Saturday, March 2, 2019

ಚಳಿಗೆ ಮುದುರಿದ ನೀಲಕಂಠ-


ಇದರ ಚಿತ್ರ ತೆಗೆಯುವುದು ಪ್ರತಿಯೊಬ್ಬ ಛಾಯಾಚಿತ್ರಗಾರನ ಕನಸು. ಬಣ್ಣದಲ್ಲಿ ಸರಿಸಾಟಿ ಇಲ್ಲದ ಚೂಟಿ. ಬೇಟೆಯಲ್ಲಿ ನಿಷ್ಣಾತ. ಅತಿ ಸಮೀಪದಿಂದ ಚಿತ್ರ ತೆಗೆಯುವುದು ಬಲು ಕಷ್ಟ! (ನನ್ನ ಅನುಭವ) ಅನೇಕ ವರ್ಷ ನನ್ನ ಕ್ಯಾಮರವಾದ ತಪ್ಪಿಸಿಕೊಳ್ಳುತ್ತಲೇ ಇತ್ತು. ಈ ಬಾರಿ ಮಾತ್ರ ನನ್ನ ಕ್ಯಾಮರ ಕಣ್ಣಿಗೆ ಸಿಕ್ಕಿ ಬಿತ್ತು. ಇಂತಹ ಚಿತ್ರಕ್ಕಾಗಿ ದಶಕಗಳ ಕಾಲ ಕಾದಿದ್ದೆ. ಸಖತ್ ಚಳಿ ಇದ್ದ ದಿನ. ತನ್ನ ದೇಹದ ಗರಿಗಳನ್ನು ಕೆದರಿಕೊಂಡು ರೆಂಬೆಯ ತುದಿಯಲ್ಲಿ ಬಿಸಿಲಿಗೆ  ತನ್ನ ದೇಹವನ್ನು ಒಡ್ಡಿಕೊಂಡು ಕುಳಿತಿತ್ತು. 'ಅರೆ ಇವನಾ' ಎಂಬ ನೋಟವನ್ನು ನನ್ನೆಡೆಗೆ ಎಸೆದು ಗಂಟೆಗಳ ಕಾಲ ಬೆಚ್ಚಗೆ ಕುಳಿತಿತ್ತು. ನನಗೇ ಬೇಸರ ಬಂದು ಎದ್ದು ಬಂದೆ. ನಿಜ ಅದೇ ನೀಲಕಂಠ (Coracias benghalensis). ಕನರ್ಾಟಕದ ರಾಜ್ಯ ಪಕ್ಷಿ.
ಸುಮಾರು 26-27 ಸೆಂಟಿ ಮೀಟರ್ ಉದ್ದವಿರುವ, 50 ಶೇ ಬೀಟಲ್ 25 ಶೇ ಗ್ರಾಸ್ ಹೋಪರ್ ಮತ್ತು ಮಿಡತೆಗಳನ್ನೇ ಹೆಚ್ಚಾಗಿ ತಿನ್ನುತ್ತೆ. ಮಾರ್ಚನಿಂದ ಜೂನ್ವರೆಗೆ ಮೊಟ್ಟೆ ಇಟ್ಟು ಮರಿ ಮಾಡುತ್ತೆ. ದಸರಾ ಹಬ್ಬಕ್ಕೂ ಇದಕ್ಕೂ ವಿಸಿಷ್ಟ ಸಂಬಂಧವಿದೆಯಂತೆ. ಈ ಹಬ್ಬದಲ್ಲಿ ಈ ಹಕ್ಕಿಯನ್ನು ಹಿಡಿದು ಮತ್ತೆ ಬಿಡಲಾಗುತ್ತದೆ. ಕನರ್ಾಟಕ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯದ ರಾಜ್ಯ ಪಕ್ಷಿಯೂ ಹೌದು.




ರೈತನ ಮಿತ್ರ-
ಗದ್ದೆಗಳಲ್ಲಿ ಹಾರುವ ಹಾತೆಗಾಗಿ ಕಾದು ಕುಳಿತುಕೊಳ್ಳುವ ಇನ್ನೊಂದು ಹಕ್ಕಿಯ ಪರಿಚಯ ಮಾಡಿಕೊಳ್ಳೊಣ ಬನ್ನಿ. ನಿಮಗೆಲ್ಲಾ ಇದರ ಗುರುತು ಇದ್ದೇ ಇದೆ. ಗಿಣಿಗಾರಲು ಎಂದು ಕರೆಸಿಕೊಳ್ಳುವ ಇದನ್ನು ಆಂಗ್ಲ ಭಾಷೆಯಲ್ಲಿ  bee eater ಎನ್ನುವರು. ಇದೊಂದು ಅತ್ಯಂತ ಚುರುಕು ಕಣ್ಣಿನ ಹಕ್ಕಿ. ಹಾರುವ ಹಾತೆ, ಜೇನು ಹುಳಗಳು, ಮಿಡತೆ, ಚಿಟ್ಟೆಗಳೇ ಇದರ ಮುಖ್ಯ ಆಹಾರ. ಗದ್ದೆಗೆ ಬರುವ ಅನೇಕ ಮಿಡತೆಗಳು ಇದರ ಹೊಟ್ಟೆ ಸೇರುತ್ತದೆ. ತಿನ್ನುವುದರಲ್ಲೂ ಇದು ಬಕಾಸುರನ ತಮ್ಮ. ವಿದ್ಯುತ್ ತಂತಿಗಳ ಮೇಲೆ ಗುಂಪಾಗಿ ಕೂತು ಮೀಟಿಂಗ್ ಮಾಡುವುದು ಇದೆ. ಹಸಿರು ಗಿಣಿಗಾರಲು ಸಾಮಾನ್ಯವಾಗಿ ಒಂಟಿ ಅಥವಾ ಜಂಟಿ. ಗಾತ್ರದಲ್ಲಿ ಸ್ವಲ್ಪ ದೊಡ್ಡವು. ಕೆಂಪು ಕತ್ತಿನವು ಒತ್ತೊತ್ತಾಗಿ ಕೂತು ಹರಟೆ ಕೊಚ್ಚುವುದೂ ಉಂಟು! ಈ ಚಿತ್ರದಲ್ಲಿರುವುದು ಹಸಿರು ದೇಹದ ಹಕ್ಕಿ. ಚಳಿಗೆ ತನ್ನ ಗರಿಗಳ ಕೆದರಿಕೊಂಡು ಕುಳಿತ್ತಿತ್ತು. ನನ್ನ ನೋಡುತ್ತಲೇ ಹಾರಿ ಹೋಯಿತು. 


No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...