Saturday, November 26, 2011

ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!














ನವ ವಧುವಿನಂತೆ ಶೃಂಗಾರ ಗೊಂಡಿರುವ ಈಗಿನ ಸೋಮನಾಥಪುರ ದೇವಾಲಯದ ಅಂದಕ್ಕೆ ಅಂದೇ ಕುವೆಂಪು ಮಾರು ಹೋಗಿದ್ದರು. ಆಗ ತುಂಬಾ ಶಿಥಿಲಾವಸ್ಥೆಯಲ್ಲ್ಲಿದ್ದರೂ ಅವರಿಗೆ ಸೌಂದರ್ಯದ ಮೇರು ಪರ್ವತವಾಗಿ ತೋರಿತ್ತು. ಸೃಷ್ಟಿಶೀಲರಿಗೆ ಕಲ್ಲು ಸಹ ಸೌಂದರ್ಯದ ಜೊತಕವಾಗಿ ಕಾಣಿಸುತ್ತದೆ.ಎಂಬುವುದಕ್ಕೆ ಈ ಕವನವೇ ಸಾಕ್ಷಿ.





ವರ್ಷದ ಹಿಂದೆ ಕುಪ್ಪಳಿಗೆ ಹೋದಾಗ ಉದಯ ಶೆಟ್ಟಿ ಕಥಕ್ ಶೈಲಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದು ಅದ್ಭುತವಾಗಿತ್ತು, ಜೊತೆಗೆ ವಿಶೇಷ ಆಥಿತ್ಯವು. ನಿಜಕ್ಕೂ ಈ ದೇವಾಲಯ ಅದ್ಭುತವಾಗಿದೆ. 


















ಬೇಲೂರು ಹಳೆಬೀಡನ್ನೂ ಮೀರಿಸುವಷ್ಟು! ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋದ ಕುವೆಂಪು ಅಲ್ಲಿನ ಶಿಲ್ಪಕಲೆಯ ಬಗ್ಗೆ ಒಂದು ಕವನ ರಚಿಸಿದ್ದಾರೆ. ಇದೋ ಈ ಕವನ ನಿಮಗಾಗಿ, ಜೊತೆಗೆ ನನ್ನ ಛಾಯಾಚಿತ್ರವೂ ಇದೆ. ಓದುವ ಖುಷಿ ನಿಮ್ಮದಾಗಲಿ.

ಸೋಮನಾಥಪುರ ದೇವಾಲಯ


ಬಾಗಿಲೊಳು ಕೈಮುಗಿದು ಒಳಗೆ ಬಾ, ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುವಗಳನಪರ್ಿಸಿಲ್ಲಿ.
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ;
ಕಪೂರದಾರತಿಯ ಜ್ಯೋತಿಯಿಲ್ಲ.
ಭಗವಂತನಾನಂದ ರೂಪುಗೊಂಡಿಹುದಿಲ್ಲಿ;
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ!
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ!
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ!
ಮೂಛರ್ೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ!

ಕುವೆಂಪು; 10-7-28

Friday, November 18, 2011

ನಮ್ಮೂರಿಗೆ ಬಂದ ಅಪರೂಪದ ಅತಿಥಿ


ನಮ್ಮೂರಿಗೆ ಬಂದ ಅಪರೂಪದ ಅತಿಥಿ







ನಮ್ಮೂರಿಗೆ ಬಂದ ವಿಶೇಷವಾದ ಹಕ್ಕಿಯ ಬಗ್ಗೆ ಹೇಳಬೇಕಿದೆ. ಅದ್ಭುತವಾದ ಸೌಂದರ್ಯದಿಂದ ನನ್ನ ಮನಸ್ಸು ಸೂರೆ ಗೊಂಡಿತ್ತು. , ಇವು ನೋಡಲು ಗಿಣಿಗಾರಲು ಹಕ್ಕಿಗಳಂತೆ ಇದ್ದವು. ಸಾಮಾನ್ಯವಾಗಿ ಗಿಣಿಗಾರಲು ಚಿಕ್ಕ ಗಾತ್ರದವುಗಳು, ಆದರೆ ಇವು ಬಣ್ಣ ಮತ್ತು ಗಾತ್ರದಲ್ಲಿ ಅವಕ್ಕಿಂತಲೂ ಒಂದು ಕೈ ಹೆಚ್ಚು. ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ಒಳನಾಡುಗಳಲ್ಲಿ ಕಂಡು ಬರುವ ಈ ಹಕ್ಕಿ, ಕುತ್ತಿಗೆ ಬಳಿ ಸುಂದರವಾದೊಂದು ನೀಲಿ ಬಣ್ಣದ ಗಡ್ಡವಿದೆ. ತಲೆ ಸಂಪೂರ್ಣವಾಗಿ ಹಸಿರು ಬಣ್ಣದಿಂದ ಕೂಡಿದೆ.
ಹಾಗೆ ಕುತೂಹಲಗೊಂಡು ಪೂರ್ಣಚಂದ್ರರ ಹಕ್ಕಿಪುಕ್ಕ ತಡವಿದೆ ಕೂಡಲೆ ಅದರ ವಿವರಗಳು ಲಭಿಸಿದವು. ಇದು ಜೇನುಗುಟುರವೆನ್ನುವ ಅಪರೂಪದ ಮಲೆನಾಡಿನ ಹಕ್ಕಿ. ಊಹೆಯಂತೆ, ಗಿಣಿಗಾರಲು ಕುಟುಂಬಕ್ಕೆ ಸೇರಿದ ಹಕ್ಕಿ. ಕನರ್ಾಟಕ, ಕೇರಳದ ಕಾಡುಗಳಲ್ಲಿ ಕಂಡುಬರುತ್ತದೆ. ಅತ್ಯಂತ ಚುರುಕಾದ ಹಕ್ಕಿ. ಜೇನು ಹುಳ ಇದರ ಪ್ರಧಾನವಾದ ಆಹಾರ. ಜೇನು ಗೂಡಿನ ಮೇಲೆಯೇ ನೇರವಾಗಿ ದಾಳಿಮಾಡುತ್ತದೆ. ಇದನ್ನು ಬ್ಲೂ ಬಿಯರ್ಡೆಡ್ ಬೀ ಈಟರ್ ಎನ್ನುವರು. ಮಾರ್ಚನಿಂದ ಜೂನ್ ವರೆಗೆ ಮರಿಮಾಡುವ ಕಾಲ. ಭಾರತವಲ್ಲದೆ ಬಾಂಗ್ಲಾ, ಸಿಲೋನ್, ಬಮರ್ಾ ಮತ್ತು ಹಿಮಾಲಯಗಳಲ್ಲಿ ಕಂಡುಬರುತ್ತದೆ.

ಪ್ರಕೃತಿಯ ಒಂದಕ್ಕೊಂದು ಬೆಸದುಕೊಳ್ಳುವಿಕೆಯ ರೋಚಕತೆ ಅದ್ಭುತವಾದುದು. ಜೇನು ಹುಳುಗಳ ವಿಪರೀತ ಓಡಾಟವಿದ್ದಲ್ಲಿ ಈ ಹಕ್ಕಿಗಳಿರುತ್ತವೆ, ಆದರೆ ಈ ಬಂದ ಮೊಬೈಲ್ ಪೋನ್ ನಿಂದ ಜೇನುಗಳ ಜೊತೆಗೆ ಈ ಹಕ್ಕಿಗಳು ಕಣ್ಮರೆಯಾಗುತ್ತಿವೆ. ಅತಿ ಸವರ್ೆಸಾಧಾರಣವಾದ ಹಕ್ಕಿಗಳು ಅಪರೂಪವಾಗುತ್ತಿವೆ. ಇತಂಹ ನೂರಾರು ಹಕ್ಕಿಗಳನ್ನು ಮುಂದಿನ ಜನಾಂಗಕ್ಕೆ ಉಳಿಸೊಣ ಎನ್ನುವುದು ನಮ್ಮೆಲ್ಲರ ಆಶಯ!
ಶ್ರೀಧರ. ಎಸ್

Monday, November 14, 2011

ಪದ್ಯ ಪತ್ರ


ಹೀಗೆ ಒಮ್ಮೆ ಗೆಳೆಯನಿಗೆ ಬರೆದ 'ಪದ್ಯ ಪತ್ರದ' ತುಣುಕುಗಳು

ಕಾರಣ 'ಸರಳ'

ಗೆಳೆಯ
ಫೋನಿಸಿದೆ ನಾನು ಬಹಳ
ಮನೆಯಲ್ಲಿರುವುದು ನೀನು
ತುಂಬಾ ವಿರಳ
ತಿಳಿಯಿತು ಕಾರಣ 'ಸರಳ'!




ನಿನ್ ಕಾಗ್ದ


ನಿನ್ ಕಾಗ್ದ
ಓದ್ದೋನು
ನಿಜವಾಗಲೂ ಸೂರ
ನಮಗ್ ಬೇಕ್ರಿ
ದೊಡ್ಡ ಮಸೂರ!

ಕಾಗದ

ಚೊಕ್ ಮಾಡ್ ಬರೀರಿ
ಕಾ ಗುಣಿತ
ಇರಲಿ ಕಾಗ್ದೊಳಗೆ
ಒಂಚೂರ್ ಗಣಿತ.










ಯೋ(ರೋ)ಗ ತರಬೇತಿ

ಇದ್ದೈತಿ ನಮಗ
ಹತ್ತು ದಿನ ಯೋಗ
ಹಿಡ್ಕೊಂಡೈತಿ ಈಗ
ಶೀತ ನೆಗಡಿ ರೋಗ
*****







ಬರಿಯಾಕ್ ಆಗ್ಲಿಲ್ಲ
ಅಂತ ಹೇಳಬ್ಯಾಡ್ರಿ
ನೂರಾರು ನೆವನ
ಮಾಡಾಕ್ ಹತ್ತಿರಿ
ಯಾರದ್ದೋ ಧ್ಯಾನ!
*****
ಬೆಳಸ್ಕೊಳ್ರಿ ಒಂಚೂರ್
ಬರಿಯೊ ಹವ್ಯಾಸ
ಎನಾಗತೈತಿ
ನಿಮಗ ತ್ರಾಸ
*****
ದಯಮಾಡಿ
ಬರಿಬ್ಯಾಡ್ರಿ
ಕವ್ನ
ಉಳಿಸಿ
ನಮ್
ಕಣ್ಣಿನ್
ಜೀವ್ನ
*****






ಯಾರ್ರೀ ಕಲ್ ಸ್ದೊರ್
ನಿಮಗ ಅಕ್ಷರ
ಸರಿ ಬರ್ಯಾಕ್
ಬರಾಕಿಲ್ಲ ಬರ( hand writing)
*****








ಎಲ್ಲಾನು ಓದಿ
ಮಾಡ್ಕೊಳ್ ಬ್ಯಾಡ್ರಿ
ಬ್ಯಾಸ್ರ
ಕುಡಿಯಾಕ್ ಬೇಕೇನ್ರಿ
ಆಸ್ರ.
*****







ಕವನ ಓದಿ
ಸಿಟ್ಟೇನಾರ ಬಂತೆ
ಬಂದ್ರೆ ಜಗದ್ ಬಿಡು
ಕುತ್ತುಂಬರಿ ಜೀರಿಗೆ ಮೆಂತೆ!

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...