Wednesday, February 22, 2017

ಮಾರ್ಚ್ ಎಂಬ ಮಾಯೆ!


ಮಾರ್ಚ ಬಂತೆಂದರೆ ವಿಭಿನ್ನ ಭಾವವೊಂದು ತೇಲಿಬರುತ್ತೆ. ಗಿರಗಿಟ್ಟಲೆ ಹೂ ಉದುರಿಸೊ ಭೋಗಿ ಮರಗಳು, ಸುರಗಿ ಹೂವಿನ ನರುಗಂಪು. ಚಳಿ ತನ್ನ ಕಂಬಳಿ ಬಿಟ್ಟು ಹೋಗುವ ಕಾಲ. ಪ್ರಕೃತಿಯೇ ಕೆಂಧೂಳಿನಲ್ಲಿ ಮಿಂದೇಳುವ ಕಾಲ.

ಕಾಲೇಜು ವಿಧ್ಯಾಥರ್ಿಗಳಿಗೆ ಹೊಸ ಕೆಲಸಗಳ ಕನಸು. ಮುರಿದ ಪ್ರೇಮಗಳ, ಅಗಲುವಿಕೆಯ ಪರ್ವ ಕಾಲ. 
                     ಆದರೆ ನನಗೆ ಮಾಚರ್್ ಬಂತೆಂದರೆ ಬಿಡದೇ ನೆನಪಾಗೋದು ಸೂರಿ, ಚೀಪೆ, ಮುರುಗಲ, ಗೋಳಿ, ಗರಚ ಮುಂತಾದ ಕಾಡ ಹಣ್ಣುಗಳು. ರಕ್ಕಸರಿಗೆ ಸುರಪಾನದ ನಶೆ ಏರಿಸುವ ಚಿಂತೆಯಾದರೆ ನಮಗೆ ಹಣ್ಣಿನ ತಪಸ್ಸು.  ಕಾಡು ಹಣ್ಣು ಎಲ್ಲೇ ಆಗಲಿ ಕೇವಲ ಅದರ ವಾಸನೆಯಿಂದ ಪತ್ತೆ ಹಚ್ಚುತ್ತಿದ್ದೆವು.  ಎಣಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುವುದು. ಅವುಗಳಿಗಾಗಿಯೇ ಕಾಡು ಮೇಡೆಲ್ಲಾ ಸುತ್ತಿ ಬಳಸಿ ಶಾಲೆಗೆ ಹೋಗಿ ಬಯ್ಯಿಸಿಕೊಳ್ಳುತ್ತಿದ್ದೆವು. ನಮ್ಮ ದಾಳಿಗೆ ನಲುಗದ ಗಿಡವೇ ಇಲ್ಲ! ಯಾವ ಮರದಲ್ಲಿ ಯಾವ ಹಣ್ಣು ಯಾವಾಗ ಬಿಡುವುದೆಂಬುದು ನಮ್ಮ ನಾಲಗೆ ತುದಿಯಲ್ಲಿ. ಹೊಸ ಹೊಸ ಜಾತಿಯ ಹಣ್ಣುಗಳನ್ನು ಪತ್ತೆ ಹಚ್ಚುವುದರಲ್ಲಿ ನಾನು ನಿಸ್ಸೀಮ. ಒಮ್ಮೆಯೊಂದು ಬೆಕ್ಕಿನ ಹಣ್ಣಿನಂತಿರುವ ಹಣ್ಣನ್ನು ಪತ್ತೆ ಹಚ್ಚಿ ತಿಂದು ಬಿಟ್ಟಿದ್ದೆವು. ನಂತರ ನಾವು ಸಾಯುತ್ತೇವೆಂದು ಗೆಳೆಯ ಹೆದರಿಸಿದಾಗ ತುಂಬಾ ಹೆದರಿಕೆಯಾಗಿತ್ತು. ಸಂಜೆಯಾದರೂ ಸಾಯದಿದ್ದಾಗ ಹೇಳ ತೀರದಷ್ಟು ಸಂತೋಷವಾಗಿತ್ತು! ಒಮ್ಮೆಯಂತೂ ಚಾರ್ ಎಂಬ ಚಾರ್ ಹಣ್ಣು ತಿಂದು ಮುಖವನ್ನು ಹನುಮನಂತೆ ಊದಿಸಿಕೊಂಡು ಮಾಚರ್್ನ ಪರೀಕ್ಷೆ ತಪ್ಪಿಸಿಕೊಂಡದ್ದು ಇನ್ನೂ ನೆನಪಿದೆ. ಅದನ್ನೆಣಿಸಿ ಅಮ್ಮ ಈಗಲೂ ಕಾಲೆಯುತ್ತಾಳೆ. ಹೀಗೆ ಕಾಡು ಹಣ್ಣುಗಳ ಚಟಕ್ಕೆ ಬಿದ್ದು ಪಟ್ಟ ಗೋಳು ಒಂದೆರಡೇ. ಅದಕ್ಕೆ ನನಗೆ ಮಾಚರ್್ ಬಂದರೆ ಹಣ್ಣುಗಳೇ ನೆನಪಾಗೋದು.


ಚೀಪಿ ಹಣ್ಣು ಕೊಯ್ಯಲು ಹೋಗಿ ಕಣಜದಿಂದ ಕಟುಕಿಸಿಕೊಂಡದ್ದು ನನ್ನ ಇನ್ನೊಂದು ಸಾಹಸಗಾಥೆ, ಮನೆಯವರಿಗೆ ಮಾತ್ರ ಭಾದೆ. ಹೊಸ ಜಾತಿ ಕೆಂಪು ಹಲಸಿನ ತೆವಲಿಗೆ ಬಿದ್ದು ಮರ ಹತ್ತಿ ಇಳಿಯಲಾಗದೆ ಪೇಚಾಡಿಕೊಂಡಿದ್ದು ಕೊನೆಗ್ಯಾರೋ ದಾರಿ ಹೋಕರು ಬಂದು ನನ್ನನ್ನು ಇಳಿಸಿ ಹೋದ ನೆನಪು. ಮಾಚರ್್ ಬಂತೆಂದರೆ ಹಣ್ಣುಗಳ ನೆನಪ ಮೆರವಣಿಗೆ. ಪರೀಕ್ಷೆಗಳ ಪರ್ವಗಾಲದಲ್ಲಿ ನಮ್ಮದು ಫಲ ಪರ್ವ. ಕೆಲವೊಂದು ಹಣ್ಣುಗಳು ಹೇಳ ಹೆಸರಿಲ್ಲದೇ ನಮ್ಮೂರಿಂದ ಕಾಲ್ಕಿತ್ತಿದೆ. ನನಗೆ ಹಣ್ಣುಗಳ ಸೆಳೆತವಾದರೆ ಅಕ್ಕನಿಗೆ ಸುರಗಿಗಂಪಿನ ಸೆಳೆತ. ಸುರಗಿಗೂ ಅವಳಿಗೂ ಬಿಡಿಸಲಾಗದ ನಂಟು. ಸುರಗಿ ಹೂವಾಯಿತೆಂದರೆ ಮಾರ್ಚ ಬಂತೆಂದೇ ಅರ್ಥ. ಸೂರ್ಯ ಹುಟ್ಟುವ ಮುಂಚೆ ಅಮ್ಮ ಕೊಟ್ಟ ಕಾಫಿ ಹೀರಿ ಸುರಗಿ ಗಿಡಕ್ಕೆ ನಮ್ಮ ದಾಳಿ. ಮರ ಹತ್ತಲು ಬಾರದ ಅಕ್ಕ ನನ್ನ ಪೀಡಿಸಿ ಮರ ಹತ್ತಿಸುತ್ತಿದ್ದಳು. ಸುರಗಿ ಚಿಕ್ಕ ಮರವಾದುದರಿಂದ ಪರವಾಗಿಲ್ಲ. ತೃಪ್ತಿಯಾಗುವಷ್ಟು ಕೊಯ್ದು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದೆವು. ಕೊಯ್ದ ಹೂವನ್ನು ಮಾಲೆ ಮಾಡದೇ ಅವಳಿಗೆ ಸಮಾಧಾನವಿಲ್ಲ. ಹೂ ಕಟ್ಟದೇ ಶಾಲೆಗೆ ಹೋಗುತ್ತಿರಲಿಲ್ಲ. ಮಾರ್ಚ್ ಬಂದರೆ ಸುರಗಿ, ಅಕ್ಕ ಮತ್ತು ನನ್ನ ಪ್ರೀತಿಯ ಹಣ್ಣುಗಳು ನೆನಪಾಗುತ್ತವೆ!

ಶ್ರೀಧರ್. ಎಸ್. ಸಿದ್ದಾಪುರ.

1 comment:

  1. ತುಂಬಾ ಚೆನ್ನಾಗಿದೆ ಸರ್

    ReplyDelete

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...