಮರೆಯುವುದು ನೋಡಿ
ಕಾಗುಣಿತದ ಗೊಂದಲಗಳ ಜೋಡಿ ಮಾಡಿ ಹಾಡಿ
ಕಲಿಕೆ ಶುರುವಿಗೊಳ್ಳೆ ದಿನ ಶನಿವಾರವೆ ಬಹುಶಃ
ಮೀನ ಮೇಷ ಎಣಿಸದಿರು ಮುಖ್ಯ ಪ್ರತಿ ನಿಮಿಷ
ಬುಧವಾರ ತೃಪ್ತಿ ಪಡು ಬರೀ ಅರ್ಧ ರೊಟ್ಟಿಗೆ
ಎರಡೆರಡು ಮಹಾಪ್ರಾಣ ಬರುವುದಿಲ್ಲ ಒಟ್ಟಿಗೆ
ನೆನಪಾದರೆ ಪ್ರೇಮ ಬಾಧೆ ಆವರಿಸಿದ ರಾಧೆ
ಎಲ್ಲಿ ಉಂಟು ಎಲ್ಲಿ ಇಲ್ಲ ಎಂಬ ಬಾಲ ಬೋಧೆ
ವಿಷ ಕುಡಿದರೆ ವಿಷಾದವೇ ಸರಳವಾದ ವಿಷ್ಯ
ಶಕಾರವೇ ಸದಾ ಮೊದಲು ವಿಶೇಷವಿದು ಶಿಷ್ಯ
ಬೋಧನೆಗೆ ಬೇಕೇ ಇಲ್ಲ ನಿಘಂಟಿನ ಶೋಧನೆ
ಎಲ್ಲವನ್ನೂ ಸೀಳಬೇಡಿ ಇರಲಿ ಭೇದ ಭಾವನೆ
ಮಹಾಪ್ರಾಣಕೆ ಯಾವ ಪ್ರಾಣವೂ ಆಗಲಾರದು ಒತ್ತು
ಅದೇನೇ ಇದ್ರೂ ಯ, ರ, ನ ಇತ್ಯಾದಿಗಳ ಸೊತ್ತು
ಸಿರಿಗನ್ನಡ ಮರೆಯುತಿರೋ ಆತಂಕದ ಹೊತ್ತು
ಸರಿಗನ್ನಡ ಗೆಲ್ಲಬೇಕು ನಿಮಗೆ ಕೂಡ ಗೊತ್ತು!          

                                                                       ಪದ್ಯ ರೂಪ- ಅಪಾರ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...