Monday, February 5, 2018

ಕವಿಗೆ ಚಂದ್ರ ಹೆಂಡತಿಯ ಮೋರೆ..

        ಮೊನ್ನೆ ಫೋಟೋಗ್ರಫಿಗೆಂದು ಹೊರಗಡೆ ಹೋಗಿದ್ದೆ. ನೇರಳೆ ಮರದಡಿ ನಿಂತು ನಿರುಕಿಸುತ್ತಾ ಇದ್ದೆ. ಆಗ ಈ ಮುರಿದ ರೆಂಬೆಯೊಂದು ಕಣ್ಣಿಗೆ ಬಿತ್ತು. ಬೆಳಗಿನ ಬಿಸಿಲಿಗೆ ಚೆನ್ನಾಗಿತ್ತು. ಸುಮ್ನೆ ಒಂದು ಫೋಟೋ ತೆಗೆದೆ. ಹಾಗೇ ಅದನ್ನು ಗಮನಿಸುತ್ತಾ ನಿಂತೆ. ಎಂದೋ ಓದಿದ ಈ ಕವನ ತಟ್ಟನೆ ನೆನಪಾಯಿತೇಕೋ. ಮತ್ತೂ ಗಮನಿಸುತ್ತಾ ನಿಂತೆ!
 
 ಕವಿಗೆ ಚಂದ್ರ ಹೆಂಡತಿಯ ಮೋರೆ
 ವಿಜ್ಞಾನಿಗಳಿಗೆ ಬರಿಯ ಕಲ್ಲು ಗುಂಡು
 ಮಕ್ಕಳಿಗೆ ಐಸ್ ಕ್ರೀಮ್ನ ತುಂಡು...

 ನಿಮಗಿಲ್ಲಿ ಹೆಂಡತಿಯ ಮೋರೆ ಕಾಣಿಸಲಿಕ್ಕಿಲ್ಲ ಆದರೂ ಬಿಡದೆ ನೀವೂ ಗಮನಿಸಿ ನೋಡಿ ನಿಮ್ಮ ಕಣ್ಣಿಗದು ಏನಾಗಿ ಕಾಣುತ್ತದೆಂದು ಊಹಿಸಿ. ನೋಡೋಣ.


No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...